ಅಗ್ನಿಹೋತ್ರದ ಮಹತ್ವ

ಅಗ್ನಿಹೋತ್ರದ ವ್ಯಾಖ್ಯೆ

೧. ‘ಅಗ್ನಿಹೋತ್ರವೆಂದರೆ ತೇಜದ ಆಧಾರದಲ್ಲಿ ಈಶ್ವರನ ಪ್ರತ್ಯಕ್ಷ ಸಗುಣ ಮತ್ತು ತತ್ತ್ವರೂಪದಲ್ಲಿರುವ ಈಶ್ವರನ ನಿರ್ಗುಣಸ್ವರೂಪ ಚೈತನ್ಯವನ್ನು ಆಕರ್ಷಿಸಲು ಮಾಡಿದ ವ್ರತರೂಪಿ ಅನುಷ್ಠಾನವಾಗಿದೆ.’ – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ಜ್ಯೇಷ್ಠ ಶುಕ್ಲ ೧೧, ಕಲಿಯುಗ ವರ್ಷ ೫೧೧೧ ೩.೬.೨೦೦೯ ಮಧ್ಯಾಹ್ನ ೪.೪೯)

೨. ‘ಅಗ್ನಿಹೋತ್ರವೆಂದರೆ ಅಗ್ನ್ಯಂತರ್ಯಾಮಿ (ಅಗ್ನಿಯಲ್ಲಿ) ಆಹುತಿಯನ್ನು ಅರ್ಪಿಸಿ ಮಾಡಲಾಗುವ ಈಶ್ವರನ ಉಪಾಸನೆ.’ – ಡಾ.ಶ್ರೀಕಾಂತ ಶ್ರೀಗಜಾನನ ಮಹಾರಾಜ ರಾಜೀಮವಾಲೆ, ಶಿವಪುರಿ, ಅಕ್ಕಲಕೋಟ.

ಅಣುಯುದ್ಧದ ಸಂದರ್ಭದಲ್ಲಿ ಅಗ್ನಿಹೋತ್ರದ ಮಹತ್ವ

೧. ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ-ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ಸಂರಕ್ಷಣಾ ಕವಚವನ್ನು ನಿರ್ಮಾಣ ಮಾಡುತ್ತದೆ. ಈ ಕವಚವು ತೇಜದ ಸ್ಪರ್ಶಕ್ಕೆ ಅತ್ಯಂತ ಸಂವೇದನಶೀಲವಾಗಿರುತ್ತದೆ. ಸೂಕ್ಷ್ಮದಿಂದ ಈ ಕವಚವು ನಸುಗೆಂಪು ಬಣ್ಣದಲ್ಲಿ ಕಾಣಿಸುತ್ತದೆ.

೨. ಯಾವಾಗ ಒಳ್ಳೆಯ ವಿಷಯಗಳಿಗೆ ಸಂಬಂಧಿಸಿದ ತೇಜವು ಈ ಕವಚದ ಸಮೀಪ ಬರುತ್ತದೆಯೋ, ಆಗ ಕವಚದಲ್ಲಿನ ನಸುಗೆಂಪು ಬಣ್ಣದ ತೇಜದಲ್ಲಿನ ಕಣಗಳು ಈ ತೇಜವನ್ನು ತಮ್ಮಲ್ಲಿ ಸಮಾವೇಶಗೊಳಿಸಿಕೊಂಡು ಕವಚವನ್ನು ಬಲಶಾಲಿಯಾಗಿ ಮಾಡುತ್ತವೆ.

