ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ನಾಮಜಪದ ಪರಿಣಾಮ

ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್) ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಮಾಡಿದ ವೈಜ್ಞಾನಿಕ ಪರೀಕ್ಷಣೆ !

ಇಂದಿನ ಕಾಲದಲ್ಲಿ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ ಇತ್ಯಾದಿ, ಹಾಗೆಯೇ ಸಾಧನೆಯನ್ನೂ ಮಾಡದಿರುವುದರಿಂದ ಹೆಚ್ಚಿನವರಿಗೆ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತದೆ. ದತ್ತನ ನಾಮಜಪ ಮಾಡುವುದರಿಂದ ಉತ್ಪನ್ನವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಕ-ಕವಚವು ತಯಾರಾಗುತ್ತದೆ. ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರಿಗೆ ಮುಂದಿನ ಗತಿ ಸಿಗುತ್ತದೆ. ಆದ್ದರಿಂದ ವ್ಯಕ್ತಿಗೆ ಅವರಿಂದಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ. ಯಾವುದೇ ವಿಷಯವನ್ನು ಕಾಲಾನುಸಾರ ಮಾಡಿದರೆ, ಅದರಿಂದ ಹೆಚ್ಚು ಲಾಭವಾಗುತ್ತದೆ.

‘ಸದ್ಯ ಕಾಲಾನುಸಾರ ಯಾವ ವಿಧದ ನಾಮಜಪಗಳಿಂದ ದೇವತೆಗಳ ತಾರಕ ಮತ್ತು ಮಾರಕ ತತ್ತ್ವವು ಹೆಚ್ಚು ಸಿಗುತ್ತದೆ’, ಎಂದು ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ದೇವತೆಗಳ ನಾಮಜಪಗಳ ಧ್ವನಿ ಮುದ್ರಣ ಮಾಡಲಾಗಿದೆ. ಇದಕ್ಕಾಗಿ ಸನಾತನದ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸಾಧಕಿ ಕು. ತೇಜಲ ಪಾತ್ರೀಕರ ಇವರು (ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ) ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಅನೇಕ ಪ್ರಯೋಗಗಳನ್ನು ಮಾಡಿದರು. ಅವುಗಳಲ್ಲಿ ಈ ನಾಮಜಪಗಳು ಸಿದ್ಧವಾಗಿವೆ (ತಯಾರಾಗಿದೆ). ಆದ್ದರಿಂದ  ಈ ನಾಮಜಪವನ್ನು ಮಾಡಿದರೆ ಅವುಗಳಿಂದ ಕಾಲಾನುಸಾರ ಆವಶ್ಯಕವಾಗಿರುವ ಆಯಾ ದೇವತೆಗಳ ತಾರಕ ಅಥವಾ ಮಾರಕ ತತ್ತ್ವವು ಪ್ರತಿಯೊಬ್ಬರಿಗೆ ಅವರವರ ಭಾವಕ್ಕನುಸಾರ ಸಿಗಲು ಸಹಾಯವಾಗುತ್ತದೆ.

ದತ್ತ ಗುರುಗಳ ಹಾಗೆಯೇ ಇತರ ದೇವತೆಗಳ ನಾಮಜಪಗಳ ಆಡಿಯೋ ಕೇಳಲು ಇಂದೇ ಡೌನ್‌ಲೋಡ್ ಮಾಡಿ – ಸನಾತನ ಚೈತನ್ಯವಾಣಿ

೧. ವೈಜ್ಞಾನಿಕ ಪರೀಕ್ಷಣೆ ಮಾಡುವ ಉದ್ದೇಶ

ದತ್ತನ ‘ಶ್ರೀ ಗುರುದೇವ ದತ್ತ’ ಈ ತಾರಕ ಮತ್ತು ಮಾರಕ ನಾಮಜಪಗಳಿಂದ ವ್ಯಕ್ತಿಯ ಮೇಲಾಗುವ ಪರಿಣಾಮವನ್ನು ವಿಜ್ಞಾನದ ಮಾಧ್ಯಮದಿಂದ ಅಧ್ಯಯನ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್ ಔರಾ ಸ್ಕ್ಯಾನರ್ (ಯೂ.ಎ.ಎಸ್.)’ ಈ ಉಪಕರಣವನ್ನು ಬಳಸಲಾಯಿತು.

