ಸ್ಥೂಲಕಾಯವನ್ನು ಕಡಿಮೆಗೊಳಿಸಲು ಆಯುರ್ವೇದ ಚಿಕಿತ್ಸೆ

ಸ್ಥೂಲಕಾಯವನ್ನು ಕಡಿಮೆಗೊಳಿಸಲು ಪ್ರತಿದಿನ ವ್ಯಾಯಾಮ ಮಾಡಬೇಕು, ಔಷಧಿಯಿಂದ ಮರ್ದನ (ಮಾಲೀಶ್) ಮಾಡಬೇಕು, ಯೋಗ್ಯ ಆಹಾರ ಸೇವನೆ ಮಾಡಬೇಕು ಹಾಗೂ ಔಷಧಿಯನ್ನೂ ಸೇವಿಸಬೇಕು. ಇವೆಲ್ಲ ಸ್ತರದಲ್ಲಿ ಪ್ರಯತ್ನಿಸಿದರೆ ಶರೀರದಲ್ಲಿ ಸಂಗ್ರಹವಾದ ಅನಾವಶ್ಯಕ ಕೊಬ್ಬು ಕಡಿಮೆಯಾಗುತ್ತದೆ. ಇದಕ್ಕೆ ಸಂಬಂಧಿಸಿದ ವಿವೇಚನೆಯನ್ನು ಮುಂದೆ ನೀಡಲಾಗಿದೆ.

೧. ವ್ಯಾಯಾಮ

೧ ಅ. ಹಾಸಿಗೆಯಲ್ಲಿ ಅಥವಾ ನೆಲದ ಮೇಲೆ ಹೊರಳಾಡುವುದು : ಬೆಳಗ್ಗೆ ಹಾಸಿಗೆಯಲ್ಲಿರುವಾಗಲೇ ಈ ಮುಂದಿನಂತೆ ವ್ಯಾಯಾಮ ಮಾಡಬೇಕು. ಅಂಗಾತ ಮಲಗಿ ಎರಡೂ ಕೈಗಳನ್ನು ಕಿವಿಯ ಸಮೀಪ ಸರಳವಾಗಿ ಮೇಲೆತ್ತಬೇಕು. ಎರಡೂ ಕೈಗಳ ಬೆರಳುಗಳನ್ನು ಒಂದಕ್ಕೊಂದು ಹೊಂದಿಸಿ ಕೊಳ್ಳಬೇಕು. ಈ ಸ್ಥಿತಿಯಲ್ಲಿ ಮಗ್ಗಲು ಬದಲಾಯಿಸುತ್ತಾ ಹಾಸಿಗೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮತ್ತು ಇನ್ನೊಂದು ಬದಿಯಿಂದ ಪುನಃ ಮೊದಲಿನ ಕಡೆಗೆ ಹೀಗೆ ೧-೨ ನಿಮಿಷ ಹೊರಳಾಡಬೇಕು. ಹಾಸಿಗೆ ಅಗಲ ಕಡಿಮೆಯಿದ್ದರೆ ನೆಲದಲ್ಲಿ ಈ ವ್ಯಾಯಾಮ ಮಾಡಬಹುದು. ಈ ವ್ಯಾಯಾಮವನ್ನು ಎದ್ದ ತಕ್ಷಣ ಮಾಡಲು ಆಗದಿದ್ದರೆ, ಬೇರೆ ವ್ಯಾಯಾಮ ಮಾಡುವಾಗ ಮಾಡಬಹುದು. ಬೆಳಗ್ಗೆ ಶೌಚಾಲಯಕ್ಕೆ ಹೋಗಿ ಬಂದ ನಂತರ ಸಾಧ್ಯವಿರುವಷ್ಟು ಮುಂದಿನ ವ್ಯಾಯಾಮವನ್ನು ಶರೀರ ಕ್ಷಮತೆಯ ಅರ್ಧವನ್ನು ಉಪಯೋಗಿಸಿ ಮಾಡಬೇಕು. ವ್ಯಾಯಾಮ ಮಾಡುತ್ತಿರುವಾಗ ಬಾಯಿಯಿಂದ ಉಸಿರಾಟ ಆರಂಭವಾಯಿತೆಂದರೆ, ಅರ್ಧ ಶಕ್ತಿ ಉಪಯೋಗವಾಯಿತೆಂದು ತಿಳಿಯಬೇಕು. ಇನ್ನೂ ವ್ಯಾಯಾಮವನ್ನು ಮುಂದುವರಿಸಲಿಕ್ಕಿದ್ದರೆ ಸ್ವಲ್ಪ ಸಮಯ ನಿಂತು ಪುನಃ ಉಸಿರಾಟವು ಮೂಗಿನಿಂದ ಸುಲಲಿತವಾಗಿ ಆರಂಭವಾದ ನಂತರ ಮಾಡಬೇಕು. ವ್ಯಾಯಾಮ ೫ ನಿಮಿಷದಿಂದ ಆರಂಭಿಸಿ ಹಂತಹಂತವಾಗಿ ಹೆಚ್ಚಿಸಬೇಕು. ವ್ಯಾಯಾಮದ ಅಭ್ಯಾಸವಾದ ನಂತರ ಪ್ರತಿದಿನ ೨೦ ನಿಮಿಷ ವ್ಯಾಯಾಮ ಮಾಡಬೇಕು.

