ಸದ್ಗುರು ಡಾ. ಮುಕುಲ ಗಾಡಗೀಳ ಇವರು ಸಾಧಕರಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ನೀಡಿದ ಮಾರ್ಗದರ್ಶನ

ಸದ್ಗುರು ಡಾ. ಮುಕುಲ ಗಾಡಗೀಳ ಇವರು ಕೆಲ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಅಡಚಣೆಗಳನ್ನು ತಿಳಿದುಕೊಂಡು ಅವರಿಗೆ ನೀಡಿದ ಮಾರ್ಗದರ್ಶನದ ಆಯ್ದ ಅಂಶಗಳನ್ನು ಇಲ್ಲಿ ನೀಡಿದ್ದೇವೆ.

ಸದ್ಗುರು (ಡಾ.) ಮುಕುಲ ಗಾಡಗೀಳ
ಸದ್ಗುರು (ಡಾ.) ಮುಕುಲ ಗಾಡಗೀಳ

೧. ಮನಮುಕ್ತತೆಯಿಂದ ವರ್ತಿಸುವುದರ ಮಹತ್ವ

೧ ಅ. ಮನಸ್ಸು ಬರಿದಾದಷ್ಟು ದೇವರೊಂದಿಗೆ ಅನುಸಂಧಾನ ಹೆಚ್ಚಿರುತ್ತದೆ

ನಮ್ಮಲ್ಲಿರುವ ‘ಅಪೇಕ್ಷೆ, ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ನಿಷ್ಕರ್ಷ ತೆಗೆಯುವುದು’ ಇತ್ಯಾದಿ ದೋಷಗಳಿಂದಾಗಿ ನಮಗೆ ಬಹಳಷ್ಟು ಬಾರಿ ಯಾವುದಾದರೊಂದು ಪ್ರಸಂಗದಿಂದ ಹೊರಬರಲು ಸಮಯ ತಗಲುತ್ತದೆ. ಆ ಪ್ರಸಂಗದ ಬಗ್ಗೆ ಬಹಳ ವಿಚಾರ ಮಾಡುತ್ತೇವೆ. ಮನಸ್ಸಿನಲ್ಲಿಯೇ ವಿಚಾರಗಳ ಸಂಘರ್ಷ ನಡೆಯುತ್ತದೆ. ಇಂತಹ ಪ್ರಸಂಗದಲ್ಲಿ ಯಾರೊಂದಿಗಾದರೂ ಮಾತನಾಡಿ ಅಥವಾ ದೇವರಲ್ಲಿ ಆತ್ಮನಿವೇದನೆ ಮಾಡಿ ಮನಸ್ಸನ್ನು ಖಾಲಿ ಮಾಡಬೇಕು. ಮನಸ್ಸು ಎಷ್ಟು ಬರಿದಾಗಿರುತ್ತದೆಯೋ, ದೇವರೊಂದಿಗೆ ಅಷ್ಟು ಹೆಚ್ಚು ಅನುಸಂಧಾನವಿರುತ್ತದೆ. ‘ನಮ್ಮ ಮನಸ್ಸು ಯಾವಾಗಲೂ ದೇವರ ವಿಚಾರಗಳಲ್ಲಿ ಹೇಗೆ ಇರಬಹುದು’ ಎಂಬತ್ತ ನಾವು ಗಮನ ಹರಿಸಬೇಕು ಮತ್ತು ಬಾಹ್ಯ ವಿಷಯಗಳನ್ನು ದುರ್ಲಕ್ಷಿಸಬೇಕು. ದೇವರ ಪ್ರವಾಹದಲ್ಲಿ ನಾವು ಹರಿಯುತ್ತಿರಬೇಕು. ಎಷ್ಟೇ ಅಡಚಣೆಗಳು ಬಂದರೂ, ಜಿಗುಟುತನದಿಂದ ಮುಂದುವರಿಯುತ್ತಿರಬೇಕು.

೧ ಆ. ಸಂಕೋಚ ಇಟ್ಟುಕೊಳ್ಳದಿರುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಒಂದೇ ಪದವನ್ನು ೩ ದಿನ ಪುನಃ ಪುನಃ ಕೇಳುವುದು ಮತ್ತು ಇದರಿಂದ ಪರಿಪೂರ್ಣ ಸೇವೆಯನ್ನು ಮಾಡಲು ‘ನಾನು ಪುನಃ ಹೇಗೆ ಕೇಳಲಿ ?’, ಎಂಬ ಸಂಕೋಚವನ್ನು ಇಟ್ಟುಕೊಳ್ಳದಿರಲು ಅವರು ಕಲಿಸುವುದು : ಒಮ್ಮೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯರು ನನ್ನ (ಡಾ. ಮುಕುಲ ಗಾಡಗೀಳ ಇವರ) ಪಕ್ಕದಲ್ಲಿ ಕುಳಿತುಕೊಂಡಿದ್ದರು ಮತ್ತು ಅವರು ನನಗೆ ‘ಒಂದು ಪದವನ್ನು ಹೇಗೆ ಬರೆಯಬೇಕು’ ಎಂದು ಕೇಳಿದರು. ನಾನು ಅವರಿಗೆ ಆ ಪದವನ್ನು ಹೇಳಿದೆ. ಮರುದಿನ ಮತ್ತು ಮೂರನೇ ದಿನವೂ ಅವರು ನನಗೆ ಅದೇ ಪದವನ್ನು ಕೇಳಿದರು ಮತ್ತು ನಂತರ, “ನಾನು ನಿಮಗೆ ಪುನಃ ಪುನಃ ಕೇಳುತ್ತಿದ್ದೇನಲ್ಲವೇ”, ಎಂದು ಹೇಳಿದರು. ಇದರಿಂದ ‘ಯಾವುದಾದರೊಂದು ಅಂಶವು ತಿಳಿಯದಿದ್ದರೆ, ಮನಮುಕ್ತವಾಗಿ ಪುನಃ ಪುನಃ ಕೇಳಬೇಕು’, ಎಂದು ಅವರು ಕಲಿಸುತ್ತಿದ್ದರು. ‘ನಾನು ಪುನಃ ಪುನಃ ಹೇಗೆ ಕೇಳಲಿ’, ಎಂಬ ಸಂಕೋಚವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಸ್ವಂತ ಪ್ರತಿಷ್ಠೆಯನ್ನು ಕಾಪಾಡಬಾರದು. ನಮಗೆ ಸರಿಯಾಗಿ ತಿಳಿಯದಿದ್ದರೆ, ನಮ್ಮಿಂದ ಸೇವೆಯಲ್ಲಿ ತಪ್ಪುಗಳಾಗುತ್ತವೆ. ಸೇವೆಯನ್ನು ಮಾಡುವಾಗ ಸಹಸಾಧಕರಲ್ಲಿಯೂ ಕೇಳಬೇಕು; ಏಕೆಂದರೆ ಎಲ್ಲರ ಬುದ್ಧಿ ಮತ್ತು ವಿಚಾರ ಮಾಡುವ ಪದ್ಧತಿ ಬೇರೆ ಬೇರೆಯಾಗಿರುತ್ತದೆ. ಎಲ್ಲರೂ ಸೇರಿ ಮಾಡಿದರೆ, ಸೇವೆಯಿಂದ ಉತ್ತಮ ಫಲ ಸಿಗುತ್ತದೆ.

೧ ಇ. ಮನಮುಕ್ತತೆ, ಸೇವೆಯಲ್ಲಿ ಪರಿಪೂರ್ಣತೆ, ಮತ್ತು ಅಹಂ ನಿರ್ಮೂಲನೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕೃತಿಯನ್ನು ಮಾಡುವಾಗ ಇತರರ ಬಳಿ ಕೇಳುತ್ತಾರೆ; ಏಕೆಂದರೆ ಮನಮುಕ್ತತೆಯಿಂದ ಪರಿಪೂರ್ಣ ಸೇವೆಯಾಗುವುದರ ಜೊತೆಗೆ ಅಹಂ ಸಹ ಕಡಿಮೆಯಾಗುತ್ತದೆ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕೃತಿಯನ್ನು ಮಾಡುವಾಗ ಇತರರಲ್ಲಿ ವಿಚಾರಿಸುತ್ತಾರೆ. ಇತರರಿಂದ ನಮಗೆ ಆ ಕೃತಿಯ ಬಗ್ಗೆ ಇನ್ನಷ್ಟು ತಿಳಿಯುತ್ತದೆ. ಅದರಿಂದ ಸೇವೆ ಪರಿಪೂರ್ಣವಾಗುತ್ತದೆ, ಹಾಗೆಯೇ ಅಹಂ ಸಹ ಕಡಿಮೆಯಾಗುತ್ತದೆ. ಒಂದು ವೇಳೆ ಅವರೇ ಈ ರೀತಿ ಕೇಳಿ ಮಾಡುತ್ತಿದ್ದಾರೆ ಎಂದಾದರೆ, ನಾವೇಕೆ ಕೇಳಬಾರದು? ಒಮ್ಮೆ ಅವರು ನನಗೆ ಒಂದೇ ಪದವನ್ನು ಮೂರು ಸಲ ಕೇಳಿದ್ದರು. ಅಷ್ಟು ಮುಕ್ತವಾಗಿ ಅವರು ಕೇಳುತ್ತಾರೆ. ನಾವೂ ಮುಕ್ತ ಮನಸ್ಸಿನವರಾಗಿರಬೇಕು.

