ಶ್ರೀ ಕ್ಷೇತ್ರ ಅಪ್ಪಾಚಿವಾಡಿಯ ಪ್ರಸಿದ್ಧ ಶ್ರೀ ಹಾಲಸಿದ್ಧನಾಥ ಜಾತ್ರೆ ಮತ್ತು ಭವಿಷ್ಯವಾಣಿಯ ವೈಜ್ಞಾನಿಕ ಸಂಶೋಧನೆ!

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯು.ಎ.ಎಸ್’ (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರಿಶೀಲನೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶ್ರೀ ಹಾಲಸಿದ್ಧನಾಥರ ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಗಳಾದ ಜಾಗೃತ ಮತ್ತು ಪವಿತ್ರ ಕ್ಷೇತ್ರಗಳಿವೆ. ಇವೆರಡು ಬೇರೆ ಬೇರೆ ಹಳ್ಳಿಗಳಂತೆ ಕಂಡುಬರುತ್ತದೆಯಾದರೂ, ಅವರನ್ನು ಶ್ರೀ ಹಾಲಸಿದ್ಧನಾಥರ ಮೇಲಿನ ನಂಬಿಕೆ ಮತ್ತು ಪ್ರೀತಿ ಅನ್ಯೋನ್ಯವಾಗಿ ಬೆಸೆದಿದೆ. ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಯಲ್ಲಿ ಶ್ರೀ ಹಾಲಸಿದ್ಧನಾಥ ದೇವರ ಜಾತ್ರೆಯ ಮುಖ್ಯ ವೈಶಿಷ್ಟ್ಯವೆಂದರೆ ‘ಭವಿಷ್ಯವಾಣಿ’! ಶ್ರೀ ಹಾಲಸಿದ್ಧನಾಥ ದೇವರು ಭವಿಷ್ಯದಲ್ಲಿ ನಡೆಯು ಘಟನೆಗಳ ಬಗ್ಗೆ ಗೇಯ ರೂಪದಲ್ಲಿ ಪೂ. ಭಗವಾನ ಡೋಣೆ (ವಾಘಾಪುರೆ) ಮಹಾರಾಜರ ಮಾಧ್ಯಮದಿಂದ ಭವಿಷ್ಯವಾಣಿ ಮಾಡುತ್ತಾರೆ. ಇದನ್ನು ವೀಕ್ಷಿಸಿ ದೇವರ ಪ್ರಸಾದವನ್ನು ಪಡೆಯಲು ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಶ್ರೀ ಕ್ಷೇತ್ರ ಅಪ್ಪಾಚಿವಾಡಿಗೆ ಆಗಮಿಸುತ್ತಾರೆ.

2018 ರ ಅಕ್ಟೋಬರ್ 25 ರಿಂದ 29 ರವರೆಗೆ, ಶ್ರೀ ಕ್ಷೇತ್ರ ಅಪ್ಪಾಚಿವಾಡಿ ಮತ್ತು ಕುರ್ಲಿಯಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಪರವಾಗಿ, ಶ್ರೀ ಹಾಲಸಿದ್ಧನಾಥ ಜಾತ್ರೆ, ಭವಿಷ್ಯವಾಣಿ ಮತ್ತು ಶ್ರೀ ಹಾಲಸಿದ್ಧನಾಥ ದೇವಸ್ಥಾನದ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲಾಯಿತು. ಈ ಸಂಶೋಧನೆಯಡಿಯಲ್ಲಿ, ‘ಯು.ಎ.ಎಸ್ (ಯುನಿವರ್ಸಲ್ ಆರಾ ಸ್ಕ್ಯಾನರ್) ಅನ್ನು ಉಪಯೋಗಿಸಿ ಪರಿಶೀಲನೆ ನಡೆಸಲಾಯಿತು. ಈ ಉಪಕರಣದ ಮೂಲಕ ಮಾಡಿದ ಘಟಕಗಳ ಮಾಪನವನ್ನು ಮತ್ತು ಅದರ ವಿವರಣೆಯನ್ನು ಇಲ್ಲಿ ಕೊಡಲಾಗಿದೆ.

‘ಯು.ಎ.ಎಸ್’ ಉಪಕರಣದ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ !

