ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ ಇವರೆಡರಲ್ಲಿ ಆಧ್ಯಾತ್ಮಿಕ ಭೇದ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ವಿವಿಧ ಪ್ರತೀಕಗಳಿಂದ, ವಿಶೇಷವಾಗಿ ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ ಇವುಗಳ ಬಗ್ಗೆ ಯುನಿವರ್ಸಲ್ ಔರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಉಪಕರಣದ ಮೂಲಕ ಮಾಡಿದ ಸಂಶೋಧನೆ ನಡೆಸಲಾಯಿತು. ಇದರ ಶೋಧಪ್ರಬಂಧದ ಮೂಲಕ ವಿವಿಧ ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಈ ವಿಷಯವನ್ನು ಮಂಡಿಸಲಾಗಿತ್ತು. ಇದರ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

೧. ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕ ಇವುಗಳ ತುಲನಾತ್ಮಕ ಅಧ್ಯಯನ

ಮೂಲ ಹಿಂದೂ ಸ್ವಸ್ತಿಕದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಹಾಗೂ ನಾಝಿ ಸ್ವಸ್ತಿಕದಲ್ಲಿ ಬಹಳಷ್ಟು ನಕಾರಾತ್ಮಕ ಊರ್ಜೆ ಇರುವುದು ಗಮನಕ್ಕೆ ಬಂದಿತು.

೨. ಹಿಂದೂ ಸ್ವಸ್ತಿಕ ಮತ್ತು ನಾಝಿ ಸ್ವಸ್ತಿಕವನ್ನು ಭುಜದ ಮೇಲೆ ಕಟ್ಟಿದಾಗ ಆದ ಪರಿಣಾಮ

ಈ ಪ್ರಯೋಗದಲ್ಲಿ ಪಾಲ್ಗೊಂಡ ಇಬ್ಬರ ಪೈಕಿ ಮೊದಲ ವ್ಯಕ್ತಿಗೆ ಆಧ್ಯಾತ್ಮಿಕ ತೊಂದರೆ ಇದ್ದುದರಿಂದ ಪ್ರಯೋಗದ ಮೊದಲು ಸಹ ಅವರಿಂದ ನಕಾರಾತ್ಮಕ ಸ್ಪಂದನ ಪ್ರಕ್ಷೇಪಿತವಾಗುತ್ತಿತ್ತು. ಪ್ರಯೋಗದ ಮೊದಲು ಮತ್ತೊಬ್ಬ ವ್ಯಕ್ತಿಯಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತಿತ್ತು. ಮೊದಲ ವ್ಯಕ್ತಿಯ ಭುಜದ ಮೇಲೆ ನಾಝಿ ಸ್ವಸ್ತಿಕ ಕಟ್ಟಿದಾಗ ಅವನ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಎರಡುಪಟ್ಟು ಹೆಚ್ಚಾಗಿ ೫.೭೨ ಮೀಟರ್ ಆಯಿತು. ಮತ್ತೊಬ್ಬ ವ್ಯಕ್ತಿಯಲ್ಲಿ ೫ ಮೀಟರ್ ಉದ್ದದ ನಕಾರಾತ್ಮಕ ಊರ್ಜೆಯ ಪ್ರಭಾವಲಯ ನಿರ್ಮಾಣವಾಗಿ ಅವನಲ್ಲಿನ ಸಕಾರಾತ್ಮಕ ಊರ್ಜೆ ಸಂಪೂರ್ಣ ನಾಶವಾಯಿತು.

ಮೇಲಿನ ಪರೀಕ್ಷಣೆಯ ನಂತರ ಅವರ ಭುಜದ ಮೇಲಿನ ನಾಝಿ ಸ್ವಸ್ತಿಕ ತೆಗೆದ ನಂತರ ಇಬ್ಬರೂ ವ್ಯಕ್ತಿಗಳು ಪ್ರಯೋಗದ ಮುಂಚಿನ ಮೂಲ ಸ್ಥಿತಿಗೆ ಬರುವ ತನಕ ಪ್ರಯೋಗವನ್ನು ನಿಲ್ಲಿಸಲಾಯಿತು. ಮೂಲ ಸ್ಥಿತಿಗೆ ಬಂದ ನಂತರ ಅವರ ಭುಜಗಳಿಗೆ ಹಿಂದೂ ಸ್ವಸ್ತಿಕ ಕಟ್ಟಲಾಯಿತು. ಅನಂತರ ೨೦ ನಿಮಿಷಗಳಲ್ಲಿ ಮಾಡಿದ ಪರೀಕ್ಷಣೆಯಲ್ಲಿ ಮೊದಲ ವ್ಯಕ್ತಿಯ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಸಂಪೂರ್ಣ ನಾಶವಾಗಿರುವುದು ಗಮನಕ್ಕೆ ಬಂದಿತು. ಇಷ್ಟೇ ಅಲ್ಲದೇ ಅವನಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗಿ ಅದರ ಪ್ರಭಾವಲಯ ೧ ಮೀಟರ್ ಇತ್ತು. ಇನ್ನೊಬ್ಬ ವ್ಯಕ್ತಿಯ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ಮೂಲ ೩.೧೪ ದಿಂದ ೬.೨೩ ಮೀಟರ್ ಆಯಿತು, ಅಂದರೆ ಹೆಚ್ಚುಕಡಿಮೆ ದುಪ್ಪಟ್ಟು ಆಯಿತು.

ತಮ್ಮತಮ್ಮ ರೀತಿಯಲ್ಲಿ ಮೇಲಿನ ಎರಡೂ ಪ್ರತೀಕಗಳು ಹೇಗೆ ಶಕ್ತಿಶಾಲಿಯಾಗಿವೆ ಎಂಬುದು ಈ ಪ್ರಯೋಗದಿಂದ ಗಮನಕ್ಕೆ ಬಂದಿತು. ನಾಝಿ ಸ್ವಸ್ತಿಕದಿಂದ ಅದನ್ನು ಧಾರಣೆ ಮಾಡಿದವರ ಮೇಲೆ ಪ್ರಚಂಡ ನಕಾರಾತ್ಮಕ ಪರಿಣಾಮವಾಯಿತು ಹಾಗೂ ಪ್ರಾಚೀನ ಭಾರತೀಯ ಸ್ವಸ್ತಿಕದಿಂದ ತುಂಬ ಸಕಾರಾತ್ಮಕ ಪರಿಣಾಮವಾಯಿತು, ಎಂಬುದು ಗಮನಕ್ಕೆ ಬಂದಿತು

Leave a Comment