೧ ಈ. ಮುಕ್ತವಾಗಿ ಮಾತನಾಡುವ ಕೃತಿಯಾಗಲು ಮನಸ್ಸಿನಲ್ಲಿ ಸಂಸ್ಕಾರವಾಗುವುದರ ಆವಶ್ಯಕತೆ

ಪ್ರಶ್ನೆ : ಮುಕ್ತವಾಗಿ ಮಾತನಾಡುವುದರ ಮಹತ್ವ ಗೊತ್ತಿದೆ. ಮುಕ್ತವಾಗಿ ಮಾತನಾಡದಿದ್ದರೆ ಆಗುವ ಹಾನಿಯನ್ನೂ ನಾವು ಅನುಭವಿಸಿದ್ದೇವೆ. ಯಾರಾದರೂ ಮುಕ್ತವಾಗಿ ಮಾತನಾಡಲು ಹೇಳಿದರೆ, ‘ನಾವು ಈಗ ಮುಕ್ತವಾಗಿ ಮಾತನಾಡಬೇಕು’ ಎಂದು ಅನಿಸುತ್ತದೆ; ಆದರೆ ಕೃತಿಯಾಗುವುದಿಲ್ಲ.

ಸದ್ಗುರು ಡಾ. ಗಾಡಗೀಳ : ಮುಕ್ತವಾಗಿ ಮಾತನಾಡುವ ಸಂಸ್ಕಾರ ಮನಸ್ಸಿನಲ್ಲಾಗಲು ನಿರಂತರವಾಗಿ ಪ್ರಯತ್ನವನ್ನೇ ಮಾಡಬೇಕು. ‘ಮುಕ್ತವಾಗಿ ಮಾತನಾಡಬೇಕು’, ಎಂದು ಬುದ್ಧಿಗೆ ತಿಳಿದಿರುತ್ತದೆ; ಆದರೆ ಅಂತರ್ಮನದಲ್ಲಿ ಅದರ ಸಂಸ್ಕಾರವಾಗದ ಕಾರಣ ಕೃತಿಯಾಗುವುದಿಲ್ಲ. ಅದಕ್ಕಾಗಿ ಅಂತರ್ಮನಕ್ಕೆ ಸ್ವಯಂಸೂಚನೆಯನ್ನು ನೀಡಬೇಕು. ಆಂತರಿಕ ಪ್ರಗತಿಯಾಗಬೇಕು.

೨. ಭಾವವನ್ನು ಹೇಗೆ ಹೆಚ್ಚಿಸಬೇಕು?

ಅ. ಯಾವುದೇ ಕೃತಿ ಅಥವಾ ಸೇವೆಯನ್ನು ಮಾಡುವಾಗ ‘ದೇವರು ಸೂಚಿಸುತ್ತಾನೆ’, ಎಂಬ ಭಾವವನ್ನು ಇಟ್ಟುಕೊಳ್ಳಬೇಕು.

ಆ. ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ಅದನ್ನು ದೇವರೊಂದಿಗೆ ಹೇಗೆ ಜೋಡಿಸಬಹುದು ?’, ಎಂದು ನೋಡಬೇಕು.

ಇ. ದೇವರೊಂದಿಗೆ ಆತ್ಮೀಯತೆ ಬೇಕು. ಇದಕ್ಕಾಗಿ ಪ್ರತಿಯೊಂದು ಸೇವೆಯನ್ನು ಮಾಡುವಾಗ ಅವನನ್ನು ಕರೆಯಬೇಕು. ಅವನಿಗೆ ಹೇಳಿ ಪ್ರತಿಯೊಂದು ಕೃತಿಯನ್ನು ಮಾಡಬೇಕು.

ಈ. ಮಹಾಪ್ರಸಾದವನ್ನು ಸೇವಿಸುವಾಗ ಪ್ರತಿಯೊಂದು ತುತ್ತಿನೊಂದಿಗೆ ಪ್ರಾರ್ಥನೆ ಮಾಡಲು ಪ್ರಯತ್ನಿಸಬೇಕು, ಅಂದರೆ ಅನುಸಂಧಾನ ಹೆಚ್ಚಾಗುತ್ತದೆ.

ಉ. ಸತತವಾಗಿ ಪ್ರಾರ್ಥಿಸುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮಹತ್ವದ್ದಾಗಿದೆ. ಅದರಿಂದ ಭಾವಜಾಗೃತಿಯಾಗುತ್ತದೆ.

ಊ. ‘ದೇವರೇ ಎಲ್ಲವನ್ನೂ ಮಾಡಿದನು’, ಎಂಬ ಭಾವವನ್ನು ಯಾವಾಗಲೂ ಇಟ್ಟುಕೊಳ್ಳಬೇಕು.

ಎ. ನಮ್ಮಲ್ಲಿ ಶರಣಾಗತಭಾವವನ್ನು ಜಾಗೃತಗೊಳಿಸಲು ಪ್ರಯತ್ನಿಸಬೇಕು.

ಏ. ಮನಸ್ಸನ್ನು ಖಾಲಿ ಇಡದೇ ಭಾವದಲ್ಲಿ ರಮಿಸಸಬೇಕು. ಪ್ರತಿ ೩೦ ನಿಮಿಷಗಳಿಗೊಮ್ಮೆ ಮಾಡಿದ ಕೃತಿಗಳ ವರದಿಯನ್ನು ತೆಗೆದುಕೊಳ್ಳಬೇಕು.

೩. ಆಂತರಿಕ ಸಾಧನೆಯನ್ನು ಹೆಚ್ಚಿಸಲು ಮಾಡಬೇಕಾದ ಪ್ರಯತ್ನಗಳ ಬಗೆಗಿನ ಅಂಶಗಳು

೩ ಅ. ಕರ್ತೃತ್ವವನ್ನು ಕಡಿಮೆ ಮಾಡಲು ಮಾಡಬೇಕಾದ ಪ್ರಯತ್ನಗಳು

೧. ‘ದೇವರು ನನಗೆ ಎಷ್ಟು ಸಹಾಯ ಮಾಡುತ್ತಾರೆ. ಅವರೇ ಎಲ್ಲವನ್ನೂ ಮಾಡಿಸಿಕೊಳ್ಳುತ್ತಾರೆ’, ಎಂಬ ಕೃತಜ್ಞತಾಭಾವ ಇರಬೇಕು.

೨. ಯಾವುದಾದರೊಂದು ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಆ ಬಗ್ಗೆ ದೇವರಿಗೆ ಕೇಳಬೇಕು. ಆ ಸಮಯದಲ್ಲಿ ಬಂದ ಮೊದಲ ಉತ್ತರ ಸರಿಯಾಗಿರುತ್ತದೆ. ದೇವರಿಗೆ ಶ್ರದ್ಧೆಯಿಂದ ಪ್ರಶ್ನೆಯನ್ನು ಕೇಳಿದರೆ, ಅವನು ಖಂಡಿತವಾಗಿಯೂ ಉತ್ತರವನ್ನು ನೀಡುತ್ತಾನೆ. ಒಂದು ವೇಳೆ ದೇವರು ಉತ್ತರವನ್ನು ನೀಡದಿದ್ದರೆ, ಜೊತೆಗಿರುವ ಸಾಧಕರಲ್ಲಿ ಕೇಳಬೇಕು. ಅವರಲ್ಲಿಯೂ ದೇವರಿದ್ದಾನೆ ತಾನೇ.

೩ ಆ. ಮನಸ್ಸಿನ ತ್ಯಾಗವಾಗುತ್ತಿದೆಯೇ ಎಂಬುದರ ಕಡೆಗೆ ಗಮನವಿಡುವುದು

ಸೇವೆಯನ್ನು ಮಾಡುವಾಗ ಮನಸ್ಸಿನ ತ್ಯಾಗವಾಗುತ್ತಿದೆಯೇ ಎಂಬುದರ ಕಡೆಗೆ ಗಮನವಿರ ಬೇಕು. ನಾವು ಮಾತನಾಡುವಾಗ, ಹಾಗೆಯೇ ಯಾವುದೇ ಕೃತಿಯನ್ನು ಮಾಡುವಾಗ ಯಾವಾಗಲೂ ನಮ್ಮ ಮೇಲೆ ಗಮನವಿರಬೇಕು. ಮನಸ್ಸಿನಲ್ಲಿ ಮೂಡುವ ಪ್ರತಿಕ್ರಿಯೆ ಮತ್ತು ಅಪೇಕ್ಷೆ ಇವುಗಳನ್ನು ಬರೆದಿಡಬೇಕು ಮತ್ತು ಅವುಗಳು ಉಮ್ಮಳಿಸದಂತೆ ಪ್ರಯತ್ನಿಸಬೇಕು. ಅದರಿಂದ ಕ್ರಮೇಣ ಮನಸ್ಸು ಶುದ್ಧವಾಗುತ್ತಾ ಹೋಗುತ್ತದೆ.

