ಗ್ಯಾಸ್, ವಿದ್ಯುತ್ ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಆಹಾರದಲ್ಲಿರುವ ವ್ಯತ್ಯಾಸಗಳ ವೈಜ್ಞಾನಿಕ ಪರೀಕ್ಷಣೆ

ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಹಲವು ವರ್ಷಗಳ ಹಿಂದೆ ಅಡುಗೆ ತಯರಿಸುವ ಮೊದಲು ನೆಲವನ್ನು ಸೆಗಣಿಯಿಂದ ಸಾರಿಸಿ, ಒಲೆಯ ಪೂಜೆ ಮಾಡಿ ಮತ್ತು ಅಗ್ನಿಗೆ ಅಕ್ಕಿಯ ಆಹುತಿಯನ್ನು ನೀಡಿದ ನಂತರವೇ ಆಹಾರವನ್ನು ಬೇಯಿಸಲು ಪ್ರಾರಂಭಿಸುತ್ತಿದ್ದರು. ಇದರಿಂದ ಆಹಾರದ ಕಡೆಗೆ ದೇವತೆಯ ಸ್ಪಂದನಗಳು ಆಕರ್ಷಿತವಾಗುತ್ತಿತ್ತು. ಇಂತಹ ಆಹಾರವನ್ನು ಸೇವಿಸುವ ಜೀವಗಳಿಗೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತಿತ್ತು. ಇಂದು ಹಳ್ಳಿಯ ಕೆಲವು ಮನೆಗಳು ಬಿಟ್ಟು ಉಳಿದೆಲ್ಲೆಡೆ ಒಲೆಯಲ್ಲಿ ಅಡುಗೆ ಮಾಡುವುದನ್ನು ಮರೆತ್ತಿದ್ದಾರೆ. ಈಗ ಕಟ್ಟಿಗೆಯ ಜಾಗದಲ್ಲಿ ಸೀಮೆಎಣ್ಣೆ, ಗ್ಯಾಸ್ ಅಥವಾ ವಿದ್ಯುತ್ (ಉದಾ. ಇಂಡಕ್ಷನ್) ಬಂದಿದೆ. ವಿದ್ಯುತ್‌ನ ಒಲೆಯಲ್ಲಿ (ಇಂಡಕ್ಷನ್ ಸ್ಟವ್‌ನಲ್ಲಿ) ಬೇಯಿಸಿದ ಅನ್ನ, ಗ್ಯಾಸ್‌ನಲ್ಲಿ ಬೇಯಿಸಿದ ಅನ್ನ ಮತ್ತು ಮಣ್ಣಿನ ಒಲೆಯಲ್ಲಿ ಬೇಯಿಸಿದ ಅನ್ನ ಇವುಗಳಿಂದ ಪ್ರಕ್ಷೇಪಿಸುವ ಸ್ಪಂದನಗಳ ಅಧ್ಯಯನ ಮಾಡಲು ೪.೯.೨೦೨೦ ರಂದು ಗೋವಾದ ಸನಾತನ ರಾಮನಾಥಿ ಆಶ್ರಮದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ‘ಯೂನಿವರ್ಸಲ್ ಆರಾ ಸ್ಕ್ಯಾನರ್ (ಯು.ಎ.ಎಸ್) ಉಪಕರಣದಿಂದ ಪರೀಕ್ಷಣೆ ನಡೆಸಲಾಯಿತು. ಪರೀಕ್ಷಣೆಯ ನಿರೀಕ್ಷಣೆಯ ವಿವೇಚನೆ, ನಿಷ್ಕರ್ಷ ಮತ್ತು ಅಧ್ಯಾತ್ಮ ಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.

೧. ಪರೀಕ್ಷಣೆಯ ನಿರೀಕ್ಷಣೆಯ ವಿಶ್ಲೇಷಣೆ

೧ ಅ. ನಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿ ನಿರೀಕ್ಷಣೆಯ ವಿಶ್ಲೇಷಣೆ : ವಿದ್ಯುತ್ತಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಅತ್ಯಧಿಕ ನಕಾರಾತ್ಮಕ ಶಕ್ತಿ ಕಂಡು ಬಂದಿತು. ಅದಕ್ಕಿಂತ ಸ್ವಲ್ಪ ಕಡಿಮೆ ನಕಾರಾತ್ಮಕ ಶಕ್ತಿಯು ಗ್ಯಾಸಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಕಂಡು ಬಂದಿತು. ಆದರೆ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸ್ವಲ್ಪವೂ ನಕಾರಾತ್ಮಕ ಶಕ್ತಿ ಕಂಡು ಬರಲಿಲ್ಲ.

