ಆಹಾರ-ವಿಹಾರಗಳ ಅಯೋಗ್ಯ ಅಭ್ಯಾಸಗಳನ್ನು ಬಿಡುವುದರ ಮಹತ್ವ

೧. ಭಗವಂತನು ನೀಡಿದ ಶಕ್ತಿಯಿಂದ ಮನುಷ್ಯನಿಗೆ ಒಳ್ಳೆಯ ಆರೋಗ್ಯವಿರುವುದು

ವೈದ್ಯ ಮೇಘರಾಜ ಪರಾಡಕರ

ಮನುಷ್ಯನ ಶರೀರವು ಭಗವಂತನು ನಿರ್ಮಿಸಿದ ಒಂದು ಉತ್ತಮ ಮತ್ತು ಸ್ವಯಂಚಾಲಿತ ಯಂತ್ರವಾಗಿದೆ. ‘ಈ ಯಂತ್ರವು ೧೦೦ ವರ್ಷಗಳ ವರೆಗೆ ಯಾವುದೇ ತೊಂದರೆಯಾಗದೇ ವ್ಯವಸ್ಥಿತವಾಗಿ ನಡೆಯಬೇಕೆಂದು ಬಾಹ್ಯ ಬದಲಾವಣೆಗಳೊಂದಿಗೆ ಹೊಂದಿಕೊಳ್ಳುವ ಶಕ್ತಿಯನ್ನು ಭಗವಂತನೇ ಶರೀರದಲ್ಲಿ ನಿರ್ಮಿಸಿದ್ದಾನೆ. ಆದ್ದರಿಂದ ಯಾವಾಗಲಾದರೊಮ್ಮೆ ಆಹಾರ-ವಿಹಾರದ ತಪ್ಪುಗಳಿಂದ ಶರೀರದ ಮೇಲೆ ಪರಿಣಾಮವಾಗುವುದು ಕಂಡುಬರುವುದಿಲ್ಲ. (‘ವಿಹಾರ’ ಎಂದರೆ ‘ನಮ್ಮಿಂದಾಗುವ ವಿವಿಧ ಕೃತಿಗಳು’) ಈ ಶಕ್ತಿಯಿಂದಾಗಿಯೇ ಕೆಲವು ಬಾರಿ ನಿಯಮಿತ ಸರಾಯಿ, ಸಿಗರೇಟ್‌ ಇತ್ಯಾದಿಗಳ ವ್ಯಸನಗಳಿದ್ದರೂ ಆರೋಗ್ಯ ಉತ್ತಮವಿರುವ ಮನುಷ್ಯರನ್ನು ನಾವು ನೋಡುತ್ತೇವೆ. ಈ ಕ್ಷಮತೆಯು ‘ವಂಶಪರಂಪರೆಯಿಂದ ನಡೆದುಕೊಂಡು ಬಂದಿರುತ್ತದೆ’, ಅಂದರೆ ‘ಯಾರಾದರೂ ವ್ಯಕ್ತಿಯ ತಂದೆ-ತಾಯಿ ಅತ್ಯಂತ ಆರೋಗ್ಯವಂತ ಮತ್ತು ಗಟ್ಟಿಮುಟ್ಟಾಗಿದ್ದರೆ, ಅವರ ಮಕ್ಕಳು ಸಹ ಅದೇ ರೀತಿ ಇರುವುದನ್ನು ನಾವು ನೋಡುತ್ತೇವೆ.’