೨. ಪರೀಕ್ಷಣೆಯ ಸ್ವರೂಪ

ಈ ಪರೀಕ್ಷಣೆಯಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ (ಟಿಪ್ಪಣಿ) ಓರ್ವ ಸಾಧಕಿ ಮತ್ತು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಓರ್ವ ಸಾಧಕರು ಪಾಲ್ಗೊಂಡಿದ್ದರು. ಈ ಪರೀಕ್ಷಣೆಯಲ್ಲಿ ಮುಂದಿನಂತೆ ಒಟ್ಟು ೬ ಪ್ರಯೋಗಗಳನ್ನು ಮಾಡಲಾಯಿತು.

ಅ. ತಾರಕ ನಾಮಜಪದ ೩ ಪ್ರಯೋಗಗಳು : ಪರೀಕ್ಷಣೆಯಲ್ಲಿ ಸಾಧಕರಿಗೆ ದತ್ತನ ತಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಪ್ರತಿ ಬಾರಿ ೧ ಗಂಟೆಯ ಕಾಲ ಕೇಳಿಸಲಾಯಿತು.

ಆ. ಮಾರಕ ನಾಮಜಪದ ೩ ಪ್ರಯೋಗಗಳು : ಪರೀಕ್ಷಣೆಯಲ್ಲಿ ಸಾಧಕರಿಗೆ ದತ್ತನ ಮಾರಕ ನಾಮಜಪವನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಧ್ವನಿಯಲ್ಲಿ ಪ್ರತಿ ಬಾರಿ ೧ ಗಂಟೆಯ ಕಾಲ ಕೇಳಿಸಲಾಯಿತು.

ಪ್ರತಿಯೊಂದು ಪ್ರಯೋಗದ ಮೊದಲು ಮತ್ತು ಪ್ರಯೋಗದ ನಂತರ ಇಬ್ಬರೂ ಸಾಧಕರ ‘ಯು.ಎ.ಎಸ್.’ ಉಪಕರಣದ ಮೂಲಕ ನಿರೀಕ್ಷಣೆ ಮಾಡಲಾಯಿತು. ನೋಂದಾಯಿಸಲ್ಪಟ್ಟ ನಿರೀಕ್ಷಣೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

೩. ಯು.ಎ.ಎಸ್ ನಿರೀಕ್ಷಣೆಗಳು, ಅವುಗಳ ವಿವೇಚನೆ ಮತ್ತು ನಿಷ್ಕರ್ಷ

೩ಅ. ತಾರಕ ನಾಮಜಪದ ಸಂದರ್ಭದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ನಿರೀಕ್ಷಣೆ

ದತ್ತನ ತಾರಕ ನಾಮಜಪವನ್ನು ಕೇಳುವ ಮೊದಲು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯಿತ್ತು. ನಾಮಜಪವನ್ನು ಕೇಳಿದ ನಂತರ ಅವರಲ್ಲಿರುವ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಯಿತತು ಅಥವಾ ಇಲ್ಲವಾಗುವುದು ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು

