ಕೊರೋನಾದ ಓಮಿಕ್ರಾನ್ ತಳಿಯ ವಿರುದ್ಧ ಆಧ್ಯಾತ್ಮಿಕ ಬಲ ಪಡೆಯಲು ನಾಮಜಪ !

Article also available in :

ಸದ್ಗುರು (ಡಾ.) ಮುಕುಲ ಗಾಡಗೀಳ

೨೦೨೦ ನೇ ಇಸವಿಯಿಂದ ಜಗತ್ತಿನಾದ್ಯಂತದ ಜನರಿಗೆ ಕೊರೋನಾ ರೋಗಾಣುಗಳ (ವೈರಸ್) ಸಂಕಟ ಎದುರಾಗಿದೆ ಮತ್ತು ೨ ವರ್ಷಗಳಾದರೂ ಇದುವರೆಗೂ ಆ ರೋಗಾಣುಗಳ ಸೋಂಕು ಜನರಿಗೆ ಆಗುತ್ತಲೇ ಇದೆ. ಅಂತಹುದರಲ್ಲಿ ಈಗ ಕೊರೋನಾದ ಹೊಸ ತಳಿಯಾಗಿರುವ ಓಮಿಕ್ರಾನ್ ಹೆಸರಿನ ರೋಗಾಣುಗಳು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಕೊರೋನಾ ರೋಗಾಣುಗಳೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಯಾವ ನಾಮಜಪವನ್ನು ಮಾಡಬೇಕು ಮತ್ತು ಅದನ್ನು ಎಷ್ಟು ಸಮಯ ಮಾಡಬೇಕು ?, ಎಂಬ ಮಾಹಿತಿ, ಹಾಗೆಯೇ ಇದರ ಧ್ವನಿಮುದ್ರಿತ ನಾಮಜಪವನ್ನು ಸನಾತನ ಸಂಸ್ಥೆಯ ಜಾಲತಾಣದಲ್ಲಿ (ಇಲ್ಲಿ ನೋಡಿ) ಕೊಡಲಾಗಿದೆ. ಜಗತ್ತಿನಾದ್ಯಂತ ಅನೇಕರಿಗೆ ಇದರ ಲಾಭವಾಗಿದೆ. ಈಗ ಓಮಿಕ್ರಾನ್ ಈ ತಳಿಯೊಂದಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೋರಾಡಲು ಮಾಡುವ ನಾಮಜಪವನ್ನು ಇಲ್ಲಿ ಕೊಡಲಾಗಿದೆ.

೧. ನಾಮಜಪ

ಓಂ ನಮೋ ಭಗವತೆ ವಾಸುದೇವಾಯ | ಶ್ರೀ ದುರ್ಗಾದೇವೈ ನಮಃ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ | ಓಂ ನಮಃ ಶಿವಾಯ |

ಈ ೫ ನಾಮಜಪಗಳು ಸೇರಿ ಒಂದು ನಾಮಜಪವಾಗಿದೆ ಮತ್ತು ಅದನ್ನು ಇಲ್ಲಿ ಕೊಟ್ಟಿರುವ ಕ್ರಮದಲ್ಲಿ ಜಪಿಸಬೇಕು.

೨. ನಾಮಜಪವನ್ನು ಮಾಡುವ ಕಾಲಾವಧಿ

ಅ. ಯಾವುದಾದರೊಂದು ಪ್ರದೇಶದಲ್ಲಿ ಓಮಿಕ್ರಾನ್ ತಳಿಯ ರೋಗಾಣುಗಳು ಹರಡಿದರೆ ಅಲ್ಲಿನ ಜನರು ಆ ರೋಗಾಣುಗಳಿಗೆ ಬಲಿಯಾಗಬಹುದು. ಅಂತಹ ಸಮಯದಲ್ಲಿ ಆ ರೋಗಾಣುಗಳ ಸೋಂಕು ತಮಗಾಗದಂತೆ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿಬಂಧಕದಂತೆ ಈ ನಾಮಜಪವನ್ನು ಪ್ರತಿದಿನ ೧ ಗಂಟೆ ಜಪಿಸಬೇಕು.

ಆ. ಆ ರೋಗಾಣುಗಳ ಸೋಂಕಾದರೆ ಅವುಗಳ ಉಚ್ಚಾಟನೆಯಾಗಲು ಈ ನಾಮಜಪವನ್ನು ಸೋಂಕು ತಗಲಿರುವ ತೀವ್ರತೆಗನುಸಾರ ಮುಂದಿನ ಕಾಲಾವಧಿಗಾಗಿ ಪ್ರತಿದಿನ ಮಾಡಬೇಕು.

ರೋಗಾಣುಗಳ ಸೋಂಕು ಆಗಿರುವ ತೀವ್ರತೆ ನಾಮಜಪವನ್ನು ಮಾಡುವ ಕಾಲಾವಧಿ (ಗಂಟೆಗಳು)
೧. ಮಂದ ೧ ರಿಂದ ೨
೨. ಮಧ್ಯಮ ೩ ರಿಂದ ೪
೩. ತೀವ್ರ ೫ ರಿಂದ ೬

೩. ಧ್ವನಿಮುದ್ರಿತ ನಾಮಜಪ

ನಾಮಜಪವನ್ನು ಕೇಳಿ ಅದನ್ನು ಜಪಿಸಲು ಸನಾತನ ಚೈತನ್ಯವಾಣಿ ಆ್ಯಪ್ ಇಂದೇ ಡೌನ್‌ಲೋಡ್ ಮಾಡಿ! (ಇಲ್ಲಿ ಕ್ಲಿಕ್ ಮಾಡಿ)