೧ ಆ. ಹೊಟ್ಟೆಯನ್ನು ಒಳಗೆ ಹೊರಗೆ ಮಾಡುವುದು : ನಿಂತುಕೊಂಡು ಅಥವಾ ಕುಳಿತುಕೊಂಡು ೧೫ ರಿಂದ ೨೦ ಸಲ ಈ ಕೃತಿ ಮಾಡಬೇಕು.

೧ ಇ. ಸೂರ್ಯನಮಸ್ಕಾರ : ಸೂರ್ಯದೇವರಿಗೆ ಪ್ರಾರ್ಥನೆ ಮಾಡಿ ಸೂರ್ಯನಮಸ್ಕಾರ ಮಾಡಬೇಕು. ಒಂದು ನಮಸ್ಕಾರದಿಂದ ಪ್ರಾರಂಭಿಸಿ ಪ್ರತಿದಿನ ಒಂದೊಂದು ನಮಸ್ಕಾರವನ್ನು ಹೆಚ್ಚಿಸುತ್ತಾ ಹೋಗಬೇಕು. ಇದೇ ರೀತಿ ನಿಯಮಿತವಾಗಿ ಕನಿಷ್ಠ ೧೨ ಸೂರ್ಯ ನಮಸ್ಕಾರಗಳನ್ನು ಮಾಡಬೇಕು. ಸೂರ್ಯನಮಸ್ಕಾರದ ವಿಷಯದಲ್ಲಿ ಸನಾತನದ ಗ್ರಂಥ ‘ಆದರ್ಶ ದಿನಚರಿ (ಭಾಗ ೨ ) – ಸ್ನಾನ ಹಾಗೂ ಸ್ನಾನದ ನಂತರದ ಆಚಾರ ಮತ್ತು ಅದರ ಹಿಂದಿನ ಶಾಸ್ತ್ರ’ ಇದರಲ್ಲಿ ವಿವೇಚನೆ ಮಾಡಲಾಗಿದೆ.

ಈ ಆಸನದಿಂದ ಹೊರಗೆ ಬಂದಿರುವ ಹೊಟ್ಟೆ ಪುನಃ ಮುಂಚಿನಂತೆ ಆಗಲು ಹಾಗೂ ಹಸಿವಾಗದಿರುವುದು, ಮಲವಿಸರ್ಜನೆ ಸರಿಯಾಗಿ ಆಗದಿರುವುದು, ಇತ್ಯಾದಿ ಹೊಟ್ಟೆಗೆ ಸಂಬಂಧಿಸಿದ ರೋಗಗಳು ದೂರವಾಗಲು ಸಹಾಯವಾಗುತ್ತದೆ.

೧ ಈ ೧. ಭುಜಂಗಾಸನದ ಕೃತಿ

ಅ. ಭೂಮಿಯಲ್ಲಿ ಮೊಣಕಾಲೂರಿ ಕುಳಿತುಕೊಳ್ಳಬೇಕು. ಪಾದಗಳನ್ನು ಜೋಡಿಸಿರಬೇಕು.

