ಲಘುಮಾಲಿನಿ ವಸಂತ (ಮಾತ್ರೆಗಳು)

ಲಘುಮಾಲಿನಿ ವಸಂತ ಮಾತ್ರೆಗಳು ಶರೀರದಲ್ಲಿರುವ ಅಗ್ನಿಯನ್ನು ಪ್ರಜ್ವಲಿಸಿ ಹಳೆಯ ಜ್ವರ ಇತ್ಯಾದಿ ರೋಗಗಳನ್ನು ದೂರಗೊಳಿಸುತ್ತವೆ. ಅದೇ ರೀತಿ ಪಿತ್ತದ ವಿಕಾರಗಳಲ್ಲಿ ಉಪಯುಕ್ತವಾಗಿವೆ.

ತ್ರಿಫಲಾ ಗುಗ್ಗುಲು (ಮಾತ್ರೆ)

ತ್ರಿಫಲಾ ಗುಗ್ಗುಲು (ಮಾತ್ರೆ) ಔಷಧವು ಶರೀರದಲ್ಲಿನ ಬೆವರು ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಮೂಲವ್ಯಾಧಿ, ಮಲದ್ವಾರದ ಹುಣ್ಣು ಇವುಗಳಲ್ಲಿ ಉಪಯುಕ್ತವಾಗಿದೆ

ಬ್ರಾಹ್ಮಿ ಚೂರ್ಣ

ಬ್ರಾಹ್ಮಿ ಚೂರ್ಣ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ.

ಪುನರ್ನವಾ ಚೂರ್ಣ

ಶರೀರಕ್ಕೆ ಪುನಃ ಹೊಸ ಹುರುಪನ್ನು ನೀಡುತ್ತದೆ; ಆದ್ದರಿಂದ ‘ಪುನರ್ನವಾ’ ಎಂದು ಕರೆಯುತ್ತಾರೆ. ಇದು ತಂಪು ಗುಣಧರ್ಮದ್ದಾಗಿದ್ದು ಕಫ ಮತ್ತು ಪಿತ್ತವನ್ನು ದೂರಗೊಳಿಸುತ್ತದೆ.