೨. ಶಕ್ತಿಯ ಮಿತಿ

ಹೀಗಿದ್ದರೂ, ಈ ಶಕ್ತಿಗೂ ಒಂದು ಮಿತಿ ಇದೆ. ಆಹಾರ-ವಿಹಾರಗಳಲ್ಲಿನ ತಪ್ಪುಗಳು ಅದೇ ರೀತಿ ಮುಂದುವರಿದರೆ, ಮುಂದೆ ಯಾವತ್ತಾದರೂ ಈ ಶರೀರಕ್ಕೆ ಅವು ತೊಂದರೆ ಕೊಡುವವು. ಶಿಶುಪಾಲನು ೯೯ ಅಪರಾಧಗಳನ್ನು ಮಾಡಿದರೂ, ಅವನಿಗೆ ಏನೂ ಆಗಲಿಲ್ಲ; ಆದರೆ ೧೦೦ ನೇ ಅಪರಾಧ ಮಾಡಿದ ಕೂಡಲೇ ಭಗವಂತನು ಅವನ ಶಿರವನ್ನು ದೇಹದಿಂದ ಬೇರ್ಪಡಿಸಿದನು. ನಮ್ಮ ವಿಷಯದಲ್ಲಿಯೂ ಇದೇ ರೀತಿ ಆಗುತ್ತಿರುತ್ತದೆ. ಎಲ್ಲವೂ ಸರಿಯಾಗಿರುವಾಗ ಒಮ್ಮೆಲೆ ರಕ್ತದಲ್ಲಿ ಸಕ್ಕರೆ ಹೆಚ್ಚಾಗಿರುವುದು ತಿಳಿಯುತ್ತದೆ ಮತ್ತು ಮಧುಮೇಹ ಆಗಿರುವುದು ತಿಳಿಯುತ್ತದೆ. ದೇಹವು ಗಟ್ಟಿಮುಟ್ಟಾಗಿದ್ದರೂ ರಕ್ತದೊತ್ತಡ ಹೆಚ್ಚಾಗಲು (ಹೈ ಬಿ.ಪಿ) ಪ್ರಾರಂಭವಾಗುತ್ತದೆ. ಒಮ್ಮಿಂದೊಮ್ಮೆಲೆ ಹೃದಯಾಘಾತ ಆಗುತ್ತದೆ ಮತ್ತು ನಿಂತಲ್ಲಿಯೇ ಪ್ರಾಣ ಹಾರಿಹೋಗುತ್ತದೆ. ಇಂತಹ ಉದಾಹರಣೆಗಳನ್ನು ನಾವು ನೋಡಿರಬಹುದು ಅಥವಾ ಕೇಳಿರಬಹುದು. ಇಷ್ಟಾದರೂ ಕೆಲವರು ಎಚ್ಚೆತ್ತುಕೊಳ್ಳುವುದಿಲ್ಲ ಮತ್ತು ‘ನನಗೆ ಏನೂ ಆಗುವುದಿಲ್ಲ ಅಥವಾ ಆಗಲಾರದು’, ಎಂಬ ವಿಚಾರದಿಂದ ಅಯೋಗ್ಯ ಕೃತಿಗಳನ್ನು ಮಾಡುತ್ತಲೇ ಹೋಗುತ್ತಾರೆ.

೩. ಆಹಾರ-ವಿಹಾರದ ತಪ್ಪುಗಳಿಂದ ಆಯುಷ್ಯ ಕಡಿಮೆಯಾಗುವುದು

ಮಧುಮೇಹ, ಹೆಚ್ಚು ರಕ್ತದೊತ್ತಡ (ಹೈ ಬಿ.ಪಿ.) ಇತ್ಯಾದಿ ರೋಗಗಳು ಒಮ್ಮೆ ಪ್ರಾರಂಭವಾದರೆ, ಜೀವಮಾನವಿಡಿ ಅಲೋಪಥಿ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಈ ಮಾತ್ರೆಗಳಿಂದ ರೋಗವು ಎಂದಿಗೂ ಸಮೂಲ ವಾಸಿಯಾಗುವುದಿಲ್ಲ. ಕೇವಲ ನಮಗೆ ರೋಗದ ಪರಿಣಾಮ ಅರಿವಾಗುವುದಿಲ್ಲ ಮತ್ತು ಅದರ ತೀವ್ರತೆ ಕಡಿಮೆಯಾಗುತ್ತದೆ; ಆದರೆ ಇದರಿಂದ ೧೦೦ ವರ್ಷಗಳ ವರೆಗೆ ಆರೋಗ್ಯವಂತವಾಗಿರಬೇಕಿದ್ದ ಶರೀರವು ಹಾಗೋ ಹೇಗೋ ಒದ್ದಾಡುತ್ತ ೬೦ ರಿಂದ ೭೦ ವರ್ಷಗಳ ವರೆಗೆ ಬದುಕುತ್ತದೆ. ಇದರಿಂದ ‘ನನಗೆ ಏನೂ ಆಗುವುದಿಲ್ಲ. ನಾನು ಏನು ಬೇಕಾದರೂ ಮಾಡುತ್ತೇನೆ’, ಎಂದು ಹೇಳುವುದು ಖಂಡಿತ ಜಾಣ್ಮೆಯಲ್ಲಿ, ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು.