ಪೂ. ಭಗವಾನ ಡೋಣೆ ಮಹಾರಾಜ

1. ಶ್ರೀ ಹಾಲಸಿದ್ಧನಾಥರ ಇತಿಹಾಸ

1 ಅ. ನಿಪ್ಪಾಣ್ಕರ್ ಮತ್ತು ನಾಥರು

ಶ್ರೀ ಹಾಲಸಿದ್ಧನಾಥರನ್ನು ನವನಾಥರಲ್ಲಿ ಗಹಿಣೀನಾಥ ಅಥವಾ ರೇವಣನಾಥರ ಅವತಾರವೆಂದು ಪರಿಗಣಿಸಲಾಗಿದೆ. ನಾಥರು ಸಮಾಧಿ ಸ್ವೀಕರಿಸಲು ಸ್ಥಳವನ್ನು ಹುಡುಕುತ್ತಾ ನಿಪ್ಪಾಣಿಗೆ ಬಂದು ತಲುಪಿದರು. ಆ ಸಮಯದಲ್ಲಿ ಆಪ್ಪಾಸಾಹೇಬ್ ನಿಪ್ಪಾಣ್ಕರ್-ದೇಸಾಯಿಯವರು ನಿಪ್ಪಾಣಿಯ ರಾಜರಾಗಿದ್ದರು. ಅವರು, ಕುಲದೇವಿಯಾದ ಶ್ರೀ ಭವಾನಿ ದೇವಿಯ ಬಗ್ಗೆ ಅಪಾರ ಭಕ್ತಿ ಹೊಂದಿದ್ದರು. ಆ ಭಕ್ತಿಯಿಂದ ಸಂತಸಗೊಂಡ ನಾಥರು, ನಿಪ್ಪಾಣ್ಕರ್ ಮನೆಯಲ್ಲಿ ಗೋಪಾಲನೆಯ ಕೆಲಸವನ್ನು ಕೈಗೆತ್ತಿಕೊಂಡರು. ಅಲ್ಲಿಯವರೆಗೆ ನಾಥರನ್ನು ಯಾರೂ ಗುರುತಿಸಿರಲಿಲ್ಲ. ಇತರ ಸೇವಕರಂತೆ, ನಾಥರಿಗೂ ಹಳಸಿದ ಆಹಾರವನ್ನು ನೀಡಲಾಗುತ್ತಿತ್ತು. ನಾಥರು ಅದನ್ನೂ ಹಸುಗಳಿಗೆ ತಿನ್ನಿಸಿ ಸ್ವತಃ ಉಪವಾಸ ಮಾಡುತ್ತಿದ್ದರು. ಆದ್ದರಿಂದ ಬಂಜೆಯಾದ ಗೋವೊಂದು ನಾಥರಿಗೆ ಕುಡಿಯಲು ಹಾಲು ನೀಡಲು ಪ್ರಾರಂಭಿಸಿತು. ಪ್ರತಿದಿನ ಈ ಪವಾಡ ಸಂಭವಿಸುತ್ತಿತ್ತು; ಆದರೆ ಒಬ್ಬ ವ್ಯಕ್ತಿ ಮಾತ್ರ ಸಹಿಸಲಾರದೆ ಕುತಂತ್ರ ಮಾಡಿದ. ‘ನಿಪ್ಪಾಣ್ಕರರ ಸೇವಕನು ಗೋವಿನ ಹಾಲು ಕದ್ದು ಕುಡಿಯುತ್ತಿದ್ದಾನೆಂದು’ ಪಿಸುಗುಟ್ಟಿದನು. ನಿಪ್ಪಾಣ್ಕರರಿಗೆ ವಿಷಯ ತಿಳಿದ ತಕ್ಷಣ ಅವರು ಹಿಂದೆ ಮುಂದೆ ಯೋಚಿಸದೆ ನಾಥರಿಗೆ ಎಕ್ಕದ ಗಿಡದ ಹಾಲನ್ನು ಕುಡಿಯುವ ಶಿಕ್ಷೆ ವಿಧಿಸಿದರು. ನಾಥರು ಅದನ್ನು ಕೈಗೆತ್ತಿಕೊಂಡಾಗ, ಅದೂ ಹಾಲಾಯಿತು. ಆದರೆ ಅದರ ನಂತರ, ನಾಥರು ‘ನಿಮ್ಮ 7 ತಲೆಮಾರುಗಳು ನಿರ್ವಂಶರಾಗುವವು’ ಎಂದು ನಿಪ್ಪಾಣ್ಕರ್ ಕುಟುಂಬಕ್ಕೆ ಶಾಪವಿತ್ತರು. ಆಗ ನಿಪ್ಪಾಣ್ಕರರು ನಾಥರಿಗೆ ಶರಣಾಗಿ ತಮ್ಮ ಉಳಿದ ಜೀವನವನ್ನು ನಾಥರ ಸೇವಯಲ್ಲಿ ಕಳೆದರು. ನಂತರ ನಾಥರು ಅಲ್ಲಿಂದ ಹೊರಟುಹೋದರು.