ಆ. ಮೊಣಕಾಲಿನಿಂದ ಮುಂದೆ ಒಂದು ಕೈ ಮತ್ತು ಒಂದು ಗೇಣು ದೂರದಲ್ಲಿ ಅಂಗೈಯ ಮಣಿಕಟ್ಟಿನ ಭಾಗವನ್ನು ಇಡಬೇಕು. (ಮೊಣಕೈಯಿಂದ ಕೈಯ ನಡುಬೆರಳ ತುದಿಯ ವರೆಗಿನ ದೂರವೆಂದರೆ ಒಂದು ಕೈ (ಮೊಳ) ಅಂತರ. ಕೈ ಹೆಬ್ಬೆರಳು ಮತ್ತು ಕಿರುಬೆರಳನ್ನು ಪರಸ್ಪರ ಹೆಚ್ಚೆಚ್ಚು ದೂರ ತೊಗೊಂಡು ಹೋದಾಗ ಎರಡೂ ಬೆರಳುಗಳ ತುದಿಯ ದೂರವೆಂದರೆ ೧ ಗೇಣು ದೂರ.)

ಇ. ಎರಡೂ ಅಂಗೈಗಳ ನಡುವೆ ೧ ಕೈಯಷ್ಟು ದೂರವಿರಬೇಕು.

ಈ. ಮೂಲಸ್ಥಿತಿ : ಅಂಗಾಲು ಸಂಪೂರ್ಣ ಭೂಮಿಗೆ ತಾಗಿಸಬೇಕು. ಸೊಂಟವನ್ನು ಆದಷ್ಟು ಮೇಲೆತ್ತಿ  ಕೈ ಮತ್ತು ಕಾಲು ಅನುಕ್ರಮವಾಗಿ ಮೊಣಕೈ ಮತ್ತು ಮೊಣಕಾಲನ್ನು ಬಗ್ಗಿಸದೆ ಸರಳವಾಗಿಡಬೇಕು ಹಾಗೂ ತಲೆ ಮತ್ತು ಬೆನ್ನು ಕೈಗಳ ನೇರವಾಗಿರಬೇಕು. ಈ ಸ್ಥಿತಿಯಲ್ಲಿ ಶರೀರವು ಪರ್ವತದಂತೆ ಕಾಣಿಸುವುದು (ಆಕೃತಿ ೧ ನೋಡಿ.) (ಚಿತ್ರವನ್ನು ಮುಂದೆ ಕೊಡಲಾಗಿದೆ )

೧ ಉ. ಈಗ ತಲೆಯನ್ನು ಮುಂದಿನಿಂದ ಬಗ್ಗಿಸಿ ಮೊದಲು ತಲೆ ಮತ್ತು ಎದೆಯನ್ನು ಕೆಳಗೆ ಒಯ್ದು ನಂತರ ಸಂಪೂರ್ಣ ಶರೀರವನ್ನು ಕೆಳಗೆ ಒಯ್ಯಬೇಕು

 

ಹಾಗೂ ತಲೆಯನ್ನು ಮೇಲೆತ್ತಿ ಆದಷ್ಟು ಹಿಂದೆ ಒಯ್ಯಬೇಕು ಹಾಗೂ ಆಕಾಶವನ್ನು ನೋಡುತ್ತಾ ಎದೆಯನ್ನು ಮುಂದೆ ತರಬೇಕು. ಈ ಸ್ಥಿತಿಯಲ್ಲಿ  ಶರೀರವು ಹೆಡೆಯೆತ್ತಿದ ನಾಗನ ಹಾಗೆ ಕಾಣಿಸುವುದು, ಆದ್ದರಿಂದ ಈ ಆಸನಕ್ಕೆ ಭುಜಂಗಾಸನವೆಂದು ಹೇಳುತ್ತಾರೆ. (ಆಕೃತಿ ೨ ನೋಡಿ.)

