ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೧

ಲೇಖನ ೨ | ಲೇಖನ ೩ | ಲೇಖನ ೪ | ಲೇಖನ ೫

೧. ಕೊರೋನಾ ವಿಷಾಣುರೂಪಿ ಆಪತ್ತು ಅಂದರೆ, ಭಾವೀ ಮಹಾಭೀಕರ ಆಪತ್ಕಾಲದ ಒಂದು ಚಿಕ್ಕ ತುಣುಕು !

ಜನವರಿ ೨೦೨೦ ರಿಂದ ಕೊರೋನಾ ವಿಷಾಣುವು ಜಗತ್ತಿನಾದ್ಯಂತ ಹಾಹಾಕಾರ ಎಬ್ಬಿಸಿದೆ. ಕೊರೋನಾ ವಿಷಾಣುವಿನ ಸಾಂಕ್ರಾಮಿಕವನ್ನು ತಡೆಯಲು ಲಾಕ್‌ಡೌನ್‌ಅನ್ನು ಪಾಲಿಸ ಬೇಕಾಗಿರುವುದರಿಂದ ಉದ್ಯೋಗ ದಂಧೆಗಳ ಮೇಲೆ ವಿಪರೀತ ಪರಿಣಾಮವಾಗುವುದು ಮತ್ತು ಅದರಿಂದ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಕೊರೋನಾದಿಂದ ಲಕ್ಷಾಂತರ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕೊರೋನಾ ಸಾಂಕ್ರಾಮಿಕವೆಂದರೆ ಮಾನವ ಜಾತಿಯ ಮೇಲೆ ತೂಗು ಕತ್ತಿಯೇ! ಆದುದರಿಂದ ಎಲ್ಲೆಂದರಲ್ಲಿ ಓಡಾಡಲು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು, ಮುಂತಾದ ಸಾಮಾನ್ಯ ವಿಷಯಗಳೂ ಕಠಿಣವಾಗುತ್ತಿವೆ. ಎಲ್ಲೆಡೆ ಭಯ ಮತ್ತು ಒತ್ತಡದ ವಾತಾವರಣ ನಿರ್ಮಾಣವಾಗಿದೆ. ಒಕ್ಟೋಬರ ೨೦೨೦ ರ ಈ ಪರಿಸ್ಥಿತಿಯನ್ನು ಗಮನಿಸಿದರೆ, ಕೊರೋನಾ ಸಾಂಕ್ರಾಮಿಕವು ಭಾವೀ ಮಹಾಭೀಕರ ಆಪತ್ಕಾಲದ ಒಂದು ಚಿಕ್ಕ ತುಣುಕು ಎಂದು ಗಮನಕ್ಕೆ ಬರುತ್ತದೆ.