ಅಥವಾ ಇಲ್ಲಿಯೂ ಕೇಳಬಹುದು –

೪. ಕೊರೋನಾ ಮೂಲ ರೋಗಾಣು ಮತ್ತು ಓಮಿಕ್ರಾನ್ ತಳಿ ಇವುಗಳಲ್ಲಿ ಅರಿವಾದ ವ್ಯತ್ಯಾಸ

ಕೊರೋನಾ ರೋಗಾಣುಗಳಿಗಿಂತ ಓಮಿಕ್ರಾನ್ ತಳಿ ಕಡಿಮೆ ಅಪಾಯಕಾರಿಯಾಗಿದೆ ಎಂದು ಆಧುನಿಕ ವೈದ್ಯರು (ಡಾಕ್ಟರಗಳು) ಹೇಳುತ್ತಿದ್ದಾರೆ.

ಕೊರೋನಾ ಮೂಲ ರೋಗಾಣುಗಳು ಓಮಿಕ್ರಾನ್ ತಳಿ
೧. ಸೂಕ್ಷ್ಮ ಹೆಚ್ಚು ಸೂಕ್ಷ್ಮ ಕಡಿಮೆ ಸೂಕ್ಷ್ಮ (ಟಿಪ್ಪಣಿ)
೨. ಸೋಂಕಾದರೆ ಕಾಣಿಸುವ ಲಕ್ಷಣಗಳು ಜ್ವರ, ಶೀತ ಅಥವಾ ಕೆಮ್ಮು ಬರುವುದು ಜೀರ್ಣಾಂಗವ್ಯೂಹ ಹಾಳಾಗುವುದು
೩. ಲಕ್ಷಣಗಳು ತಕ್ಷಣ ಗಮನಕ್ಕೆ ಬರುವುದು/ಬರದಿರುವುದು ಲಕ್ಷಣಗಳು ತಕ್ಷಣ ಗಮನಕ್ಕೆ ಬರದಿರುವುದು ಲಕ್ಷಣಗಳು ತಕ್ಷಣ ಗಮನಕ್ಕೆ ಬರುವುದು

ಟಿಪ್ಪಣಿ – ಆಪತ್ಕಾಲದ ತೀವ್ರತೆಯಲ್ಲಿ ಹೆಚ್ಚಳವಾಗುತ್ತಿರುವಾಗ ಕೆಟ್ಟ ಶಕ್ತಿಗಳೊಂದಿಗೆ ಮಾಡುವ ಯುದ್ಧವು ಸೂಕ್ಷ್ಮ ಯುದ್ಧದಿಂದ ಸ್ಥೂಲ ಯುದ್ಧದ ಕಡೆಗೆ (ಮೂರನೇ ಮಹಾಯುದ್ಧದ ಕಡೆಗೆ) ಹೇಗೆ ಕ್ರಮಿಸುತ್ತೇದೆಯೋ, ಹಾಗೆಯೇ ಶಾರೀರಿಕ ರೋಗಗಳನ್ನು ಉದ್ಭವಿಸುವ ರೋಗಾಣುರೂಪಿ ಕೆಟ್ಟ ಶಕ್ತಿಗಳೂ ಸೂಕ್ಷ್ಮದಿಂದ ಸ್ಥೂಲದ ಕಡೆಗೆ ಹೋಗುತ್ತಿವೆ. ಅದಕ್ಕನುಸಾರ ಕೊರೋನಾದ ಮೂಲ ರೋಗಾಣುಗಳ ನಂತರ ಬಂದಿರುವ ಓಮಿಕ್ರಾನ್ ತಳಿಯು ಕಡಿಮೆ ಸೂಕ್ಷ್ಮವಾಗಿವೆ.

೫. ಪ್ರಾರ್ಥನೆ

‘ಇಲ್ಲಿ ಕೊಟ್ಟಿರುವ ನಾಮಜಪದಿಂದ ಗುರುಕೃಪೆಯಿಂದ ಜಗತ್ತಿನಾದ್ಯಂತ ಎಲ್ಲರಿಗೂ ಲಾಭವಾಗಿ ಓಮಿಕ್ರಾನ್ ತಳಿಯ ಜಗತ್ತಿನಾದ್ಯಂತದ ಪ್ರಭಾವವು ಹತೋಟಿಗೆ ಬರಬೇಕು ಮತ್ತು ಅದರ ಹರಡುವಿಕೆ ನಿಲ್ಲಬೇಕು, ಹಾಗೆಯೇ ಈ ನಾಮಜಪವನ್ನು ಮಾಡುವ ನಿಮಿತ್ತದಿಂದ ಅನೇಕರಿಗೆ ಈ ಆಪತ್ಕಾಲದಲ್ಲಿ ಸಾಧನೆ ಮಾಡುವ ಗಾಂಭೀರ್ಯವು ಗಮನಕ್ಕೆ ಬಂದು ಅವರು ಸಾಧನೆಯನ್ನು ಆರಂಭಿಸಬೇಕು, ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ !’

– ಸದ್ಗುರು (ಡಾ.) ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೭.೧೨.೨೦೨೧)

Disclaimer : At the outset, Sanatan Sanstha advises all our readers to adhere to all local and national directives to stop the spread of the coronavirus outbreak (COVID-19) in your region. Sanatan Sanstha recommends the continuation of conventional medical treatment as advised by medical authorities in your region. Spiritual remedies given in this article are not a substitute for conventional medical treatment or any preventative measures to arrest the spread of the coronavirus. Readers are advised to take up any spiritual healing remedy at their own discretion.
 

Leave a Comment