1 ಆ. ಶ್ರೀ ಹಾಲಸಿದ್ಧನಾಥರು ಮತ್ತು ಪವಾಡಗಳು

ಎಕ್ಕದ ಗಿಡದ ಹಾಲನ್ನು ಕೂಡ ಹಾಲಿನಂತೆ ಕುಡಿದು ಅದು ಹಾಲು ಎಂದು ಸಾಬೀತುಪಡಿಸಿದ ನಂತರ ಜನರು ನಾಥರನ್ನು ‘ಹಾಲಸಿದ್ಧನಾಥ್’ ಎಂಬ ಹೆಸರಿನಿಂದ ಕರೆಯಲಾರಂಭಿಸಿದರು. ನಂತರ ವೇದಗಂಗೆಯ ತೀರಕ್ಕೆ ಬಂದು ತಲುಪಿದ ನಾಥರು ನಾವಿಕನಿಗೆ ನದಿ ದಾಟಲು ‘ದೋಣಿ ನೀರಿನಲ್ಲಿ ಇಳಿಸು’ ಎಂದು ಹೇಳಿದರು; ಆದರೆ ಅವನು ಕೇಳಲಿಲ್ಲ. ಅವನ ದುರಹಂಕಾರಕ್ಕಾಗಿ ಅವನನ್ನು ಶಪಿಸಿದ ನಾಥರು ನೀರಿನ ಮೇಲೆ ಒಂದು ಕಂಬಳಿ ಹಾಸಿದರು. ಅದರ ಮೇಲೆ ಅರಿಶಿನವನ್ನು ಹಾಕಿ, ಅದೇ ಕಂಬಳಿಯ ಮೇಲಿಂದ ವೇದಗಂಗೆಯನ್ನು ದಾಟಿ ಕುರ್ಲಿ ಗ್ರಾಮವನ್ನು ಪ್ರವೇಶಿಸಿದರು.

1 ಇ. ‘ಅಪ್ಪಾಚಿವಾಡಿ’ ಎಂಬ ಹೆಸರು ಹೇಗೆ ಬಂತು?

ಗಿರಿ, ಪುರಿ, ಭಾರತಿ ಮತ್ತು ಗೋಸಾವಿ ಎಂಬ ನಾಲ್ಕು ಪಂಥಗಳಲ್ಲಿ ಕುರ್ಲಿಯಲ್ಲಿ ಗಿರಿ ಪಂಥದ ಮಠವಿದೆ. ಶ್ರೀ ರಾಜಗಿರಿ ಮಹಾರಾಜ ಎಂಬ ಬಹಳ ಜ್ಞಾನಸಂಪನ್ನ ಮಹಾತ್ಮರಿದ್ದರು. ಅವರು ಆಗಷ್ಟೇ ಸಂಜೀವನ ಸಮಾಧಿಯನ್ನು ಸ್ವೀಕರಿಸಿದ್ದರು. ಆ ಸಮಾಧಿಗೆ ಭೇಟಿ ನೀಡಿದ ತಕ್ಷಣ ನಾಥರಿಗೆ ತನ್ನ ಸಮಾಧಿಗೂ ಈ ಭೂಮಿ ಅತ್ಯಂತ ಸೂಕ್ತವೆಂದು ಅರಿವಾಯಿತು. ಶ್ರೀ ರಾಜಗಿರಿ ಮಹಾರಾಜರೊಂದಿಗೆ ಧ್ಯಾನದಲ್ಲಿ ಚರ್ಚಿಸಿ, ಅವರು ತಮ್ಮ ಸಮಾಧಿಯ ಸಮಯ, ಸ್ಥಳ ಇತ್ಯಾದಿಗಳನ್ನು ನಿರ್ಧರಿಸಿರಬೇಕು. ಕೆಲವು ದಿನಗಳ ವರೆಗೆ ನಾಥರು ಕುರ್ಲಿಯಲ್ಲಿ ವಾಸಿಸಿದರು. ನಾಥರ ವಾಸ್ತವ್ಯದಿಂದ ಗ್ರಾಮದ 5 ಸ್ಥಳಗಳು ಪವಿತ್ರವಾಗಿವೆ. ಊರಿನಲ್ಲಿದ್ದ ಕೆಲವು ಧೂರ್ತ ಯುವಕರಿಗೆ ಶಾಪ ಹಾಕಿ ನಾಥರು ಹಳ್ಳಿಯಿಂದ ಹೊರಹಾಕಿದರು. ಅವರು ಅನೇಕ ಲೀಲೆಗಳನ್ನು ರಚಿಸಿದರು. ನಂತರ ಕುರ್ಲಿಯಲ್ಲಿ ಹರಿಯುವ ಹಳ್ಳದ ತೀರದಲ್ಲಿರುವ ವಸಾಹತಿಗೆ ಬಂದರು. ಅಲ್ಲಿ, ನಿಪ್ಪಾಣ್ಕರರಿಗೆ ‘ಶ್ರೀ ಜ್ಯೋತಿಬಾ ವಿಗ್ರಹವು ನಿನ್ನ ಕೈಗಳಿಂದಲೇ ಅದರ ಮೂಲ ಸ್ಥಾನವನ್ನು ತಲುಪುವುದು (ಸ್ಥಾಪಿಸಲ್ಪಡುವುದು)’ ಎಂದು ಆಶೀರ್ವದಿಸಿದರು. ಅದರ ನಂತರ, ಚೈತ್ರ ಮಾಸದ ಹುಣ್ಣಿಮೆಯಂದು, ನಾಥರು ಹಳ್ಳದ ಹತ್ತಿರವಿರುವ ಹುಣೆಸೆ ಮರಗಳ ತೋಟದಲ್ಲಿ ಸಮಾಧಿ ಸ್ವೀಕರಿಸಿದರು. ಆದ್ದರಿಂದ, ಆ ವಸಾಹತಿಗೆ ‘ಶ್ರೀ ಹಾಲಸಿದ್ಧ ಆಪ್ಪಾ ಚಿ ವಾಡಿ’ (ಮಾರಾಠಿಯಲ್ಲಿ ‘ಶ್ರೀ ಹಾಲಸಿದ್ಧಪ್ಪನ ತೋಟ’), ಅಂದರೆ ‘ಅಪ್ಪಾಚಿವಾಡಿ’ ಎಂಬ ಹೆಸರು ಬಂತು.