೨. ಮುಂಬರುವ ಮಹಾಭೀಕರ ಆಪತ್ಕಾಲದ ಅಲ್ಪಸ್ವಲ್ಪ ಸ್ವರೂಪ 

ಮಹಾಯುದ್ಧ, ಭೂಕಂಪ, ಪ್ರವಾಹ ಮುಂತಾದ ಸ್ವರೂಪದ ಮಹಾಭಯಂಕರ ಆಪತ್ಕಾಲವು ಇನ್ನೂ ಬರಲಿಕ್ಕಿದೆ. ಮಹಾಭೀಕರ ಆಪತ್ಕಾಲ ಖಂಡಿತ ಬರುವುದು ಎಂದು ಅನೇಕ ನಾಡಿಭವಿಷ್ಯಕಾರರು ಮತ್ತು ದೃಷ್ಟಾರ ಸಾಧು-ಸಂತರು ಮೊದಲೇ ಹೇಳಿದ್ದಾರೆ. ಆ ಸಂಕಟಗಳ ನಗಾರಿ ಸಹ ಈಗ ಮೊಳಗತೊಡಗಿದೆ. ಕೊರೋನಾ ವಿಷಾಣುವಿನ ಆಪತ್ತು ಚೀನಾದಿಂದಾಗಿಯೇ ಉದ್ಭವಿಸಿದೆ, ಎಂದು ಹೇಳುತ್ತಾ ಅಮೇರಿಕಾ ಸಹಿತ ಕೆಲವು ಯುರೋಪಿಯನ್ ದೇಶಗಳು ಚೀನಾದ ವಿರುದ್ಧ ಕೆಂಡಕಾರಲು ಪ್ರಾರಂಭಿಸಿವೆ. ಸ್ವಲ್ಪದರಲ್ಲಿ ಈಗ ಮಹಾಯುದ್ಧವು ಸಮೀಪಿಸುತ್ತಿದೆ. ಈ ಭಯಂಕರ ಆಪತ್ಕಾಲವು ಕೆಲವು ದಿನಗಳದ್ದು ಅಥವಾ ತಿಂಗಳುಗಳದ್ದಾಗಿರದೇ ಅದು ೨೦೨೩ ರ ತನಕ ಇರಲಿದೆ. ಅಂದರೆ ಇಂದಿನಿಂದ ಮೂರು ವರ್ಷಗಳ ಅಂದರೆ ಭಾರತದಲ್ಲಿ ‘ಹಿಂದೂ ರಾಷ್ಟ್ರದ’ (ಆದರ್ಶವಾದ ಈಶ್ವರಿ ರಾಜ್ಯದ) ಸ್ಥಾಪನೆಯಾಗುವ ತನಕ ಇರಲಿದೆ. ಈ ಆಪತ್ಕಾಲದಲ್ಲಿ ವಿದ್ಯುತ್ ಪೂರೈಕೆ ಕಡಿತವಾಗುತ್ತದೆ. ಪೆಟ್ರೋಲ್, ಡಿಸೆಲ್ ಮುಂತಾದವುಗಳ ಕೊರತೆ ಬರಲಿದೆ. ಹಾಗಾಗಿ ವಾಹನ ಸಂಚಾರ ಸಾಗಾಟ ವ್ಯವಸ್ಥೆಯು ಕುಸಿಯಲಿದೆ. ಹಾಗಾಗಿ ಸರಕಾರಿ ವ್ಯವಸ್ಥೆಯು ಎಲ್ಲ ಕಡೆಗಳಲ್ಲಿ ಸಹಾಯಕ್ಕಾಗಿ ತಲುಪಲು ಸಾಧ್ಯವಾಗಲಾರದು. ಸರಕಾರವು ಮಾಡುತ್ತಿರುವ ಸಹಾಯ ಕಾರ್ಯದಲ್ಲಿ ಅಡಚಣೆಗಳು ಸಹ ಬರುತ್ತವೆ. ಹಾಗಾಗಿ ಅಡುಗೆ ಅನಿಲ (ಗ್ಯಾಸ್), ತಿನ್ನುವ ಕುಡಿಯುವ ವಸ್ತುಗಳು ಅನೇಕ ತಿಂಗಳುಗಳ ಕಾಲ ಸಿಗಲಾರವು ಮತ್ತು ಸಿಕ್ಕಿದರೂ ಅದಕ್ಕೆ ರೇಶನಿಂಗ ಇರಲಿದೆ; ಡಾಕ್ಟರರು (ಅಲೋಪಥಿ), ವೈದ್ಯರು (ಆಯುರ್ವೇದಿಕ್), ಔಷಧಿಗಳು, ಆಸ್ಪತ್ರೆಗಳು ಸಹಜವಾಗಿ ಲಭ್ಯವಾಗಲು ಕಠಿಣವಾಗಿರುತ್ತದೆ ಇದೆಲ್ಲವನ್ನೂ ಗಮನದಲ್ಲಿರಿಸಿ ಈ ಆಪತ್ಕಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಮುಂತಾದ ಎಲ್ಲ ಸ್ತರಗಳಲ್ಲಿ ಪೂರ್ವತಯಾರಿ ಮಾಡುವುದು ಅವಶ್ಯಕವಾಗಿದೆ.