ದತ್ತನ ತಾರಕ ನಾಮಜಪವನ್ನು ಕೇಳುವುದು ಸಾಧಕರಲ್ಲಿರುವ ನಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ್‌) ಸಾಧಕರಲ್ಲಿರುವ ಸಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ್‌) ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಾದ ಹೆಚ್ಚಳ (ಶೇಖಡಾವಾರು)
‘ಇನ್ಫ್ರಾರೆಡ್’ (ನಕಾರಾತ್ಮಕ) ಊರ್ಜೆ ‘ಅಲ್ಟ್ರಾವೈಲೆಟ್’ (ನಕಾರಾತ್ಮಕ) ಊರ್ಜೆ
ಪ್ರಯೋಗದ ಮೊದಲು ಪ್ರಯೋಗದ ನಂತರ ಪ್ರಯೋಗದ ಮೊದಲು ಪ್ರಯೋಗದ ನಂತರ ಪ್ರಯೋಗದ ಮೊದಲು ಪ್ರಯೋಗದ ನಂತರ
೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ
ಸಣ್ಣ ಧ್ವನಿಯಲ್ಲಿ ನಾಮಜಪ ೭.೩೫ 0 ೬.೮೨ 0 ೩.೯೧ ೫.೯೬ ೫೨.೪೩
ಮಧ್ಯಮ ಧ್ವನಿಯಲ್ಲಿ ನಾಮಜಪ ೭.೯೧ 0 ೭.೭೨ 0 ೩.೩೪ ೫.೯೧ ೭೬.೯೫
ದೊಡ್ಡ ಧ್ವನಿಯಲ್ಲಿ ನಾಮಜಪ ೭.೧೬ 0 ೬.೭೮ 0 ೨.೮೦ ೫.೨೭ ೮೮.೨೧
೨. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕ
ಸಣ್ಣ ಧ್ವನಿಯಲ್ಲಿ ನಾಮಜಪ ೮.೪೩ 0 ೭.೫೪ 0 ೩.೭೬ ೭.೬೮ ೧೦೩.೧೭
ಮಧ್ಯಮ ಧ್ವನಿಯಲ್ಲಿ ನಾಮಜಪ ೭.೩೮ 0 ೭.೦೭ 0 ೨.೮೬ ೬.೨೨ ೧೧೭.೪೮
ದೊಡ್ಡ ಧ್ವನಿಯಲ್ಲಿ ನಾಮಜಪ ೭.೦೩ 0 ೬.೨೫ 0 ೩.೧೩ ೬.೮೧ ೧೧೭.೫೭

೩ಆ. ಮಾರಕ ನಾಮಜಪದ ಸಂದರ್ಭದಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯ ನಿರೀಕ್ಷಣೆ

ದತ್ತನ ಮಾರಕ ನಾಮಜಪವನ್ನು ಕೇಳುವ ಮೊದಲು ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಊರ್ಜೆಯಿತ್ತು. ನಾಮಜಪವನ್ನು ಕೇಳಿದ ನಂತರ ಅವರಲ್ಲಿರುವ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಯಿತತು ಅಥವಾ ಇಲ್ಲವಾಗುವುದು ಮತ್ತು ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು

ದತ್ತನ ಮಾರಕ ನಾಮಜಪವನ್ನು ಕೇಳುವುದು ಸಾಧಕರಲ್ಲಿರುವ ನಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ್‌) ಸಾಧಕರಲ್ಲಿರುವ ಸಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ್‌) ಸಕಾರಾತ್ಮಕ ಊರ್ಜೆಯ ಪ್ರಭಾವಲಯದಲ್ಲಾದ ಹೆಚ್ಚಳ (ಶೇಖಡಾವಾರು)
‘ಇನ್ಫ್ರಾರೆಡ್’ (ನಕಾರಾತ್ಮಕ) ಊರ್ಜೆ ‘ಅಲ್ಟ್ರಾವೈಲೆಟ್’ (ನಕಾರಾತ್ಮಕ) ಊರ್ಜೆ
ಪ್ರಯೋಗದ ಮೊದಲು ಪ್ರಯೋಗದ ನಂತರ ಪ್ರಯೋಗದ ಮೊದಲು ಪ್ರಯೋಗದ ನಂತರ ಪ್ರಯೋಗದ ಮೊದಲು ಪ್ರಯೋಗದ ನಂತರ
೧. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕಿ
ಸಣ್ಣ ಧ್ವನಿಯಲ್ಲಿ ನಾಮಜಪ ೮.೦೩ ೭.೧೪ ೩.೦೦ ೩.೭೭ ೨೫.೬೭
ಮಧ್ಯಮ ಧ್ವನಿಯಲ್ಲಿ ನಾಮಜಪ ೭.೩೧ ೬.೯೫ ೩.೮೪ ೫.೩೧ ೩೭.೨೧
ದೊಡ್ಡ ಧ್ವನಿಯಲ್ಲಿ ನಾಮಜಪ ೮.೦೭ ೬.೪೫ ೩.೨೧ ೫.೩೭ ೬೭.೨೯
೨. ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕ
ಸಣ್ಣ ಧ್ವನಿಯಲ್ಲಿ ನಾಮಜಪ ೮.೩೨ ೦.೯೧ ೭.೩೪ ೩.೩೭ ೪.೯೨ ೪೫.೯೯
ಮಧ್ಯಮ ಧ್ವನಿಯಲ್ಲಿ ನಾಮಜಪ ೭.೪೮ ೭.೦೭ ೩.೬೧ ೫.೮೭ ೬೨.೬೦
ದೊಡ್ಡ ಧ್ವನಿಯಲ್ಲಿ ನಾಮಜಪ ೭.೫೧ ೬.೯೧ ೨.೫೦ ೬.೨೨ ೧೪೮.೮೦

