‘ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣದ ಮೂಲಕ ಘಟಕದ ಪ್ರಭಾವಳಿಯನ್ನು ಅಳೆಯುವುದರ ಬಗ್ಗೆ ಮಾಹಿತಿ !

೧. ಪರೀಕ್ಷಣೆಯಲ್ಲಿನ ಘಟಕಗಳ ಆಧ್ಯಾತ್ಮಿಕ ಸ್ತರದಲ್ಲಿನ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಉಪಕರಣ ಅಥವಾ ತಂತ್ರಜ್ಞಾನಗಳ ಮೂಲಕ ಅಧ್ಯಯನ ಮಾಡುವ ಉದ್ದೇಶ

ಯಾವುದಾದರೊಂದು ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಇವುಗಳಲ್ಲಿ ಮತ್ತು ವ್ಯಕ್ತಿಯಲ್ಲಿ) ಎಷ್ಟು ಶೇಕಡಾ ಸಕಾರಾತ್ಮಕ ಸ್ಪಂದನಗಳಿವೆ, ಆ ಘಟಕವು ಸಾತ್ತ್ವಿಕವಾಗಿದೆಯೋ ಅಥವಾ ಇಲ್ಲವೋ, ಹಾಗೆಯೇ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು ಆವಶ್ಯಕವಾಗಿದೆ. ಉಚ್ಚ ಮಟ್ಟದ ಸಂತರು ಸೂಕ್ಷ್ಮದಲ್ಲಿನ ವಿಷಯಗಳನ್ನು ಅರಿಯಬಲ್ಲರು. ಆದ್ದರಿಂದ ಅವರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು ಕರಾರುವಾಕ್ಕಾಗಿ ಹೇಳಬಲ್ಲರು. ಭಕ್ತರು ಮತ್ತು ಸಾಧಕರು ಸಂತರು ಹೇಳಿರುವುದನ್ನು ಪ್ರಮಾಣ’ವೆಂದು ಒಪ್ಪಿಕೊಂಡು ಅದರ ಮೇಲೆ ಶ್ರದ್ಧೆಯನ್ನಿಡುತ್ತಾರೆ; ಆದರೆ ಬುದ್ಧಿಜೀವಿಗಳಿಗೆ ಮಾತ್ರ ಶಬ್ದ ಪ್ರಮಾಣ’ವಲ್ಲ, ಪ್ರತ್ಯಕ್ಷ ಪ್ರಮಾಣ’ ಬೇಕಾಗುತ್ತದೆ. ಅವರಿಗೆ ಪ್ರತಿಯೊಂದು ವಿಷಯವನ್ನು ವೈಜ್ಞಾನಿಕ ಉಪಕರಣ ಅಥವಾ ತಂತ್ರಜ್ಞಾನಗಳ ಮೂಲಕ ಸಿದ್ಧಪಡಿಸಿ ತೋರಿಸಿದರೆ ಮಾತ್ರ ನಿಜವೆನಿಸುತ್ತದೆ.

೨. ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣದ ಪರಿಚಯ

ಈ ಉಪಕರಣಕ್ಕೆ ಆರಾ ಸ್ಕ್ಯಾನರ್ ಎಂದೂ ಹೇಳುತ್ತಾರೆ. ಈ ಉಪಕರಣದ ಮೂಲಕ ಘಟಕಗಳ (ವಸ್ತು, ವಾಸ್ತು, ಪ್ರಾಣಿ ಮತ್ತು ವ್ಯಕ್ತಿಗಳ) ಶಕ್ತಿಯನ್ನು (ಊರ್ಜೆಯನ್ನು) ಮತ್ತು ಅದರ ಪ್ರಭಾವಳಿಯನ್ನು ಅಳೆಯಲು ಸಾಧ್ಯವಾಗುತ್ತದೆ. ಈ ಉಪಕರಣವನ್ನು ತೆಲಂಗಾಣದ ಭಾಗ್ಯನಗರದ ಮಾಜಿ ಪರಮಾಣು ವಿಜ್ಞಾನಿಗಳಾದ ಡಾ. ಮನ್ನಮ ಮೂರ್ತಿಯವರು ೨೦೦೫ನೇ ಇಸವಿಯಲ್ಲಿ ವಿಕಸಿತಗೊಳಿಸಿದ್ದಾರೆ. ಅವರು ವಾಸ್ತು, ವೈದ್ಯಕೀಯಶಾಸ್ತ್ರ, ಪಶುವೈದ್ಯಕೀಯ ಶಾಸ್ತ್ರ, ಹಾಗೆಯೇ ವೈದಿಕ ಶಾಸ್ತ್ರಗಳಲ್ಲಿ ಬರುವ ಅಡಚಣೆಗಳನ್ನು ನಿವಾರಿಸಲು ಈ ಉಪಕರಣವನ್ನು ಬಳಸಬಹುದು, ಎಂದು ಹೇಳುತ್ತಾರೆ. (‘ಯು.ಟಿ.ಎಸ್ ಉಪಕರಣದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ನೋಡಿ : http://www.vedicauraenergy.com/universal_scanner.html