೩ ಇ. ದೇವರ ಸಹಾಯ ಪಡೆದು ಸಾಧನೆಗಾಗಿ ಪದೇಪದೇ ಪ್ರಯತ್ನಿಸುವುದು

ನಮಗೆ ಸಾಧನೆ ಮಾಡುವ ಇಚ್ಛೆಯಿದೆ, ಆದರೆ ಮನಸ್ಸು ಚಂಚಲವಾಗಿರುವುದರಿಂದ ಸಾಧನೆ ಸುಲಭವಾಗಿ ಆಗುವುದಿಲ್ಲ. ಅದಕ್ಕಾಗಿ ಪ್ರಯತ್ನವನ್ನೇ ಮಾಡಬೇಕು. ನಾನು ೨೦೦೫ ರಲ್ಲಿ ಶ್ವಾಸಕ್ಕೆ ನಾಮಜಪವನ್ನು ಜೋಡಿಸುವ ಪ್ರಯತ್ನಗಳನ್ನು ಆರಂಭಿಸಿದೆನು. ನಾನು ದೇವರಿಗೆ, ‘ನನಗೆ ಶ್ವಾಸದೊಂದಿಗೆ ನಾಮವನ್ನು ಜೋಡಿಸಲು ಸಾಧ್ಯವಾಗಲಿ’, ಎಂದು ಪುನಃ ಪುನಃ ಪ್ರಾರ್ಥಿಸುತ್ತಿದ್ದೆನು. ನನಗೆ ನಾನೇ ಚಿವುಟಿಕೊಳ್ಳುತ್ತಿದ್ದೆ. ಆಗ ಅದು ಸಾಧ್ಯವಾಗಲು ೧ ವರ್ಷವೇ ಬೇಕಾಯಿತು.

೩ ಈ. ಕೃತಜ್ಞತಾಭಾವವನ್ನು ಹೆಚ್ಚಿಸುವುದರ ಮಹತ್ವ

ಪ್ರಶ್ನೆ : ಸೇವೆಯನ್ನು ಆರಂಭಿಸುವ ಮೊದಲು ಅಥವಾ ಸೇವೆಯ ಮೊದಲ ಹಂತದಲ್ಲಿ ನನಗೆ ಭಾವವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದರೆ ಒಂದು ಸಲ ಬುದ್ಧಿಯಿಂದ ಲೋಪವಿಲ್ಲದ ಸೇವೆಯನ್ನು ಮಾಡುವ ವಿಚಾರ ಬಂದರೆ, ನಂತರ ಬುದ್ಧಿಯು ಕಾರ್ಯನಿರತವಾಗುತ್ತದೆ ಮತ್ತು ಅನುಸಂಧಾನ ಉಳಿಯುವುದಿಲ್ಲ. ಇದಕ್ಕಾಗಿ ಏನು ಮಾಡಬೇಕು?

ಸದ್ಗುರು ಡಾ. ಗಾಡಗೀಳ : ಸೇವೆಯನ್ನು ಮಾಡುವಾಗಲೂ ಭಾವದ ಸ್ಥಿತಿಯನ್ನು ಉಳಿಸಿಡಲು ಸಾಧ್ಯವಿದೆ. ನೀವು ದೇವರೊಂದಿಗೆ ಅನುಸಂಧಾನವನ್ನು ಉಳಿಸಿಡಬೇಕೆಂದರೆ ಕೃತಜ್ಞತಾಭಾವವನ್ನು ಹೆಚ್ಚಿಸಬೇಕು. ದೇವರ ಸಹಾಯ ಪಡೆಯಬೇಕು. ‘ದೇವರೇ ನಮಗೆ ಪ್ರತಿಯೊಂದು ವಿಚಾರವನ್ನು ಕೊಡುತ್ತಿರುತ್ತಾರೆ’, ಎಂದು ಗಮನದಲ್ಲಿಟ್ಟು ಪ್ರತಿಯೊಂದು ವಿಷಯವನ್ನೂ ಸಾಧನೆಯೆಂದು ಮಾಡಿ. ಸೇವೆಯನ್ನು ಮಾಡುವಾಗ ನಮಗೆ ಏನಾದರೂ ಹೊಳೆದರೆ, ‘ಅದು ಯೋಗ್ಯವಾಗಿದೆಯೇ’ ಎಂದು ದೇವರಲ್ಲಿಯೇ ಕೇಳಿ. ‘ಸೇವೆಯನ್ನು ಇನ್ನೂ ಚೆನ್ನಾಗಿ ಮಾಡಲು ಏನು ಮಾಡಲಿ’, ಎಂದು ದೇವರ ಬಳಿ ಸತತವಾಗಿ ಕೇಳುತ್ತಿರಬೇಕು. ಸೇವೆಯನ್ನು ಮಾಡುತ್ತಿರುವಾಗ ಅನುಭೂತಿಯನ್ನು ಪಡೆಯಿರಿ, ಹಾಗೆಯೇ ಕಲಿಯುವ ಆನಂದವನ್ನು ಪಡೆಯಿರಿ. ಸೇವೆಯನ್ನು ಮಾಡುವಾಗ ಬಂದ ಅನುಭೂತಿ ಮತ್ತು ಕಲಿಯಲು ಸಿಕ್ಕಿದ ಅಂಶಗಳನ್ನು ಇತರರಿಗೂ ಹೇಳಬೇಕು, ಅಂದರೆ ವ್ಯಾಪಕತೆಯು ಹೆಚ್ಚಾಗುತ್ತದೆ. ಇದರಿಂದ ಆಂತರಿಕ ಸಾಧನೆಯಾಗುತ್ತದೆ.

೪.  ಪರಿಪೂರ್ಣ ಗುರುಸೇವೆಯಾಗಲು ಏನು ಮಾಡಬೇಕು?

೪ ಅ. ಸೇವೆಯು ಯಾಂತ್ರಿಕವಾಗದಂತೆ ಮಾಡಬೇಕಾದ ಪ್ರಯತ್ನ

ಬಹಳ ವರ್ಷಗಳಿಂದ ಸಾಧನೆ ಮಾಡುತ್ತಿರುವ ಆದರೆ ಪ್ರಗತಿಯಾಗದ ಅನೇಕ ಸಾಧಕರು ಬಹಳ ಸಲ, ‘ನಮ್ಮ ಸೇವೆ ಯಾಂತ್ರಿಕವಾಗಿ ಆಗುತ್ತದೆ’, ಎಂದು ಹೇಳುತ್ತಾರೆ. ಇದಕ್ಕೆ ಉಪಾಯವೆಂದರೆ ‘ಸೇವೆ ಮಾಡುವಾಗ ದೇವರು ಏನು ಕಲಿಸುತ್ತಿದ್ದಾನೆ? ಅಕ್ಕಪಕ್ಕದ ಸಾಧಕರ ಸಹಾಯ ಹೇಗೆ ಪಡೆಯಬೇಕು? ಸೇವೆಯು ಎಂದಿನಂತಿರುವುದರಿಂದ ಸೇವೆಯಲ್ಲಿ ಬರುವ ಏಕತಾನತೆ ಹೇಗೆ ದೂರಗೊಳಿಸುವುದು’, ಎಂಬುದನ್ನು ನೋಡಬೇಕು. ಇದಕ್ಕೆ ಸಂಬಂಧಿಸಿದ ಅಂಶಗಳನ್ನು ಮುಂದೆ ಕೊಟ್ಟಿದೆವೆ.

೪ ಅ ೧. ದೇವರು ಸೇವೆಯಲ್ಲಿನ ಎಲ್ಲ ವಿಷಯಗಳನ್ನು ಒಂದೇ ಸಲ ಸೂಚಿಸದೇ ಸ್ವಲ್ಪ ಸ್ವಲ್ಪವಾಗಿ ಸೂಚಿಸುತ್ತಿರುವುದರಿಂದ ಅವನು ಸೂಚಿಸಿದಂತೆ ಸೇವೆಯಲ್ಲಿ ಮಾರ್ಗಕ್ರಮಿಸುತ್ತಾ ಹೋದರೆ ಸೇವೆಯು ಸಹಜವಾಗಿ ಪೂರ್ಣಗೊಳ್ಳುವುದು : ಯಾವುದೇ ಹೊಸ ಸೇವೆಯನ್ನು ಮಾಡುವುದಿದ್ದರೆ, ಆ ಬಗ್ಗೆ ಅನುಭವವಿಲ್ಲದ ಕಾರಣ ಬಹಳ ಜನರಿಗೆ ‘ಗುರುಸೇವೆಯಲ್ಲಿ ಮುಂದೆ ಹೇಗೆ ಹೋಗಬೇಕು’, ಎಂಬ ಪ್ರಶ್ನೆ ಮೂಡುತ್ತದೆ. ಆದುದರಿಂದ ಸೇವೆಯು ಕಠಿಣವೆನಿಸುತ್ತದೆ, ಆದರೆ ‘ದೇವರು ನಮಗೆ ಸೂಚಿಸುತ್ತಿರುತ್ತಾರೆ’, ಎಂದು ಗಮನದಲ್ಲಿಟ್ಟರೆ, ಆನಂದ ಸಿಗುತ್ತದೆ. ಸೇವೆಯನ್ನು ಮಾಡುವಾಗ ಈ ದೃಷ್ಟಿಕೋನ ಇಟ್ಟುಕೊಳ್ಳಬೇಕು. ದೇವರು ಎಲ್ಲ ವಿಷಯಗಳನ್ನು ಒಂದೇ ಸಲಕ್ಕೆ ಸೂಚಿಸುವುದಿಲ್ಲ. ಅವನು ಸ್ವಲ್ಪಸ್ವಲ್ಪವಾಗಿ ಸೂಚಿಸುತ್ತಾನೆ. ದೇವರು ಸೂಚಿಸಿದಂತೆ ಕೃತಿ ಮಾಡಿದರೆ, ದೇವರು ಇನ್ನೂ ಮುಂದಿನ ಹಂತದ ವಿಚಾರ ಸೂಚಿಸುತ್ತಾನೆ. ಈ ರೀತಿ ನಮಗೆ ಸೇವೆಯಲ್ಲಿ ಮುಂದು ಮುಂದಿನ ಮಾರ್ಗವು ಸಿಗುತ್ತಾ ಹೋಗುತ್ತದೆ ಮತ್ತು ಸೇವೆಯು ಸಹಜವಾಗಿ ಪೂರ್ಣಗೊಳ್ಳುತ್ತದೆ. ಇದಕ್ಕಾಗಿ ದೇವರ ಮೇಲೆ ಶ್ರದ್ಧೆಯನ್ನಿಡಬೇಕು ಮತ್ತು ದೇವರ ಆಜ್ಞಾಪಾಲನೆ ಮಾಡಬೇಕು.

