ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು

ಮಳೆಗಾಲದಲ್ಲಿ ಬರುವಂತಹ ಜ್ವರದ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ‘ ಈ ಲೇಖನದಲ್ಲಿ ಕೊಟ್ಟಿರುವಂತೆ ಪಥ್ಯವನ್ನು ಪಾಲಿಸಿ ಮುಂದೆ ಕೊಟ್ಟಿರುವ ಉಪಚಾರವನ್ನು ಮಾಡಬೇಕು.

ವೈದ್ಯ ಮೇಘರಾಜ ಪರಾಡಕರ

೧. ಕಾರಣಗಳಿಗನುಸಾರ ಉಪಚಾರ

ಮಳೆಗಾಲದಲ್ಲಿ ಸತತವಾಗಿ ಬೀಳುವ ಮಳೆಯಿಂದ ವಾತಾವರಣದಲ್ಲಿ ಹರಡಿದ ತಂಪಿನಿಂದ ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ.

ಅ. ಜ್ವರ ಇದ್ದರೆ ಸ್ವೆಟರ್‌ನಂತಹ ಬೆಚ್ಚಗಿರುವ ಬಟ್ಟೆಯನ್ನು ಹಾಕಬೇಕು. ಕಿವಿ ಮುಚ್ಚುವ ಟೊಪ್ಪಿಗೆ ಹಾಕಬೇಕು. ಇದರಿಂದ ಬೆವರು ಬಂದು ಜ್ವರ ಇಳಿಯುತ್ತದೆ.

ಆ. ಕುಡಿಯುವ ನೀರು ಕುದಿಸಿ, ಉಗುರುಬೆಚ್ಚು ಮಾಡಿ ಕುಡಿಯಬೇಕು. ಈ ದಿನಗಳಲ್ಲಿ ಆರೋಗ್ಯವಂತ ವ್ಯಕ್ತಿಗಳೂ ಬಿಸಿ ಅಥವಾ ಉಗುರುಬೆಚ್ಚಗಿರುವ ನೀರನ್ನು ಕುಡಿದರೆ ಆಹಾರ ಒಳ್ಳೆಯದಾಗಿ ಜೀರ್ಣವಾಗಿ ಆರೋಗ್ಯವು ಉತ್ತಮವಾಗಿರುತ್ತದೆ.

ಇ. ಗಂಟಲು ಕಡುಗೆಂಪಾಗುವುದು, ಗಂಟಲು ಕೆರೆಯುವುದು ಅಥವಾ ನೋಯುವುದು ಇವುಗಳಿಗೆ ಉಗುರುಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ತ್ರಿಫಲಾಚೂರ್ಣ ಅಥವಾ ಅರಿಶಿಣ ಮತ್ತು ಉಪ್ಪನ್ನು ಹಾಕಿ ಮುಕ್ಕಳಿಸಬೇಕು.

ಈ. ತಲೆ ಭಾರವಾಗುವುದು, ನೆಗಡಿಯಿಂದ ಮೂಗು ತುಂಬುವುದು (ಕಟ್ಟುವುದು), ದವಡೆಗಳ ಮೂಲ ಒತ್ತಿದರೆ ನೋಯುವುದು ಮುಂತಾದ ಲಕ್ಷಣಗಳಿರುವಾಗ ಬಿಸಿ ಮಾಡಿದ ಬಟ್ಟೆ ಕಟ್ಟಬಹುದು ಅಥವಾ ಬಿಸಿ ನೀರು ಕುಡಿದ ಮೇಲೆ ಬಿಸಿಯಾಗಿರುವ ಲೋಟವನ್ನು ಒತ್ತಿಡಬಹುದು. ಇದು ಆವಿಗಿಂತಲೂ ಹೆಚ್ಚು ಒಳ್ಳೆಯದು. ದಿನಕ್ಕೆ ೪-೫ ಬಾರಿ ಈ ರೀತಿ ಮಾಡಬೇಕು.