೩ಈ. ನಿಷ್ಕರ್ಷ

ಮೇಲೆ ನೀಡಿರುವ ಎರಡೂ ಕೋಷ್ಟಕಗಳಿಂದ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ

೧. ಸಣ್ಣ, ಮಧ್ಯಮ ಹಾಗೂ ದೊಡ್ಡ ಧ್ವನಿಯಲ್ಲಿ ಕೇಳಿಸಿದ ನಾಮಜಪಗಳಿಂದ ಸಾಧಕರಿಬ್ಬರಿಗೂ ಉತ್ತರೋತ್ತರ ಅಧಿಕ ಲಾಭವಾಯಿತು

೨. ಸಣ್ಣ ಮತ್ತು ಮಧ್ಯಮ ಧ್ವನಿಯಲ್ಲಿ ಕೇಳಿಸಿದ ಮಾರಕ ನಾಮಜಪಕ್ಕೆ ಹೋಲಿಸಿದಾಗ ಸಣ್ಣ ಮತ್ತು ಮಧ್ಯಮ ಧ್ವನಿಯಲ್ಲಿ ಕೇಳಿಸಿದ ತಾರಕ ನಾಮಜಪದಿಂದ ಸಾಧಕರಿಬ್ಬರಿಗೂ ಅಧಿಕ ಲಾಭವಾಯಿತು

೩. ಸಾಧಕಿಗೆ ದೊಡ್ಡ ಧ್ವನಿಯಲ್ಲಿ ತಾರಕ ನಾಮಜಪವನ್ನು ಕೇಳಿದ್ದರಿಂದ ಮತ್ತು ಸಾಧಕನಿಗೆ ದೊಡ್ಡ ಧ್ವನಿಯಲ್ಲಿ ಮಾರಕ ನಾಮಜಪ ಕೇಳಿದ್ದರಿಂದ ಅತ್ಯಧಿಕ ಲಾಭವಾಯಿತು

೪. ಪರೀಕ್ಷಣೆಯಲ್ಲಿ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೪ಅ. ದೇವತೆಯ ‘ತಾರಕ’ ಮತ್ತು ‘ಮಾರಕ’ ನಾಮಜಪಗಳ ಮಹತ್ವ

ದೇವತೆಯ ತಾರಕ ಮತ್ತು ಮಾರಕ ಹೀಗೆ ಎರಡು ರೂಪಗಳಿರುತ್ತವೆ. ಭಕ್ತನಿಗೆ ಆಶೀರ್ವಾದ ನೀಡುವ ದೇವತೆಯ ರೂಪವೆಂದರೆ ತಾರಕ ರೂಪ, ಉದಾ. ಆಶೀರ್ವಾದ ನೀಡುವ ಮುದ್ರೆಯಲ್ಲಿ ಶ್ರೀಕೃಷ್ಣ. ದೇವತೆಯ ಅಸುರರ ಸಂಹಾರ ಮಾಡುವ ರೂಪವೆಂದರೆ ಮಾರಕ ರೂಪ, ಉದಾ. ಶಿಶುಪಾಲನ ಮೇಲೆ ಸುದರ್ಶನ ಚಕ್ರವನ್ನು ಬಿಡುವ ಶ್ರೀಕೃಷ್ಣ. ದೇವತೆಯ ತಾರಕ ಅಥವಾ ಮಾರಕ ರೂಪಕ್ಕೆ ಸಂಬಂಧಿಸಿದ ನಾಮಜಪವೆಂದರೆ ತಾರಕ ಅಥವಾ ಮಾರಕ ನಾಮಜಪ. ದೇವತೆಗಳ ಬಗ್ಗೆ ಸಾತ್ತ್ವಿಕ ಭಾವವು ಮೂಡಲು, ಹಾಗೆಯೇ ಚೈತನ್ಯ, ಆನಂದ ಮತ್ತು ಶಾಂತಿ ಇವುಗಳ ಅನುಭೂತಿಯು ಆದಷ್ಟು ಬೇಗನೆ ಬರಬೇಕೆಂದು ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ದೇವತೆಗಳ ತಾರಕ ರೂಪದ ನಾಮಜಪವು ಆವಶ್ಯಕವಾಗಿರುತ್ತದೆ. ದೇವತೆಗಳಿಂದ ಶಕ್ತಿ ಮತ್ತು ಚೈತನ್ಯವು ಗ್ರಹಣ ಮಾಡಲು ಮತ್ತು ಕೆಟ್ಟ ಶಕ್ತಿಗಳ ನಾಶ ಮಾಡಲು ದೇವತೆಯ ಮಾರಕ ರೂಪದ ನಾಮಜಪ ಆವಶ್ಯಕವಾಗಿರುತ್ತದೆ.

