ಆಮಲಕ (ನೆಲ್ಲಿಕಾಯಿ) ಚೂರ್ಣ

Article also available in :

ಆಮಲಕ (ನೆಲ್ಲಿಕಾಯಿ) ಚೂರ್ಣ

ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ

ಈ ಔಷಧಿ ತಂಪು ಗುಣಧರ್ಮದ್ದಾಗಿದ್ದು, ವಾತ, ಪಿತ್ತ ಮತ್ತು ಕಫವನ್ನು ಸಮತೋಲನೆಗೆ ತರುತ್ತದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
1. ಕೂದಲು ಉದುರುವುದು ಮತ್ತು ಬಿಳಿಯಾಗುವುದು ನೆಲ್ಲಿಕಾಯಿ, ಅಮೃತಬಳ್ಳಿ ಮತ್ತು ನೆಗ್ಗಿಲು (ಗೋಕ್ಷುರ) ಇವುಗಳ ಸಮಭಾಗ ಚೂರ್ಣದ 1 ಚಮಚ ಮಿಶ್ರಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ನಂತರ ಅರ್ಧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು 3 ತಿಂಗಳು
2. ಕೂದಲು ಕಪ್ಪಾಗಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. ನಂತರ ಅರ್ಧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. ಇದರ ಜೊತೆಗೆ ಕಬ್ಬಿಣದ ಕಡಾಯದಲ್ಲಿ (ಬಾಣಿಯಲ್ಲಿ) 2 ರಿಂದ 4 ಚಮಚ ನೆಲ್ಲಿಕಾಯಿ ಚೂರ್ಣವನ್ನು ಸ್ವಲ್ಪ ನೀರಿನಲ್ಲಿ ಇಡೀ ರಾತ್ರಿ ನೆನೆಯಲು ಇಡಬೇಕು ಬೆಳಗ್ಗೆ ಕಪ್ಪಾಗಿರುವ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಿಡಬೇಕು, ನಂತರ ಕೂದಲುಗಳನ್ನು ತೊಳೆದುಕೊಳ್ಳಬೇಕು. ಈ ರೀತಿ ವಾರದಲ್ಲಿ 2 ಸಲ ಮಾಡಬಹುದು. ನಿಯಮಿತ
3. ತಲೆನೋವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ನೆಲ್ಲಿಕಾಯಿ ಚೂರ್ಣ 1 ಚಮಚ ತುಪ್ಪ ಮತ್ತು 1 ಚಮಚ ಕಲ್ಲುಸಕ್ಕರೆಯನ್ನು ತಿನ್ನಬೇಕು 3 ರಿಂದ 5 ದಿನ
4. ತಲೆ ಬಿಸಿಯಾಗುವುದು ತೊಂದರೆಯಾದಾಗ ನಮಗೆ ಬೇಕಾದಷ್ಟು ನೆಲ್ಲಿಕಾಯಿ ಚೂರ್ಣವನ್ನು ಹಾಲಿನಲ್ಲಿ ಅರೆದು ಅದನ್ನು ಹಣೆಯ ಮೇಲೆ ಹಚ್ಚಿಕೊಳ್ಳಬೇಕು. ಒಂದು ಗಂಟೆಯ ನಂತರ ಅದನ್ನು ಬಿಸಿನೀರಿನಿಂದ ತೊಳೆಯಬೇಕು ತಾತ್ಕಾಲಿಕ
5. ಕಣ್ಣಿನ ರೋಗಗಳು ರಾತ್ರಿ ಮಲಗುವಾಗ 1 ಚಮಚ ಚೂರ್ಣವನ್ನು ಅರ್ಧ ಚಮಚ ತುಪ್ಪ ಮತ್ತು 1 ಚಮಚ ಜೇನುತುಪ್ಪದೊಂದಿಗೆ ಸೇವಿಸಬೇಕು 3 ತಿಂಗಳು
6. ಮೂಗಿನಿಂದ ರಕ್ತ ಬರುವುದು ಬೆಳಗ್ಗೆ ಮತ್ತು ಸಾಯಂಕಾಲ ಅರ್ಧ ಚಮಚ ನೆಲ್ಲಿಕಾಯಿ ಚೂರ್ಣವನ್ನು ಅರ್ಧ ಬಟ್ಟಲು ನೀರಿನೊಂದಿಗೆ ಸೇವಿಸಬೇಕು ಮತ್ತು ನಮಗೆ ಬೇಕಾದಷ್ಟು ನೆಲ್ಲಿಕಾಯಿ ಚೂರ್ಣವನ್ನು ತುಪ್ಪದಲ್ಲಿ ಹುರಿದು ಅದರಲ್ಲಿ ಸ್ವಲ್ಪ ಮಜ್ಜಿಗೆಯನ್ನು ಹಾಕಿ ಅದನ್ನು ಹಣೆಯ ಮೇಲೆ ದಪ್ಪದಾಗಿ ಹಚ್ಚಿಕೊಳ್ಳಬೇಕು. 1 ಗಂಟೆಯ ನಂತರ ಅದನ್ನು ನೀರಿನಿಂದ ತೊಳೆಯಬೇಕು. 3 ರಿಂದ 5 ದಿನ