2. ನಿರೀಕ್ಷಣೆಯ ಘಟಕಗಳು

‘ಯು.ಎ.ಎಸ್’ ಉಪಕರಣದೊಂದಿಗೆ ಪರೀಕ್ಷಿಸುವಾಗ, ಶ್ರೀ. ರೂಪೇಶ್ ರೆಡ್ಕರ್

ಈ ಪರಿಶೀಲನೆಯಲ್ಲಿ ‘ಯು.ಎ.ಎಸ್’ ಉಪಕರಣದ ಮೂಲಕ ಮುಂದಿನ ಘಟಕಗಳ ಅಳತೆಯನ್ನು ದಾಖಲಿಸಿಕೊಳ್ಳಲಾಯಿತು.

2 ಅ. ಶ್ರೀ ಹಾಲಸಿದ್ಧನಾಥ ದೇವಸ್ಥಾನ ಮತ್ತು ಶ್ರೀ ಹಾಲಸಿದ್ಧನಾಥ ಜಾತ್ರೆಗೆ ಸಂಬಂಧಿಸಿದ ಘಟಕಗಳು

1. ಶ್ರೀ ಕ್ಷೇತ್ರ ಕುರ್ಲಿಯ ದೇವಸ್ಥಾನದ ಶ್ರೀ ಹಾಲಸಿದ್ಧನಾಥರ ಪ್ರತಿಮೆಗೆ ಅರ್ಪಿಸಲಾದ ಅರಿಶಿನ ಮತ್ತು ತುಲನೆಗಾಗಿ ಸಾಮಾನ್ಯ ಅರಿಶಿನ

2. ಶ್ರೀ ಹಾಲಸಿದ್ಧನಾಥರ ಪಲ್ಲಕ್ಕಿ, ಕಾರಿ ಮರ (ಶ್ರೀ ಹಾಲಸಿದ್ಧನಾಥರ ಅವರ ವಿಶ್ರಾಂತಿಯ ಸ್ಥಳ), ಶ್ರೀ ಹಾಲಸಿದ್ಧನಾಥರ ಪ್ರತಿಮೆ ಮತ್ತು ಶ್ರೀ ಹಾಲಸಿದ್ಧನಾಥರ ಸಂಜೀವನ ಸಮಾಧಿ

3. ಶ್ರೀ ಹಾಲಸಿದ್ಧನಾಥರ ಮೆರವಣಿಗೆಯಲ್ಲಿ ಪಲ್ಲಕ್ಕಿಯೊಂದಿಗಿರುವ ಕುದುರೆ – ಉತ್ಸವದ ಮೊದಲು ಮತ್ತು ನಂತರ

2 ಆ. ಪೂ. ಭಗವಾನ ಡೋಣೆ (ವಾಘಾಪುರೆ) ಮಹಾರಾಜ ಮತ್ತು ಅವರಿಗೆ ಸಂಬಂಧಿಸಿದ ಘಟಕಗಳು

1. ಪೂ. ಭಗವಾನ ಡೋಣೆ (ವಾಘಾಪುರೆ) ಮಹಾರಾಜ – ಭವಿಷ್ಯವಾಣಿಯ ಮೊದಲು (ಪೂ. ಭಗವಾನ ಡೋಣೆ ಮಹಾರಾಜರು ಶ್ರೀ ಕ್ಷೇತ್ರ ಅಪ್ಪಾಚಿವಾಡಿಗೆ ತೆರಳುವ ಮೊದಲು) ಮತ್ತು ಭವಿಷ್ಯವಾಣಿಯ ನಂತರ (ಪೂ. ಭಗವಾನ ಡೋಣೆ ಮಹಾರಾಜರು ಶ್ರೀ ಕ್ಷೇತ್ರ ಕುರ್ಲಿಯನ್ನು ತಲುಪಿದ ನಂತರ)