೪ ಅ ೨. ಸೇವೆಯಲ್ಲಿ ಕಲಿಯುವ ದೃಷ್ಟಿ ಇದ್ದರೆ ಆನಂದ ದೊರೆತು ಉತ್ಸಾಹ ಹೆಚ್ಚಾಗುವುದರಿಂದ ಸೇವೆಯಲ್ಲಿ ಏಕತಾನತೆ ಉಳಿಯುವುದಿಲ್ಲ : ಸೇವೆಯನ್ನು ಮಾಡುವಾಗ ಕಲಿಯುವ ದೃಷ್ಟಿಯನ್ನಿಟ್ಟುಕೊಂಡರೆ, ಆನಂದ ಸಿಗುತ್ತದೆ. ಆನಂದ ದೊರಕಿದರೆ, ಉತ್ಸಾಹ ಬರುತ್ತದೆ. ಆದುದರಿಂದ ಪ್ರತಿದಿನ ಅದೇ ಸೇವೆ ಇದ್ದರೂ ‘ಆ ಸೇವೆಯಿಂದ ಇವತ್ತು ಏನು ಕಲಿಯಲು ಸಿಗಲಿದೆ’, ಎಂಬ ಕುತೂಹಲ ಇರಬೇಕು.

೪ ಅ ೩. ಸೇವೆಯನ್ನು ಮಾಡುವಾಗ ಮುಂದು ಮುಂದಿನದನ್ನು ಸೂಚಿಸುವಂತೆ ದೇವರಲ್ಲಿ ಶರಣಾಗತಭಾವದಿಂದ ಕೇಳುವುದು ಆವಶ್ಯಕವಾಗಿರುವುದು ಮತ್ತು ನಮಗೆ ಕಲಿಯಲು ಸಿಕ್ಕಿದ್ದನ್ನುಇತರರಿಗೆ ಹೇಳಿದರೆ ನಮ್ಮ ಆನಂದ ದುಪ್ಪಟ್ಟಾಗುವುದು : ನಮಗೆ ಎಷ್ಟು ಹೊಳೆಯಿತೋ ಅಷ್ಟಕ್ಕೇ ಅಲ್ಪಸಂತುಷ್ಟರಾಗಬಾರದು. ದೇವರಿಗೆ ಸತತವಾಗಿ ಕೇಳುತ್ತಿರಬೇಕು ಮತ್ತು ಕಲಿಯುತ್ತಿರಬೇಕು. ನಾವೇನು ಕಲಿತೆವೋ, ಅದನ್ನು ಇತರರಿಗೆ ಹೇಳಿದರೆ, ನಮ್ಮ ಆನಂದ ದುಪ್ಪಟ್ಟಾಗುತ್ತದೆ. ಸೇವೆಯನ್ನು ಮಾಡುವಾಗ ಪ್ರತಿಸಲ ಕೂಡಲೇ ಹೊಳೆಯುತ್ತದೆ ಎಂದೇನಿಲ್ಲ. ಇದಕ್ಕಾಗಿ ಶರಣಾಗತಿ ಬೇಕು. ಹೀಗೆ ಮಾಡಿದರೆ, ಪರಿಪೂರ್ಣ ಸೇವೆಯ ತಳಮಳ ಹೆಚ್ಚಾಗುತ್ತದೆ.

೪ ಅ ೪. ಪ್ರಮುಖ ಸಾಧಕರು ಬದಲಾವಣೆಗಳನ್ನು ಏಕೆ ಹೇಳಿದರು ಎಂದು ತಿಳಿದುಕೊಂಡರೆ ಅದರಿಂದ ಪರಿಪೂರ್ಣ ಸೇವೆಯ ತಳಮಳವುಂಟಾಗಿ ಈಶ್ವರನ ಸಹಾಯ ಲಭಿಸುವುದು : ಪ್ರಮುಖ ಸಾಧಕರು ಒಂದೇ ಸೇವೆಯ ಬಗ್ಗೆ ಒಂದು ದಿನ ಒಂದು ಹೇಳುತ್ತಾರೆ ಮತ್ತು ಇನ್ನೊಂದು ದಿನ ಬೇರೆಯೇ ಹೇಳುತ್ತಾರೆ. ‘ಸೇವೆಯ ದೃಷ್ಟಿಕೋನವು ಈ ರೀತಿ ಏಕೆ ಬದಲಾಗುತ್ತದೆ’ ಎಂಬುದರ ಅಧ್ಯಯನ ಮಾಡಬೇಕು. ಈ ಬಗ್ಗೆ ತಿಳಿಯದಿದ್ದರೆ, ಕೇಳಿ ತಿಳಿದುಕೊಳ್ಳಬೇಕು. ಮನಸ್ಸಿನಲ್ಲಿ ಯಾವುದೇ ಸಂದೇಹ ಬೇಡ. ಇದರಿಂದ ಪರಿಪೂರ್ಣ ಸೇವೆಯ ತಳಮಳವುಂಟಾಗುತ್ತದೆ ಮತ್ತು ತಳಮಳವುಂಟಾದರೆ, ಈಶ್ವರನ ಸಹಾಯ ಸಿಗುತ್ತದೆ. ಸೇವೆಯನ್ನು ಮಾಡುವಾಗ ಭಾವಜಾಗೃತಿ, ಆಂತರಿಕ ಸಾಧನೆ, ತಳಮಳ ಹೆಚ್ಚಿಸುವುದು ಮತ್ತು ಅಹಂ ಕಡಿಮೆ ಮಾಡುವ ಪ್ರಯತ್ನಗಳತ್ತ ಗಮನವಿಡಬೇಕು.

೪ ಆ. ಪರಸ್ಪರರ ಸಹಾಯದಿಂದ ಸೇವೆಯನ್ನು ಪರಿಪೂರ್ಣಗೊಳಿಸಲು ಪ್ರಯತ್ನಿಸುವುದು

ಸೇವೆಯನ್ನು ಮಾಡುವಾಗ ಯಾವುದು ಸಾಧ್ಯವಾಗುವುದಿಲ್ಲವೋ, ಆ ಬಗ್ಗೆ ಇತರರಲ್ಲಿ ಕೇಳಬೇಕು. ‘ಯಾವುದಾದರೊಂದು ಕೃತಿ ಅಥವಾ ಸೇವೆ ಕೇವಲ ನನಗಷ್ಟೇ ತಿಳಿಯುತ್ತದೆ’, ಎಂಬ ವಿಚಾರ ಮಾಡದೇ ಇತರರಲ್ಲಿ ಕೇಳಿ ಅದನ್ನು ಪೂರ್ಣಗೊಳಿಸಬೇಕು. ಪರಸ್ಪರರ ಸಹಾಯದಿಂದ ಸೇವೆಯನ್ನು ಪರಿಪೂರ್ಣತೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕು.

೪ ಇ. ಸೇವೆಯನ್ನು ಮಾಡುವಾಗ ಸಹಸಾಧಕರೊಂದಿಗೆ ಭಿನ್ನಾಭಿಪ್ರಾಯವಾದರೆ ಏನು ಮಾಡಬೇಕು

‘ಕೆಲವೊಮ್ಮೆ ಸೇವೆಗೆ ಸಂಬಂಧಿಸಿದಂತೆ ನಮ್ಮ ಮತ್ತು ಸಹಸಾಧಕರಲ್ಲಿ ಭಿನ್ನಾಭೊಪ್ರಾಯಗಳಿರಬಹುದು. ಇಂತಹ ಸಮಯದಲ್ಲಿ ನಾವು ಹಿಂದೆ ಸರಿಯುತ್ತೇವೆ ಮತ್ತು ಸಹಸಾಧಕರ ಇಚ್ಛೆಗನುಸಾರ ನಡೆದುಕೊಳ್ಳುತ್ತೇವೆ; ಆದರೆ ಕೆಲವೊಮ್ಮೆ ನಮ್ಮ ವಿಚಾರ ಹೆಚ್ಚು ಯೋಗ್ಯವೆನಿಸಿ ಮನಸ್ಸಿನಲ್ಲಿ ಅಸಮಾಧಾನವಿರುತ್ತದೆ. ಇಂತಹ ಸಮಯದಲ್ಲಿ ದೇವರ ಬಳಿ ಪ್ರಾರ್ಥನೆ ಮಾಡಿ ‘ಹೆಚ್ಚು ಯೋಗ್ಯ ಯಾವುದು’, ಎಂದು ಕೇಳಬೇಕು ಮತ್ತು ನಮ್ಮ ವಿಚಾರ ಯೋಗ್ಯವೆನಿಸಿದರೆ ಅದನ್ನು ಸಹಸಾಧಕರಿಗೆ ಕಾರಣಸಹಿತ ತಿಳಿಸಿಹೇಳಬೇಕು. ಅದರಿಂದ ಭಿನ್ನಾಭಿಪ್ರಾಯ ದೂರವಾಗುತ್ತದೆ. ಅನಂತರವೂ ಆ ಸಾಧಕರಿಗೆ ಮನವರಿಕೆಯಾಗದಿದ್ದರೆ ಮೂರನೇ ಸಾಧಕನ ಅಭಿಪ್ರಾಯ ಕೇಳಬೇಕು; ಆದರೆ ಯಾವುದೇ ಸ್ಥಿತಿಯಲ್ಲಿ ವಿಷಯವನ್ನು ಅರ್ಧಕ್ಕೆ ಬಿಟ್ಟುಕೊಡಬಾರದು. ಇಲ್ಲವಾದರೆ ಆ ವಿಚಾರ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಮತ್ತು ನಮ್ಮ ಮನಸ್ಸು ಮುಂದಿನ ಸೇವೆಯಲ್ಲಿ ತೊಡಗುವುದಿಲ್ಲ.

