ಬ್ರಾಹ್ಮಿ ಚೂರ್ಣ
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧ ತಂಪು ಗುಣಧರ್ಮದ್ದಾಗಿದ್ದು ಸ್ಮರಣಶಕ್ತಿಯನ್ನು ಹೆಚ್ಚಿಸುವ ಔಷಧವೆಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| 1. ನಿದ್ರೆ ಬರದಿರುವುದು, ಫಿಟ್ಸ್ ಬರುವುದು, ಮರೆವು, ತಲೆ ಬಿಸಿಯಾಗುವುದು, ಕೋಪ ಬರುವುದು, ಕಿರಿಕಿರಿಯಾಗುವುದು, ಹಾಗೆಯೇ ಬುದ್ಧಿ ತೀಕ್ಷ್ಣವಾಗಲು | 4 ಚಮಚ ಬ್ರಾಹ್ಮಿ ಚೂರ್ಣವನ್ನು 4 ಚಿಕ್ಕ ಬಟ್ಟಲು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕುದಿಸಿ, ತಣ್ಣಗಾದ ಮೇಲೆ ಅದನ್ನು ಸೂಸಿ ಬಾಟಲಿಯಲ್ಲಿ ತುಂಬಿಸಿಡಬೇಕು. ಅದಕ್ಕೆ 10 ಗ್ರಾಂ ಭಿಮಸೇನಿ ಕರ್ಪೂರದ ಹುಡಿ ಸೇರಿಸಿ. ರಾತ್ರಿ ಮಲಗುವಾಗ 1-2 ಚಮಚ ಎಣ್ಣೆಯನ್ನು ತಲೆಗೆ ಹಚ್ಚಿ ಮಲಗಬೇಕು. ಮಲಗುವ ಮೊದಲು 1 ಚಮಚ ಬ್ರಾಹ್ಮಿ ಚೂರ್ಣವನ್ನು ಅರ್ಧ ಬಟ್ಟಲು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. | 3 ತಿಂಗಳು |
| 2. ಉಷ್ಣತೆಯ ರೋಗ, ಪಿತ್ತ ಹೆಚ್ಚಾಗುವುದು, ಮತ್ತು ತಲೆ ತಿರುಗುವುದು | 1 ಚಮಚ ಬ್ರಾಹ್ಮಿ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯನ್ನು ಬೆರೆಸಿ ದಿನದಲ್ಲಿ 2-3 ಬಾರಿ ನೀರಿನೊಂದಿಗೆ ಸೇವಿಸಬೇಕು. | 7 ದಿನ |
| 3. ಮೂತ್ರದಲ್ಲಿ ಉರಿ ಮತ್ತು ಮೂತ್ರದ ಬಣ್ಣ ಬದಲಾಗುವುದು (ರಾಡಿಯಂತೆ) | 1 ಚಮಚ ಬ್ರಾಹ್ಮಿ ಚೂರ್ಣ ಮತ್ತು 1 ಚಮಚ ಕಲ್ಲು ಸಕ್ಕರೆಯನ್ನು ಬೆರೆಸಿ ದಿನದಲ್ಲಿ 2-3 ಬಾರಿ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. | 7 ದಿನ |
ಆ. ಸೂಚನೆ

8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)