೩. ಶಾರೀರಿಕ ಸ್ತರದ ಪೂರ್ವತಯಾರಿ

ಆಹಾರ ಇದು ಜೀವಂತವಾಗಿರಲು ಆವಶ್ಯಕವಾಗಿದೆ. ಆಪತ್ಕಾಲದಲ್ಲಿ ನಾವು ಉಪವಾಸ ಇರಬಾರದು ಎಂದು ಮೊದಲೇ ಆಹಾರಧಾನ್ಯಗಳನ್ನು ಎಷ್ಟು ಬೇಕೋ ಅಷ್ಟನ್ನು ಖರೀದಿ ಮಾಡಿ ಶೇಖರಿಸಿಡುವುದು ಆವಶ್ಯಕವಾಗಿದೆ. ಸದ್ಯದ ಪೀಳಿಗೆಗೆ ಆಹಾರಧಾನ್ಯಗಳನ್ನು ಶೇಖರಿಸಿಡುವುದು ಮತ್ತು ಅದು ದೀರ್ಘಕಾಲ ಕೆಡದಂತೆ ಇಡುವ ಪದ್ಧತಿಯು ಗೊತ್ತಿರುವುದಿಲ್ಲ. ಅದಕ್ಕಾಗಿ ನಾವು ಕೆಲವು ಪದ್ಧತಿಗಳನ್ನು ಈ ಲೇಖನಮಾಲೆಯಲ್ಲಿ ನೀಡುತ್ತಿದ್ದೇವೆ. ಆಹಾರಧಾನ್ಯಗಳನ್ನು ಎಷ್ಟು ಶೇಖರಣೆ ಮಾಡಿಟ್ಟರೂ ಅದು ಕ್ರಮೇಣ ಖಾಲಿ ಆಗುತ್ತದೆ. ಇಂತಹ ಸಮಯದಲ್ಲಿ ಹಸಿವಿನಿಂದ ಬಳಲಬಾರದು ಎಂದು ಪೂರ್ವತಯಾರಿಯಾಗಿ ಆಹಾರಧಾನ್ಯಗಳ ತೋಟಗಾರಿಕೆ ಮಾಡುವುದು ಸಹ ಅವಶ್ಯವಾಗಿದೆ. ಭತ್ತ (ಅಕ್ಕಿ), ಕಾಳುಗಳಂತಹ ಆಹಾರಧಾನ್ಯಗಳ ತೋಟಗಾರಿಕೆ ಮಾಡಲು ಎಲ್ಲರಿಗೆ ಸಾಧ್ಯವಿಲ್ಲ. ಆದರೆ ಗೆಡ್ಡೆಗೆಣಸು, ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬರುವಂತಹ ೧೨ ತಿಂಗಳೂ ಬೆಳೆಯುವಂತಹ ತರಕಾರಿಗಳು ಮತ್ತು ಬಹುಪಯೋಗಿ ಹಣ್ಣುಗಳ ಗಿಡಗಳನ್ನು ಮನೆಯ ಪರಿಸರದಲ್ಲಿ ಮತ್ತು ವಸತಿ ಸಮುಚ್ಛಯಗಳ (ಫ್ಲಾಟ್‌ಗಳ) ಬಾಲ್ಕನಿಯಲ್ಲಿ ನೆಡಬಹುದು. ಈ ತೋಟಗಾರಿಕೆಯ ಬಗ್ಗೆ ಉಪಯುಕ್ತ ಸೂಚನೆಯನ್ನು ಲೇಖನಮಾಲೆಯಲ್ಲಿ ನೀಡಲಾಗಿದೆ.