೪ ಈ. ಪ್ರತಿಯೊಂದು ಕೃತಿಯನ್ನು ‘ಸತ್ಯಮ್, ಶಿವಮ್‌ ಮತ್ತು ಸುಂದರಮ್’ ಮಾಡಲು ಪ್ರಯತ್ನಿಸುವುದು

ನಮ್ಮಿಂದ ಸೇವೆಯಾಗದೇ ಕೆಲಸವಾಗುತ್ತಿದ್ದರೆ, ಅದನ್ನು ಸೇವೆಯಲ್ಲಿ ರೂಪಾಂತರಿಸಲು ಸತತ ಪ್ರಯತ್ನಿಸಬೇಕು. ಪ್ರತಿಯೊಂದು ಕೃತಿಯನ್ನು ‘ಸತ್ಯಮ್,  ಶಿವಮ್‌  ಮತ್ತು ಸುಂದರಮ್’ ಮಾಡಲು ಪ್ರಯತ್ನಿಸಬೇಕು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಪ್ರತಿಯೊಂದು ಕೃತಿ ‘ಸತ್ಯಮ್, ಶಿವಮ್‌ ಮತ್ತು ಸುಂದರಮ್’ ಆಗಿರುತ್ತದೆ. ನಾವು ಯಾವುದೇ ಕೃತಿಯನ್ನು ಆರಂಭಿಸಿದರೆ, ‘ಗುರುಗಳು ಈ ಕೃತಿಯನ್ನು ಹೇಗೆ ಮಾಡುತ್ತಿರಬಹುದು’ ಎಂಬ ವಿಚಾರ ಮಾಡಿ ಆ ಕೃತಿ ಮಾಡಬೇಕು.

ಮಾದರಿಗಾಗಿ ತೆಗೆಯುವ ಛಾಯಾಚಿತ್ರದಲ್ಲಿಯೂ ಸಾಧಕನ ಛಾಯಾಚಿತ್ರ ಯೋಗ್ಯವಾಗಿಯೇ ಕಾಣಿಸುವಂತೆ ತೆಗೆಯುವುದು ಆವಶ್ಯಕವಾಗಿರುವುದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸುವುದು : ಒಮ್ಮೆ ಛಾಯಾಚಿತ್ರಗಳ ಒಂದು ಪ್ರಯೋಗ ನಡೆದಿತ್ತು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಾದರಿಗಾಗಿ ಛಾಯಾಚಿತ್ರವನ್ನು ತೆಗೆಯೋಣ’, ಎಂದು ಹೇಳಿದ್ದರು. ಹಾಗೆ ಛಾಯಾಚಿತ್ರವನ್ನು ತೆಗೆದ ನಂತರ ಆ ಛಾಯಾಚಿತ್ರದಲ್ಲಿ ಓರ್ವ ಸಾಧಕನ ಬನಿಯನ್ ಕಾಣಿಸುತ್ತಿತ್ತು. ಆಗ ಅವರು ಆ ತಪ್ಪನ್ನು ಅರಿವು ಮಾಡಿಕೊಟ್ಟರು ಮತ್ತು “ಮಾದರಿಗಾಗಿ ಎಂದು ಛಾಯಾಚಿತ್ರವನ್ನು ತೆಗೆದಿದ್ದರೂ ಸಹ, ಅದನ್ನು ಯೋಗ್ಯ ರೀತಿಯಲ್ಲಿಯೇ ತೆಗೆಯಬೇಕು. ನಮ್ಮ ಪ್ರತಿಯೊಂದು ಕೃತಿ ಪರಿಪೂರ್ಣವೇ ಆಗಬೇಕು ಮತ್ತು ನಮಗೆ ಅಂತಹ ಅಭ್ಯಾಸವಾಗಬೇಕು” ಎಂದು ಹೇಳಿದರು. ಈ ಸನ್ನಿವೇಶದಿಂದ ಅವರು ‘ಪ್ರತಿಯೊಂದು ಕೃತಿ ಚೆನ್ನಾಗಿಯೇ ಆಗಬೇಕು’, ಎಂಬುದನ್ನು ಕಲಿಸಿದರು.

೪ ಉ. ಇತರರಿಂದ ಪರಿಪೂರ್ಣ ಸೇವೆಯನ್ನು ಮಾಡಿಸಿಕೊಳ್ಳುವುದು

೪ ಉ ೧. ಆಪತ್ಕಾಲದಲ್ಲಿ ಇತರರನ್ನು ಅವಲಂಬಿಸಿರಬಾರದು ! : ಆಪತ್ಕಾಲದಲ್ಲಿ ನಾವು ಯಾವುದೇ ವಿಷಯದಲ್ಲಿ ಇತರರನ್ನು ಅವಲಂಬಿಸಿರಬಾರದು. ಸಾಧಕರ ಮೇಲೆ ಯಾವುದೇ ವಿಷಯವನ್ನು ಬಿಟ್ಟುಕೊಡಬಾರದು. ನಾವು ಸತತವಾಗಿ ಬೆಂಬತ್ತಬೇಕು. ಈಗ ಆಪತ್ಕಾಲದಲ್ಲಿ ‘ಹಾಲಿನಿಂದ ನಾಲಿಗೆ ಸುಟ್ಟರೆ, ಮಜ್ಜಿಗೆಯನ್ನೂ ಊದಿ ಕುಡಿಯಬೇಕಾಗುತ್ತದೆ’, ಎಂಬ ಸ್ಥಿತಿ ಬಂದಿದೆ.

೪ ಉ ೨. ಇತರರಿಂದ ಸೇವೆಯನ್ನು ಮಾಡಿಸಿಕೊಳ್ಳುವಾಗ ಅವರ ಅಡಚಣೆಗಳನ್ನು ತಿಳಿದುಕೊಂಡು ಅವುಗಳನ್ನು ಬಿಡಿಸಿದರೆ, ಅವರ ಸೇವೆಯಲ್ಲಿರುವ ಅಡಚಣೆಗಳು ದೂರವಾಗಲು ಪ್ರಾರ್ಥನೆಯನ್ನು ಮಾಡಿದರೆ, ಮತ್ತು ಅವರಿಗೆ ಪ್ರೋತ್ಸಾಹ ನೀಡಿದರೆ ಅವರೊಂದಿಗೆ ಆತ್ಮೀಯತೆ ನಿರ್ಮಾಣವಾಗುವುದು : ನಮ್ಮ ಬಳಿ ಸೇವೆಯ ಜವಾಬ್ದಾರಿಯಿದ್ದರೂ, ಇತರ ಸಾಧಕರಿಂದ ಅಧಿಕಾರದಿಂದ ಅಲ್ಲ, ಪ್ರೀತಿಯಿಂದ ಸೇವೆಯನ್ನು ಮಾಡಿಸಿಕೊಳ್ಳಬೇಕು, ಆಗಲೇ ಅವರಿಂದ ನಮಗೆ ಅಪೇಕ್ಷಿತವಿರುವ ಸೇವೆಯಾಗುತ್ತದೆ. ಪ್ರೀತಿಯಿಂದ ಸೇವೆಯನ್ನು ಮಾಡಿಸಿಕೊಳ್ಳಲು ಅವರೊಂದಿಗೆ ಮೊದಲು ಆತ್ಮೀಯತೆಯನ್ನು ಬೆಳೆಸಬೇಕು. ಸಾಧಕರಿಗೆ ‘ಸೇವೆಯನ್ನು ಮಾಡುವಾಗ ಏನಾದರೂ ಅಡಚಣೆಗಳು ಬರುತ್ತಿವೆಯೇ, ಅವರಿಗೆ ಇತರ ಏನಾದರೂ ಅಡಚಣೆಗಳಿವೆಯೇ, ಉದಾ. ವೈಯಕ್ತಿಕ ಅಡಚಣೆಗಳಿವೆಯೇ’, ಎಂದು ಕೇಳಬೇಕು. ಸಾಧಕರ ಸೇವೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಪ್ರಾರ್ಥನೆಯನ್ನೂ ಮಾಡಬಹುದು. ಆಗಾಗ ಸಾಧಕರನ್ನು ವಿಚಾರಿಸಿಕೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡಬೇಕು. ತಪ್ಪುಗಳಾಗುತ್ತಿದ್ದರೆ ಅವರಿಗೆ ತಿಳಿಸಿಹೇಳಬೇಕು. ಇದರಿಂದ ಸೇವೆ ಪರಿಪೂರ್ಣವಾಗಲು ಸಹಾಯವಾಗುತ್ತದೆ ಮತ್ತು ಆನಂದವೂ ಸಿಗುತ್ತದೆ, ಹಾಗೆಯೇ ಸಾಧಕರೊಂದಿಗೆ ಆತ್ಮೀಯತೆಯೂ ನಿರ್ಮಾಣವಾಗುತ್ತದೆ. ಸಾಧಕರ ಬಗ್ಗೆ ನಮಗೆ ಸತತವಾಗಿ ಕೃತಜ್ಞತಾಭಾವ ಇರಬೇಕು. ಹೀಗೆ ಮಾಡಿದರೆ ಈಶ್ವರನೇ ಸಹಾಯ ಮಾಡುತ್ತಾನೆ.