ಊ. ಪುನಃ ಸೊಂಟವನ್ನು ಮೊದಲಿನಂತೆಯೇ ಮೇಲೆತ್ತಿ ಮೂಲ ಸ್ಥಿತಿಗೆ ಬರಬೇಕು. ಮೂಲಸ್ಥಿತಿಯಿಂದ ಇಲ್ಲಿಯ ವರೆಗೆ ಒಂದು ಆಸನ ಪೂರ್ಣವಾಗುತ್ತದೆ.
ಈ ಆಸನವನ್ನು ೫ ರಿಂದ ೧೦ ಸಂಖ್ಯೆಯಲ್ಲಿ ಮಾಡಬೇಕು. ಒಂದು ಆಸನದಿಂದ ಆರಂಭಿಸಿ ತಮ್ಮ ಕ್ಷಮತೆಗನುಸಾರ ಆಸನಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

೨. ಮರ್ದನ (ಮಾಲಿಶ್)

ಪ್ರತಿದಿನ ಸ್ನಾನದ ಮೊದಲು ಮರ್ದನ ಮಾಡಬೇಕು. ಮರ್ದನ ಮಾಡಲು ಉಪಯೋಗಿಸುವ ಔಷಧಿಗಳ ಪಟ್ಟಿಯನ್ನು ಮುಂದೆ ನೀಡಲಾಗಿದೆ. ಇವುಗಳಲ್ಲಿ ಯಾವುದಾದರೊಂದು ಔಷಧಿಯನ್ನು, ಯಾವುದು ಸುಲಭದಲ್ಲಿ ಸಿಗುವುದೋ ಅದನ್ನು ಉಪಯೋಗಿಸಬೇಕು. ಮರ್ದನ ಮಾಡುವುದರಿಂದ ಶರೀರದಲ್ಲಿನ ಕೊಬ್ಬು ನೀರಾಗಿ ಕಡಿಮೆಯಾಗಲು ಆರಂಭವಾಗುತ್ತದೆ. ಯಾವ ಭಾಗದಲ್ಲಿ ಕೊಬ್ಬು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗಿದೆ, ಅಂತಹ ಭಾಗಕ್ಕೆ ಹೆಚ್ಚು ಕಾಲ ಅಂದರೆ ಕನಿಷ್ಠ ೫ ನಿಮಿಷವಾದರೂ ಮರ್ದನ ಮಾಡಬೇಕು. ಪ್ರತಿದಿನ ತಪ್ಪದೆ ಮರ್ದನ ಮಾಡಬೇಕು. ಕನಿಷ್ಠ ೧೦೦ ದಿನಗಳ ವರೆಗೆ ಹೀಗೆ ಮರ್ದನ ಮಾಡಬೇಕಾಗುತ್ತದೆ. ಮರ್ದನ ಮಾಡಿದಾಗ ಸ್ನಾನದ ಸಮಯದಲ್ಲಿ ಆದಷ್ಟು ಸಾಬೂನು ಹಚ್ಚಬಾರದು. ಮೈ ಒರೆಸುವ ಶಾಲು ಮತ್ತು ಬಟ್ಟೆಗಳು ಎಣ್ಣೆಯಾಗಬಾರದೆಂದು ಈ ಮುಂದಿನ ಚೂರ್ಣಗಳನ್ನು ಉಪಯೋಗಿಸಬೇಕು.

೨ ಅ. ಮರ್ದನ ಮಾಡಲು ಉಪಯೋಗವಾಗುವ ಚೂರ್ಣಗಳು : ಈ ಮುಂದಿನ ಕೆಲವು ಔಷಧಿಗಳು ಒಣ ಚೂರ್ಣಗಳ ಸ್ವರೂಪದಲ್ಲಿವೆ. ಅದನ್ನು ಮೈಗೆ ಉಜ್ಜುವ ಮೊದಲು ಮೈಗೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯಿಂದ ಮರ್ದನ ಮಾಡಬೇಕು. ಅನಂತರ ಈ ಒಣಚೂರ್ಣವನ್ನು ಶರೀರದ ಮೇಲೆ ಉಜ್ಜಬೇಕು. ರಸ ಅಥವಾ ಎಣ್ಣೆ ಸ್ವರೂಪದಲ್ಲಿನ ಔಷಧಿಗಳಿಂದ ಮರ್ದನ ಮಾಡುವಾಗ ಮೊದಲಿಗೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಹಚ್ಚುವ ಅವಶ್ಯಕತೆಯಿಲ್ಲ; ಆದರೆ ಹಚ್ಚಿದ ಹೆಚ್ಚಿನ ಎಣ್ಣೆಯು ದೂರವಾಗಬೇಕೆಂದು ಎಣ್ಣೆ ಹಚ್ಚಿದ ನಂತರ ಈ ಮುಂದಿನ ಪೈಕಿ ಯಾವುದಾದರೂ ಒಣ ಚೂರ್ಣವನ್ನು ಶರೀರಕ್ಕೆ ಹಚ್ಚಿ ಉಜ್ಜಬೇಕು.