ಆಪತ್ಕಾಲದಲ್ಲಿ ಆಹಾರಧಾನ್ಯಗಳನ್ನು ಬೇಯಿಸಲು ಗ್ಯಾಸ್ (ಅಡುಗೆ ಅನಿಲ) ಲಭ್ಯವಿಲ್ಲದಿದ್ದಾಗ, ಒಲೆ, ಸೊಲಾರ್ ಕುಕ್ಕರ್, ಮುಂತಾದವುಗಳನ್ನು ಉಪಯೋಗಿಸುವ ಬಗ್ಗೆ ಹೇಳಲಾಗಿದೆ. ಆಪತ್ಕಾಲದಲ್ಲಿ ಪ್ರತಿದಿನದಂತೆ ಆಹಾರವನ್ನು ತಯಾರಿಸಲು ಆಗಬಹುದು ಎಂದೇನಿಲ್ಲ. ಈ ದೃಷ್ಟಿಯಿಂದ ಹೆಚ್ಚು ಕಾಲ ಬಾಳಿಕೆ ಬರುವಂತಹ ಆಹಾರ ಪದಾರ್ಥಗಳ ಶೇಖರಣೆ ಮಾಡಬೇಕು ಮತ್ತು ಅವುಗಳ ದೀರ್ಘಕಾಲ ಬಾಳಿಕೆಗಾಗಿ ಉಪಯುಕ್ತ ಸೂಚನೆಗಳ ಬಗ್ಗೆಯೂ ಹೇಳಲಾಗಿದೆ. ಕುಟುಂಬಕ್ಕಾಗಿ ಬೇಕಾಗುವ ನಿತ್ಯೋಪಯೋಗಿ ಹಾಗೂ ವಿಶೇಷ ಪ್ರಸಂಗಗಳಲ್ಲಿ ಬೇಕಾಗುವ ಅಗತ್ಯ ವಸ್ತುಗಳ ಪಟ್ಟಿಯನ್ನು ಸಹ ನೀಡಲಾಗಿದೆ. ಇದರಿಂದ ವಾಚಕರಿಗೆ ಎಲ್ಲ ರೀತಿಯ ವಸ್ತುಗಳನ್ನು ಖರೀದಿಸಿ ಶೇಖರಿಸಿಡಲು ಸುಲಭವಾಗುವುದು. ಮನುಷ್ಯನು ನೀರಿಲ್ಲದೇ ಜೀವಿಸಲಾರನು ಮತ್ತು ವಿದ್ಯುತ್ ರಹಿತ ಜೀವನದ ಕಲ್ಪನೆಯನ್ನು ಸಹ ಮಾಡಲಾರನು. ಇದಕ್ಕಾಗಿ ನೀರಿನ ವ್ಯವಸ್ಥೆ, ನೀರಿನ ಶೇಖರಣೆ ಮತ್ತು ಶುದ್ಧೀಕರಣದ ಪದ್ಧತಿ ಹಾಗೂ ವಿದ್ಯುತ್ತಿನ ಇತರ ಪರ್ಯಾಯಗಳನ್ನು ಸಹ ಈ ಲೇಖನಮಾಲೆಯಲ್ಲಿ ನೀಡಲಾಗಿದೆ.

ಲೇಖನಮಾಲೆಯಲ್ಲಿ ಒಂದೇ ವಿಷಯದ ಬಗ್ಗೆ ವಿವಿಧ ರೀತಿಯ ತಯಾರಿಗಳನ್ನು ಹೇಳಲಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಆವಶ್ಯಕತೆ, ಸ್ಥಳದ ಲಭ್ಯತೆ, ಆರ್ಥಿಕ ಪರಿಸ್ಥಿತಿ ಮತ್ತು ನಾವು ವಾಸಿಸುತ್ತಿರುವ ಸ್ಥಳದ ಹವಾಮಾನ ಮತ್ತು ಭೌಗೋಲಿಕ ಸ್ಥಿತಿ ಇವೆಲ್ಲವುಗಳ ವಿಚಾರ ಮಾಡಿ ತಮಗೆ ಅನುಕೂಲವಾದಂತಹ ತಯಾರಿಯನ್ನು ಮಾಡಬೇಕು. ಎಲ್ಲಿ ತಯಾರಿಯ ಸಂದರ್ಭದಲ್ಲಿ ಕೃತಿಯ ಸ್ತರದಲ್ಲಿ ಹೇಳಲು ಮಿತಿ ಇದೆಯೋ, ಅಲ್ಲಿ ಕೇವಲ ನಿರ್ದೇಶನ ನೀಡಲಾಗಿದೆ. ಉದಾ. ‘ಆಪತ್ಕಾಲದಲ್ಲಿ ನೀರಿನ ಕೊರತೆಯಾಗಬಾರದೆಂದು ಬಾವಿ ತೋಡಬೇಕು’ ಹೇಳಲಾಗಿದೆ. ಆದರೆ ಅದಕ್ಕಾಗಿ ‘ನಿರ್ದಿಷ್ಟವಾಗಿ ಏನೆಲ್ಲ ಮಾಡಬೇಕಾಗುತ್ತದೆ’, ಇದನ್ನು ಹೇಳಿಲ್ಲ. ಇಂತಹ ಕೃತಿಗಳ ವಿಷಯದಲ್ಲಿ ವಾಚಕರು ಬಲ್ಲವರ ಬಳಿ ವಿಚಾರಿಸಿಕೊಳ್ಳಬೇಕು ಅಥವಾ ಅದಕ್ಕೆ ಸಂಬಂಧಿತ ಗ್ರಂಥವನ್ನು ಓದಬೇಕು.