೩. ರಜ-ತಮಾತ್ಮಕ ತೇಜಕಣಗಳು ಕರ್ಕಶ ಸ್ವರೂಪದಲ್ಲಿ ಆಘಾತವನ್ನು ನಿರ್ಮಾಣ ಮಾಡುತ್ತವೆ; ಆದುದರಿಂದ ಅವು ಹತ್ತಿರ ಬರುವುದು ಕವಚಕ್ಕೆ ಮೊದಲೇ ತಿಳಿಯುತ್ತದೆ ಮತ್ತು ಅದು ಪ್ರತ್ಯುತ್ತರವೆಂದು ತನ್ನಿಂದ ಅನೇಕ ತೇಜಲಹರಿಗಳನ್ನು ವೇಗದಿಂದ ಹೊರಸೂಸಿ ಆ ಕರ್ಕಶ ನಾದವನ್ನೇ ನಾಶ ಮಾಡುತ್ತದೆ ಮತ್ತು ಅದರಲ್ಲಿನ ನಾದವನ್ನು ಉತ್ಪನ್ನಮಾಡುವ ತೇಜಕಣಗಳನ್ನೂ ನಾಶ ಮಾಡುತ್ತದೆ. ಇದರಿಂದ ಆ ಲಹರಿಗಳಲ್ಲಿನ ತೇಜವು ಆಘಾತ ಮಾಡಲು ಸಾಮರ್ಥ್ಯಹೀನವಾಗುತ್ತದೆ; ಅಂದರೆ ಬಾಂಬ್‌ನಲ್ಲಿನ ಆಘಾತ ಮಾಡುವ ವಿಘಾತಕ ಸ್ವರೂಪದಲ್ಲಿ ಹೊರಸೂಸುವ ಶಕ್ತಿಯ ವಲಯಗಳು ಮೊದಲೇ ನಾಶವಾಗುವುದರಿಂದ ವಿಕಿರಣಗಳನ್ನು ಹೊರಸೂಸುವ ದೃಷ್ಟಿಯಿಂದ ಬಾಂಬ್ ನಿಷ್ಕ್ರಿಯವಾಗುತ್ತದೆ. ಆದುದರಿಂದ ಅದನ್ನು ಹಾಕಿದರೂ ಮುಂದೆ ಆಗುವ ಮನುಷ್ಯಹಾನಿಯು ಕೆಲವು ಪ್ರಮಾಣದಲ್ಲಿಯಾದರೂ ತಡೆಗಟ್ಟಲ್ಪಡುತ್ತದೆ. ಬಾಂಬ್ ಸ್ಫೋಟವಾದರೂ, ಅದರಿಂದ ವೇಗವಾಗಿ ಹೋಗುವ ತೇಜರೂಪಿ ರಜ-ತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿನ ಸೂಕ್ಷ್ಮತರ ಅಗ್ನಿಕವಚಕ್ಕೆ ಅಪ್ಪಳಿಸಿ ಅಲ್ಲಿಯೇ ವಿಘಟನೆಯಾಗುತ್ತವೆ ಮತ್ತು ಅವುಗಳ ಸೂಕ್ಷ್ಮ-ಪರಿಣಾಮವೂ ಅಲ್ಲಿಯೇ ಕೊನೆಗೊಳ್ಳುವುದರಿಂದ ವಾಯುಮಂಡಲವು ಮುಂದಿನ ಪ್ರದೂಷಣೆಯ ಅಪಾಯದಿಂದ ಮುಕ್ತವಾಗುತ್ತದೆ. (ಚಿತ್ರವನ್ನು ಗ್ರಂಥದಲ್ಲಿ ಕೊಡಲಾಗಿದೆ.) – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ, ೧೮.೨.೨೦೦೮, ಸಾಯಂ. ೬.೫೫)

ಭಗವದ್ಗೀತೆಯಲ್ಲಿ ಹೇಳಿದ ನಿತ್ಯ ಅಗ್ನಿಹೋತ್ರದ ಮಹತ್ವ

‘ಅಗ್ನಿಹೋತ್ರದಲ್ಲಿ ಆಹುತಿಯನ್ನು ಅರ್ಪಿಸದೇ, ತಾವೇ ಭಕ್ಷಣ ಮಾಡುವವರು ಸ್ವಾರ್ಥಿಗಳಾಗಿದ್ದಾರೆ’, ಇಂತಹ ಶಬ್ದಗಳಲ್ಲಿ ಭಗವದ್ಗೀತೆಯು ನಿತ್ಯ ಅಗ್ನಿಹೋತ್ರದ ಮಹತ್ವವನ್ನು ಹೇಳಿದೆ.

ಅಗ್ನಿಹೋತ್ರದಲ್ಲಿ ಆಹುತಿಯನ್ನು ಕೊಡುವುದರ ಭಾವಾರ್ಥ

ಅಗ್ನಿಹೋತ್ರದಲ್ಲಿ ಕೊಡಲಾಗುವ ಆಹುತಿಯೆಂದರೆ, ಪರಮಾತ್ಮನ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ಕೃತಜ್ಞತೆ. ಯಾವನು ಸಂಪೂರ್ಣ ಸೃಷ್ಟಿಯನ್ನು ನಿರ್ಮಿಸಿದ್ದಾನೆಯೋ, ಆ ಸರ್ವಶಕ್ತಿವಂತ ಈಶ್ವರನಿಗೆ ನಮ್ಮಂತಹ ಪಾಮರರೇನು ಕೊಡಬಹುದು? ನಾವು ಈಶ್ವರನು ಕೊಟ್ಟಿದ್ದನ್ನೇ ಮತ್ತೆ ಈಶ್ವರನಿಗೆ ಅರ್ಪಿಸುತ್ತೇವೆ. ಸೃಷ್ಟಿಯಲ್ಲಿ ಏನೆಲ್ಲ ಇದೆಯೋ ಮತ್ತು ಏನೆಲ್ಲ ಕಾಣಿಸುತ್ತದೆಯೋ, ಅದು ಆ ಪರಮಶಕ್ತಿವಂತ ಈಶ್ವರನದ್ದೇ ಆಗಿದೆ. ನಿಮ್ಮ ಬಳಿ ಏನೇನು ಇದೆಯೋ, ಅದನ್ನು ಅವನಿಗೆ ಮತ್ತು ಇತರರಿಗೆ ಕೊಡಿ. ದಾನದಿಂದ ಮತ್ತು ತ್ಯಾಗದಿಂದ ಆನಂದಿತ ಮತ್ತು ತೃಪ್ತರಾಗಿರಿ. ತ್ಯಾಗ ಮಾಡಿ ಇದನ್ನು ಉಪಭೋಗಿಸಿರಿ. – ಪರಮಸದ್ಗುರು ಶ್ರೀಗಜಾನನಮಹಾರಾಜ