೪ ಉ ೩. ಸಹಸಾಧಕರ ಸೇವೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಪ್ರಯತ್ನಿಸಿದರೆ ಸಮಷ್ಟಿ ಭಾವ ಮತ್ತು ವ್ಯಾಪಕತೆ ನಿರ್ಮಾಣವಾಗುತ್ತದೆ : ಸಹಸಾಧಕರ ಸೇವೆಯಲ್ಲಿ ಬರುವ ಅಡಚಣೆಗಳು ಸಹಜವಾಗಿ ದೂರವಾಗುವುದಿಲ್ಲ. ಅವುಗಳನ್ನು ದೂರಗೊಳಿಸಲು ಪ್ರಯತ್ನಿಸಬೇಕಾಗುತ್ತದೆ. ಹಾಗೆ ಪ್ರಯತ್ನಿಸಿದರೆ, ಆ ಅಡಚಣೆಗಳೂ ದೂರವಾಗುವವು ಮತ್ತು ನಮ್ಮಲ್ಲಿ ಸಮಷ್ಟಿ ಭಾವವೂ ನಿರ್ಮಾಣವಾಗುತ್ತದೆ. ಸಮಷ್ಟಿ ಭಾವವೆಂದರೆ ವ್ಯಾಪಕತೆ! ಸರ್ವತೋಮುಖ ವಿಕಾಸವಾಗಬೇಕಾದರೆ, ಈ ರೀತಿ ಪ್ರಯತ್ನಿಸಬೇಕು. ಇದರಿಂದ ಸಾಧಕರಲ್ಲಿಯೂ ನಮ್ಮ ಬಗ್ಗೆ ಪ್ರೀತಿಯುಂಟಾಗುತ್ತದೆ.

೪ ಉ ೪. ಓರ್ವ ಸಾಧಕನಿಗೆ ಸೇವೆಯನ್ನು ಕೊಡುವಾಗ ಗುರುಸೇವೆಯ ಮೇಲೆ ಪರಿಣಾಮವಾಗಬಾರದೆಂದು ಅವನಿಗೆ ಕೆಟ್ಟ ಶಕ್ತಿಗಳ ತೊಂದರೆ ಇದ್ದರೆ ಅವನ ಅಡಚಣೆಗಳನ್ನು ತಿಳಿದುಕೊಂಡು ಅದಕ್ಕೆ ಆಧ್ಯಾತ್ಮಿಕ ಮಟ್ಟದ ಉಪಾಯಗಳನ್ನು ಹೇಳಿ ಗುಣಪಡಿಸುವುದು ಆವಶ್ಯಕವಾಗಿದೆ : ಸಾಧಕನಿಗೆ ಸೇವೆಯನ್ನು ಕೊಟ್ಟರೆ ಮತ್ತು ಒಂದು ವೇಳೆ ಕೆಟ್ಟ ಶಕ್ತಿಗಳ ತೊಂದರೆಯಿಂದ ಅವನಿಂದ ಸೇವೆ ಆಗದಿದ್ದರೆ, ಗುರುಸೇವೆಯ ಮೇಲೆ ಪರಿಣಾಮವಾಗುತ್ತದೆ. ಆದ್ದರಿಂದ ನಾವು ಅವನ ಮೇಲೆ ಗಮನವಿಡಬೇಕು. ‘ಆ ಸಾಧಕನಿಗೆ ಕೆಟ್ಟ ಶಕ್ತಿಗಳ ತೊಂದರೆ ಇದೆಯೇ, ಯಾವ ಕಾರಣದಿಂದ ಅವನಿಂದ ಸೇವೆ ಆಗುವುದಿಲ್ಲ’, ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಆಧ್ಯಾತ್ಮಿಕ ಸ್ತರದ ಉಪಾಯಗಳನ್ನು ಹೇಳಿ ಅವನ ಅಡಚಣೆಗಳನ್ನು ಬಿಡಿಸಿದರೆ, ಅವನೊಂದಿಗೆ ನಮ್ಮ ಆತ್ಮೀಯತೆ ಹೆಚ್ಚಾಗಲು ಸಹಾಯವಾಗುತ್ತದೆ ಮತ್ತು ನಮ್ಮ ಸೇವೆಯೂ ಪೂರ್ಣವಾಗುತ್ತದೆ.

೪ ಊ. ಗುರುಸೇವೆ ಚೆನ್ನಾಗಿ ಮಾಡಿದರೆ ನಮ್ಮಲ್ಲಿ ಸಾಧನೆಯ ತಳಮಳ ಹೆಚ್ಚಾಗಿ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

೪ ಎ. ಸೇವೆಯನ್ನು ಮಾಡುವಾಗ ಕಲಿಯಲು ಸಿಕ್ಕಿದ ಅಂಶಗಳನ್ನು ಪ್ರತಿದಿನ ಬರೆದು ಅವುಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ಸಮಷ್ಟಿಯ ಲಾಭಕ್ಕಾಗಿ ಅವುಗಳನ್ನು ಎಲ್ಲರವರೆಗೆ ತಲುಪಿಸುವುದು ಆವಶ್ಯಕವಾಗಿದೆ : ಸೇವೆಯನ್ನು ಮಾಡುವಾಗ ಕಲಿಯಲು ಸಿಕ್ಕಿದ ಅಂಶಗಳನ್ನು ಪ್ರತಿದಿನ ಬರೆದಿಡಬೇಕು. ಇದರಿಂದ ಆ ಅಂಶಗಳನ್ನು ತಿಳಿದುಕೊಂಡು ಅವುಗಳ ಮೇಲೆ ಚಿಂತನೆಯನ್ನು ಮಾಡಿ ಅವುಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ, ಹಾಗೆಯೇ ಸೇವೆಯ ಬಗ್ಗೆ ಇರುವ ಸಂದೇಹಗಳನ್ನು ಕೇಳಲು ಸಾಧ್ಯವಾಗುತ್ತದೆ. ಈ ಅಂಶಗಳನ್ನು ಸಮಷ್ಟಿಗೆ ಲಾಭವಾಗಲು ಎಲ್ಲರಿಗೆ ತಲುಪಿಸಬೇಕು. ಇದರಿಂದ ನಮ್ಮ ಸಮಷ್ಟಿ ಸಾಧನೆಯಾಗುತ್ತದೆ.

೫. ಸೇವೆಯಲ್ಲಿ ನಮ್ಮಿಂದ ಮತ್ತು ಇತರರಿಂದಾಗುವ ತಪ್ಪುಗಳನ್ನು ಸರಿಪಡಿಸಲು ಮಾಡಬೇಕಾದ ಪ್ರಯತ್ನ

೫ ಅ. ನಮ್ಮ ತಪ್ಪುಗಳು ತಿಳಿಯಲು ವಿಚಾರಗಳ ಸ್ತರದಲ್ಲಿ ನಿರೀಕ್ಷಣೆಯನ್ನು ಮಾಡುವುದು ಆವಶ್ಯಕ !

ನಮ್ಮಿಂದಾಗುವ ತಪ್ಪುಗಳು ನಮಗೆ ತಿಳಿಯದಿದ್ದರೆ, ವಿಚಾರಗಳ ಸ್ತರದಲ್ಲಿ ನಿರೀಕ್ಷಣೆಯನ್ನು ಮಾಡಬೇಕು. ಏಕೆಂದರೆ ವಿಚಾರಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ ಮತ್ತು ಅವುಗಳನ್ನು ಹಾಗೆಯೇ ಬಿಟ್ಟರೆ, ಅವುಗಳ ಸ್ಫೋಟವಾಗಬಹುದು. ಕೆಲವೊಮ್ಮೆ ತಪ್ಪು ಕೃತಿಗಳನ್ನು ಸ್ವೀಕರಿಸಬಹುದು; ಆದರೆ ವಿಚಾರಗಳನ್ನು ಸ್ವೀಕರಿಸಲಾಗುವುದಿಲ್ಲ. ವಿಚಾರಗಳನ್ನು ಮನಸ್ಸಿನಲ್ಲಿಡಬಾರದು. ಅವುಗಳನ್ನು ತಕ್ಷಣ ಬರೆದು ತೆಗೆಯಬೇಕು.

