ತ್ರಿಫಲಾ ಗುಗ್ಗುಲು (ಮಾತ್ರೆ)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಈ ಔಷಧವು ಶರೀರದಲ್ಲಿನ ಬೆವರು ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| ಮೂಲವ್ಯಾಧಿ, ಮಲದ್ವಾರದ ಹುಣ್ಣು, ಫಿಶರ್, ಮಲಬದ್ಧತೆ, ಯಾವುದೇ ರೀತಿಯ ವ್ರಣ, ಹುಣ್ಣು, ಬೊಜ್ಜು, ಅನಿಯಮಿತ ಋತುಸ್ರಾವ, ಹೆಚ್ಚು ರಕ್ತಸ್ರಾವ, ಋತುಸ್ರಾವದಲ್ಲಿ ದುರ್ಗಂಧ | ದಿನದಲ್ಲಿ 2-3 ಸಲ 2-2 ಮಾತ್ರೆಗಳನ್ನು 1 ಚಮಚ ಜೇನುತುಪ್ಪ / 1 ಚಮಚ ತುಪ್ಪ / ಸ್ವಲ್ಪ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು |
1 ರಿಂದ 3 ತಿಂಗಳು |
ಆ. ಸೂಚನೆ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)