2. ಪೂ. ಭಗವಾನ ಡೋಣೆ ಮಹಾರಾಜರ ಹೆಗಲ ಮೇಲೆ ಹೊರುವ ಕಂಬಳಿ ಮತ್ತು ತುಲನೆಗಾಗಿ ಸಾಮಾನ್ಯ ಕಂಬಳಿ

3. ಪೂ. ಭಗವಾನ ಡೋಣೆ ಮಹಾರಾಜರ ಅರಿಶಿನದ ಚೀಲ, ಕೋಲು ಮತ್ತು ಅವರ ಹತ್ತಿರವಿರುವ ಸಾಲಿಗ್ರಾಮವನ್ನು ಹೋಲುವ ಕಲ್ಲು (ಅದು ಅವರು ಪೂಜೆಯ ಒಂದು ಅಂಶವಾಗಿದ್ದು, ಜಾತ್ರೆಯ ಸಮಯದಲ್ಲಿ ಅದು ಅವರೊಂದಿಗಿರುತ್ತದೆ).

3. ಸಕಾರಾತ್ಮಕ ಶಕ್ತಿ, ನಕಾರಾತ್ಮಕ ಶಕ್ತಿ, ಮತ್ತು ಒಟ್ಟು ಪ್ರಭಾವಲಯಗಳ ಸಂಬಂಧಿಸಿದ ನಿರೀಕ್ಷಣೆಯ ವಿವೇಚನೆ

3 ಅ. ಶ್ರೀ ಹಾಲಸಿದ್ಧನಾಥರಿಗೆ ಸಂಬಂಧಿಸಿದ ಎಲ್ಲ ಘಟಕಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿ ಕಂಡುಬಂತು

ಸಾಮಾನ್ಯವಾಗಿ ಎಲ್ಲ ಜನರ ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಎಂದೇನಿಲ್ಲ.

1. ಶ್ರೀ ಹಾಲಸಿದ್ಧನಾಥರ ಪ್ರತಿಮೆಗೆ ಅರ್ಪಿಸಲಾದ ಅರಿಶಿನದಲ್ಲಿ ಸಾಮಾನ್ಯ ಅರಿಶಿನಕ್ಕಿಂತ ದುಪ್ಪಟ್ಟು ಸಕಾರಾತ್ಮಕ ಶಕ್ತಿ ಕಂಡುಬಂತು.

2. ಶ್ರೀ ಹಾಲಸಿದ್ಧನಾಥರ ಪಲ್ಲಕ್ಕಿ, ಕಾರಿ ಮರ (ಶ್ರೀ ಹಾಲಸಿದ್ಧನಾಥರ ಅವರ ವಿಶ್ರಾಂತಿಯ ಸ್ಥಳ) ಮತ್ತು ಶ್ರೀ ಹಾಲಸಿದ್ಧನಾಥರ ಪ್ರತಿಮೆ ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಶಕ್ತಿ ಕಂಡುಬಂತು.

3. ಶ್ರೀ ಹಾಲಸಿದ್ಧನಾಥರ ಸಂಜೀವನ ಸಮಾಧಿಯಲ್ಲಿ ಅತಿ ಹೆಚ್ಚು ಸಕಾರಾತ್ಮಕ ಶಕ್ತಿ ಹೊಂದಿರುವುದು ಕಂಡುಬಂತು.

4. ಉತ್ಸವದ ನಂತರ ಶ್ರೀ ಹಾಲಸಿದ್ಧನಾಥರ ಮೆರವಣಿಗೆಯಲ್ಲಿ ಪಲ್ಲಕ್ಕಿಯೊಂದಿಗಿರುವ ಕುದುರೆಯ ಸಕಾರಾತ್ಮಕ ಶಕ್ತಿಯಲ್ಲಿ ಹೆಚ್ಚಳವಾಯಿತು.

3 ಆ. ಭವಿಷ್ಯವಾಣಿಯ ನಂತರ ಪೂ. ಭಗವಾನ ಡೋಣೆ ಮಹಾರಾಜರ ಸಕಾರಾತ್ಮಕ ಶಕ್ತಿಯು ಒಂದೂವರೆ ಪಟ್ಟು ಹೆಚ್ಚಾಯಿತು. ಅವರ ಕಂಬಳಿ, ಅರಿಶಿನದ ಚೀಲಗಳು, ಕೋಲು ಮತ್ತು ಕಲ್ಲು, ಈ ವಸ್ತುಗಳಲ್ಲೂ ಸಕಾರಾತ್ಮಕ ಶಕ್ತಿ ಕಂಡುಬಂತು.

3 ಇ. ಶ್ರೀ ಹಾಲಸಿದ್ಧನಾಥರಿಗೆ ಸಂಬಂಧಿಸಿದ ಯಾವುದೇ ಘಟಕದಲ್ಲಿ ನಕಾರಾತ್ಮಕ ಶಕ್ತಿ ಕಂಡುಬಂದಿಲ್ಲ. ಪೂ. ಭಗವಾನ ಡೋಣೆ ಮಹಾರಾಜರಲ್ಲಿ ಮತ್ತು ಅವರ ವಸ್ತುಗಳಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಕಂಡುಬಂದಿಲ್ಲ.