೧ ಆ. ಸಕಾರಾತ್ಮಕ ಶಕ್ತಿಯ ಸಂದರ್ಭದಲ್ಲಿ ನಿರೀಕ್ಷಣೆಯ ವಿಶ್ಲೇಷಣೆ : ವಿದ್ಯುತ್ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸಕಾರಾತ್ಮಕ ಊರ್ಜೆ ಸ್ವಲ್ಪವೂ ಕಂಡು ಬರಲಿಲ್ಲ. ಆದರೆ ಗ್ಯಾಸಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬಂದಿತು ಮತ್ತು ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಬಹಳ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿ ಊರ್ಜೆ ಕಂಡು ಬಂದಿತು.

ಮೇಲಿನ ವಿಶ್ಲೇಷಣೆಯು ಮುಂದೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುವುದು.

ಪರೀಕ್ಷಿಸಿದ ಅನ್ನ ಅನ್ನದಲ್ಲಿ ನಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ್) ಅನ್ನದಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯ (ಮೀಟರ್)
ಇನ್‌ಫ್ರಾರೆಡ್ ಊರ್ಜೆ ಅಲ್ಟ್ರಾ ವೈಲೆಟ್ ಊರ್ಜೆ
ವಿದ್ಯುತ್ ಒಲೆಯ ಮೇಲೆ ಬೇಯಿಸಿದ ಅನ್ನ 5.32 3.97 – (ಟಿಪ್ಪಣಿ ೧)
ಗ್ಯಾಸ್ ಒಲೆಯ ಮೇಲೆ ಬೇಯಿಸಿದ ಅನ್ನ 2.52 1.42 0.56
ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನ – (ಟಿಪ್ಪಣಿ ೨) – (ಟಿಪ್ಪಣಿ ೨) 4.74

ಟಿಪ್ಪಣಿ ೧ – ವಿದ್ಯುತ್ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ.

ಟಿಪ್ಪಣಿ ೨ – ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ‘ಇನ್ಫ್ರಾರೆಡ್ ಮತ್ತು ‘ ಅಲ್ಟ್ರಾವೈಲೆಟ್ ನಕಾರಾತ್ಮಕ ಶಕ್ತಿ ಕಂಡು ಬರಲಿಲ್ಲ.

೨. ನಿಷ್ಕರ್ಷ

ಗ್ಯಾಸ್ ಮತ್ತು ವಿದ್ಯುತ್ ಒಲೆಯ ಮೇಲೆ ಅಡುಗೆ ಮಾಡುವ ಪದ್ಧತಿ ಅಸಾತ್ತ್ವಿಕವಾಗಿರುವುದರಿಂದ ಬೇಯಿಸಿದ ಆಹಾರದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಮಣ್ಣಿನ ಒಲೆಯ ಮೇಲೆ ಅಡುಗೆ ಮಾಡುವ ಪದ್ಧತಿ ಸಾತ್ತ್ವಿಕವಾಗಿರುವುದರಿಂದ ಬೇಯಿಸಿದ ಆಹಾರದ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ ಎನ್ನುವುದು ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.

