ತ್ರಿಭುವನಕೀರ್ತಿ ರಸ (ಮಾತ್ರೆಗಳು)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ಜ್ವರಕ್ಕೆ ಔಷಧ ಎಂದು ಪ್ರಸಿದ್ಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| ಎಲ್ಲ ರೀತಿಯ ಜ್ವರ | ಜ್ವರ ಹೆಚ್ಚು ಇದ್ದರೆ ಪ್ರತಿ 2 ಗಂಟೆಗೊಮ್ಮೆ 1-2 ಮಾತ್ರೆಗಳನ್ನು ಅರ್ಧ ಚಮಚ ಜೇನುತುಪ್ಪದೊಂದಿಗೆ ಅಥವಾ ಅಷ್ಟೇ ಪ್ರಮಾಣದ ಶುಂಠಿ ರಸದಲ್ಲಿ ಬೆರೆಸಿ ನೆಕ್ಕಬೇಕು. ಹೆಚ್ಚೆಂದರೆ ಒಂದು ದಿನದಲ್ಲಿ 6 ಮಾತ್ರೆಗಳನ್ನು ಸೇವಿಸಬಹುದು. ಜ್ವರವಿಲ್ಲದೇ ಕೇವಲ ನಡುಕು ಇದ್ದರೆ ದಿನದಲ್ಲಿ 2-3 ಬಾರಿ 1-1 ಮಾತ್ರೆಯನ್ನು ಬಿಸಿನೀರಿನೊಂದಿಗೆ ಸೇವಿಸಬೇಕು |
ತಾತ್ಕಾಲಿಕ ಅಥವಾ 2-3 ದಿನ |
ಆ. ಸೂಚನೆ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಮಾತ್ರೆಗಳನ್ನು ಜಗಿದು ಅಥವಾ ಚೂರ್ಣ ಮಾಡಿ ಸೇವಿಸಿದರೆ ಅದರ ಪರಿಣಾಮ ಹೆಚ್ಚಾಗುವುದು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಲಶುನಾದಿ ವಟಿ (ಮಾತ್ರೆ)