ತುಂಗೆಗಡ್ಡೆ (ತುಂಗಮುಸ್ತೆ, ಕೊರನಾರಗಡ್ಡೆ, ನಾಗರಮೋಥಾ) ಚೂರ್ಣ

Article also available in :

ತುಂಗೆಗಡ್ಡೆ (ತುಂಗಮುಸ್ತೆ, ಕೊರನಾರಗಡ್ಡೆ, ನಾಗರಮೋಥಾ) ಚೂರ್ಣ

ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ

ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಪಿತ್ತ ಹಾಗೂ ಕಫನಾಶಕವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
1. ಬಾಯಾರಿಕೆಯಾಗುವುದು, ಮೈ ಸಿಡಿತ, ಮೈನೋವು ಪ್ರತಿ 1 ಲೀಟರ ಕುಡಿಯುವ ನೀರಿನಲ್ಲಿ ಅರ್ಧಚಮಚದಷ್ಟು ತುಂಗೆ ಗಡ್ಡೆಯ ಚೂರ್ಣವನ್ನು ಹಾಕಿ ನೀರು 5 ನಿಮಿಷ ಕುದಿಸಬೇಕು. ಬಾಯಾರಿಕೆಯಾದರೆ ಇದೇ ನೀರು ಕುಡಿಯಬೇಕು. 3-4 ದಿನ
2. ಹೊಟ್ಟೆ ತೊಳೆಸುವುದು, ವಾಂತಿ, ಅತಿಸಾರ (ಭೇದಿ) ಆಗುವುದು ಮತ್ತು ಮಲದೊಂದಿಗೆ ರಕ್ತ ಕಾಣಿಸುವುದು ಲಾವಂಚ ಚೂರ್ಣ, ಕೊರನಾರಿಗೆಡ್ಡೆಯ ಚೂರ್ಣ, ಕೊತ್ತಂಬರಿ ಪುಡಿ ಮತ್ತು ಬಡಿಸೋಪಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಬೇಕು. ಇದರ 1 ಚಮಚ ಔಷಧಿಯನ್ನು ದಿನದಲ್ಲಿ 3-4 ಸಲ 1 ಬಟ್ಟಲು ಬಿಸಿನೀರಿನೊಂದಿಗೆ ಸೇವಿಸಬೇಕು. 3-4 ದಿನ
೩. ಮೈ ಭಾರವೆನಿಸುವುದು, ಹಸಿವೆಯಾಗದಿರುವುದು, ಮೂತ್ರದ ಬಣ್ಣ ಬದಲಾಗುವುದು, ಜ್ವರ ಬಂದಾಗ, ಹಾಗೂ ರಕ್ತಶುದ್ಧಿಗಾಗಿ 1 ಚಮಚ ತುಂಗೆ ಗಡ್ಡೆ ಚೂರ್ಣ 1 ಬಟ್ಟಲು ಬಿಸಿ ನೀರಿನಲ್ಲಿ ಸೇರಿಸಿ ದಿನದಲ್ಲಿ 3-4 ಸಲ ಸೇವಿಸಬೇಕು. 7 ದಿನ
೪. ಚಿಕ್ಕಮಕ್ಕಳಿಗೆ ಹಲ್ಲು ಬರುವಾಗ ಉಂಟಾಗುವ ಜ್ವರ ಅಥವಾ ಈ ಸಮಯದಲ್ಲಿ ಉದ್ಭವಿಸುವ ಇತರ ಕಾಯಿಲೆಗಳು, ಅಲ್ಲದೇ ಸ್ತನಪಾನ ಮಾಡುವ ಶಿಶುಗಳಿಗೆ ಬರುವ ಜ್ವರ 1 ಲೋಟ ನೀರಿನಲ್ಲಿ 1 ಚಮಚ ತುಂಗೆ ಗಡ್ಡೆಯ ಚೂರ್ಣವನ್ನು ಹಾಕಿ ಕುದಿಸಿ ಸೋಸಿ ತೆಗೆದು ದಿನದಲ್ಲಿ 5-6 ಸಲ ಇದರ ಸ್ವಲ್ಪ ಸ್ವಲ್ಪ ನೀರನ್ನು ಶಿಶುವಿಗೆ ಕುಡಿಸಬೇಕು. 7 ದಿನ

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

 

Leave a Comment