ಪ್ರಜ್ಞಾಪರಾಧವಾಗಲು ಬಿಡದಿರುವುದು (ಹೊಟ್ಟೆ ತುಂಬಿರುವಾಗಲೂ ಅತಿಯಾಗಿ ಸೇವಿಸುವುದು)
ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು
ಕಾಮ, ಕ್ರೋಧ ಇತ್ಯಾದಿಗಳ ವೇಗವನ್ನು ನಿಯಂತ್ರಿಸುವುದು ಹಾಗೂ
ಕೆಮ್ಮು, ಬಿಕ್ಕಳಿಕೆ, ಮಲ-ಮೂತ್ರ ಇತ್ಯಾದಿ ನೈಸರ್ಗಿಕ ವೇಗಗಳನ್ನು ತಡೆಯದಿರುವುದು
ಆರೋಗ್ಯಕ್ಕಾಗಿ ಹಿತಕರವಾದ ಹಾಗೂ ಅಹಿತಕರ ಆಹಾರ-ವಿಹಾರ ಯಾವುದು, ಎಂದು ವಿಚಾರ ಮಾಡಿ ಅದರಂತೇ ಹಿತವಾದ ಆಹಾರ-ವಿಹಾರ ಮಾಡುವುದು
ವಸಂತ ಋತುವಿನಲ್ಲಿ ಕಫ ಹೆಚ್ಚಾಗಬಾರದೆಂದು ವಾಂತಿ ಮಾಡುವುದು
ಶರದ ಋತುವಿನಲ್ಲಿ ಪಿತ್ತ ಹೆಚ್ಚಾಗಬಾರದೆಂದು ರೇಚಕ ನೀಡುವುದು
ಮಳೆಗಾಲದಲ್ಲಿ ವಾತ ಹೆಚ್ಚಾಗಬಾರದೆಂದು ಎನಿಮಾ ನೀಡುವುದು
ದೇಶ ಮತ್ತು ಕಾಲಕ್ಕನುಸಾರ ದಿನಚರ್ಯೆ ಹಾಗೂ ಋತುಚರ್ಯೆಯನ್ನು ಅವಲಂಬಿಸುವುದು
ಪ್ರತಿಯೊಂದು ಕೃತಿಯನ್ನು ವಿಚಾರಪೂರ್ವಕವಾಗಿ ಮಾಡುವುದು
ವಿಷಯಾಸಕ್ತನಾಗದಿರುವುದು
ದಾನ ಮಾಡುವುದು
ಇತರರಿಗೆ ಸಹಾಯ ಮಾಡುವುದು
ಸತ್ಯ ಮಾತನಾಡುವುದು
ತಪಶ್ಚರ್ಯ ಹಾಗೂ ಯೋಗಸಾಧನೆ ಮಾಡುವುದು
ಆಪ್ತರ (ಜ್ಞಾನಪ್ರಾಪ್ತಿಯಾದವರ) ಸೇವೆ ಮಾಡುವುದು, ಅವರ ಉಪದೇಶದಂತೆ ವರ್ತಿಸುವುದು
ಸದ್ವರ್ತನೆಯಿಂದಿರುವುದು
ಎಲ್ಲರೊಂದಿಗೂ ಸ್ನೇಹಭಾವದಿಂದ ಹಾಗೂ ಸಮಾನತೆಯಿಂದ ವರ್ತಿಸುವುದು
ಅಧ್ಯಾತ್ಮಶಾಸ್ತ್ರವನ್ನು ಚಿಂತನೆ ಮಾಡುವುದು ಹಾಗೂ ಅದಕ್ಕನುಸಾರ ವರ್ತಿಸುವುದು
ಇವುಗಳನ್ನು ಪಾಲಿಸುವುದರಿಂದ ಕಾಯಿಲೆಗಳು ದೂರವಿರುತ್ತವೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ !
(ಸಂದರ್ಭ: ಸನಾತನದ ಮರಾಠಿ ಗ್ರಂಥ ‘ಆಯುರ್ವೇದಾಚಿ ಮೂಲತತ್ತ್ವೆ’)