ಶ್ರೀರಾಮನ ಬಾಣದಿಂದ ನಿರ್ಮಾಣವಾದ ತೀರ್ಥ – ಶರಾವತಿ ನದಿಯ ಜೋಗದ ಜಲಪಾತ

೧. ಗೋವಾದ ರಾಮನಾಥಿಯಿಂದ ಬೆಂಗಳೂರಿಗೆ ಹೋಗುವಾಗ ದಾರಿಯಲ್ಲಿ ಜೋಗ ಜಲಪಾತವನ್ನು ನೋಡಿ ಮುಂದೆ ಹೋಗೋಣವೆಂದು ಸದ್ಗುರು (ಸೌ.) ಅಂಜಲಿ ಗಾಡಗೀಳಕಾಕೂವರು ಹೇಳುವುದು !

೩೦.೭.೨೦೧೬ ರಂದು ನಾವು ಗೋವಾದ ರಾಮನಾಥಿ ಆಶ್ರಮದಿಂದ ಬೆಂಗಳೂರಿಗೆ ಹೋಗಲು ಹೊರಟೆವು. ನಿಯಮಿತವಾಗಿ ಹೋಗುವ ಮಾರ್ಗದಲ್ಲಿ ಸ್ವಲ್ಪ ಅಡಚಣೆಯಿದ್ದುದರಿಂದ ನಾವು ಮಂಗಳೂರಿಗೆ ಹೋಗಿ ಅಲ್ಲಿಂದ ಮರುದಿನ ಬೆಂಗಳೂರಿಗೆ ಹೋಗುವುದೆಂದು ನಿರ್ಧರಿಸಿದೆವು. ಮಂಗಳೂರಿಗೆ ಹೋಗುವಾಗ ಸದ್ಗುರು (ಸೌ.) ಅಂಜಲಿ ಗಾಡಗೀಳಕಾಕೂರವರು, ‘ಈ ಮಾರ್ಗದಿಂದ ಹೋಗುವಾಗ ದಾರಿಯಲ್ಲಿ ಜೋಗಜಲಪಾತವಿದೆ. (ಛಾಯಾಚಿತ್ರ ಕ್ರಮಾಂಕ ೧) ಅದನ್ನು ನೋಡಿ ಮುಂದೆ ಹೋಗೋಣ’ ಎಂದು ಹೇಳಿದರು. ನಂತರ ಜೋಗದಿಂದ ಬೆಂಗಳೂರು ಕೇವಲ ೮ ಗಂಟೆಯ ಪ್ರಯಾಣವಿದೆ ಎಂದು ತಿಳಿದ ನಂತರ ಸದ್ಗುರು ಅಂಜಲಿ ಗಾಡಗೀಳಕಾಕೂರವರು, ‘ಕೇವಲ ೮ ಗಂಟೆಯ ಪ್ರಯಾಣ ಇರುವುದರಿಂದ ನಾವು ಮಂಗಳೂರಿಗೆ ಹೋಗದೇ, ಜಲಪಾತವನ್ನು ನೋಡಿಕೊಂಡು ಅಲ್ಲಿಂದ ನೇರ ಬೆಂಗಳೂರಿಗೆ ಹೋಗೋಣ’ ಎಂದು ಹೇಳಿದರು.

೨. ಸ್ಥಳದ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲದಿದ್ದರೂ ಸದ್ಗುರು ಗಾಡಗೀಳ ಕಾಕೂರವರು ಆ ಸ್ಥಾನದಲ್ಲಿ ದೈವೀ ವೈಶಿಷ್ಟ್ಯವಿದೆಯೆಂದು ಹೇಳುವುದು ಮತ್ತು ಆ ಸ್ಥಳದ ಸ್ಥಾನ ಮಹಾತ್ಮೆಯನ್ನು ಓರ್ವ ಸಾಧಕರು ಹೇಳುವುದು