೫ ಆ. ತಪ್ಪುಗಳನ್ನು ಸುಧಾರಿಸಲು ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರಗಳನ್ನು ನಿರೀಕ್ಷಿಸಿ ಅವುಗಳ ಮೂಲವನ್ನು ತೆಗೆಯಬೇಕು

ಸತತವಾಗಿ ಮನಸ್ಸಿನತ್ತ ಗಮನವಿಡಬೇಕು. ಅದರಿಂದ ನಮಗೆ ನಮ್ಮ ತಪ್ಪುಗಳೂ ತಿಳಿಯುತ್ತವೆ. ಮನಸ್ಸಿನ ವಿಚಾರಪ್ರಕ್ರಿಯೆಗಳತ್ತ ಗಮನಕೊಟ್ಟು ಅವುಗಳನ್ನು ಸರಿಪಡಿಸಬೇಕು. ‘ಒಂದು ವಿಚಾರ ಬಂದರೆ, ಅದನ್ನು ಹೇಗೆ ಪರಿಹರಿಸಬಹುದು’ ಎಂಬುದನ್ನು ನೋಡಬೇಕು. ಅಯೋಗ್ಯ ವಿಚಾರವನ್ನು ನಿರೀಕ್ಷಿಸಿ ಅದರ ಮೂಲವನ್ನು ತೆಗೆಯಬೇಕಾಗುವುದು. ‘ಮನಸ್ಸಿನಲ್ಲಿ ಅಪೇಕ್ಷೆ ಮತ್ತು ಕರ್ತೃತ್ವ ಏಕೆ ಇವೆ’, ಎಂಬುದನ್ನು ನೋಡಬೇಕು. ಮನಸ್ಸಿನಲ್ಲಿ ಯೋಗ್ಯ ವಿಚಾರಗಳ ಸಂಖ್ಯೆಯು ಹೆಚ್ಚಾದಂತೆ ಅದರಂತೆ ಕೃತಿಯಾಗುತ್ತವೆ. ಆಗ ಅಂತರ್ಮುಖತೆ ಬರುತ್ತದೆ.

೫ ಇ. ತಪ್ಪುಗಳನ್ನು ತಡೆಯಲು ದೇವರ ಬಳಿ ಪುನಃ ಪುನಃ ಮೊರೆಯಿಟ್ಟು ದೇವರ ಸಹಾಯವನ್ನು ಪಡೆಯಿರಿ !

‘ಮೊದಲನೇ ವಿಚಾರ ದೇವರದ್ದಾಗಿರುತ್ತದೆ ಮತ್ತು ಆ ವಿಚಾರವನ್ನು ಬಿಟ್ಟುಕೊಟ್ಟರೆ, ಸೇವೆಯಲ್ಲಿ ತಪ್ಪುಗಳಾಗುತ್ತವೆ’ ಎಂಬಂತ ಅಡಚಣೆಗಳು ಕೆಲವು ಸಾಧಕರಿಗೆ ಬರುತ್ತವೆ. ಇಂತಹ ಸಮಯದಲ್ಲಿ ‘ದೇವರು ಕೊಟ್ಟ ವಿಚಾರ ಹೋಯಿತು’, ಎಂಬ ವಿಚಾರವನ್ನು ಮಾಡಬಾರದು. ನಾವು ಮರೆತರೂ ಈಶ್ವರನು ಪುನಃ ಸೂಚಿಸುತ್ತಾನೆ. ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಿರಬೇಕು. ದೇವರು ಕರುಣಾಮಯಿಯಾಗಿದ್ದಾನೆ. ಅವನು ನಮ್ಮನ್ನು ಸಂಬಾಳಿಸಿಕೊಳ್ಳುತ್ತಾನೆ.

೫ ಈ. ಇತರರು ತಪ್ಪುಗಳನ್ನು ಮಾಡಿದಾಗ ಅವುಗಳನ್ನು ಹೇಳಬೇಕು, ಬಿಡಬಾರದು

ಸಾಧಕರು ಯಾವುದಾದರೊಂದು ತಪ್ಪು ಮಾಡಿದರೆ ‘ಇರಲಿ ಅವರಿಗೆ ಹೇಳುವುದು ಬೇಡ’, ಎಂದು ಬಿಡಬಾರದು. ಅವರಿಗೆ ಒಳ್ಳೆಯ ರೀತಿಯಿಂದ ಹೇಳಬೇಕು, ಪ್ರತಿಕ್ರಿಯೆಯ ಸ್ವರೂಪದಲ್ಲಿ ಹೇಳಬಾರದು.

೫ ಉ. ಸಾಧಕರ ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಆಗಿದ್ದರೂ, ಅವರಿಂದಾದ ತಪ್ಪುಗಳನ್ನು ಹೇಳಬೇಕು

‘ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವಾಯಿತೆಂದರೆ ಅವರಲ್ಲಿ ಸ್ವಭಾವದೋಷಗಳೇ ಇರುವುದಿಲ್ಲ’, ಎಂದೇನಿಲ್ಲ. ಅವರಲ್ಲಿ ಸ್ವಭಾವದೋಷಗಳಿವೆ ಮತ್ತು ಅವುಗಳ ಜೊತೆಗೆ ಅವರಲ್ಲಿ ಕೆಲವೊಂದು ಗುಣಗಳಿವೆ; ಆದ್ದರಿಂದ ಶೇ. ೬೦ ರಷ್ಟು
ಆಧ್ಯಾತ್ಮಿಕ ಮಟ್ಟವಾಗಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಅವರ ತಪ್ಪುಗಳನ್ನು ಹೇಳಬೇಕು.

೬. ನಿರಂತರವಾಗಿ ಸಾಧನೆ ನಡೆಯುತ್ತಿರಲು ಮಾಡಬೇಕಾದ ಪ್ರಯತ್ನ

೬ ಅ. ವ್ಯಷ್ಟಿ ಸಾಧನೆಯ ಪ್ರಯತ್ನಗಳು ನಿಯಮಿತವಾಗಿ ಆಗಬೇಕು.

೬ ಆ. ಪ್ರತಿ ಅರ್ಧ ಗಂಟೆಗೊಮ್ಮೆ ಸಾಧನೆಯ ಪ್ರಯತ್ನ, ತನ್ನಿಂದಾದ ತಪ್ಪುಗಳು ಇತ್ಯಾದಿಗಳ ವರದಿಯನ್ನು ತೆಗೆದುಕೊಳ್ಳಬೇಕು

ಪ್ರತಿ ಅರ್ಧ ಗಂಟೆಗೊಮ್ಮೆ ತಮ್ಮ ಸಾಧನೆಯ ಪ್ತಯತ್ನಗಳ ವರದಿಯನ್ನು ತೆಗೆದುಕೊಳ್ಳಬೇಕು. ನಾವು ಸಾಧನೆಯ ಯಾವ ಪ್ರಯತ್ನಗಳನ್ನು ಮಾಡಿದೆವು, ಸಾಧನೆಯಲ್ಲಿ ಎಲ್ಲಿ ಕಡಿಮೆ ಬಿದ್ದೆವು, ತಮ್ಮ ಯಾವ ತಪ್ಪುಗಳು ಗಮನಕ್ಕೆ ಬಂದವು, ಇತ್ಯಾದಿಗಳ ಅಧ್ಯಯನ ಮಾಡಬೇಕು. ಪ್ರತಿಯೊಂದು ಕೃತಿಯನ್ನು ಮಾಡುವಾಗ ನಾವು ಸಾಧನೆ ಎಂದು ಯಾವ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂಬುದನ್ನು ಮೊದಲೇ ನಿರ್ಧರಿಸಬೇಕು ಮತ್ತು ಕೃತಿಯಾದ ನಂತರ ಅವುಗಳ ವರದಿಯನ್ನು ತೆಗೆದುಕೊಳ್ಳಬೇಕು.

೬ ಇ. ಸೇವೆಯನ್ನು ಮಾಡುವಾಗ ನಾಮಜಪ ಆಗುವುದು ಆವಶ್ಯಕ !

ನಾಮಜಪವನ್ನು ಹೆಚ್ಚಿಸಬೇಕು. ಸೇವೆಯನ್ನು ಮಾಡುವಾಗ ಆಗಾಗ ನಾಮಜಪವಾಗಬೇಕು. ದೇವರ ಅನುಸಂಧಾನದಲ್ಲಿದ್ದರೆ ಎಲ್ಲ ಕೃತಿಗಳೂ ‘ಸಾಧನೆ’ ಎಂದಾಗುತ್ತವೆ.

೬ ಈ. ಸ್ವಭಾವದೋಷಗಳಿಗೆ ಪ್ರತಿದಿನ ಮತ್ತು ನಿಯಮಿತವಾಗಿ ಸ್ವಯಂಸೂಚನೆಗಳನ್ನು ಕೊಡುವುದು ಆವಶ್ಯಕ

ನಾಮಜಪ ಆಗುತ್ತಿದ್ದರೆ ಮಾತ್ರ ಸ್ವಭಾವದೋಷಗಳು ಕಡಿಮೆ ಆಗುತ್ತವೆ; ಆದರೆ ಯಾವ ಸ್ವಭಾವದೋಷಗಳು ಹೆಚ್ಚು ತೊಂದರೆ ಕೊಡುತ್ತವೆಯೋ, ಅವುಗಳಿಗಾಗಿ ಸ್ವಯಂಸೂಚನೆ ಕೊಡಬೇಕು. ಸ್ವಭಾವದೋಷಗಳನ್ನು ಜಯಿಸಲು ಪ್ರತಿದಿನ ಮತ್ತು ನಿಯಮಿತವಾಗಿ ಸ್ವಯಂಸೂಚನೆ ಕೊಡುವುದು ಹಾಗೂ ಅದಕ್ಕನುಸಾರ ಕೃತಿ ಮಾಡುವುದು ಆವಶ್ಯಕವಾಗಿದೆ. ಸ್ವಭಾವದೋಷಗಳು ಹೆಚ್ಚಿದ್ದರೆ ಅಥವಾ ಯಾವುದಾದರೊಂದು ಅಹಂನ ಅಂಶವು ತೀವ್ರವಾಗಿದ್ದರೆ, ನಾಮಜಪವಾಗುವುದಿಲ್ಲ. ಇದರಿಂದ ಭಾವಜಾಗೃತಿ ಆಗುವುದಿಲ್ಲ.