೪ಆ. ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ಪ್ರಕ್ಷೇಪಿತವಾದ ಚೈತನ್ಯದಿಂದ ಪರೀಕ್ಷಣೆಯಲ್ಲಿ ಸಾಧಕರಿಗೆ ಆಧ್ಯಾತ್ಮಿಕ ಲಾಭವಾಗುವುದು

ಪರೀಕ್ಷಣೆಯಲ್ಲಿದ್ದ ಸಾಧಕರಿಬ್ಬರಿಗೂ ಕೆಟ್ಟ ಶಕ್ತಿಗಳ ಮತ್ತು ಪೂರ್ವಜರ ತೊಂದರೆಯೂ ಇದೆ. ಪ್ರಯೋಗಗಳ ಆರಂಭದಲ್ಲಿ ಸಾಧಕರಿಬ್ಬರಲ್ಲಿಯೂ ನಕಾರಾತ್ಮಕ ಊರ್ಜೆ ಮತ್ತು ಸಕಾರಾತ್ಮಕ ಊರ್ಜೆಯೂ ಇತ್ತು. ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ಪ್ರಕ್ಷೇಪಿತವಾದ ಚೈತನ್ಯವನ್ನು ಸಾಧಕರು ಅವರ ಕ್ಷಮತೆಗನುಸಾರ ಗ್ರಹಿಸಿರುವುದರಿಂದ ಅವರಲ್ಲಿ ನಕಾರಾತ್ಮಕ ಊರ್ಜೆಯು ಬಹಳ ಕಡಿಮೆಯಾಯಿತು ಮತ್ತು ಅವರ ಸಕಾರಾತ್ಮಕ ಊರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು.

೪ಇ. ಇಬ್ಬರೂ ಸಾಧಕರ ಮೇಲೆ ದತ್ತನ ಮಾರಕ ನಾಮಜಪಕ್ಕೆ ಹೋಲಿಸಿದರೆ ತಾರಕ ನಾಮಜಪದ ಹೆಚ್ಚು ಸಕಾರಾತ್ಮಕ ಪರಿಣಾಮವಾಗುವುದು

