ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು

ಪ್ರಭು ಶ್ರೀರಾಮನ ಅಸ್ತಿತ್ವದ ನೆನಪು ಮಾಡಿಕೊಡುವ ರಾಮಸೇತುವಿನ ಚೈತನ್ಯಮಯ ಕಲ್ಲುಗಳು
ಮತ್ತು ಶ್ರೀರಾಮನ ಕಾಲದ ನಾಣ್ಯಗಳು

ಪ್ರಭು ಶ್ರೀರಾಮನ ಕಾಲದ ನಾಣ್ಯಗಳು

ರಾಮಸೇತುವಿನ ತೇಲುತ್ತಿರುವ ಕಲ್ಲು.
ಇದು ೪ ಕಿಲೋ ಭಾರವಿದೆ. ಪಕ್ಕದಲ್ಲಿರುವ ಅದಕ್ಕಿಂತ ಕಡಿಮೆ ಭಾರವಿರುವ ಕಲ್ಲುಗಳು ನೀರಿನಲ್ಲಿ ಮುಳುಗಿವೆ.

ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾಮೇಶ್ವರಂನ ದಕ್ಷಿಣ ಬದಿಯಲ್ಲ್ಲಿ ೧೧ ಕಿ.ಮೀ. ಅಂತರದಲ್ಲಿ ಧನುಷ್ಕೋಡಿ ನಗರವಿದೆ. ರಾಮಸೇತುವೆಯ ಪಕ್ಕದ ಭಾಗಕ್ಕೆ ಧನುಷ್ಕೋಡಿ (ಕೋಡಿ ಎಂದರೆ ಧನುಷ್ಯದ ತುದಿ) ಎಂದು ಹೇಳುತ್ತಾರೆ; ಏಕೆಂದರೆ ಹದಿನೇಳುವರೆ ಲಕ್ಷ ವರ್ಷಗಳ ಹಿಂದೆ ರಾವಣನ ಲಂಕೆಯನ್ನು (ಶ್ರೀಲಂಕೆ) ಪ್ರವೇಶಿಸಲು ಶ್ರೀರಾಮನು ತನ್ನ ಕೋದಂಡ ಧನುಷ್ಯದ ತುದಿಯಿಂದ ಸೇತುವೆ ಕಟ್ಟಲು ಈ ಸ್ಥಾನದ ಆಯ್ಕೆ ಮಾಡಿದನು. ಸಮಾನ ರೇಖೆಯಲ್ಲಿ ದೊಡ್ಡ ಕಲ್ಲುಗಳಿರುವ ದ್ವೀಪಗಳ ಸಾಲುಗಳು ರಾಮಸೇತುವೆಯ ಭಗ್ನಾವಶೇಷದ ರೂಪದಲ್ಲಿ ನಮಗೆ ಇಂದಿಗೂ ಕಂಡುಬರುತ್ತವೆ. ರಾಮಸೇತುವೆಯು ನಲ ಮತ್ತು ನೀಲರ ವಾಸ್ತುಶಾಸ್ತ್ರದ ಒಂದು ಅದ್ಭುತ ನಮೂನೆಯಾಗಿದೆ. ಈ ‘ರಾಮಸೇತುವಿನ ಅಗಲ ಮತ್ತು ಉದ್ದಗಳ ಪ್ರಮಾಣವು ೧:೧೦ ಇದೆ ಎನ್ನುವ ಸವಿಸ್ತಾರವಾದ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ. ಪ್ರತ್ಯಕ್ಷ ಅಳತೆ ಮಾಡಿದ ನಂತರವೂ ಅವುಗಳ ಅಗಲ ೩.೫ ಕಿ.ಮೀ.ಗಳಷ್ಟಿದ್ದು, ಉದ್ದ ೩೫ ಕಿ.ಮೀ.ಗಳಷ್ಟಿದೆ. ಈ ಸೇತುವೆಯ ನಿರ್ಮಾಣ ಕಾರ್ಯದ ಸಮಯದಲ್ಲಿ ಪುಟ್ಟ ಅಳಿಲು ಮಾಡಿದ ಸಹಾಯದ ಕಥೆ ಮತ್ತು ನೀರಿನ ಮೇಲೆ ತೇಲುತ್ತಿರುವ ಅಲ್ಲಿನ ಕಲ್ಲುಗಳ ಕಥೆಗಳು ತಲೆತಲಾಂತರದ ಹಿಂದೂಗಳಿಗೆ ತಿಳಿದಿವೆ.

2 thoughts on “ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು”

Leave a Comment