೩.ಪರೀಕ್ಷಣೆಯ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರದ ವಿಶ್ಲೇಷಣೆ

೩ ಅ. ಗ್ಯಾಸ್ ಮತ್ತು ವಿದ್ಯುತ್‌ನ ಉಪಯೋಗ ಮಾಡಿ ಅಡುಗೆ ತಯಾರಿಸುವ ಪದ್ಧತಿ ಅಸಾತ್ತ್ವಿಕವಾಗಿರುವುದು : ಸದ್ಯದ ವೈಜ್ಞಾನಿಕ ಯುಗದಲ್ಲಿ ಪಾಶ್ಚಾತ್ಯ ಜನರ ಅಂಧಾನುಕರಣೆಯಿಂದ ಭಾರತೀಯರ ಆಚಾರ-ವಿಚಾರಗಳು ವಿಕೃತಗೊಂಡಿದೆ. ಮಣ್ಣಿನ ಒಲೆಯ ಮೇಲೆ ಅಡುಗೆ ತಯಾರಿಸುವುದು ಕಾಲಬಾಹಿರವಾಗಿದೆ. ಕಟ್ಟಿಗೆಯ ಸ್ಥಾನವನ್ನು ಸೀಮೆಎಣ್ಣೆ, ಗ್ಯಾಸ ಅಥವಾ ವಿದ್ಯುತ್ ಇತ್ಯಾದಿ ತಮೋಗುಣಿ ಇಂಧನಗಳು ಆಕ್ರಮಿಸಿಕೊಂಡಿವೆ. ಈ ಆಧುನಿಕ ಇಂಧನದ ಸಹಾಯದಿಂದ ಆಗುವ ಪ್ರಕ್ರಿಯೆಯಿಂದ ವಾತಾವರಣವು ತಮೋಗುಣಿಯಾಗಿ ಈ ವಾಯುಮಂಡಲ ದೆಡೆಗೆ ಕೆಟ್ಟ ಶಕ್ತಿಗಳು ಆಕರ್ಷಿಸಲ್ಪಡುತ್ತವೆ ಇದರಿಂದ ಆಹಾರವು ಕಲುಷಿತಗೊಂಡು ಅದನ್ನು ಸೇವಿಸುವವರ ದೇಹದ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳಾಗುವ ಪ್ರಮಾಣ ಹೆಚ್ಚಾಗುತ್ತದೆ. ಇದರ ಅನುಭವವೇ ಗ್ಯಾಸ್ ಮತ್ತು ವಿದ್ಯುತ್‌ನ (ಇಂಡಕ್ಷನ್) ಒಲೆಯ ಮೇಲೆ ಬೇಯಿಸಿದ ಅನ್ನದ ಪರೀಕ್ಷಣೆ ನಡೆಸಿದ ಸಂದರ್ಭದಲ್ಲಿ ಕಂಡುಬಂತು. ಗ್ಯಾಸ್ ಮತ್ತು ವಿದ್ಯುತ್‌ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸಕಾರಾತ್ಮಕ ಸ್ಪಂದನಗಳ ಬದಲು ಬಹಳ ನಕಾರಾತ್ಮಕ ಸ್ಪಂದನಗಳು ಕಂಡು ಬಂದವು. ಇದರಿಂದ ಇವೆರಡೂ ಪದ್ಧತಿ ಅಸಾತ್ತ್ವಿಕವಾಗಿದೆಯೆಂದು ಸಿದ್ಧವಾಗುತ್ತದೆ. ಅಸಾತ್ತ್ವಿಕ ಪದ್ಧತಿಯಿಂದ ತಯಾರಿಸಿದ ಅಡುಗೆ ರುಚಿಕರವೆನಿಸುವುದಿಲ್ಲ.

೩ ಆ. ಮಣ್ಣಿನ ಒಲೆಯ ಮೇಲೆ ಅಡುಗೆ ತಯಾರಿಸುವ ಪದ್ಧತಿ ಸಾತ್ತ್ವಿಕವಾಗಿರುವುದು : ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಿಷಯವನ್ನು ಆಳವಾಗಿ ವಿಚಾರ ಮಾಡಿ ಮಾನವನ ಕಲ್ಯಾಣಕ್ಕಾಗಿ ಆಚಾರ ಧರ್ಮವನ್ನು ತಿಳಿಸಲಾಗಿದೆ. ಇದರಲ್ಲಿಯೇ ಒಂದು ಮಹತ್ವದ ಆಚಾರವೆಂದರೆ ಅಡುಗೆಯ ಆಚಾರ ! ನಮ್ಮಲ್ಲಿ ಕೆಲವು ಜನರು ಕೆಲವು ವರ್ಷಗಳ ಹಿಂದೆ ಹಳ್ಳಿಯಲ್ಲಿ ತಮ್ಮ ಅಜ್ಜಿಯು ಮಣ್ಣಿನ ಒಲೆಯ ಮೇಲೆ ತಯಾರಿಸುತ್ತಿದ್ದ ಅಡುಗೆಯ ರುಚಿಯನ್ನು ಖಂಡಿತವಾಗಿಯೂ ಸವಿದಿರಬಹುದು. ಅಜ್ಜಿಯು ತಯಾರಿಸಿದ ಅಡುಗೆಯು ಅತ್ಯಂತ ರುಚಿಕರ ಮತ್ತು ಮನಸ್ಸು ಪ್ರಸನ್ನಗೊಳಿಸುವಂತಹದ್ದಾಗಿರುತ್ತಿತ್ತು. ಇದರ ಕಾರಣವೇನೆಂದರೆ, ಆ ಕಾಲದಲ್ಲಿ ಜನರ ಆಚಾರ ಮತ್ತು ವಿಚಾರಗಳು ಸಾತ್ತ್ವಿಕವಾಗಿದ್ದವು. ಧರ್ಮಶಾಸ್ತ್ರವು ಹಾಕಿಕೊಟ್ಟ ಆಚಾರಗಳನ್ನು ಯೋಗ್ಯರೀತಿಯಲ್ಲಿ ಅವರು ಪಾಲಿಸುತ್ತಿದ್ದರು.

