ಶತಾವರಿ (ಹಲವು ಮಕ್ಕಳ ತಾಯಿ) ವಟಿ (ಮಾತ್ರೆ)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಆಯುರ್ವೇದದಲ್ಲಿ ಇದು ಒಂದು ಉತ್ತಮವಾದ ಶಕ್ತಿವರ್ಧಕ (ಟಾನಿಕ್) ಎಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| ಆಯಾಸ, ಕೃಶಕಾಯ, ಮೂತ್ರಮಾರ್ಗದಲ್ಲಿ ಉರಿ, ಮೂತ್ರ ಕಡಿಮೆಯಾಗುವುದು, ಆಮ್ಲಪಿತ್ತ, ಉಷ್ಣತೆಯ ಸಮಸ್ಯೆಗಳು, ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು, ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು, ಹಾಗೆಯೇ ವೀರ್ಯವೃದ್ಧಿಗಾಗಿ, ಗರ್ಭಾಶಯಕ್ಕೆ ಬಲ ಸಿಗಲು ಮತ್ತು ಸ್ತನಪಾನ ಮಾಡುವ ತಾಯಂದಿರಲ್ಲಿ ಹಾಲಿನ ಪ್ರಮಾಣ ಹೆಚ್ಚಾಗಲು. | ಬೆಳಗ್ಗೆ ಮತ್ತು ಸಾಯಂಕಾಲ 2-3 ಮಾತ್ರೆಗಳನ್ನು 1 ಚಿಕ್ಕ ಬಟ್ಟಲು ಬಿಸಿ ಹಾಲು ಮತ್ತು 2 ಚಮಚ ತುಪ್ಪದೊಂದಿಗೆ ಸೇವಿಸಬೇಕು. ಈ ಔಷಧಿ ಸೇವಿಸುವ ಮೊದಲು ಮತ್ತು ನಂತರ ಸಾಧಾರಣ 1 ಗಂಟೆಯವರೆಗೆ ಏನನ್ನೂ ತಿನ್ನಬಾರದು-ಕುಡಿಯಬಾರದು. | 3 ತಿಂಗಳು |
ಆ. ಸೂಚನೆ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)