ಆಧ್ಯಾತ್ಮಿಕ ಪ್ರಗತಿಗಾಗಿ ಸಹಾಯ ಮಾಡುವ ಗುಣಗಳು

ಧ್ಯೇಯಪ್ರಾಪ್ತಿಗಾಗಿ ಅಧ್ಯಾತ್ಮದಲ್ಲಿ ವಿವಿಧ ಮಾರ್ಗಗಳಿವೆ. ಪ್ರಗತಿಯಾಗುವುದಕ್ಕೆ ಪ್ರತಿಯೊಂದು ಮಾರ್ಗದಲ್ಲಿ ಬೇರೆ ಬೇರೆ ಗುಣಗಳು ಕೆಲಸಕ್ಕೆ ಬರುತ್ತವೆ. ಆ ಗುಣಗಳನ್ನು ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ. ನಮ್ಮಲ್ಲಿ ಯಾವ ಗುಣಗಳು ಹೆಚ್ಚಿವೆ ಎಂದು ಗುರುತಿಸಿ ನಮಗೆ ಅನುಕೂಲವಿರುವ ಸಾಧನೆ ಮಾಡಿದರೆ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುವ ಸಾಧ್ಯತೆ ಹೆಚ್ಚುತ್ತದೆ.

ಈಶ್ವರನ ಪ್ರಾಪ್ತಿಗಾಗಿ

‘ಒಂದು ಕೋಟಿ ಜಪ ಮಾಡುತ್ತೇನೆ’, ‘ಹನ್ನೆರಡು ವರ್ಷ ತಪಸ್ಸು ಮಾಡುತ್ತೇನೆ’, ಇಂತಹ ಪ್ರಯತ್ನಗಳ ಬದಲು ಈಶ್ವರನ ಬಗ್ಗೆ ಭಕ್ತಿಭಾವ ಮತ್ತು ಈಶ್ವರನ ಪ್ರಾಪ್ತಿಯ ತಳಮಳವು ಹೆಚ್ಚು ಉಪಯುಕ್ತವಾಗಿದೆ.

ಕರ್ಮಗಳಿಂದ ಆಧ್ಯಾತ್ಮಿಕ ಪ್ರಗತಿಗಾಗಿ

ನಿಷ್ಕಾಮರಾಗಿರಬೇಕು. ಕೆಲಸವನ್ನು ಪೂರ್ಣ ಉತ್ಸಾಹದಿಂದ, ಎಚ್ಚರಿಕೆಯಿಂದ ಮಾಡಬೇಕು; ಇತರರ ಒಳಿತಿಗಾಗಿ ಮಾಡಬೇಕು; ಯಾರಿಗೆ ಒಳಿತನ್ನು ಮಾಡಿದ್ದೇವೆಯೋ, ಅವರಿಂದ ಮರು ಪಾವತಿಯ ಅಪೇಕ್ಷೆಯಿರಬಾರದು; ಆ ಕರ್ಮವು ಯಶಸ್ವಿಯಾದರೂ, ವಿಫಲವಾದರೂ ಸುಖ-ದುಃಖವಾಗದಿರುವುದು (ಅಲಿಪ್ತ). ಇಂತಹ ಕರ್ಮಯೋಗವು ಪೂರ್ಣ ನಿಷ್ಕಾಮ ಭಾವವನ್ನು ಸಾಧಿಸುವುದಕ್ಕಾಗಿ ಇರುತ್ತದೆ. ಮಹತ್ವ ಕರ್ಮದ್ದಲ್ಲ, ನಿಷ್ಕಾಮದ್ದಾಗಿದೆ.

ಸಮಾಧಿಗಾಗಿ

ಚಿತ್ತದ ಏಕಾಗ್ರತೆ ಮಹತ್ವದ್ದಾಗಿರುತ್ತದೆ. ಪತಂಜಲಿ ಅಷ್ಟಾಂಗಯೋಗದ ಮೊದಲು ೫ ಅಂಗಗಳು (ಭಾಗಗಳು) – ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಇವು ಮುಖ್ಯ ಪೂರ್ವಸಿದ್ಧತೆಗಳಾಗಿವೆ. ಮುಂದಿನ ಎರಡು ಅಂಗಗಳು ಧಾರಣಾ ಮತ್ತು ಧ್ಯಾನ, ಇವು ಚಿತ್ತವನ್ನು ಏಕಾಗ್ರ ಮಾಡುವ ಪ್ರಯತ್ನಗಳಾಗಿವೆ. ಕೊನೆಯ ಭಾಗದಲ್ಲಿ ಅಂದರೆ ಸಮಾಧಿಯಲ್ಲಿ ಚಿತ್ತವು ಏಕಾಗ್ರವಾಗಿರುತ್ತದೆ.

ಆತ್ಮಜ್ಞಾನಪ್ರಾಪ್ತಿಗಾಗಿ

ಅತಿ ತೀವ್ರ ಜಿಜ್ಞಾಸೆ ಇರ ಬೇಕಾಗುತ್ತದೆ. ತಿಳಿಯುವ ತನಕ ಮನಸ್ಸು ಬಹಳ ಅಶಾಂತ ವಾಗಿದ್ದರೆ ಜಿಜ್ಞಾಸೆಯನ್ನು ಪೂರೈಸಲು ಹೆಚ್ಚು ಪ್ರಯತ್ನ ಗಳಾಗುತ್ತವೆ ಮತ್ತು ಅದು ಯಶಸ್ವಿಯಾಗುತ್ತದೆ.

೪ ಆ. ಬ್ರಹ್ಮಲೀನವಾಗಲು – ವೈರಾಗ್ಯ ಮತ್ತು ತೀವ್ರ ಮುಮುಕ್ಷುತ್ವ ಇರಬೇಕಾಗುತ್ತದೆ. ನಂತರ ಪ್ರಾಪ್ತ ಆತ್ಮಜ್ಞಾನದ ಪ್ರತ್ಯಕ್ಷ ಅನುಭೂತಿ, ಅನುಭವ ಬಂದು ಎಲ್ಲ ಇಚ್ಛೆಗಳ ಜೊತೆಗೆ ಮೋಕ್ಷಪ್ರಾಪ್ತಿಯ ಇಚ್ಛೆಯೂ ಲೋಪವಾಗಿ ಮನುಷ್ಯನು ಆಸೆರಹಿತನಾಗುತ್ತಾನೆ ಮತ್ತು ಬ್ರಹ್ಮಲೀನನಾಗುವ ಯೋಗ್ಯತೆ ಪ್ರಾಪ್ತವಾಗುತ್ತದೆ.

– (ಪೂ.) ಅನಂತ ಆಠವಲೆ ೨೫.೫.೨೦೨೩

Leave a Comment