೧. ಲಿಂಬೆ, ಮೋಸಂಬಿ ಅಥವಾ ಕಿತ್ತಳೆ ಇವುಗಳ ಸಿಪ್ಪೆಯ ಚೂರ್ಣ : ಸಿಪ್ಪೆಯ ಸಣ್ಣ ಸಣ್ಣ ತುಂಡು ಮಾಡಿ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ನಂತರ ಮಿಕ್ಸರ್‌ನಲ್ಲಿ ಹಾಕಿ ತೆಳ್ಳಗೆ ಪುಡಿ ಮಾಡಬೇಕು. ಒಮ್ಮೆ ೧ – ೨ ಚಮಚ ಚೂರ್ಣವನ್ನು ಉಪಯೋಗಿಸಬೇಕು

೨. ಉಪಯೋಗಿಸಿದ ಚಹಾದ ಒಣಗಿಸಿದ ಪುಡಿ : ಚಹಾವನ್ನು ಗಾಳಿಸಿದ ನಂತರ ಬಾಕಿ ಉಳಿಯುವ ಚಹಾದ ಪುಡಿಯನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಸಕ್ಕರೆಯ ಅಂಶವಿರುತ್ತದೆ. ಆದ್ದರಿಂದ ಅದರಲ್ಲಿ ನೀರು ಹಾಕಿ ಕಲಕಿ ಅದನ್ನು ಪುನಃ ಗಾಳಿಸಬೇಕು. ಇದರಿಂದ ಸಕ್ಕರೆಯ ಅಂಶ ಹೊರಟು ಹೋಗುತ್ತದೆ. ಚಹಾ ಮಾಡುವಾಗ ಅದರಲ್ಲಿ ಸಕ್ಕರೆ ಹಾಕದೆಯೇ ಚಹಾವನ್ನು ಗಾಳಿಸಿದರೆ ಚಹಾದ ಪುಡಿಯಲ್ಲಿ ಸಕ್ಕರೆಯ ಅಂಶವಿರುವುದಿಲ್ಲ. ಈ ಪುಡಿಯನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ತೆಳುವಾಗಿ ಪುಡಿ ಮಾಡಬೇಕು. ಒಮ್ಮೆ ೧ – ೨ ಚಮಚ ಪುಡಿಯನ್ನು ಉಪಯೋಗಿಸಬೇಕು.

೩. ೪ ಚಮಚ ಕಡಲೆ ಹಿಟ್ಟು, ಅರ್ಧ ಚಮಚ ಅರಿಶಿಣದ ಪುಡಿ ಮತ್ತು ಕಾಲು ಚಮಚ ಕರ್ಪೂರದ ಪುಡಿ ಇವುಗಳ ಮಿಶ್ರಣ.

೪. ೪ ಚಮಚ ತೊಗರಿಬೇಳೆ ಅಥವಾ ಹುರುಳಿಯ ಹಿಟ್ಟು  ಮತ್ತು ೧ ಚಮಚ ಲಿಂಬೆಯ ರಸ ಇವುಗಳ ಮಿಶ್ರಣ

೫. ಮೂಲಂಗಿ, ಜೋಳ, ತಗ್ಗಿ ಗಿಡದ ಎಲೆ , ದಾಳಿಂಬೆಯ ಎಲೆ ಅಥವಾ ಕಿತ್ತಳೆಯ ಹೂವು ಇವುಗಳ ತಾಜಾ ರಸ ಅರ್ಧ ಲೋಟ.