೪. ಮಾನಸಿಕ ಸ್ತರದ ಪೂರ್ವತಯಾರಿ 

ಆಪತ್ಕಾಲದಲ್ಲಿ ಅನೇಕ ಜನರಿಗೆ ಮನಸ್ಸಿನಲ್ಲಿ ಅಸ್ಥಿರತೆ, ಚಿಂತೆ, ನಿರಾಶೆ, ಭೀತಿ ಮುಂತಾದ ತೊಂದರೆಗಳಾಗುತ್ತವೆ. ಈ ತೊಂದರೆಗಳು ಆಗಬಾರದು, ಅಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಆಗಬೇಕೆಂದು ಮೊದಲೇ ಮನಸ್ಸಿಗೆ ಯಾವ ಸ್ವಯಂಸೂಚನೆ ನೀಡಬೇಕು ಎಂಬುದರ ಮಾರ್ಗದರ್ಶನ ಮಾಡಲಾಗಿದೆ. ಅದನ್ನು ನೀವು ಇಲ್ಲಿ ಓದಬಹುದು.

೫. ಆಧ್ಯಾತ್ಮಿಕ ಸ್ತರದ ಪೂರ್ವತಯಾರಿ

ಆಪತ್ಕಾಲದಲ್ಲಿ ರಕ್ಷಣೆಯಾಗಲು ವ್ಯಕ್ತಿಯು ಸ್ವಂತದ ಬಲದಲ್ಲಿ ಎಷ್ಟು ತಯಾರಿ ಮಾಡಿದರೂ ಮಹಾಭೀಕರ ಆಪತ್ತುಗಳಿಂದ ಬದುಕುಳಿಯಲು ಅಂತಿಮವಾಗಿ ಭರವಸೆಯನ್ನು ದೇವರ ಮೇಲಿಡಬೇಕಾಗುತ್ತದೆ. ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಸಂಪಾದಿಸಿದರೆ ದೇವರು ಎಂತಹ ಸಂಕಟದಿಂದಲೂ ಪಾರು ಮಾಡುತ್ತಾರೆ. ಸಾಧನೆಯ ವಿಷಯದ ಗಾಂಭೀರ್ಯವು ಸಹ ಈ ಲೇಖನಮಾಲೆಯನ್ನು ಓದಿದ ನಂತರ ಮೂಡಲಿದೆ.

೬. ವಾಚಕರೇ, ಬೇಗನೇ ತಯಾರಿಯನ್ನು ಪ್ರಾರಂಭಿಸಿರಿ !

ವಾಚಕರು ಲೇಖನಮಾಲೆಗನುಸಾರ ಇಂದಿನಿಂದಲೇ ಬೇಕಾದ ಏರ್ಪಾಡುಗಳನ್ನು ಆರಂಭಿಸಿದರೆ ಮುಂಬರುವ ಆಪತ್ಕಾಲವು ಸುಸಹ್ಯವಾಗುವುದು. ವಾಚಕರು ಈ ವಿಷಯದ ಸಂದರ್ಭದಲ್ಲಿ ಸಮಾಜ ಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು. ಲೇಖನಮಾಲೆಯಲ್ಲಿರುವ ಕೆಲವು ವಿಷಯಗಳ ಬಗ್ಗೆ ಇನ್ನೂ ಬರೆಯಲಾಗುತ್ತಿದೆ. ಬೇಗನೇ ಪೂರ್ವತಯಾರಿಯನ್ನು ಆರಂಭಿಸಲು ವಾಚಕರಿಗೆ ಸಾಧ್ಯವಾಗಬೇಕು ಎಂದು ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ವಿಷಯದಲ್ಲಿ ಗ್ರಂಥಮಾಲಿಕೆಯನ್ನೂ ಶೀಘ್ರವಾಗಿ ಪ್ರಕಟಿಸಲಾಗುವುದು.

೭. ಪ್ರಾರ್ಥನೆ

ಆಪತ್ಕಾಲದಲ್ಲಿ ಕೇವಲ ಜೀವಂತವಾಗಿರಲು ಮಾತ್ರವಲ್ಲದೇ ಜೀವನದಲ್ಲಿ ಸಾಧನೆಯ ದೃಷ್ಟಿಕೋನವನ್ನು ಅಂಗೀಕರಿಸಿ ಆನಂದದಿಂದಿರಲು ಸಹ ಈ ಲೇಖನಮಾಲೆಯು ಉಪಯೋಗವಾಗಬೇಕು, ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !

ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ

ಲೇಖನ ೨ | ಲೇಖನ ೩ | ಲೇಖನ ೪ | ಲೇಖನ ೫

© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.

Leave a Comment