ಉ. ರಾತ್ರಿ ಬೀಸಣಿಗೆ (ಫ್ಯಾನ್) ಹಚ್ಚಿ ಮಲಗುವುದರಿಂದ ತಂಪು ಗಾಳಿ ಮೂಗುಬಾಯಿಯಲ್ಲಿ ಹೋಗುತ್ತದೆ. ಗಂಟಲು ಒಳಗಿನಿಂದ ಒಣಗುತ್ತದೆ ಮತ್ತು ಶೀತದಿಂದ ಗಂಟಲಿನಲ್ಲಿರುವ ರಕ್ತನಾಳಗಳಲ್ಲಿ ರಕ್ತ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಗಂಟಲು ಕಡುಗೆಂಪಾಗುತ್ತದೆ. ಇದನ್ನು ತಡೆಯಲು ತಿರುಗುವ ಟೆಬಲ್ ಫ್ಯಾನ್ ಉಪಯೋಗಿಸಬೇಕು ಅಥವಾ ಬೀಸಣಿಗೆ (ಫ್ಯಾನ್)ಯನ್ನು ಹಚ್ಚದೇ ಮಲಗಬೇಕು. ಈಗಿನ ಕಾಲದಲ್ಲಿ ‘ಟೈಮರ್’ನ ಬೀಸಣಿಗೆ ಬಂದಿವೆ. ಅದರಲ್ಲಿ ನಾವು ಮಲಗುವಾಗ ನಿರ್ಧಾರಿಸಿದ ಸಮಯದಲ್ಲಿ ಬೀಸಣಿಗೆಯನ್ನು ಬಂದ್ ಮಾಡುವ ಸೌಲಭ್ಯವಿರುತ್ತದೆ. ಅದನ್ನು ಉಪಯೋಗಿಸಬಹುದು. ಮಲಗಿದ ನಂತರ ತಂಪು ಗಾಳಿ ಮೂಗುಬಾಯಿಯಲ್ಲಿ ಹೋಗಬಾರದೆಂದು ಕಿವಿಮುಚ್ಚುವ ಟೊಪ್ಪಿಗೆಯನ್ನು ಹಾಕಿ ಸರಿಯಾಗಿ ಹೊದ್ದುಕೊಂಡು ಮಲಗಬೇಕು.

ಯಾವುದೇ ಉಪಚಾರಪದ್ಧತಿಗಳಿಗನುಸಾರ ಔಷಧಿಗಳನ್ನು ತೆಗೆದುಕೊಂಡರೂ, ಮೇಲಿನ ಕಾರಣಗಳಿಗನುಸಾರ ಉಪಚಾರವನ್ನು ಮಾಡಿದರೆ ಬೇಗ ಗುಣಮುಖರಾಗಲು ಸಹಾಯವಾಗುತ್ತದೆ.

೨. ಲಕ್ಷಣಗಳಿಗನುಸಾರ ಆಯುರ್ವೇದದ ಔಷಧಿಗಳು

ಔಷಧಿಗಳನ್ನು ವೈದ್ಯರ ಮಾರ್ಗದರ್ಶನಕ್ಕನುಸಾರವೇ ತೆಗೆದುಕೊಳ್ಳಬೇಕು; ಆದರೆ ಕೆಲವು ಸಮಯದಲ್ಲಿ ವೈದ್ಯರ ಬಳಿಗೆ ಬೇಗ ಹೋಗಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಸ್ವಲ್ಪ ಮಟ್ಟಿಗೆ ಔಷಧಿಯನ್ನು ಸೇವಿಸಿದರೆ ವೈದ್ಯರ ಬಳಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಆದುದಿಂದ ಪ್ರಥಮೋಪಚಾರವೆಂದು ಇಲ್ಲಿ ಕೆಲವು ಔಷಧಿಗಳನ್ನು ಕೊಡಲಾಗಿವೆ. ಔಷಧಿಗಳನ್ನು ಸೇವಿಸಿದರೂ ಗುಣವಾಗದಿದ್ದರೆ ಕಾಯಿಲೆಯನ್ನು ನಿರ್ಲಕ್ಷಿಸದೆ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ.

೨ ಅ. ಗಂಟಲು ಕೆರೆಯುವುದು ಅಥವಾ ಗಂಟಲು ಕಡುಗೆಂಪಾಗುವುದು : ಈ ಲಕ್ಷಣಗಳು ಕಾಣಸಿಕೊಂಡ ತಕ್ಷಣ ‘ಚಂದ್ರಾಮೃತ ರಸ’ದ ೧-೨ ಮಾತ್ರೆಗಳನ್ನು ಜಗಿದು ತಿನ್ನಬೇಕು. ತಕ್ಷಣ ಗುಣವೆನಿಸತೊಡಗುತ್ತದೆ. ಕೆಮ್ಮು ಬರುತ್ತಿರುವಾಗಲೂ ಚಂದ್ರಾಮೃತ ರಸದ ಉಪಯೋಗವಾಗುತ್ತದೆ. ದಿನಕ್ಕೆ ೫-೬ ಮಾತ್ರೆಗಳನ್ನು ಸೇವಿಸಬಹುದು.