೬. ಕುಸುಂಬೆ (ಕುಸುಬೆ)ಯ ರಸವನ್ನು ಕುದಿಸಿ ಮಾಡಿದ ಎಣ್ಣೆ : ಅರ್ಧ ಲೋಟ ಕುಸುಂಬೆಯ ಎಣ್ಣೆಯಲ್ಲಿ ಅರ್ಧ ಲೋಟ ಕುಸುಂಬೆಯ ಸೊಪ್ಪನ್ನು ರುಬ್ಬಿ ತೆಗೆದ ರಸವನ್ನು ಮಿಶ್ರಣ ಮಾಡಿ ಕೇವಲ ಎಣ್ಣೆ ಬಾಕಿ ಉಳಿಯುವವರೆಗೆ ಕುದಿಸಬೇಕು. ಈ ಎಣ್ಣೆ ತಣ್ಣಗಾದ ನಂತರ ಗಾಳಿಸಿ ಬಾಟ್ಲಿಯಲ್ಲಿ ತುಂಬಿಸಿಡಬೇಕು. ಈ ಎಣ್ಣೆಯನ್ನು ಸರ್ವಾಂಗಕ್ಕೆ ಮರ್ದನ ಮಾಡಿ ತಕ್ಷಣ ಸ್ನಾನ ಮಾಡಬೇಕು. ಈ ಎಣ್ಣೆ ಹಚ್ಚಿದ ನಂತರ ತುರಿಕೆ ಬಂದರೆ ಇದನ್ನು ಉಪಯೋಗಿಸಬಾರದು. ಈ ಎಣ್ಣೆ ಕಣ್ಣುಗಳಿಗೆ ಹೋಗದಂತೆ ಕಾಳಜಿ ವಹಿಸಬೇಕು. ಇದರಿಂದ ಕಣ್ಣುಗಳು ತುರಿಸುವುದು, ಉರಿಯುವುದು, ನೋವಾಗುವುದು, ನೀರು ಬರುವುದು ಇತ್ಯಾದಿ ಸಮಸ್ಯೆಗಳು ನಿರ್ಮಾಣ ವಾಗಬಹುದು. ಎಣ್ಣೆಯಿಂದ ದುಷ್ಪರಿಣಾಮವಾಗದಿದ್ದರೆ ಈ ಮೇಲಿನ ಪದ್ಧತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎಣ್ಣೆಯನ್ನು ತಯಾರಿಸಿ ಉಪಯೋಗಿಸಬೇಕು.

೭. ತಗ್ಗಿ ಎಣ್ಣೆ : ೧ ತಂಬಿಗೆ (೧ ಲಿಟರ್) ಎಳ್ಳೆಣ್ಣೆಯಲ್ಲಿ ತಗ್ಗಿಯ ವನಸ್ಪತಿಯನ್ನು ತಕ್ಕಷ್ಟು ನೀರು ಹಾಕಿ ರುಬ್ಬಿ ತೆಗೆದ ೧ ತಂಬಿಗೆ ರಸವನ್ನು ಮಿಶ್ರಣ ಮಾಡಿ ಕೇವಲ ಎಣ್ಣೆ ಬಾಕಿ ಉಳಿಯುವವರೆಗೆ ಕುದಿಸಬೇಕು. ಈ ಎಣ್ಣೆ ತಣ್ಣಗಾದ ನಂತರ ಗಾಳಿಸಿ ಬಾಟ್ಲಿಯಲ್ಲಿ ತುಂಬಿಸಿಡಬೇಕು.

೩. ಔಷಧಿಗಳು

ಪ್ರತಿದಿನ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಈ ಮುಂದಿನ ಯಾವುದಾದರೊಂದು ಔಷಧಿಯನ್ನು ಸೇವಿಸಬೇಕು. ಮಧುಮೇಹವಿದ್ದವರು ಜೇನು ತುಪ್ಪದ ಬದಲು ಉಗುರು ಬಿಸಿನೀರನ್ನು ಉಪಯೋಗಿಸಬೇಕು. ನಿರಂತರ ಒಂದು ತಿಂಗಳು ಔಷಧಿಯನ್ನು ಉಪಯೋಗಿಸಿ ಗುಣವಾಗದಿದ್ದರೆ, ಈ ಪಟ್ಟಿಯಲ್ಲಿನ ಬೇರೆ ಔಷಧಿಯನ್ನು ೧ ತಿಂಗಳು ಉಪಯೋಗಿಸಬೇಕು. – ವೈದ್ಯ ಮೇಘರಾಜ ಮಾಧವ ಪರಾಡಕರ್, ಮಹರ್ಷಿ ಅಧಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೫.೨೦೧೬)