೩. ಯು.ಎ.ಎಸ್. ಉಪಕರಣದ ಮೂಲಕ ಮಾಡಬೇಕಾದ ಪರೀಕ್ಷಣೆಯಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ

೩ ಅ. ನಕಾರಾತ್ಮಕ ಶಕ್ತಿ (ಊರ್ಜೆ)

ಈ ಶಕ್ತಿಯು ಹಾನಿಕಾರಕವಾಗಿರುತ್ತದೆ. ಇದರಲ್ಲಿ ಮುಂದಿನ ೨ ವಿಧಗಳಿವೆ.

೩ ಅ . ನಕಾರಾತ್ಮಕ  ಶಕ್ತಿ : ಈ ಶಕ್ತಿ ಹಾನಿಕರವಾಗಿರುತ್ತದೆ. ಇದರಲ್ಲಿ ೨ ವಿಧ ಇವೆ.

೩ ಅ ೧. ಅತಿಗೆಂಪಿನ ಶಕ್ತಿ (ಇನ್‌ಫ್ರಾರೆಡ್) : ಇದರಲ್ಲಿ ಘಟಕಗಳಿಂದ ಪ್ರಕ್ಷೇಪಿತವಾಗುವ ಇನ್‌ಫ್ರಾರೆಡ್ ಶಕ್ತಿ ಯನ್ನು ಅಳೆಯುತ್ತಾರೆ.

೩ ಅ ೨. ನೇರಳಾತೀತ ಇಂಧನ (ಅಲ್ಟ್ರಾ ವೈಲೆಟ್) : ಇದರಲ್ಲಿ ಘಟಕಗಳಿಂದ ಪ್ರಕ್ಷೇಪಿತವಾಗುವ ಅಲ್ಟ್ರಾ ವೈಲೆಟ್ ಶಕ್ತಿ ಅಳೆಯುತ್ತಾರೆ.

೩ ಆ. ಸಕಾರಾತ್ಮಕ ಶಕ್ತಿ

ಈ ಶಕ್ತಿಯು ಲಾಭದಾಯಕವಾಗಿದ್ದು ಅದನ್ನು ಅಳೆಯಲು ಸ್ಕ್ಯಾನರ್‌ನಲ್ಲಿ ಸಕಾರಾತ್ಮಕ ಶಕ್ತಿಯನ್ನು ದರ್ಶಿಸುವ +ve’ ಮಾದರಿಯನ್ನು ಇಡುತ್ತಾರೆ.

೩ ಇ. ಯು.ಎ.ಎಸ್. ಉಪಕರಣದ ಮೂಲಕ ಘಟಕದ ಪ್ರಭಾವಳಿಯನ್ನು ಅಳೆಯುವುದು

ಪ್ರಭಾವಳಿಯನ್ನು ಅಳೆಯಲು ಆ ಘಟಕದ ಎಲ್ಲಕ್ಕಿಂತ ಹೆಚ್ಚು ಸ್ಪಂದನಗಳಿರುವ ಮಾದರಿಯನ್ನು (ಸ್ಯಾಂಪಲ್‌ನ್ನು) ಉಪಯೋಗಿಸುತ್ತಾರೆ. ಉದಾ. ವ್ಯಕ್ತಿಯ ಸಂದರ್ಭದಲ್ಲಿ ಅವನ ಲಾಲಾರಸ (ಉಗುಳು) ಅಥವಾ ಅವನ ಛಾಯಾಚಿತ್ರ, ವಸ್ತುವಿನ ಸಂದರ್ಭದಲ್ಲಿ ಅದರ ಛಾಯಾಚಿತ್ರ, ವನಸ್ಪತಿಗಳ ಸಂದರ್ಭದಲ್ಲಿ ಅವುಗಳ ಎಲೆ, ಪ್ರಾಣಿಗಳ ಸಂದರ್ಭದಲ್ಲಿ ಅವುಗಳ ಕೂದಲು, ವಾಸ್ತುವಿನ ಸಂದರ್ಭದಲ್ಲಿ ಅಲ್ಲಿನ ಮಣ್ಣು ಅಥವಾ ಧೂಳು ಮತ್ತು ದೇವತೆಯ ಮೂರ್ತಿಯ ಸಂದರ್ಭದಲ್ಲಿ ಮೂರ್ತಿಗೆ ಹಚ್ಚಿದ ಚಂದನ, ಸಿಂಧೂರ ಇತ್ಯಾದಿ.