೨ ಆ. ನೆಗಡಿ, ಕೆಮ್ಮು ಮತ್ತು ಕಫವಾಗುವುದು : ೧ ಚಮಚ ‘ಸಿತೋಪಲಾದಿ ಚೂರ್ಣ’ ಮತ್ತು ೧ ಚಮಚ ಜೇನುತುಪ್ಪವನ್ನು ಸೇರಿಸಿ ಇಡಬೇಕು. ದಿನವಿಡೀ ಮಧ್ಯಮಧ್ಯದಲ್ಲಿ ಈ ಮಿಶ್ರಣವನ್ನು ನೆಕ್ಕಬೇಕು. ಸಿತೋಪಲಾದಿ ಚೂರ್ಣವು ದಿನಕ್ಕೆ ೩ ಚಮಚದವರೆಗೆ ಉಪಯೋಗಿಸಬಹುದು. ಈ ಚೂರ್ಣದಿಂದ ಶ್ವಾಸನಾಳದಲ್ಲಿ ಶೇಖರಣೆಯಾದ ವಿಕೃತ ಕಫವನ್ನು ಹೊರಗೆ ತೆಗೆಯಲು ಸಹಾಯವಾಗುತ್ತದೆ, ಹಾಗೆಯೇ ಆವಶ್ಯಕವಾಗಿರುವ ಒಳ್ಳೆಯ ಕಫವನ್ನು ತಯಾರಿಸುತ್ತದೆ. ಇದರಿಂದಾಗಿ ಶ್ವಾಸನಾಳದ ಬಲ ಹೆಚ್ಚಾಗುತ್ತದೆ.

೨ ಇ. ಜ್ವರ : ‘ತ್ರಿಭುವನಕೀರ್ತಿ ರಸ’ ೧ ಮಾತ್ರೆಯನ್ನು ಹುಡಿ ಮಾಡಿ ಸ್ವಲ್ಪ ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಜ್ವರ ಹೆಚ್ಚಾಗಿದ್ದರೆ ಪ್ರತಿ ೨ ಗಂಟೆಗಳಿಗೊಮ್ಮೆ ೧ ಮಾತ್ರೆಯನ್ನು ಸೇವಿಸಬೇಕು. ದಿನಕ್ಕೆ ೫-೬ ಮಾತ್ರೆಗಳನ್ನು ಸೇವಿಸಬಹುದು. ಒಂದು ದಿನದಲ್ಲಿ ಜ್ವರದ ತೀವ್ರತೆ ಕಡಿಮೆಯಾಗದಿದ್ದರೆ ಜ್ವರವನ್ನು ನಿರ್ಲಕ್ಷಿಸದೆ ವೈದ್ಯರ ಬಳಿಗೆ ಹೋಗಬೇಕು.

೨ ಈ. ಮಲಬದ್ಧತೆ : ಮಧ್ಯಾಹ್ನ ಮತ್ತು ರಾತ್ರಿಯ ಊಟದ ಮೊದಲು ‘ಗಂಧರ್ವ ಹರಿತಕಿ ವಟಿ’ಯ ೨ ಮಾತ್ರೆಗಳನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ತೆಗೆದುಕೊಳ್ಳಬೇಕು.

