ಸಾಧಕರ ಸಾಧನೆ ಒಳ್ಳೆಯ ರೀತಿಯಲ್ಲಿ ಆಗುವುದಕ್ಕೆ ಪೂ. ರಮಾನಂದ ಗೌಡರವರ ಮಾರ್ಗದರ್ಶನ

ಪೂ. ರಮಾನಂದ ಗೌಡ
ಪೂ. ರಮಾನಂದ ಗೌಡ

೨೭.೧.೨೦೨೨ ರಂದು ಸಾಧಕರಿಗಾಗಿ ಸನಾತನದ ಸಂತರಾದ ಪೂ. ರಮಾನಂದ ಗೌಡ ಇವರ ಆನ್‌ಲೈನ್ ಮಾರ್ಗದರ್ಶನವಿತ್ತು. ಆಗ ಅವರು ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದರ ಬಗ್ಗೆ ಮಾರ್ಗದರ್ಶನ ಮಾಡಿದರು. ಸಾಧಕರ ಪ್ರಶ್ನೆಗೆ ಅವರು ಬಹಳ ಸುಂದರ ಉದಾಹರಣೆ ನೀಡಿ ಅಂತರ್ಮುಖತೆ ನಿರ್ಮಿಸಿ ಸಾಧಕರಿಗೆ ಸಾಧನೆ ಹೆಚ್ಚಿಸಲು ಪ್ರೇರಣೆ ನೀಡಿದರು.

ಪೂ. ರಮಾನಂದ ಅಣ್ಣ ಇವರು ನೀಡಿರುವ ಮಾರ್ಗದರ್ಶನದಲ್ಲಿನ ಕೆಲವು ಮಹತ್ವಪೂರ್ಣ ಅಂಶಗಳು

ಅ. ಯೋಗ್ಯ ಸಾಧನೆ ಮಾಡುವುದರ ಮಹತ್ವ

ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿದರೆ ಸಾಧಕರು ಕರ್ಮಫಲದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧನೆ ಒಳ್ಳೆಯ ರೀತಿಯಲ್ಲಿ ಮಾಡಬೇಕು. ಒಮ್ಮೆ ಅಂತರ್ಮನಸ್ಸಿನಲ್ಲಿ ಸಾಧನೆ ಮಾಡುವ ನಿಶ್ಚಯವಾದರೆ ಸಾಧನೆಯಲ್ಲಿ ಜಿಗುಟುತನ ಹೆಚ್ಚುತ್ತದೆ. ‘ಸಾಧನೆಗಾಗಿ ನಾನು ಹೇಗೆ ಪ್ರಯತ್ನಿಸುವುದು’ ಎಂಬುವುದರ ಧ್ಯಾಸವಿರುವುದು ಎಂದರೆ ಅಂತರ್ಮುಖತೆ ಬರುವುದು. ಭೂತಕಾಲದಲ್ಲಿ ವಿಹರಿಸುವುದು ಎಂದರೆ ವಿಕಲ್ಪಕ್ಕೆ ಹೋಗುವುದು. ಸತತ ನಕಾರಾತ್ಮಕ ವಿಚಾರ ಮಾಡುವುದರಿಂದ ಸಾಧನೆ ವ್ಯಯವಾಗುತ್ತದೆ.

ಆ. ಸಾಧನೆ ಶರೀರಕ್ಕಾಗಿ ಅಲ್ಲ ಆತ್ಮಕ್ಕಾಗಿ ಮಾಡುತ್ತೇವೆ

ಸಾಧನೆ ಶರೀರಕ್ಕಾಗಿ ಇರದೇ ಆತ್ಮಕ್ಕಾಗಿ ಮಾಡುತ್ತೇವೆ. ಇದರ ಒಂದು ಸುಂದರ ಉದಾಹರಣೆ ಇದೆ. ಫ್ರಾನ್ಸ್ ನಲ್ಲಿ ಒಬ್ಬ ಸಾಧಕಿ ಬಹಳ ತಳಮಳದಿಂದ ಸಾಧನೆ ಮಾಡುತ್ತಿದ್ದಳು. ಪರಾತ್ಪರ ಗುರು ಡಾಕ್ಟರ ಬಗ್ಗೆ ಅವರಿಗೆ ಬಹಳ ಶ್ರದ್ಧೆಯಿತ್ತು. ಆ ಸಾಧಕಿಗೆ ಅರ್ಬುದ ರೋಗವಾಯಿತು. ಆಗ ಅವರ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಕೇಳಿದರು ‘ನೀನು ಇಷ್ಟು ಸಾಧನೆ ಮಾಡುತ್ತಿದ್ದೀಯ. ನಿನಗೆ ದೇವರ ಮೇಲೆ ಇಷ್ಟೊಂದು ಭಕ್ತಿ ಇದೆ. ಆದರೂ ಏಕೆ ನಿನಗೆ ಇಂತಹ ರೋಗ ಬಂತು?’ ಎಂದು. ಆಗ ಆ ಸಾಧಕಿ ಹೇಳಿದ್ದು ‘ನಾನು ಶರೀರಕ್ಕಾಗಿ ಸಾಧನೆ ಮಾಡುವುದಿಲ್ಲ, ನನ್ನ ಆತ್ಮಕ್ಕಾಗಿ ಮಾಡುತ್ತೇನೆ’.