3 ಈ. ಶ್ರೀ ಹಾಲಸಿದ್ಧನಾಥರಿಗೆ ಸಂಬಂಧಿಸಿದ ಘಟಕಗಳ ಒಟ್ಟು ಪ್ರಭಾವಲಯವು ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯದ ತುಲನೆಯಲ್ಲಿ ತುಂಬಾ ಹೆಚ್ಚಿರುವುದು

ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನ ಒಟ್ಟು ಪ್ರಭಾವಲಯವು ಸುಮಾರು 1 ಮೀಟರ್ ನಷ್ಟಿರುತ್ತದೆ.

1. ಶ್ರೀ ಹಾಲಸಿದ್ಧನಾಥರ ಚಿತ್ರದ ಮೇಲಿನ ಅರಿಶಿನದ ಒಟ್ಟು ಪ್ರಭಾವಲಯವು (3.85 ಮೀ) ಸಾಮಾನ್ಯ ಅರಿಶಿನದ (2 ಮೀ) ಒಟ್ಟು ಪ್ರಭಾವಲಯಕ್ಕಿಂತ ಹೆಚ್ಚಾಗಿತ್ತು.

2. ಶ್ರೀ ಹಾಲಸಿದ್ಧನಾಥರ ಪ್ರತಿಮೆ ಮತ್ತು ಶ್ರೀ ಹಾಲಸಿದ್ಧನಾಥರ ಸಂಜೀವನ ಸಮಾಧಿ ಇವುಗಳ ಒಟ್ಟು ಪ್ರಭಾವಲಯವು ಕ್ರಮವಾಗಿ 21 ಮೀಟರ್ ಮತ್ತು 25 ಮೀಟರ್ಗಳಿಗಿಂತ ಹೆಚ್ಚು ಇತ್ತು. (ಸ್ಥಳದ ಅಭಾವದಿಂದ ಇದಕ್ಕಿಂತ ಹೆಚ್ಚಾಗಿದ್ದ ಪ್ರಭಾವಲಯವನ್ನು ಅಳೆಯಲಾಗಲಿಲ್ಲ.)

3. ಶ್ರೀ ಹಾಲಸಿದ್ಧನಾಥರ ಮೆರವಣಿಗೆಯಲ್ಲಿ ಪಲ್ಲಕ್ಕಿಯೊಂದಿಗಿರುವ ಕುದುರೆಯ ಒಟ್ಟು ಪ್ರಭಾವಲಯದಲ್ಲಿ ಉತ್ಸವದ ನಂತರ ಸ್ವಲ್ಪ ಹೆಚ್ಚಳ ಕಂಡುಬಂತು.

3 ಉ. ಪೂ. ಭಗವಾನ ಡೋಣೆ ಮಹಾರಾಜ ಮತ್ತು ಅವರಿಗೆ ಸಂಬಂಧಿಸಿದ ಘಟಕಗಳ ಒಟ್ಟು ಪ್ರಭಾವಲಯ

1. ಭವಿಷ್ಯವಾಣಿಯ ನಂತರ ಪೂ. ಭಗವಾನ ಡೋಣೆ ಮಹಾರಾಜರ ಒಟ್ಟು ಪ್ರಭಾವಲಯದಲ್ಲಿ ಬಹಳಷ್ಟು ಹೆಚ್ಚಳ ಕಂಡುಬಂತು.

2. ಸಾಮಾನ್ಯ ಕಂಬಳಿಗಿಂತ ಪೂ. ಭಗವಾನ ಡೋಣೆ ಮಹಾರಾಜರ ಹೆಗಲ ಮೇಲಿರುವ ಕಂಬಳಿಯ ಒಟ್ಟು ಪ್ರಭಾವಲಯ ಸ್ವಲ್ಪ ಹೆಚ್ಚು ಇತ್ತು.

4. ಆಧ್ಯಾತ್ಮಿಕ ವಿಶ್ಲೇಷಣೆ

4 ಅ. ಶ್ರೀ ಹಾಲಸಿದ್ಧನಾಥ ದೇವಸ್ಥಾನ ಮತ್ತು ಶ್ರೀ ಹಾಲಸಿದ್ಧನಾಥರಿಗೆ ಸಂಬಂಧಿಸಿದ ಎಲ್ಲ ಘಟಕಗಳಲ್ಲಿಯೂ ಸಕಾರಾತ್ಮಕ ಶಕ್ತಿ (ಚೈತನ್ಯ) ಕಂಡುಬರುವ ಕಾರಣ