ವ್ಯಕ್ತಿಯು ತನ್ನ ಪ್ರಕೃತಿಗನುಸಾರ ದೇವತೆಯ ತಾರಕ ಅಥವಾ ಮಾರಕ ನಾಮವನ್ನು ಜಪಿಸಿದರೆ ಆ ದೇವತೆಯ ತತ್ತ್ವದ ಲಾಭವಾಗುತ್ತದೆ. ‘ತಾರಕ’ ಅಥವಾ ‘ಮಾರಕ’ ಸ್ವಭಾವವಿರುವ ಸಾಧಕರಲ್ಲಿ ಅವರವರ ಪ್ರಕೃತಿಗೆ ಅನುಸರಿಸಿ ಸ್ವಭಾವ ಕಂಡುಬರುತ್ತವೆ. ಉದಾ. ತಾರಕ ಪ್ರಕೃತಿಯ ಸಾಧಕನಲ್ಲಿ ಭಾವಪೂರ್ಣವಾಗಿ ಮತ್ತು ಮೆಲು ಧ್ವನಿಯಲ್ಲಿ ನಾಮಜಪಿಸುವುದು, ನೀಡಿರುವ ಸೇವೆಯನ್ನು ಏಕಾಗ್ರತೆಯಿಂದ ಭಾವಪೂರ್ಣವಾಗಿ ಮಾಡುತ್ತಲಿರುವುದು ಇಂತಹ ಸ್ವಭಾವ ಕಂಡುಬರುತ್ತದೆ. ಅದೇ ಮಾರಕ ಸ್ವಭಾವದ ಸಾಧಕನಲ್ಲಿ ಕ್ಷಾತ್ರವೃತ್ತಿಯಿಂದ (ಆವೇಶದಿಂದ) ನಾಮಜಪಿಸುವುದು, ಸಮಷ್ಟಿಯಲ್ಲಿ (ಸಮಾಜದಲ್ಲಿ) ಕ್ಷಾತ್ರವೃತ್ತಿಯಿಂದ ಮಾತನಾಡುವುದು ಅಥವಾ ಮಾರ್ಗದರ್ಶನ ಮಾಡುವಂತಹ ಸ್ವಭಾವ ಕಂಡುಬರುತ್ತದೆ.

ದೇವತೆಯ ಮಾರಕ ನಾಮಜಪದಿಂದ ದೇವತೆಯ ಶಕ್ತಿಯ ಸ್ಪಂದನಗಳು ಸಿಗುತ್ತವೆ. ವ್ಯಕ್ತಿಗಿರುವ ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ಅವರು ಮಾರಕ ನಾಮಜಪ ಮಾಡುವುದು ಲಾಭದಾಯಕವಾಗಿದೆ. ದೊಡ್ಡ ಧ್ವನಿಯಲ್ಲಿ ನಾಮ ಜಪಿಸುವುದರಿಂದ ದೇವತೆಯ ಶಕ್ತಿಯ ಸ್ಪಂದನಗಳು ವ್ಯಕ್ತಿಗೆ ದೊರೆತು ಅವರಲ್ಲಿರುವ ನಕಾರಾತ್ಮಕ ಊರ್ಜೆಯು ಕಡಿಮೆ ಅವಧಿಯಲ್ಲಿ ಕಡಿಮೆಯಾಗುತ್ತದೆ ಅಥವಾ ಸಂಪೂರ್ಣವಾಗಿ ನಷ್ಟವಾಗುತ್ತವೆ. ಅಲ್ಲದೇ ಸಕಾರಾತ್ಮಕ ಊರ್ಜೆಯಲ್ಲಿಯೂ ವೃದ್ಧಿಯಾಗುತ್ತದೆ. ಇದನ್ನೇ ನಾವು ಪ್ರಯೋಗದಲ್ಲಿ ಸಾಧಕರಿಗೆ ಕೇಳಿಸಿದ ದತ್ತನ ನಾಮಜಪದಿಂದ ತಿಳಿದುಕೊಂಡೆವು.

೪ಈ. ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕಿಗೆ ದೊಡ್ಡ ಧ್ವನಿಯಲ್ಲಿ ತಾರಕ ನಾಮಜಪವನ್ನು ಕೇಳಿದ್ದರಿಂದ ಮತ್ತು ಸಾಧಕನಿಗೆ ದೊಡ್ಡ ಧ್ವನಿಯಲ್ಲಿ ಮಾರಕ ನಾಮಜಪವನ್ನು ಕೇಳಿದ್ದರಿಂದ ಅತ್ಯಧಿಕ ಲಾಭವಾಗುವುದು

ಸಣ್ಣ ಧ್ವನಿಯ ನಾಮಜಪವು ಸತ್ತ್ವಪ್ರಧಾನ, ಮಧ್ಯಮ ಧ್ವನಿಯ ನಾಮಜಪವು ಸತ್ತ್ವ-ರಜಪ್ರಧಾನ ಮತ್ತು ದೊಡ್ಡ ಧ್ವನಿಯಲ್ಲಿ ನಾಮಜಪವು ರಜ-ಸತ್ತ್ವಪ್ರಧಾನವಾಗಿದೆ. ಪರೀಕ್ಷಣೆಯಲ್ಲಿ ಭಾಗವಹಿಸಿದ ಸಾಧಕರ ಪ್ರಕೃತಿ ಮತ್ತು ಅವರ ಆವಶ್ಯಕತೆ ಇವುಗಳಿಗನುಸಾರ ಅವರಿಗೆ ಆಯಾ ಧ್ವನಿಯಲ್ಲಿ ದತ್ತನ ತಾರಕ ಅಥವಾ ಮಾರಕ ನಾಮಜಪದಿಂದ ಅತ್ಯಧಿಕ ಲಾಭವಾಯಿತು.