ಇ. ಅಂತರ್ಮನಸ್ಸಿನಲ್ಲಿ ಬದಲಾವಣೆ ಆಗುವುದಕ್ಕಾಗಿ ತಖ್ತೆ ಬರೆಯುವುದರ ಆವಶ್ಯಕತೆ

ಸಾಧನೆ ಮಾಡುವುದು ಎಂದರೆ ಅಂತರ್ಮನಸ್ಸಿನಲ್ಲಿ ಬದಲಾವಣೆ ತಂದುಕೊಳ್ಳುವುದು. ಅದಕ್ಕಾಗಿ ತಖ್ತೆ ಬರೆಯುವುದು (ನಮ್ಮಿಂದಾಗಿರುವ ತಪ್ಪುಗಳನ್ನು ತಖ್ತೆಯಲ್ಲಿ ಬರೆಯುವುದು. ಏಕೆಂದರೆ ಅದೇ ತಪ್ಪು ಪುನಃ ಪುನಃ ಆಗದಿರಲಿ, ಅದರಿಂದ ಮನಸ್ಸಿಗೆ ಯೋಗ್ಯ ಸೂಚನೆ ನೀಡುವುದು). ತಖ್ತೆ ಮನಸ್ಸಿಟ್ಟು ಬರೆದರೆ ಮನಸ್ಸು ಸತತ ಜಾಗೃತವಾಗಿರುತ್ತದೆ. ಮತ್ತೊಂದು ಸಲ ತಪ್ಪು ಆದ ತಕ್ಷಣ ತಪ್ಪಿನ ಅರಿವಾಗಿ ತಪ್ಪಾಗದಿರಲು ಪ್ರಯತ್ನಿಸಬಹುದು. ತಖ್ತೆ ಬರೆಯದಿರುವ ದಿನದಂದು ನಿದ್ದೆ ಬಾರದಿರುವ ಸ್ಥಿತಿ ಬರಬೇಕು.

ಈ. ಗುರು ಆಜ್ಞೆ ಎಂದು ತಖ್ತೆ ಬರೆಯುವುದು, ಇದೇ ಈ ಕಾಲಾಸುಸಾರ ಸಾಧನೆ !

ನಾವು ಸತತ ಸಾಧನೆಯಲ್ಲಿದ್ದು ಗುರುವಾಜ್ಞೆಯ ಪಾಲನೆ ಮಾಡಬೇಕು. ‘ಪರಿಸ್ಥಿತಿ ಹೇಗಿದೆ’ ಎಂಬುವುದಕ್ಕಿಂತಲೂ ‘ಗುರುದೇವರು (ಪರಾತ್ಪರ ಗುರು ಡಾ. ಆಠವಲೆ) ನನಗೆ ಏನು ಹೇಳುತ್ತಿದ್ದಾರೆ’ ಇದು ಮಹತ್ವದ್ದಾಗಿದೆ. ಎಷ್ಟೇ ಕಠಿಣ ಪ್ರಸಂಗ ಇದ್ದರೂ ಗುರುವಾಜ್ಞೆ ಎಂದು ತಖ್ತೆ ಬರೆಯಬೇಕು. ಇದುವೇ ಈ ಕಾಲಕ್ಕೆ ತಕ್ಕ ಸಾಧನೆ ಆಗಿದೆ.

– ಸೌ. ಸುಜಾತಾ ಅಶೋಕ ರೇಣಕೆ, ಫೋಂಡಾ, ಗೋವಾ. (೩೧.೧.೨೦೨೨)

Leave a Comment