ಅಗ್ನಿಹೋತ್ರದ ಲಾಭಗಳು

ಜಗತ್ತಿನಲ್ಲಿ ಅಗ್ನಿಹೋತ್ರದ ಆಚರಣೆಯನ್ನು ಮಾಡುವ ವಿಭಿನ್ನ ವಂಶ, ವಿಭಿನ್ನ ಭಾಷೆ, ವಿಭಿನ್ನ ಧರ್ಮ ಮತ್ತು ಆಧ್ಯಾತ್ಮಿಕ ಗುಂಪುಗಳಿವೆ. ಅವರು ಮುಂದಿನ ಲಾಭಗಳನ್ನು ಅನುಭವಿಸಿದ್ದಾರೆ.

೧. ‘ಚೈತನ್ಯದಾಯಕ ಮತ್ತು ಔಷಧಿಯ ವಾತಾವರಣ ನಿರ್ಮಾಣವಾಗುತ್ತದೆ.

೨. ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ.

೩. ಪ್ರಾಣಿಜೀವಗಳ ಪೋಷಣೆ: ಹೇಗೆ ಅಗ್ನಿಹೋತ್ರವು ವನಸ್ಪತಿಗಳ ಪೋಷಣೆಯನ್ನು ಮಾಡುತ್ತದೆಯೋ, ಅದೇ ರೀತಿ ಮನುಷ್ಯರ ಮತ್ತು ಎಲ್ಲ ಪ್ರಾಣಿಗಳ ಪೋಷಣೆಯನ್ನೂ ಮಾಡುತ್ತದೆ.’

೪. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ
ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ.
ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ.
ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ.

೫. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾ ಶಕ್ತಿ ನಿರ್ಮಾಣವಾಗಿ ಮನೋವಿಕಾರಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು

೬. ನರವ್ಯೂಹದ ಮೇಲಾಗುವ ಪರಿಣಾಮ: ‘ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೂಹದ ಮೇಲೆ ಪ್ರಭಾವೀ ಪರಿಣಾಮವನ್ನು ಬೀರುತ್ತದೆ.’

೭. ರೋಗಜಂತುಗಳ ಪ್ರತಿರೋಧ: ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದು ಬಂದಿದೆ.’

೮. ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ: ‘ನಮ್ಮ ಸುತ್ತಲೂ ಒಂದು ರೀತಿಯ ಸಂರಕ್ಷಣಾಕವಚವಿರುವುದರ ಅರಿವಾಗುತ್ತದೆ.’

೯. ಅಗ್ನಿಹೋತ್ರದಿಂದ ಪ್ರಾಣಶಕ್ತಿಯು ಶುದ್ಧವಾಗಿ, ಆ ವಾತಾವರಣದಲ್ಲಿನ ವ್ಯಕ್ತಿಗಳ ಮನಸ್ಸು ಕೂಡಲೇ ಪ್ರಸನ್ನ ಮತ್ತು ಆನಂದಿತವಾಗುವುದು ಹಾಗೂ ಆ ವಾತಾವರಣದಲ್ಲಿ ಸಹಜವಾಗಿ ಧ್ಯಾನ ಧಾರಣೆಯಾಗಲು ಸಾಧ್ಯವಾಗುತ್ತದೆ.

ಅಗ್ನಿಹೋತ್ರದ ಮಂತ್ರಗಳನ್ನು ಹೇಗೆ ಉಚ್ಚರಿಸಬೇಕು ? ಮಂತ್ರ ಹೇಳುವಾಗ ಭಾವ ಹೇಗಿರಬೇಕು? ಮಂತ್ರವನ್ನು ಯಾರು ಹೇಳಬೇಕು? ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿಯೇ ಅಗ್ನಿಹೋತ್ರವನ್ನು ಏಕೆ ಮಾಡಬೇಕು? ಅಗ್ನಿಹೋತ್ರದ ನಂತರ ಮಾಡಬೇಕಾದ ಕೃತಿಗಳು ಯಾವುವು? ಅಗ್ನಿಹೋತ್ರ ಮಾಡುವ ಬಗ್ಗೆ ವಿವರವಾದ ಮಾಹಿತಿಗಾಗಿ ಸನಾತನ ನಿರ್ಮಿಸಿದ ಗ್ರಂಥ ‘ಅಗ್ನಿಹೋತ್ರ’ ವನ್ನು ಓದಿರಿ.

1 thought on “ಅಗ್ನಿಹೋತ್ರದ ಮಹತ್ವ”

Leave a Comment

Download ‘Ganesh Puja and Aarti’ App