೪ಉ. ನಾಮಜಪಗಳ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ

ಜಗತ್ತಿನಾದ್ಯಂತದ ಸಾಧಕರ ಆಧ್ಯಾತ್ಮಿಕ ತೊಂದರೆಗಳು ಬೇಗನೆ ದೂರವಾಗಬೇಕು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳಿಂದ ಹೆಚ್ಚೆಚ್ಚು ಲಾಭವಾಗಬೇಕೆಂದು, ಪರಾತ್ಪರ ಗುರು ಆಠವಲೆಯವರು ಕಾಲಾನುಸಾರ ನಾಮಜಪಗಳ ನಿರ್ಮಿತಿಯನ್ನು ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರ ಪರೋಕ್ಷ ಸಂಕಲ್ಪವು ಕಾರ್ಯನಿರತವಾಗಿರುವುದರಿಂದ ಸಾಧಕರು ಈ ನಾಮಜಪಗಳಿಗನುಸಾರ ನಾಮಜಪವನ್ನು ಮಾಡಿದರೆ ಅವರ ತೊಂದರೆಗಳು ದೂರವಾಗಲು, ಹಾಗೆಯೇ ಅವರಿಗೆ ದೇವತೆಗಳ ತತ್ತ್ವಗಳ ಲಾಭವಾಗಲು ನಿಶ್ಚಿತವಾಗಿಯೂ ಸಹಾಯವಾಗುವುದು.

– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೬.೯.೨೦೨೦)

ದತ್ತ ಗುರುಗಳ ಹಾಗೆಯೇ ಇತರ ದೇವತೆಗಳ ನಾಮಜಪಗಳ ಆಡಿಯೋ ಕೇಳಲು ಇಂದೇ ಡೌನ್‌ಲೋಡ್ ಮಾಡಿ – ಸನಾತನ ಚೈತನ್ಯವಾಣಿ

ವಾಚಕರಿಗೆ ಸೂಚನೆ : ಸ್ಥಳದ ಅಭಾವದಿಂದ ಈ ಲೇಖನದಲ್ಲಿನ ಯು.ಎ.ಎಸ್ ಉಪಕರಣದ ಪರಿಚಯ, ಉಪಕರಣದ ಮೂಲಕ ಮಾಡುವ ಪರೀಕ್ಷಣೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ, ಘಟಕದ ಪ್ರಭಾವಲಯವನ್ನು ಅಳೆಯುವುದು, ಪರೀಕ್ಷಣೆಯ ಪದ್ಧತಿ ಮತ್ತು ಪರೀಕ್ಷಣೆಯಲ್ಲಿ ಸಮಾನತೆಯು ಬರಲು ವಹಿಸಿದ ಜಾಗರೂಕತೆ ಇತ್ಯಾದಿ ಅಂಶಗಳನ್ನು ಈ ಲಿಂಕ್‌ನಲ್ಲಿ ಇಡಲಾಗಿದೆ.

ಟಿಪ್ಪಣಿ : ಆಧ್ಯಾತ್ಮಿಕ ತೊಂದರೆ – ಆಧ್ಯಾತ್ಮಿಕ ತೊಂದರೆ ಇರುವುದೆಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ.೫೦ ಅಥವಾ ಅದಕ್ಕಿಂತ ಅಧಿಕ ಪ್ರಮಾಣದಲ್ಲಿರುವುದೆಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ೪೯ ಇರುವುದೆಂದರೆ ಮಧ್ಯಮ ತೊಂದರೆ ಮತ್ತು ಶೇ. ೩೦ ಕ್ಕಿಂತ ಕಡಿಮೆ ಇರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಕಾರಣಗಳಿಂದ ಆಗುತ್ತದೆ.

Leave a Comment