ಲಶುನಾದಿ ವಟಿ (ಮಾತ್ರೆ)
ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ
ಇದು ಒಂದು ಉತ್ತಮ ಪಾಚಕ (ಜೀರ್ಣ ಕ್ರಿಯೆ ಉತ್ತಮಗೊಳಿಸುವ) ಎಂದು ಪ್ರಸಿದ್ಧ ಔಷಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.
| ಉಪಯೋಗ | ಔಷಧಿಯನ್ನು ಸೇವಿಸುವ ಪದ್ಧತಿ | ಅವಧಿ |
|---|---|---|
| ಬಾಯಿಗೆ ರುಚಿ ಇಲ್ಲದಿರುವುದು, ಹಸಿವಾಗದಿರುವುದು, ಅಜೀರ್ಣವಾಗುವುದು, ಊಟದ ನಂತರ ಹೊಟ್ಟೆ ಜಡವಾಗುವುದು, ಹೊಟ್ಟೆಯಲ್ಲಿ ಗ್ಯಾಸ್ ಆಗುವುದು, ಪದೇ ಪದೇ ತೇಗು ಬರುವುದು, ಬಿಕ್ಕಳಿಕೆ ಮತ್ತು ಮೈ ತಣ್ಣಗಾಗುವುದು | ದಿನದಲ್ಲಿ 2-3 ಬಾರಿ 2-2 ಮಾತ್ರೆಗಳನ್ನು ಅಗಿದು (ಜಗಿದು) ತಿನ್ನಬೇಕು ಅಥವಾ ಬೆಚ್ಚಗಿನ ನೀರು ಅಥವಾ ಮಜ್ಜಿಗೆಯೊಂದಿಗೆ ಸೇವಿಸಬೇಕು | 1 – 2 ದಿನ |
| ವಾಂತಿ – ಭೇದಿ | ಅರ್ಧ ಗಂಟೆಯ ಅಂತರದಲ್ಲಿ ದಿನವಿಡೀ ಹೆಚ್ಚೆಂದರೆ 5 ಸಲ 2 – 2 ಮಾತ್ರೆಗಳನ್ನು ಅಗಿದು ತಿನ್ನಬೇಕು. | ತಕ್ಷಣ |
| ಹುಳು (ಜಂತು) ಬಾಧೆ | ಎರಡೂ ಬಾರಿ ಊಟದ ಅರ್ಧ ಗಂಟೆ ಮೊದಲು 2 ಮಾತ್ರೆಗಳು, ಹಾಗೆಯೇ ಗಂಧರ್ವ ಹರಿತಕಿ ವಟಿ 2 ಮಾತ್ರೆಗಳು ಅಥವಾ 1 ಚಮಚ ತ್ರಿಫಲಾ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನೊಂದಿಗೆ ಸೇವಿಬೇಕು | 15 ದಿನಗಳು |
ಆ. ಸೂಚನೆ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.
2. ಉಷ್ಣತೆಯ ಲಕ್ಷಣಗಳು (ಉಷ್ಣ ಪದಾರ್ಥಗಳಿಂದ ತೊಂದರೆಯಾಗುವುದು, ಬಾಯಲ್ಲಿ ಹುಣ್ಣಾಗುವುದು, ಮೈಕೈ ಉರಿಯುವುದು, ಉರಿ ಮೂತ್ರ, ಮೈಮೇಲೆ ಬೊಕ್ಕೆಗಳು ಏಳುವುದು, ತಲೆ ಸುತ್ತುವಿಕೆ ಇತ್ಯಾದಿ) ಇರುವಾಗ ಮತ್ತು ಮಲವು ಗಟ್ಟಿಯಾಗುತ್ತಿದ್ದರೆ ಈ ಔಷಧಿಯನ್ನು ಉಪಯೋಗಿಸಬಾರದು.
3. ಈ ಔಷಧ ಉಷ್ಣವಾಗಿರುವುದರಿಂದ ಬೇಸಿಗೆ ಮತ್ತು ಮಳೆಗಾಲದ ನಂತರ ಶರದ ಋತು (ಅಕ್ಟೋಬರ್ ಬಿಸಿಲು)ವಿನ ಕಾಲಾವಧಿಯಲ್ಲಿ ಜಾಗರೂಕತೆಯಿಂದ ಉಪಯೋಗಿಸಬೇಕು.
4. ಈ ಮಾತ್ರೆಗಳಲ್ಲಿ ಸೈಂಧವ ಉಪ್ಪು ಇರುವುದರಿಂದ ಇವು ಹೆಚ್ಚು ಸಮಯ ಗಾಳಿಯ ಸಂಪರ್ಕಕ್ಕೆ ಬಂದರೆ ಆರ್ದ್ರತೆಯಿಂದ ಒದ್ದೆಯಾಗಿ ಹಾಳಾಗುತ್ತವೆ. ಹಾಗಾಗಬಾರದೆಂದು ಡಬ್ಬದ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)
ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು
ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು
ಕುಟಜ ಘನವಟಿ (ಮಾತ್ರೆಗಳು)
ಗಂಧರ್ವ ಹರೀತಕೀ ವಟಿ (ಮಾತ್ರೆಗಳು)
ಚಂದ್ರಾಮೃತ ರಸ (ಮಾತ್ರೆಗಳು)
ಸೂತಶೇಖರ ರಸ (ಮಾತ್ರೆಗಳು)