ಇದಾದ ನಂತರ ಈ ಜಲಪಾತದ ಬಗ್ಗೆ ಚರ್ಚೆ ಆರಂಭವಾಯಿತು. ಸದ್ಗುರು ಗಾಡಗೀಳ ಕಾಕೂರವರಿಗೆ ಈ ಜಲಪಾತದ ಬಗ್ಗೆ ಮಾಹಿತಿಯಿಲ್ಲದಿದ್ದರೂ ಅವರು, ‘ಈ ಸ್ಥಾನದಲ್ಲಿ ಏನೋ ದೈವೀ ವೈಶಿಷ್ಟ್ಯವಿದೆ’ ಎಂದರು. ಆಗ ನಮ್ಮೊಡನೆ ಇರುವ ಸಾಧಕ ಶ್ರೀ. ವಿನಾಯಕ ಶಾನಭಾಗರವರು, ‘ತ್ರೇತಾಯುಗದಲ್ಲಿ ಶ್ರೀರಾಮನು ವನವಾಸದಲ್ಲಿದ್ದಾಗ ಒಮ್ಮೆ ಸೀತಾಮಾತೆಗೆ ತುಂಬ ಬಾಯಾರಿಕೆಯಾಗಿತ್ತು, ಆಗ ಶ್ರೀರಾಮನು ಭೂಮಿಗೆ ಬಾಣ ಹೊಡೆದು ನೀರು ತೆಗೆದನು. ಆ ಸ್ಥಳದಲ್ಲಿ ತೀರ್ಥವು ನಿರ್ಮಾಣವಾಯಿತು. ಇದನ್ನೇ ಈಗ ಕರ್ನಾಟಕ ರಾಜ್ಯದಲ್ಲಿರುವ ಶರಾವತಿ ನದಿಯ ಉಗಮಸ್ಥಾನವೆಂದು ಕರೆಯಲಾಗುತ್ತದೆ. ಈ ನದಿಯು ಹರಿಯುತ್ತ ಒಂದು ಎತ್ತರ ಪ್ರದೇಶದಿಂದ ಕೆಳಗೆ ಇಳಿಯುತ್ತದೆ, ಅದನ್ನೇ ‘ಜೋಗಜಲಪಾತ’ ಎಂದು ಕರೆಯುತ್ತಾರೆ’ ಎಂದರು.

೩. ಸದ್ಗುರು ಗಾಡಗೀಳ ಕಾಕೂರವರು ಹೇಳಿದಂತೆ ಜಲಪಾತದ ಛಾಯಾಚಿತ್ರದ ಮುದ್ರಿತ ಪ್ರತಿ ತೆಗೆಯಲು ಹೋಗಿದ್ದ ಸಾಧಕನಿಗೆ ಅದನ್ನು ತೆಗೆಯುವ ಹಿಂದಿರುವ ಕಾರಣವು ಗಮನಕ್ಕೆ ಬರುವುದು