(ಆಧಾರ: ಆಪತ್ಕಾಲದ ವಿಷಯದ ಸನಾತನದ ಮುಂಬರುವ ಗ್ರಂಥಮಾಲಿಕೆ)

೧. ಮೆಂಥೆ, ಓಮ ಮತ್ತು ಬಡಿಸೊಪ್ಪು ಇವುಗಳ ಸಮಪಾಲು ಇರುವ ೧ ಚಮಚ ಚೂರ್ಣವನ್ನು ಬಿಸಿನೀರಿನ ಜೊತೆಗೆ ತೆಗೆದುಕೊಳ್ಳಬೇಕು.

೨. ನವಕ ಗುಗ್ಗುಲ ಅಥವಾ ಕಾಂಚನಾರ ಗುಗ್ಗುಲ ಈ ಔಷಧಿಯ ೪ ಮಾತ್ರೆಗಳನ್ನು ಅರ್ಧ ಕಪ್ ಗೋಮೂತ್ರ ಅಥವಾ ಬಿಸಿ ನೀರಿನೊಂದಿಗೆ ಸೇವಿಸಬೇಕು.

೪. ಆಹಾರ

ಊಟದಲ್ಲಿ ಅನ್ನ, ರೊಟ್ಟಿ ಇತ್ಯಾದಿ ಪದಾರ್ಥಗಳನ್ನು ಸಂಪೂರ್ಣ ನಿಲ್ಲಿಸಿ ಕೇವಲ ತರಕಾರಿಗಳನ್ನು ಅವಲಂಬಿಸಿರುವುದು ತಪ್ಪಾಗುತ್ತದೆ. ಆಹಾರದಲ್ಲಿ ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮತ್ತು ಒಗರು ಈ ಆರೂ ರಸಗಳ ಸಮಾವೇಶವಿರಬೇಕು. ಅವುಗಳ ಪೈಕಿ ಸಿಹಿ, ಹುಳಿ ಮತ್ತು ಉಪ್ಪು ಪದಾರ್ಥಗಳು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಅವುಗಳನ್ನು ಸಂಪೂರ್ಣ ನಿಲ್ಲಿಸುವುದಲ್ಲ.

೪ ಅ. ಪಥ್ಯ (ಇದು ತಿನ್ನಬೇಕು) : ಆಹಾರದಲ್ಲಿನ ಜವೆ, ಹೆಸರುಕಾಳು, ಹುರುಳಿ, ಮಜ್ಜಿಗೆ, ತಗ್ಗಿಯ ಸೊಪ್ಪು, ನುಗ್ಗೆ, ಪಡುವಲಕಾಯಿ, ಹೀರೇಕಾಯಿ ಈ ಪದಾರ್ಥಗಳು ಅನಾವಶ್ಯಕ ಕೊಬ್ಬನ್ನು ಕಡಿಮೆ ಮಾಡುತ್ತವೆ. ಅದಕ್ಕಾಗಿ ಇವುಗಳನ್ನು ಆಹಾರದಲ್ಲಿ ಹೆಚ್ಚೆಚ್ಚು ಪ್ರಮಾಣದಲ್ಲಿ ಉಪಯೋಗಿಸಬೇಕು.
ಹೆಚ್ಚು ಕೊಬ್ಬು ಇರುವ ವ್ಯಕ್ತಿಗೆ ಹಸಿವು ಹೆಚ್ಚಾಗುತ್ತದೆ. ಆದ್ದರಿಂದ ಕೊಬ್ಬು ಹೆಚ್ಚಾಗದ ಹಾಗೂ ಹಸಿವೆಯನ್ನು ನಿವಾರಿಸುವ ಪದಾರ್ಥಗಳನ್ನು ಮುಂದೆ ನೀಡಲಾಗಿದೆ. ಈ ಪಟ್ಟಿಯಿಂದ ತಮ್ಮ ಇಷ್ಟಕ್ಕನುಸಾರ ಒಮ್ಮೆ ೧-೨ ಪದಾರ್ಥಗಳನ್ನು ಆರಿಸಬೇಕು. ಪ್ರತಿದಿನ ಒಂದೇ ಪದಾರ್ಥವನ್ನು ತಿಂದು ಬೇಸರವಾದಾಗ ಪಟ್ಟಿಯಲ್ಲಿನ ಇನ್ನೊಂದು ಪದಾರ್ಥವನ್ನು ಆರಿಸಬೇಕು.

