ತ್ವಚೆಯ ಫಂಗಸ್‌ನಿಂದ ಉತ್ಪನ್ನವಾಗುವ ಗಜಕರ್ಣದಂತಹ ರೋಗಕ್ಕೆ ಸುಲಭ ಉಪಾಯ

ತೊಡೆಯ ಸಂದಿ, ಕಂಕುಳ, ತೊಡೆ ಮತ್ತು ಹಿಂಭಾಗಗಳಲ್ಲಿ ಬೆವರಿನಿಂದ ತ್ವಚೆಯು ತೇವದಿಂದ ಕೂಡಿರುತ್ತದೆ, ಅಲ್ಲಿ ಕೆಲವೊಮ್ಮೆ ತುರಿಕೆಯಿಂದ ಚಿಕ್ಕ ಚಿಕ್ಕ ಗುಳ್ಳೆಗಳು ಏಳುತ್ತವೆ ಮತ್ತು ಅವು ಹರಡುತ್ತ ಗೋಲಾಕಾರವಾಗಿ ಗಾಯ ನಿರ್ಮಾಣವಾಗುತ್ತದೆ. ಈ ಗಾಯವನ್ನು ಹೋಗಲಾಡಿಸಲು ಕೆಳಗೆ ತಿಳಿಸಿರುವ ಎರಡೂ ಉಪಾಯವನ್ನು ಮಾಡಬೇಕು.

೧. ಪ್ರತಿದಿನ ೨-೩ ಸಲ ರೋಗಕ್ಕೊಳಗಾದ ತ್ವಚೆಯನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಬೇಕು ಮತ್ತು ಆ ಗಾಯದ ಮೇಲೆ ತಮ್ಮ ಜೊಲ್ಲು ಹಚ್ಚಬೇಕು. ಇದರಿಂದ ೮-೧೦ ದಿನಗಳಲ್ಲಿ ಈ ಗಾಯಗಳು ಸಂಪೂರ್ಣ ಒಣಗಿ ಗುಣಮುಖವಾಗುತ್ತವೆ ಎನ್ನುವುದು ಅನುಭವಕ್ಕೆ ಬಂದಿದೆ. ಈ ಅವಧಿಯಲ್ಲಿ ಸಂಪೂರ್ಣ ಶರೀರಕ್ಕೆ ಸಾಬೂನು ಹಚ್ಚಬಾರದು.

೨. ಓಂ ಪಾಂ ಪಾರ್ವತೀಭ್ಯಾಂ ನಮಃ |  ಮತ್ತು ಓಂ ವಾಂ ವಾಗೀಶ್ವರೀಭ್ಯಾಂ ನಮಃ |  ಇವೆರಡು ಮಂತ್ರಜಪದಿಂದ ಅಭಿಮಂತ್ರಿಸಿದ ನೀರನ್ನು ಸೇವಿಸಬೇಕು ಮತ್ತು ರೋಗಕ್ಕೊಳಗಾದ ತ್ವಚೆಗೂ ಹಚ್ಚಬೇಕು. ನೀರನ್ನು ಅಭಿಮಂತ್ರಿಸಲು ತಾಮ್ರದ ಅಥವಾ ಗಾಜಿನ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ, ಅದರಲ್ಲಿ ಬಲಗೈಯ ಐದೂ ಬೆರಳುಗಳನ್ನು ಮುಳುಗಿಸಿ ಮೇಲಿನ ಪ್ರತಿಯೊಂದು ಮಂತ್ರವನ್ನು ೨೧ ಸಲ ಹೇಳಬೇಕು. – ವೈದ್ಯ ಮೇಘರಾಜ ಮಾಧವ ಪರಾಡಕರ

ತ್ವಚೆಯ ಆರೋಗ್ಯ ಕಾಪಾಡಲು ಆದಷ್ಟು ಸಾಬೂನು ಉಪಯೋಗಿಸದಿರಲು ಪ್ರಯತ್ನಿಸಿರಿ !

ಸ್ನಾನದ ಸಮಯದಲ್ಲಿ ಸಾಬೂನು ಉಪಯೋಗಿಸಿ ಮೈ ತೊಳೆಯುವುದರಿಂದ ಸಾಬೂನಿನಲ್ಲಿರುವ ಕೃತಕ ದ್ರವ್ಯಗಳಿಂದಾಗಿ ತ್ವಚೆಯು ಶುಷ್ಕವಾಗುತ್ತದೆ. ಹಾಗಾಗಬಾರದೆಂದು ಸಾಬೂನಿನ ಬದಲು ಉಟಣೆಯನ್ನು ಹಚ್ಚಿರಿ. ಒಂದು ಸಲ ಶರೀರಕ್ಕೆ ಹಚ್ಚಲು ೨ ಚಮಚಗಳಷ್ಟು ಉಟಣೆ ಸಾಕಾಗುತ್ತದೆ. ಉಟಣೆಯಂತೆಯೇ ಮುಲ್ತಾನಿ ಮಣ್ಣು ಅಥವಾ ಹುತ್ತದ ಮಣ್ಣನ್ನುಸಹ ಉಪಯೋಗಿಸಬಹುದು. ಸ್ನಾನ ಮಾಡುವಾಗ ಸಾಬೂನು ಉಪಯೋಗಿಸದೇ ಇರುವುದು ಸೂಕ್ತವಾಗಿದ್ದರೂ, ಮೈಗೆ ಎಣ್ಣೆಯನ್ನು ಹಚ್ಚಿ ಸ್ನಾನ ಮಾಡುವಾಗ ಮೈಗೆ ಹಚ್ಚಿರುವ ಹೆಚ್ಚಿನ ಎಣ್ಣೆಯ ಜಿಡ್ಡನ್ನು ಹೋಗಲಾಡಿಸಲು ಕೆಲವು ಜನರಿಗೆ ಸಾಬೂನು ಉಪಯೋಗಿಸುವುದು ಸೂಕ್ತವೆನಿಸುತ್ತದೆ. ಇಂತಹ ಸಮಯದಲ್ಲಿ ಮೈಗೆ ಸಾಬೂನು ಹಚ್ಚಿದ ಬಳಿಕ ಬಹಳ ತಿಕ್ಕಬಾರದು. ತ್ವಚೆಯ ಮೇಲಿನ ಎಣ್ಣೆಯ ಅಂಶವನ್ನು ಸಂಪೂರ್ಣವಾಗಿ ತೆಗೆಯದೇ, ಸ್ವಲ್ಪ ಎಣ್ಣೆಯ ಅಂಶ ಇರಬೇಕು. ಮೈ ಒರೆಸಿದ ಬಳಿಕ ಸ್ವಲ್ಪ ಸ್ನಿಗ್ಧತೆ ಉಳಿಯುತ್ತದೆ. ಎಣ್ಣೆಯು ಬಟ್ಟೆಗೆ ತಗಲುವುದಿಲ್ಲ ಮತ್ತು ಈ ಸ್ನಿಗ್ಧತೆಯು ತ್ವಚೆಯು ಮೃದುವಾಗಿರಲು ಸಹಾಯಕವಾಗುತ್ತದೆ.

– ವೈದ್ಯ ಮೇಘರಾಜ ಮಾಧವ ಪರಾಡಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ

Leave a Comment