೪. ಶರೀರ ಎಂಬ ಯಂತ್ರವನ್ನು ಹೇಗೆ ಬಳಸಬೇಕು ಎಂದು ಆಯುರ್ವೇದವೆಂಬ ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ

ಯಾವುದಾದರೊಂದು ಉಪಕರಣ ಸರಿಯಾಗಿ ನಡೆಯಲು ‘ಉಪಯೋಗಿಸುವನಿಗೆ ಒಂದು ಮಾಹಿತಿಪುಸ್ತಕ (‘ಯುಸರ ಮ್ಯಾನ್ಯುಅಲ್‌’) ವನ್ನು ಕೊಟ್ಟಿರುತ್ತಾರೆ. ಅದರಲ್ಲಿ ಕೊಟ್ಟಿರುವಂತೆ ಉಪಕರಣವನ್ನು ಉಪಯೋಗಿಸಿದರೆ, ಅದು ಹೆಚ್ಚು ಸಮಯ ಬಾಳಿಕೆ ಬರುತ್ತದೆ. ಮಾಹಿತಿಪುಸ್ತಕವನ್ನು ಓದದೇ ಸ್ವಂತ ಮನಸ್ಸಿನಂತೆ ಆ ಉಪಕರಣವನ್ನು ಬೇಕಾದ ಹಾಗೆ ಉಪಯೋಗಿಸಿದರೆ ಮತ್ತು ಅದು ಹಾಳಾದರೆ, ಅದನ್ನು ನಿರ್ಮಿಸಿದ ಸಂಸ್ಥೆಯು ಅದರ ಜವಾಬ್ದಾರಿಯನ್ನು (ಗ್ಯಾರಂಟಿ) ವಹಿಸಿಕೊಳ್ಳುವುದಿಲ್ಲ. ಶರೀರ ಎಂಬ ಯಂತ್ರಕ್ಕೆ ೧೦೦ ವರ್ಷಗಳ ವರೆಗೆ ರೋಗಗಳು ಬರದಂತೆ ಅದನ್ನು ಹೇಗಿಡಬೇಕು (ಆರೋಗ್ಯಕರವಾಗಿಡಬೇಕು), ಎಂಬುದಕ್ಕಾಗಿ ಋಷಿಮುನಿಗಳು ಬರೆದ ಮಾಹಿತಿಪುಸ್ತಕವೇ (ಯುಸರ ಮ್ಯಾನ್ಯುಅಲ್‌) ಆಯುರ್ವೇದ. ಇದರಲ್ಲಿ…

ಉಚಿತಾತ್‌ ಅಹಿತಾತ್‌ ಧೀಮಾನ್‌ ಕ್ರಮಶೋ ವಿರಮೇತ್‌ ನರಃ | – ಚರಕಸಂಹಿತಾ, ಸೂತ್ರಸ್ಥಾನ, ಅಧ್ಯಾಯ ೭, ಸೂತ್ರ ೩೬

ಅರ್ಥ : ನಮ್ಮಲ್ಲಿ ಅಯೋಗ್ಯ ಅಭ್ಯಾಸಗಳಿದ್ದರೆ, ಬುದ್ಧಿವಂತ ಮನುಷ್ಯನು ಅವುಗಳನ್ನು ಕ್ರಮೇಣ ಬಿಟ್ಟು ತನ್ನಲ್ಲಿ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.

೫. ಆರೋಗ್ಯವಂತ ಶರೀರಕ್ಕಾಗಿ ೨ ಬಾರಿ ಆಹಾರ ಮತ್ತು ಸಾಧ್ಯವಾದಷ್ಟು ವ್ಯಾಯಾಮ

ಮೇಲಿಂದ ಮೇಲೆ ತಿನ್ನುವ ಅಭ್ಯಾಸವಿದ್ದರೆ, ಅದನ್ನು ಕ್ರಮೇಣ ಬಿಡಬೇಕು ಮತ್ತು ಆಯುರ್ವೇದದ ತಿರುಳಾಗಿರುವ ‘ದಿನಕ್ಕೆ ಎರಡೇ ಬಾರಿ ಆಹಾರವನ್ನು ಸೇವಿಸಬೇಕು ಮತ್ತು ಬೆಳಗ್ಗೆ ತಮ್ಮ ಕ್ಷಮತೆಗನುಸಾರ ಸಾಧ್ಯವಾದಷ್ಟು ವ್ಯಾಯಾಮ ಮಾಡಬೇಕು’, ಇವೆರಡು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೧.೨೦೨೩)

Leave a Comment