೪. ಯು.ಎ.ಎಸ್. ಉಪಕರಣದ ಮೂಲಕ ಮಾಡಬೇಕಾದ ಸಮೀಕ್ಷೆಯ ಪದ್ಧತಿ

ಸಮೀಕ್ಷೆಯಲ್ಲಿ ವಸ್ತುವಿನಲ್ಲಿನ ಅನುಕ್ರಮವಾಗಿ ಇನ್ಫ್ರಾರೆಡ್ ಶಕ್ತಿ, ಅಲ್ಟ್ರಾವೈಲೆಟ್ ಶಕ್ತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಅಳೆಯುತ್ತಾರೆ. ಅವುಗಳನ್ನು ಅಳೆಯಲು ಬೇಕಾದ ಮಾದರಿ (ಸ್ಯಾಂಪಲ್ಸ್) ಗಳನ್ನು ಯು.ಟಿ.ಎಸ್ ಸ್ಕ್ಯಾನರ್‌ನೊಂದಿಗೆ ಕೊಟ್ಟಿರುತ್ತಾರೆ. ಮೇಲಿನ ೩ ಪರೀಕ್ಷಣೆಗಳ ನಂತರ ಕೊನೆಗೆ ವಸ್ತುವಿನ ಪ್ರಭಾವಳಿಯನ್ನು ಅಳೆಯುತ್ತಾರೆ ಮತ್ತು ಅದಕ್ಕಾಗಿ ೩ ಇ’ರಲ್ಲಿ ನೀಡಿದಂತೆ ಮಾದರಿಗಳನ್ನು ಬಳಸುತ್ತಾರೆ. ವಸ್ತುವಿನಲ್ಲಿರುವ ಅಥವಾ ವಾಸ್ತುವಿನಲ್ಲಿರುವ ಇನ್ಫ್ರಾರೆಡ್ ಶಕ್ತಿಯನ್ನು ಅಳೆಯಲು ಯು.ಎ.ಎಸ್. ಸ್ಕ್ಯಾನರ್‌ನಲ್ಲಿ ಮೊದಲು ಇನ್ಫ್ರಾರೆಡ್ ಶಕ್ತಿಯನ್ನು ಅಳೆಯಲು ಬೇಕಾಗುವ ಮಾದರಿಯನ್ನು ಇಡುತ್ತಾರೆ. ಅನಂತರ ಪರೀಕ್ಷಣೆಯನ್ನು ಮಾಡುವ ವ್ಯಕ್ತಿಯು ವಿಶಿಷ್ಟ ಪದ್ಧತಿಯಲ್ಲಿ ಸ್ಕ್ಯಾನರನ್ನು ಕೈಯಲ್ಲಿ ಹಿಡಿದುಕೊಂಡು ಯಾವ ವಸ್ತುವಿನ ಪರೀಕ್ಷಣೆಯನ್ನು ಮಾಡುವುದಿರುತ್ತದೆಯೋ, ಆ ವಸ್ತುವಿನ ಎದುರು ಸುಮಾರು ಒಂದು ಅಡಿ ದೂರದಲ್ಲಿ ನಿಲ್ಲುತ್ತಾನೆ. ಆಗ ಸ್ಕ್ಯಾನರ್‌ನ ಎರಡೂ ಭುಜಗಳಲ್ಲಿ ಆಗುವ ಕೋನವು ಆ ವಸ್ತುವಿನಲ್ಲಿರುವ ಇನ್ಫ್ರಾರೆಡ್ ಶಕ್ತಿಯ ಪ್ರಮಾಣವನ್ನು ತೋರಿಸುತ್ತದೆ, ಉದಾ. ಸ್ಕ್ಯಾನರ್‌ನ ಎರಡೂ ಭುಜಗಳು ೧೮೦ ಕೋನಮಾನದಲ್ಲಿ ತೆರೆದರೆ ಆ ವಸ್ತುವಿನಲ್ಲಿ ಇನ್ಫ್ರಾರೆಡ್ ಶಕ್ತಿಯು ಸಂಪೂರ್ಣವಿದೆ ಮತ್ತು ಸ್ಕ್ಯಾನರ್‌ನ ಭುಜಗಳು ತೆರೆಯದೇ ಇದ್ದರೆ (ಅಂದರೆ ೦  ಅಂಶದ ಕೋನ) ಆ ವಸ್ತುವಿನಲ್ಲಿ ಇನ್ಫ್ರಾರೆಡ್ ಶಕ್ತಿಯು ಇಲ್ಲವೇ ಇಲ್ಲ ಎಂಬುದು ತಿಳಿಯುತ್ತದೆ. ಸ್ಕ್ಯಾನರ್‌ನ ಭುಜಗಳು ೧೮೦  ಅಂಶದ ಕೋನದಲ್ಲಿ ತೆರೆದರೆ ಭುಜಗಳು ಮಾಡಿದ ಆ ಕೋನವು ಆ ವಸ್ತುವಿನಿಂದ ಎಷ್ಟು ದೂರದ ವರೆಗೆ ಹಾಗೆಯೇ ಉಳಿಯುತ್ತದೆ? ಎಂಬುದನ್ನು ಅಳೆಯುತ್ತಾರೆ. ಅಳೆದ ಈ ಅಂತರವೆಂದರೆ ಆ ವಸ್ತುವಿನಲ್ಲಿರುವ ಇನ್ಫ್ರಾರೆಡ್ ಶಕ್ತಿಯ ಪ್ರಭಾವಳಿಯಾಗಿದೆ. ಸ್ಕ್ಯಾನರಿನ ಭುಜಗಳು ೧೮೦ಕ್ಕಿಂತಲೂ ಕಡಿಮೆ ಅಂಶದ ಕೋನದಲ್ಲಿ ತೆರೆದರೆ ಆ ವಸ್ತುವಿನ ಸುತ್ತಲೂ ಇನ್ಫ್ರಾರೆಡ್ ಶಕ್ತಿಯ ಪ್ರಭಾವಳಿ ಇಲ್ಲ, ಎಂದು ಗೊತ್ತಾಗುತ್ತದೆ. ಈ ರೀತಿ ಅನುಕ್ರಮವಾಗಿ ಅಲ್ಟ್ರಾವೈಲೆಟ್ ಶಕ್ತಿ, ಸಕಾರಾತ್ಮಕ ಶಕ್ತಿ ಮತ್ತು ಆ ವಸ್ತುವಿನಲ್ಲಿರುವ ವಿಶಿಷ್ಟ ಸ್ಪಂದನಗಳ ಪ್ರಭಾವಳಿಯನ್ನು ಅಳೆಯುತ್ತಾರೆ.