ಆಹಾರದಲ್ಲಿರುವ ಘಟಕಗಳು ಯಾವ ರೀತಿ ಸಾತ್ತ್ವಿಕವಾಗಿರುತ್ತದ್ದವೋ, ಅದೇ ರೀತಿ ಅವುಗಳಿಂದ ಅಡುಗೆ ತಯಾರಿಸುವ ಪದ್ಧತಿಯೂ ಸಾತ್ತ್ವಿಕವಾಗಿತ್ತು. ಒಲೆಯ ಮೇಲೆ ಅಡುಗೆ ಮಾಡಲು ಇಂಧನವೆಂದು ಕಟ್ಟಿಗೆಯನ್ನು ಉಪಯೋಗಿಸಲಾಗುತ್ತಿತ್ತು. ಕಟ್ಟಿಗೆಯಲ್ಲಿ ತೇಜತತ್ತ್ವವಿರುತ್ತದೆ. ಕಟ್ಟಿಗೆಯಲ್ಲಿರುವ ಅಗ್ನಿಯನ್ನು ‘’ಪ್ರಜ್ವಲಿತ ಅಗ್ನಿ’ ಎನ್ನುತ್ತಾರೆ. ಈ ಅಗ್ನಿ ನೈಸರ್ಗಿಕವಾಗಿರುವುದರಿಂದ ಅದರಿಂದ ಪ್ರಕ್ಷೇಪಿಸಲ್ಪಡುವ ಸೂಕ್ಷ್ಮ ತೇಜದಾಯಕ ಲಹರಿಗಳು ಸೂಕ್ಷ್ಮ ಸ್ತರದಲ್ಲಿರುವ ರಜ-ತಮಾತ್ಮಕ ಕಣಗಳನ್ನು ವಿಘಟಿತಗೊಳಿಸಬಲ್ಲವು. ಒಲೆಯ ಮೇಲಿನ ಅಡುಗೆಯನ್ನು ತಯಾರಿಸುವಾಗ ಆಹಾರದ ಮೇಲೆ ಅಗ್ನಿಯ ಸಂಸ್ಕಾರವಾಗಿ ಸಾತ್ತ್ವಿಕ ಆಹಾರ ತಯಾರಾಗುತ್ತದೆ. ಇದರ ಅನುಭವವೇ ಪರೀಕ್ಷಣೆಯಲ್ಲಿ ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದ ಸಂದರ್ಭದಲ್ಲಿ ಕಂಡುಬಂತು. ಮಣ್ಣಿನ ಒಲೆಯ ಮೇಲೆ ಬೇಯಿಸಿದ ಅನ್ನದಲ್ಲಿ ಸ್ವಲ್ಪವೂ ನಕಾರಾತ್ಮಕ ಸ್ಪಂದನಗಳು ಇರಲಿಲ್ಲ ಹಾಗೂ ಬಹಳ ಸಕಾರಾತ್ಮಕ ಸ್ಪಂದನಗಳು ಕಂಡು ಬಂದವು. ಇದರಿಂದ ಮಣ್ಣಿನ ಒಲೆಯ ಮೇಲೆ ಅಡುಗೆ ತಯಾರಿಸುವ ಪದ್ಧತಿಯು ಸಾತ್ತ್ವಿಕವಾಗಿದೆಯೆಂದು ಸಿದ್ಧವಾಗುತ್ತದೆ. ಸಾತ್ತ್ವಿಕ ಪದ್ಧತಿಯಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಬಹಳ ಲಾಭದಾಯಕವಾಗಿದೆ.

– ಶ್ರೀ. ಅಪೂರ್ವ ಢಗೆ (ಹೊಟೆಲ್ ಮ್ಯಾನೇಜಮೆಂಟ ಪದವೀಧರರು), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೬.೯.೨೦೨೦)

Leave a Comment