ಜಲಪಾತದ ಚಿತ್ರೀಕರಣದ ನಂತರ ಸದ್ಗುರು ಗಾಡಗೀಳ ಕಾಕೂರವರು, ‘ನಾವೆಲ್ಲರೂ ಸೇರಿ ಒಟ್ಟಿಗೆ ಒಂದು ಛಾಯಾಚಿತ್ರವನ್ನು ತೆಗೆದು ಅದರ ಮುದ್ರಿತ ಪ್ರತಿಯನ್ನು ತೆಗೆದುಕೊಳ್ಳೋಣ’ ಎಂದರು. ಸಾಕಷ್ಟು ಕಡೆಗಳಲ್ಲಿ ಮುದ್ರಣ ಮಾಡಿಕೊಡುವ ಸೌಲಭ್ಯವಿರುತ್ತದೆ. ನಮ್ಮಲ್ಲಿ ಕ್ಯಾಮೆರಾ ಇದ್ದುದರಿಂದ ಆ ಛಾಯಾಚಿತ್ರದ ಪ್ರಿಂಟ್ ತೆಗೆಯಲು ಕಾಕೂ ಯಾವತ್ತೂ ಹೇಳುವುದಿಲ್ಲ. ಆದರೆ ಈಗ ಪ್ರಿಂಟ್ ತೆಗೆಯಲು ಹೇಳುವ ಹಿಂದೆ ಏನು ಕಾರಣವಿರಬಹುದು ಎನ್ನುವುದು ನಮಗೆ ತಿಳಿಯಲಿಲ್ಲ. ನಂತರ ಶ್ರೀ. ವಿನಾಯಕಣ್ಣನು ಛಾಯಾಚಿತ್ರದ ಪ್ರಿಂಟ್ ತರಲು ಹೋದಾಗ ಅಂಗಡಿಯ ಸಮೀಪ ಅವರಿಗೆ ಒಂದು ಮಿನಿ ಥಿಯೇಟರ್ ಕಾಣಿಸಿತು. ಆ ಥಿಯೇಟರ್‌ನಲ್ಲಿ, ೨೦೦೭ ರಲ್ಲಿ ಈ ಜಲಪಾತದಲ್ಲಿ ಸಾಕಷ್ಟು ನೀರು ಬಂದಿತ್ತು ಎಂದು ತೋರಿಸಲಾಗುತ್ತಿದೆ, ಎಂಬುದು ತಿಳಿಯಿತು. ಅಣ್ಣನು ಚಿತ್ರೀಕರಣವನ್ನು ತೋರಿಸುತ್ತಿದ್ದ ಆ ವ್ಯಕ್ತಿಯ ಬಳಿ ವಿಚಾರಿಸಿದಾಗ ಆ ವ್ಯಕ್ತಿಯು, ‘ಜೋಗದಲ್ಲಿನ ಜಲಪಾತದ ನಾಲ್ಕು ಧಾರೆಗಳಲ್ಲಿ ಒಂದು ಧಾರೆಯ ಜಾಗದಲ್ಲಿ ಬಂಡೆಗಲ್ಲಿನ ಮೇಲೆ ನೀರು ಬಿದ್ದು ಬಂಡೆಗಲ್ಲಿನ ಮೇಲೆ ಆಂಜನೇಯನ ಮುಖವು ನಿರ್ಮಾಣವಾಗಿದೆ’ ಎಂದನು. ಆ ಸ್ಥಾನವನ್ನೂ ಅವನು ಛಾಯಾಚಿತ್ರದಲ್ಲಿ ವರ್ತುಲಾಕಾರ ಮಾಡಿ ತೋರಿಸಿದನು. (ಛಾಯಾಚಿತ್ರ ಕ್ರಮಾಂಕ ೨)

ಮರಳಿ ಬಂದ ನಂತರ ವಿನಾಯಕಣ್ಣನವರು ನಡೆದ ವಿಷಯ ನಮಗೆಲ್ಲರಿಗೂ ಹೇಳಿದರು. ಆಗ ಸದ್ಗುರು ಗಾಡಗೀಳ ಕಾಕೂರವರು, ನೋಡಿ, ದೇವರ ಲೀಲೆ ಹೇಗಿದೆ ! ಭಗವಾನ್ ಶ್ರೀರಾಮನ ಬಾಣದಿಂದ ನಿರ್ಮಾಣವಾಗಿದ್ದ ಈ ತೀರ್ಥದಲ್ಲಿನ ಚೈತನ್ಯವನ್ನು ಪಡೆಯಲು ರಾಮನ ಭಕ್ತ ಆಂಜನೇಯನು ಸಹ ಈ ಸ್ಥಳಕ್ಕೆ ಬಂದಿದ್ದಾನೆ’ ಎಂದರು. ಆಗ ಈ ಸ್ಥಳದಲ್ಲಿ ಏನಾದರೂ ದೈವೀ ವೈಶಿಷ್ಟ್ಯವಿದೆ ಎಂದು ಸದ್ಗುರು ಗಾಡಗೀಳ ಕಾಕೂರವರು ಬೆಳಗ್ಗೆ ಹೇಳುತ್ತಿದ್ದ ಕಾರಣ ತಿಳಿಯಿತು ಮತ್ತು ಅವರು ಸಹ ನಮಗಾಗಿ ಓರ್ವ ಮಹರ್ಷಿಗಳೇ ಆಗಿದ್ದಾರೆ, ಎಂದು ಅರಿವಾಯಿತು.

– ಶ್ರೀ. ವಿನೀತಕುಮಾರ ದೇಸಾಯಿ, ಸನಾತನ ಆಶ್ರಮ, ಗೋವಾ. (ಜುಲೈ ೨೦೧೬)

Leave a Comment