4 ಅ 1. ಶ್ರೀ ಹಾಲಸಿದ್ಧನಾಥರ ಪ್ರತಿಮೆ ಮತ್ತು ಶ್ರೀ ಹಾಲಸಿದ್ಧನಾಥರ ಸಂಜೀವನ ಸಮಾಧಿ

‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ’ ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ದೇವತೆಯ ಚಿತ್ರ ಅಥವಾ ಪ್ರತಿಮೆ (ರೂಪ) ಇರುವಲ್ಲಿ, ಅದಕ್ಕೆ ಸಂಬಂಧಿಸಿದ ಸ್ಪಂದನಗಳೂ (ಶಕ್ತಿ) ಇರುತ್ತವೆ. ಶ್ರೀ ಹಾಲಸಿದ್ಧನಾಥ ಮತ್ತು ಅವರ ಸಂಜೀವನ ಸಮಾಧಿ ಚಿತ್ರದಲ್ಲಿ ಶ್ರೀ ಹಾಲಸಿದ್ಧನಾಥರ ಚೈತನ್ಯಮಯ ಸ್ಪಂದನಗಳಿವೆ.

ಶ್ರೀ ಹಾಲಸಿದ್ಧನಾಥರ ಪ್ರತಿಮೆ ಮತ್ತು ಅವರ ಸಂಜೀವನ ಸಮಾಧಿಗಳಿಂದ ಪ್ರಕ್ಷೇಪಿಸುವ ಚೈತನ್ಯದಿಂದ ವಾತಾವರಣವೂ ಚೈತನ್ಯಮಯವಾಗುತ್ತದೆ ಮತ್ತು ಅವರ ದರ್ಶನ ಪಡೆಯುವ ಭಕ್ತರಿಗೂ ಆ ಚೈತನ್ಯದ ಲಾಭವಾಗುತ್ತದೆ.

4 ಅ 2. ಶ್ರೀ ಹಾಲಸಿದ್ಧನಾಥರ ಚಿತ್ರಕ್ಕೆ ಅರ್ಪಿಸಲಾಗಿದೆ ಭಂಡಾರಾ (ಅರಿಶಿನ)

ಶ್ರೀ ಹಾಲಸಿದ್ಧನಾಥರ ಪ್ರತಿಮೆಯಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯವು ಆ ಚಿತ್ರಕ್ಕೆ ಅರ್ಪಿಸಿರುವ ಅರಿಶಿನದಲ್ಲಿ ಆಕರ್ಶಿಸಲ್ಪಡುತ್ತದೆ. ಆದುದರಿಂದ ಮೂಲತಃ ಸಾತ್ವಿಕವಾಗಿರುವ ಅರಿಶಿನದ ಸಾತ್ವಿಕತೆಯು ಇನ್ನಷ್ಟು ಹೆಚ್ಚಾಯಿತು.

4 ಆ 3. ಶ್ರೀ ಹಾಲಸಿದ್ಧನಾಥರ ಪಲ್ಲಕ್ಕಿ ಮತ್ತು ಅವರ ವಿಶ್ರಾಂತಿಯ ಸ್ಥಳವಾಗಿರುವ ‘ಕಾರಿ ವೃಕ್ಷ’

ಶ್ರೀ ಹಾಲಸಿದ್ಧನಾಥರ ಪಲ್ಲಕ್ಕಿಯಲ್ಲಿ ಅವರ ಪ್ರತಿಮೆಯಿರುತ್ತದೆ. ಆದ್ದರಿಂದ ಆ ಪಲ್ಲಕ್ಕಿಯಲ್ಲಿಯೂ ಶ್ರೀ ಹಾಲಸಿದ್ಧನಾಥರ ಚೈತನ್ಯ ಕಂಡುಬರುತ್ತದೆ. ‘ಕಾರಿ ವೃಕ್ಷ’ವು ಶ್ರೀ ಹಾಲಸಿದ್ಧನಾಥರ ವಿಶ್ರಾಂತಿ ಸ್ಥಳವಾಗಿತ್ತು. ಆದ್ದರಿಂದ, ಆ ವೃಕ್ಷವು ಶ್ರೀ ಹಾಲಸಿದ್ಧನಾಥರ ಅಸ್ತಿತ್ವದಿಂದ ಪವಿತ್ರವಾಗಿದೆ. ಸಂತರಲ್ಲಿರುವ ಚೈತನ್ಯದ ಪರಿಣಾಮವು ಅವರ ಬಳಕೆಯ ವಸ್ತುಗಳು, ಅವರ ವಾಸಸ್ಥಾನ ಮುಂತಾದವುಗಳ ಮೇಲಾಗುತ್ತದೆ. ಇಲ್ಲಿಯೂ ಅದೇ ಕಂಡುಬರುತ್ತದೆ.