೬ ಉ. ದೈನಂದಿನ ಕೃತಿಗಳನ್ನು ಮಾಡುವಾಗಲೂ ಭಾವವನ್ನಿಟ್ಟರೆ ೨೪ ಗಂಟೆ ಸಾಧನೆಯಾಗುವುದು

ದೈನಂದಿನ ಕೃತಿಗಳನ್ನು ಮಾಡುವಾಗ ಭಾವವನ್ನಿಟ್ಟರೆ, ೨೪ ಗಂಟೆ ಸಾಧನೆಯಾಗುತ್ತದೆ. ಇದು ಕೂಡಲೇ ಸಾಧ್ಯವಾಗುವುದಿಲ್ಲ ಆದರೆ ಪ್ರಯತ್ನವನ್ನು ಮಾಡುತ್ತಿದ್ದರೆ ಅದರ ರೂಢಿಯಾಗುತ್ತದೆ. ಪ್ರತಿ ಅರ್ಧ ಗಂಟೆಗೊಮ್ಮೆ ಇದರ ವರದಿಯನ್ನು ತೆಗೆದುಕೊಳ್ಳಬೇಕು. ವರದಿ ತೆಗೆದುಕೊಳ್ಳುತ್ತಿದ್ದರೆ ನಮಗೆ, ‘ನಾವು ಈ ಅವಧಿಯಲ್ಲಿ ಏನು ಮಾಡಿದೆವು’ ಎಂಬುದರ ಅರಿವಾಗುತ್ತದೆ. ಯಾವುದಾದರೊಂದು ಕೃತಿಯನ್ನು ಮಾಡುವಾಗ ಭಾವವನ್ನಿಡದಿದ್ದರೆ, ಶಿಕ್ಷಾ ಪದ್ಧತಿಯನ್ನು ಅವಲಂಬಿಸಬೇಕು. ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ಅದನ್ನು ಯಾರಿಗಾಗಿ ಮಾಡುತ್ತಿದ್ದೇನೆ, ಏತಕ್ಕಾಗಿ ಮಾಡುತ್ತಿದ್ದೇನೆ,’ ಎಂಬುದರ ವಿಚಾರವನ್ನು ಮಾಡಬೇಕು. ಈ ರೀತಿ ನಿರಂತರ ಪ್ರಯತ್ನಗಳನ್ನು ಮಾಡಬೇಕು. ಸದ್ಯದ ಕಾಲವು ಭೀಕರವಾಗಿದೆ ಮತ್ತು ಕೆಟ್ಟ ಶಕ್ತಿಗಳ ಶಕ್ತಿಯೂ ಹೆಚ್ಚಾಗಿದೆ. ಆದ್ದರಿಂದ ಕಠಿಣ ಪರಿಶ್ರಮಪಡುವುದು ಆವಶ್ಯಕವಾಗಿದೆ, ಹೀಗೆ ಮಾಡಿದರೆ ಮಾತ್ರ ಪ್ರಗತಿಯಾಗುವುದು.

೬ ಊ. ಪ್ರತಿಯೊಂದು ಕರ್ಮವನ್ನು ಸಾಧನೆ ಎಂದು ಮಾಡಬೇಕು

ಸಾಧನೆಯನ್ನು ಮಾಡಲು ಕಠಿಣ ಪರಿಶ್ರಮಪಡುವ ಸಿದ್ಧತೆ ಬೇಕು. ನಾವು ಕೇವಲ ಕರ್ಮಗಳನ್ನು ಮಾಡುತ್ತೇವೆ; ಆದರೆ ಆ ಕರ್ಮಗಳು ಸಾಧನೆಯೆಂದೇ ಆಗಬೇಕು. ಸಾಧನೆ ಎಂದು ಮಾಡದಿದ್ದರೆ ನಾವು ಹಿಂದೆ ಉಳಿಯುತ್ತೇವೆ.

೬ ಎ. ಪ್ರತಿದಿನ ತಳಮಳದಿಂದ ಸಾಧನೆಯಾದರೆ, ಮಾತ್ರ ಪ್ರಗತಿ ಆಗುತ್ತದೆ

ಈಗ ತೀವ್ರ ಆಪತ್ಕಾಲವಿರುವುದರಿಂದ ವರ್ಷಕ್ಕೆ ಎಲ್ಲಿಯಾರೂ ಶೇ. ೧ ರಷ್ಟು ಪ್ರಗತಿಯಾಗುತ್ತಿದೆ. ಪ್ರತಿದಿನ ತಳಮಳದಿಂದ ಸಾಧನೆಯಾದರೆ ಗುರುಕೃಪೆಯಾಗಿ ಪ್ರಗತಿಯಾಗುತ್ತದೆ.

೬ ಏ. ತನ್ನಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ನಿಯಮಿತ ಸಾಧನೆಯನ್ನು ಮಾಡುವುದು ಮಹತ್ವದ್ದಾಗಿದೆ !

ಸದ್ಯ ವಾತಾವರಣದಲ್ಲಿನ ನಕಾರಾತ್ಮಕ ಶಕ್ತಿ (ನೆಗೆಟಿವಿಟಿ) ಬಹಳಷ್ಟು ಹೆಚ್ಚಾಗಿದೆ. ಆದ್ದರಿಂದ ಅದರ ವಿರುದ್ಧ ಹೋರಾಡಿ ನಾವು ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿ (ಪಾಸಿಟಿವಿಟಿ) ಹೆಚ್ಚಿಸಬೇಕಾಗುವುದು. ಆದ್ದರಿಂದ ಸಾಧನೆಯನ್ನು ನಿಯಮಿತ ಮತ್ತು ಹೆಚ್ಚು ಗಾಂಭೀರ್ಯದಿಂದ ಮಾಡುವುದು ಮಹತ್ವದ್ದಾಗಿದೆ. ಅದೇ ರೀತಿ ತನ್ನಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಲು ಆಧ್ಯಾತ್ಮಿಕ ಸ್ತರದ ಉಪಾಯಗಳಲ್ಲಿ ಸಾತತ್ಯವಿರಬೇಕು. (ಅಧ್ಯಾತ್ಮಿಕ ಉಪಾಯಗಳನ್ನು ನಿತ್ಯವೂ ಗಾಂಭೀರ್ಯದಿಂದ ಮಾಡಬೇಕು.)

೬ ಐ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆಯಿಂದ ಸಾಧಕರ ಎಲ್ಲ ದೇಹಗಳ ಶುದ್ಧಿಯಾಗುತ್ತದೆ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಹಾಗೂ ನಾಮಜಪದಿಂದ ಸ್ಥೂಲದೇಹದ ಶುದ್ಧಿಯಾಗುತ್ತದೆ. ಭಾವಜಾಗೃತಿ, ಸತ್ಸಂಗ ಮತ್ತು ಸತ್ಸೇವೆಯಿಂದ ಮನೋದೇಹದ ಶುದ್ಧಿಯಾಗುತ್ತದೆ. ತ್ಯಾಗದಿಂದ ಕಾರಣದೇಹ ಮತ್ತು ಪ್ರೀತಿಯಿಂದ ಮಹಾಕಾರಣದೇಹದ ಶುದ್ಧಿಯಾಗುತ್ತದೆ. ಸಾಧಕರ ಎಲ್ಲ ದೇಹಗಳ ಶುದ್ಧಿಯಾಗಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅಷ್ಟಾಂಗ ಸಾಧನೆಯ ಮೂಲಕ ಪ್ರಯತ್ನಿಸಲು ಹೇಳಿದ್ದಾರೆ. ಅಷ್ಟಾಂಗ ಸಾಧನೆಯು ಸಾಧನೆಯ ಬೆನ್ನೆಲುಬಾಗಿದೆ.

೬ ಒ. ತನ್ನನ್ನು ಬದಲಾಯಿಸಲು ತಳಮಳ ಆವಶ್ಯಕವಾಗಿದೆ.

೬ ಓ. ಸಾಧನೆಯಲ್ಲಿ ಪ್ರಗತಿಯಾದರೆ ಸಾಧಕರ ಪ್ರತಿಯೊಂದು ಕೃತಿ ಪರಿಣಾಮಕಾರಿಯಾಗುವುದು

ಶೇ. ೬೦ ರ ಮಟ್ಟದ ಮಹತ್ವ ಏನೆಂದರೆ ಶೇ. ೬೦ ರಷ್ಟು ಸತ್ತ್ವ ಗುಣವಿರುವುದರಿಂದ ಅದನ್ನು ತಲುಪಿದ ನಂತರ ನಾವು ಮಾಡುವ ಸೇವೆಯು, ಉದಾ. ವೈದ್ಯಕೀಯ ಸೇವೆ, ಅಧ್ಯಾತ್ಮ ಪ್ರಸಾರ ಮುಂತಾದ ಸೇವೆಗಳು ಪರಿಣಾಮಕಾರಿ ಮತ್ತು ಹೆಚ್ಚು ಪ್ರಭಾವಿಯಾಗುತ್ತವೆ. ಇಲ್ಲದಿದ್ದರೆ ನಾವು ಇತರರಿಗೆ ಸಕಾರಾತ್ಮಕತೆಯನ್ನು (ಚೈತನ್ಯವನ್ನು) ನೀಡಲಾರೆವು.’

– (ಸದ್ಗುರು) ಡಾ. ಮುಕುಲ ಗಾಡ್ಗೀಳ

Leave a Comment