೧. ಹಣ್ಣಾದ ಟೊಮ್ಯಾಟೊ,

೨. ಹೀರೇಕಾಯಿ ಪಲ್ಯ

೩. ಚೆನ್ನಾಗಿ ಹುರಿದ ಬಿಳಿಬಣ್ಣದ ನೆಲಕಡಲೆ (ಕೆಂಪು ಬಣ್ಣದ ನೆಲಕಡಲೆ ಯಲ್ಲಿ ಸ್ನಿಗ್ಧಾಂಶ ಹೆಚ್ಚು, ಬಿಳಿಬಣ್ಣದ ನೆಲಕಡಲೆಯಲ್ಲಿ ಸ್ನಿಗ್ಧಾಂಶ ಕಡಿಮೆ ಇರುತ್ತದೆ; ಹಾಗಾಗಿ ಬಿಳಿ ನೆಲಕಡಲೆ ಉಪಯೋಗಿಸಬೇಕು)

೪. ಸೇಬು

೫. ಬೇಯಿಸಿದ ಹೆಸರು ಅಥವಾ ಹೆಸರಿನ ಪಲ್ಯ,

೬. ಹುರುಳಿಯ ಪಲ್ಯ ಮತ್ತು ಹುರುಳಿಯ ಸಾರು

೭. ಹುರುಳಿ ಮತ್ತು ಪಡುವಲಕಾಯಿಯ ಸೂಪ್ : ೧ ಭಾಗ ಹುರುಳಿ ಮತ್ತು ೧೦ ಪಡುವಲವನ್ನು ಕುಕ್ಕರ್‌ನಲ್ಲಿ ಬೇಯಿಸಿ ಅದನ್ನು ಮಿಕ್ಸರ್‌ನಲ್ಲಿ ರುಬ್ಬಬೇಕು. ಅದರಲ್ಲಿ ೧ ಚಮಚ ಜೀರಿಗೆ, ಕಾಲು ಚಮಚ ದಾಲಚೀನಿ, ಅರ್ಧ ಚಮಚ ಓಮ ಮತ್ತು ರುಚಿಗೆ ತಕ್ಕಷ್ಟು ಸೈಂಧವ ಲವಣ ಹಾಕಬೇಕು.

೮. ತಗ್ಗಿಯ ಎಳೆಯದಾದ ಎಲೆಗಳನ್ನು ಕುದಿಸಿ ಮಾಡಿದ ಪಲ್ಯ ಮತ್ತು ವರದಕ್ಕಿಯ ಅನ್ನ.

೯. ಜೋಳದ ರೊಟ್ಟಿ, ನೀರುಳ್ಳಿ ಮತ್ತು ಬೆಳ್ಳುಳ್ಳಿ

೪ ಆ. ಅಪಥ್ಯ (ಇದು ಮಾಡಬಾರದು) : ಹೊಟ್ಟೆ ತುಂಬ ಊಟ ಮಾಡುವುದು, ತಿನ್ನುತ್ತಿರುವುದು, ಎಣ್ಣೆಯ ಪದಾರ್ಥ ತಿನ್ನುವುದು, ಮಾಂಸಾಹಾರ, ಹೆಚ್ಚು ನೀರು ಕುಡಿಯುವುದು, ಫ್ರಿಜ್‌ನಲ್ಲಿನ ತಣ್ಣನೆಯ ನೀರು ಕುಡಿಯುವುದು, ಊಟ ಆದ ತಕ್ಷಣ ನೀರು ಕುಡಿಯುವುದು, ಮಧ್ಯಾಹ್ನ ಮಲಗುವುದು ಮತ್ತು ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳುವುದು. – ವೈದ್ಯ ಮೇಘರಾಜ ಪರಾಡಕರ್, ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯ, ಗೋವಾ. (೨೦.೫.೨೦೧೬)

(ಆಧಾರ : ಆಪತ್ಕಾಲದ ವಿಷಯದ ಸನಾತನದ ಮುಂಬರುವ ಗ್ರಂಥಮಾಲಿಕೆ)

Leave a Comment