7. ಬಾಯಿ ಒಣಗುವುದು 10 ಒಣ ದ್ರಾಕ್ಷಿ ಮತ್ತು 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ಒಟ್ಟಿಗೆ ಅರೆದು ಚಟ್ಣಿಯನ್ನು ಮಾಡಬೇಕು, ಅದರ ಸಣ್ಣ ಸಣ್ಣ ಗುಳುಗೆಗಳನ್ನು ಮಾಡಿ ಅವುಗಳನ್ನು ದಿನದಲ್ಲಿ 3 – 4 ಸಲ ಜಗಿದು ತಿನ್ನಬೇಕು. 7 ದಿನ
8. ಪಿತ್ತದಿಂದ ವಾಂತಿ ಆಗುವುದು 1 ಚಮಚ ನೆಲ್ಲಿಕಾಯಿ ಚೂರ್ಣ, ಅರ್ಧ ಚಮಚ ಅರೆದ ಚಂದನ ಮತ್ತು ಅರ್ಧ ಚಮಚ ಜೇನುತುಪ್ಪನ್ನು ಒಟ್ಟಿಗೆ ಜಗಿದು ತಿನ್ನಬೇಕು. ತಾತ್ಕಾಲಿಕ
9. ಮಲಬದ್ಧತೆ ಎರಡೂ ಸಲ ಊಟದ ಮೊದಲು 1 ಚಮಚ ನೆಲ್ಲಕಾಯಿ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. 15 ದಿನ
10. ಮಧುಮೇಹ ಬೆಳಗ್ಗೆ ಮತ್ತು ಸಾಯಂಕಾಲ 1 ಚಮಚ ನೆಲ್ಲಿಕಾಯಿ ಚೂರ್ಣ ಮತ್ತು 1 ಚಮಚ ಹಸಿ ಅರಶಿಣದ ತುಂಡುಗಳನ್ನು ಒಣಗಿಸಿ ಮಾಡಿದ ಚೂರ್ಣವನ್ನು ಒಂದು ಬಟ್ಟಲು ನೀರಿನೊಂದಿಗೆ ಸೇವಿಸಬೇಕು. ನಂತರ ಅರ್ಧ ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. 3 ತಿಂಗಳು
11. ಮೂತ್ರದ ಬಣ್ಣ ಬದಲಾಗುವುದು ಅಥವಾ ಮುಸುಕಾಗುವುದು, ಮೂತ್ರನಾಳದಲ್ಲಿ ಉರಿ, ಮೂತ್ರ ಕಡಿಮೆಯಾಗುವುದು, ಹಾಗೂ ಬಿಳಿಸೆರಗು (ಯೋನಿಮಾರ್ಗದಿಂದ ಬಿಳಿ ಸ್ರಾವ ಹೋಗುವುದು) 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ರಾತ್ರಿ ನೀರಿನಲ್ಲಿ ನೆನೆಸಲು ಹಾಕಿ, ಅದರಲ್ಲಿ ಬೆಳಗ್ಗೆ ಅರ್ಧ ಚಮಚ ಜೀರಿಗೆ ಪುಡಿ ಮತ್ತು ಒಂದು ಚಮಚ ಕಲ್ಲುಸಕ್ಕರೆ ಹಾಕಿ ಸೇವಿಸಬೇಕು. ಇದೇ ರೀತಿ ಬೆಳಗ್ಗೆ ನೆಲ್ಲಿಕಾಯಿ ಚೂರ್ಣವನ್ನು ನೆನೆಸಿ ಸಾಯಂಕಾಲ ಸೇವಿಸಬೇಕು. 5 ರಿಂದ 7 ದಿನ
12. ಕೈಕಾಲುಗಳು ಉರಿಯುವುದು, ತಲೆತಿರುಗುವುದು, ಕಣ್ಣುಗಳ ಮುಂದೆ ಕತ್ತಲು ಕವಿಯುವುದು ಮತ್ತು ಋತುಸ್ರಾವದ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗುವುದು ದಿನದಲ್ಲಿ 2 – 3 ಸಲ 1 ಚಮಚ ನೆಲ್ಲಿಕಾಯಿ ಚೂರ್ಣ ಮತ್ತು 1 ಚಮಚ ಕಲ್ಲುಸಕ್ಕರೆ 1 ಬಟ್ಟಲು ನೀರಿನೊಂದಿಗೆ ಸೇವಿಸಬೇಕು 7 ದಿನ
13. ಕಜ್ಜಿ (ಹುರಕು, ಸ್ಕೇಬೀಜ್) ದಿನದಲ್ಲಿ 2 – 3 ಸಲ ನಮಗೆ ಬೇಕಾಗುವಷ್ಟು ನೆಲ್ಲಿಕಾಯಿ ಚೂರ್ಣವನ್ನು ನೀರಿನಲ್ಲಿ ಕಲಿಸಿ ಹುರಕಿನ ಮೇಲೆ ಹಚ್ಚಬೇಕು ಮತ್ತು ಒಂದು ಗಂಟೆಯ ನಂತರ ಅದನ್ನು ಬಿಸಿನೀರಿನಿಂದ ತೊಳೆದುಕೊಳ್ಳಬೇಕು 5 ರಿಂದ 7 ದಿನ
14. ಸಮಯಕ್ಕಿಂತ ಮೊದಲೇ ವೃದ್ಧಾಪ್ಯ ಬರಬಾರದೆಂದು, ಹಾಗೆಯೇ ಶರೀರ ನಿರೋಗಿಯಾಗಿರಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ನೆಲ್ಲಿಕಾಯಿ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು. ಅನಂತರ ಅರ್ಧ ಗಂಟೆ ಏನೂ ತಿನ್ನುವುದು ಕುಡಿಯುವುದು ಮಾಡಬಾರದು. 3 ತಿಂಗಳು

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

 

Leave a Comment