೨ ಉ. ಪರೀಕ್ಷಣೆಯಲ್ಲಿ ಕೊರೋನಾ ಇರುವುದು ಸಿದ್ಧವಾಗುವುದು : ‘ಸುವರ್ಣಮಾಲಿನಿ ವಸಂತ’ ಅಥವಾ `ಮಹಾಲಕ್ಷ್ಮೀವಿಲಾಸ ರಸ’ ಇವುಗಳಲ್ಲಿ ಯಾವುದೇ ಒಂದು ಮಾತ್ರೆಯನ್ನು ಪುಡಿ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ೨ ರಿಂದ ೪ ಹನಿಗಳಷ್ಟು ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಸುಮಾರು ೭ ರಿಂದ ೧೫ ದಿನಗಳವರೆಗೆ ಈ ಔಷಧಿಗಳನ್ನು ತೆಗೆದುಕೊಂಡರೆ ಬೇಗ ಗುಣವಾಗಲು ಸಹಾಯವಾಗುತ್ತದೆ. ಈ ಎರಡೂ ಔಷಧಗಳು ಸುವರ್ಣಯುಕ್ತ (ಚಿನ್ನದ ಭಸ್ಮವಿರುವ)ವಾಗಿವೆ. ಆದ್ದರಿಂದ ಇವು ದುಬಾರಿಯಾಗಿರುತ್ತವೆ. ಆಯುರ್ವೇದಕ್ಕನುಸಾರ ಸುವರ್ಣಮಾಲಿನಿಯು ಉತ್ತಮ ವಿಷಹರ ಔಷಧಿಯಾಗಿದ್ದು ಒಂದು ಉತ್ಕೃಷ್ಟ ರಸಾಯನವಾಗಿದೆ. ವಿವಿಧ ಜೀವಾಣು ಅಥವಾ ವಿಷಾಣುಗಳ ಸೋಂಕು ತಗುಲಿದಾಗ ಅವುಗಳ ವಿಷ ಶರೀರದಲ್ಲಿ ಹರಡುತ್ತದೆ. ಸುವರ್ಣಯುಕ್ತ ಔಷಧಗಳ ಸೇವನೆಯಿಂದ ಈ ವಿಷಕಾರಿಗಳ ಪ್ರತಿರೋಧ ಮಾಡಲು ಶಕ್ತಿ ಬರುತ್ತದೆ. ‘ರಸಾಯನ’ ಎಂದರೆ ಉತ್ತಮ ಶರೀರವನ್ನಾಗಿ ಮಾಡಲು ಸಹಾಯ ಮಾಡುವ ಔಷಧಿ.

೨ ಊ. ಕಾಯಿಲೆಯಿಂದ ಗುಣವಾದ ನಂತರ ಬಂದ ದಣಿವು : ‘ಸಂಶಮನಿ ವಟಿ’, ‘ಪ್ರಭಾಕರ ವಟಿ’ ಅಥವಾ ‘ಲಕ್ಷ್ಮೀವಿಲಾಸ ರಸ’ ಇವುಗಳಲ್ಲಿ ಯಾವುದಾದರೊಂದು ಔಷಧಿಯ ೧-೧ ಮಾತ್ರೆಯನ್ನು ಪುಡಿ ಮಾಡಿ ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ೨ ರಿಂದ ೪ ಹನಿಗಳಷ್ಟು ಜೇನುತುಪ್ಪದಲ್ಲಿ ಸೇರಿಸಿ ನೆಕ್ಕಬೇಕು. ಈ ಔಷಧಗಳಲ್ಲಿ ಅಭ್ರಕ ಭಸ್ಮ, ಲೋಹಭಸ್ಮ, ಸುವರ್ಣಮಾಕ್ಷಿಕ ಭಸ್ಮ ಮುಂತಾದ ರಕ್ತದ ಆರೋಗ್ಯವನ್ನು ಹೆಚ್ಚಿಸುವ, ಹಾಗೆಯೇ ಶರೀರಕ್ಕೆ ಶಕ್ತಿ ನೀಡುವ ಘಟಕಗಳಿರುತ್ತವೆ. ಕಾಯಿಲೆ ಇದ್ದಾಗ ರೋಗದೊಂದಿಗೆ ಹೋರಾಡುವುದರಲ್ಲಿ ಶರೀರದ ಶಕ್ತಿಯು ಖರ್ಚಾಗುತ್ತದೆ, ಆಗ ಈ ಔಷಧಗಳಿಂದ ಶಕ್ತಿ ಬರುತ್ತದೆ.

(ಈ ಲೇಖನವು ಕೇವಲ ಸಾಮಾನ್ಯ ಮಾಹಿತಿಗಾಗಿ ಇದೆ. ಹೆಚ್ಚಿನ ಮಾಹಿತಿಗಾಗಿ ತಾವು ತಮ್ಮ ವೈದ್ಯರೊಂದಿಗೆ ಅಥವಾ ಆಧುನಿಕ ವೈದ್ಯರ (ಡಾಕ್ಟರರ) ಸಲಹೆ ಪಡೆದು ಔಷಧೋಪಚಾರವನ್ನು ಮಾಡಬೇಕು. – ಸಂಕಲಕರು)

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೭.೨೦೨೨)

Leave a Comment