4 ಅ 4. ಶ್ರೀ ಹಾಲಸಿದ್ಧನಾಥರ ಮೆರವಣಿಗೆಯಲ್ಲಿ ಪಲ್ಲಕ್ಕಿಯೊಂದಿಗಿರುವ ಕುದುರೆ

ಉತ್ಸವದಲ್ಲಿ ಪಾಲ್ಗೊಳ್ಳುವ ಮೊದಲೇ ಆ ಕುದುರೆಯಲ್ಲಿ ಸಕಾರಾತ್ಮಕ ಶಕ್ತಿ ಕಂಡುಬಂದಿತ್ತು. ಶ್ರೀ ಹಾಲಸಿದ್ಧನಾಥರ ಜಾತ್ರೆಯಲ್ಲಿ ಪಲ್ಲಕ್ಕಿಯೊಂದಿಗಿರುವ ಕುದುರೆಯ ಮೇಲೆ ಆ ಚೈತನ್ಯಮಯ ವಾತಾವರಣವು ಒಳ್ಳೆಯ ಪರಿಣಾಮ ಬೀರಿತು.

4 ಆ. ಪೂ. ಭಗವಾನ ಡೋಣೆ ಮಹಾರಾಜ

ಶ್ರೀ ಹಾಲಸಿದ್ಧನಾಥರು ಪೂ. ಭಗವಾನ ಡೋಣೆ ಮಹಾರಾಜರ ಮಾಧ್ಯಮದಿಂದ ಭವಿಷ್ಯವಾಣಿಯನ್ನು ಮಾಡುತ್ತಾರೆ. ಇದಕ್ಕಾಗಿ ಮಾಧ್ಯಮವಾಗುವ ವ್ಯಕ್ತಿಯೂ ತುಂಬಾ ಸಾತ್ವಿಕನಾಗಿರಬೇಕು.

ಪೂ. ಭಗವಾನ ಡೋಣೆ ಮಹಾರಾಜರು ಸಾತ್ವಿಕರಾಗಿರುವುದರಿಂದ, ಅವರು ಭವಿಷ್ಯವಾಣಿ ಮಾಡಲು ಹೊರಡುವ ಮೊದಲೇ ಅವರಲ್ಲಿ ಸಾಕಷ್ಟು ಸಕಾರಾತ್ಮಕ ಶಕ್ತಿ ಕಂಡುಬಂತು. ಭವಿಷ್ಯವಾಣಿಯ ನಂತರ ಪೂ. ಭಗವಾನ ಡೋಣೆ ಮಹಾರಾಜರ ಸಾತ್ವಿಕತೆಯು ಮತ್ತಷ್ಟು ಹೆಚ್ಚಾಯಿತು.

4 ಇ. ಪೂ. ಭಗವಾನ ಡೋಣೆ ಮಹಾರಾಜರ ವಸ್ತುಗಳು

ಸಾತ್ವಿಕ ವ್ಯಕ್ತಿಗಳಲ್ಲಿ ಸತ್ವಗುಣ ಹೆಚ್ಚಿರುತ್ತದೆ. ಆದ್ದರಿಂದ ಅಂತಹವರು ಬಳಸುವ ವಸ್ತುಗಳ ಮೇಲೆಯೂ ಆ ಸಾತ್ವಿಕತೆಯು ಪರಿಣಾಮ ಬೀರುತ್ತದೆ. ಪೂ. ಭಗವಾನ ಡೋಣೆ ಮಹಾರಾಜರ ವಸ್ತುಗಳ ಸಂದರ್ಭದಲ್ಲಿಯೂ ಇದೇ ಕಂಡುಬಂತು. ಪೂ. ಭಗವಾನ ಡೋಣೆ ಮಹಾರಾಜರ ಸಾತ್ವಿಕತೆಯ ಪರಿಣಾಮವು ಅವರ ಭುಜದ ಮೇಲಿನ ಕಂಬಳಿ, ಅವರ ಅರಿಶಿನದ ಚೀಲ, ಕೋಲು ಮತ್ತು ಸಾಲಿಗ್ರಾಮ ಕಲ್ಲಿನಂತಹ ಎಲ್ಲಾ ವಸ್ತುಗಳ ಮೇಲಾಗಿರುವುದರಿಂದ, ಅವೆಲ್ಲವೂಗಳಲ್ಲಿ ಸಕಾರಾತ್ಮಕ ಶಕ್ತಿಯು ಕಂಡುಬಂತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಶ್ರೀ ಕ್ಷೇತ್ರ ಅಪ್ಪಾಚಿವಾಡಿಯ ಪ್ರಸಿದ್ಧ ಶ್ರೀ ಹಾಲಸಿದ್ಧನಾಥ ಜಾತ್ರೆಯ ಆಧ್ಯಾತ್ಮಿಕ ಮಹತ್ವವು ಈ ವೈಜ್ಞಾನಿಕ ಸಂಶೋಧನೆಯ ಮೂಲಕವೂ ಸ್ಪಷ್ಟವಾಯಿತು. ‘

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (21.11.2018)

ವಿ-ಅಂಚೆ : [email protected]

ಆಧಾರ : ದೈನಿಕ ಸನಾತನ ಪ್ರಭಾತ ಪತ್ರಿಕೆ

Leave a Comment