೫. ಸಮೀಕ್ಷೆಯಲ್ಲಿ ಎಲ್ಲವೂ ಸಮಾನವಾಗಿರಲು ತೆಗೆದುಕೊಂಡ ಕಾಳಜಿ

ಅ. ಉಪಕರಣವನ್ನು ಉಪಯೋಗಿಸುವ ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆ (ನಕಾರಾತ್ಮಕ ಸ್ಪಂದನಗಳು)ಗಳು ಇರಲಿಲ್ಲ.

ಆ. ಉಪಕರಣವನ್ನು ಉಪಯೋಗಿಸುವ ವ್ಯಕ್ತಿಯು ಧರಿಸಿದ ಬಟ್ಟೆಗಳ ಬಣ್ಣದ ಪರಿಣಾಮವು ತಪಾಸಣೆಯ ಮೇಲಾಗಬಾರದೆಂದು ವ್ಯಕ್ತಿಯು ಬಿಳಿಯ ಬಣ್ಣದ ಬಟ್ಟೆಗಳನ್ನು ಧರಿಸಿದ್ದನು.

ಪಿಪ್ (ಪಾಲಿಕಾಂಟ್ರಾಸ್ಟ್ ಇಂಟರಫಿಯರೆನಸ್ಸ್ ಫೋಟೊಗ್ರಫಿ) ಉಪಕರಣದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Leave a Comment