ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೩

ಲೇಖನ ೧ | ಲೇಖನ ೨ | ಲೇಖನ ೪ | ಲೇಖನ ೫

ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ವಿವಿಧ ಸಿದ್ಧತೆಗಳು !

೧. ಅಡುಗೆ ಅನಿಲ, ಸ್ಟೊವ್ಗಾಗಿ ಬೇಕಾಗುವ ಸೀಮೆಎಣ್ಣೆ ಇತ್ಯಾದಿಗಳ ಕೊರತೆ ಮತ್ತು ಅಲಭ್ಯತೆಯನ್ನು ಗಮನದಲ್ಲಿರಿಸಿಕೊಂಡು ಮುಂದಿನವುಗಳಲ್ಲಿ ಆವಶ್ಯಕವಿರುವುದನ್ನು ಮಾಡಬೇಕು.

ಅ. ಮನೆಯಲ್ಲಿ ಒಲೆಯ ವ್ಯವಸ್ಥೆ ಮಾಡುವುದು

ಮಣ್ಣಿನ ಒಲೆ

೧. ಮನೆಯಲ್ಲಿ ಒಲೆ ಇಲ್ಲದಿದ್ದರೆ ಮಣ್ಣಿನ, ಸಿಮೆಂಟಿನ ಅಥವಾ ಕಚ್ಚಾಲೋಹ (ಬಿಡ ಎಂಬ ಲೋಹದಿಂದ ತಯಾರಿಸಿದ) ಒಲೆಯನ್ನು ಖರೀದಿಸಿಡಬೇಕು. ಕೆಲವು ಉತ್ಪಾದಕರು ಪಾರಂಪರಿಕ ಒಲೆಗಳ ತುಲನೆಯಲ್ಲಿ ಕಡಿಮೆ ಇಂಧನ ತಗಲುವ, ಕಡಿಮೆ ಹೊಗೆಯಿರುವ, ಒಲೆಯನ್ನು ಅವಶ್ಯಕತೆಗನುಸಾರ ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಆಗುವುದು ಇತ್ಯಾದಿ ಲಾಭವಾಗುವ ಕಬ್ಬಿಣದ ಒಲೆಯನ್ನು ತಯಾರಿಸುತ್ತಾರೆ. ಉದಾ. ಮಧ್ಯಪ್ರದೇಶದ ಭೋಪಾಳದ ದತ್ತೂ ಚುಲ್ಹಾ (ದೂ.ಕ್ರ. ೯೪೨೫೦ ೦೯೧೧೩ – ಚಿತ್ರ ನೋಡಿ), ಕೆಲವು ಉತ್ಪಾದಕರು ತಯಾರಿಸಿದ ಒಲೆಗೆ ಹೊಗೆ ಹೊರಹೋಗಲು ಚಿಮಣಿ (ಉದ್ದದ ಹೊಗೆ ನಳಿಕೆ) ಯ ವ್ಯವಸ್ಥೆಯಿರುತ್ತದೆ. ಇಂತಹ ಆಧುನಿಕ ಒಲೆಗಳ ಅಭ್ಯಾಸ ಮಾಡಿ ನಮ್ಮ ಆವಶ್ಯಕತೆಗನುಸಾರ ಒಲೆಯನ್ನು ಖರೀದಿಸಬಹುದು. (ಪ್ರಸಂಗ ಬಂದರೆ ಮೂರು ಕಲ್ಲುಗಳನ್ನು ವಿಶಿಷ್ಟ ಪದ್ಧತಿಯಲ್ಲಿ ಜೋಡಿಸಿಯೂ ತಯಾರಿಸಬಹುದು – ಚಿತ್ರ ನೋಡಿ)

ದತ್ತೂ ಚುಲ್ಹಾ

೨. ಒಲೆ ಉರಿಸುವುದು, ಪ್ರತಿದಿನ ಅದನ್ನು ಸ್ವಚ್ಛಗೊಳಿಸುವುದು ಮುಂತಾದ ಕೃತಿಗಳನ್ನು ಕಲಿತುಕೊಳ್ಳಬೇಕು.

ಮೂರು ಕಲ್ಲುಗಳ ಒಲೆ

೩. ಒಲೆಗಾಗಿ ಉರುವಲು ಎಂದು ಕಟ್ಟಿಗೆ, ಇದ್ದಿಲು, ಬೆರಣಿ, ಬಯೊಮಾಸ ಬ್ರಿಕೆಟ್ (ಕಬ್ಬಿನ ಸಿಪ್ಪೆ, ಕಟ್ಟಿಗೆಯ ಪುಡಿ, ಕಾಳುಬೇಳೆಗಳ ಸಿಪ್ಪೆ, ಸೂರ್ಯಕಾಂತಿ ಹೂವನ್ನು ತೆಗೆದ ನಂತರದ ಭಾಗ ಮುಂತಾದವುಗಳ ಮೇಲೆ ವಿಶಿಷ್ಟ ಒತ್ತಡದಿಂದ ಪ್ರಕ್ರಿಯೆ ಮಾಡಿ ಅದನ್ನು ಸಮಾನವಾಗಿ ತಯಾರಿಸಿದ ಚಿಕ್ಕ ಚಿಕ್ಕ ತುಂಡುಗಳು) ಇತ್ಯಾದಿಗಳನ್ನು ಬೇಕಾದಷ್ಟು ಶೇಖರಿಸಿಡಬೇಕು. ಬಯೋಮಾಸ ಬ್ರಿಕೆಟ್ ದೊಡ್ಡ ನಗರದ ಅಂಗಡಿಗಳಲ್ಲಿ ಹಾಗೂ ಅಂತರಜಾಲದಲ್ಲಿ ಮಾರಾಟಕ್ಕೆ ಸಿಗುತ್ತವೆ.

೪. ಒಲೆಯಲ್ಲಿ ಅಡುಗೆ ಮಾಡಲು ಕಲಿಯಬೇಕು. ಇದರಲ್ಲಿ ಪ್ರೆಶರ್ ಕುಕ್ಕರ್ ಉಪಯೋಗಿಸದೇ ಪಾತ್ರೆಯಲ್ಲಿ ಅಥವಾ ಇತರ ಪಾತ್ರೆಗಳಲ್ಲಿ ಅನ್ನ ಬೇಯಿಸುವುದು, ಸಾಂಬಾರಿಗಾಗಿ ಬೇಳೆಯನ್ನು ಬೇಯಿಸುವುದು, ರೊಟ್ಟಿಯನ್ನು ಬೇಯಿಸಿ ಅದನ್ನು ಕೆಂಡದ ಮೇಲೆ ಕಾಯಿಸುವುದು ಮುಂತಾದವುಗಳು ಒಳಗೊಂಡಿರುತ್ತವೆ. ಒಲೆಯಲ್ಲಿ ಭೋಜನವನ್ನು ತಯಾರಿಸಲು ಕಲಿಯುವಾಗ ಅಡುಗೆ ಮನೆಯ ಕಟ್ಟೆ (ಕೌಂಟರ್) ಮೇಲೆ ಅಡುಗೆ ಮಾಡುವ ಅಭ್ಯಾಸವನ್ನು ಕಡಿಮೆಗೊಳಿಸಲು ಪ್ರಯತ್ನಿಸಬೇಕು.

ಆ. ಅಡುಗೆಗೆ ಸಹಾಯವಾಗುವಂತಹ ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ಖರೀದಿಸಿಡಬೇಕು

೧. ಯಾರ ಬಳಿ ಸೌರಶಕ್ತಿಯಿಂದ (ಸೊಲಾರನಲ್ಲಿ) ನಡೆಯುವ ವಿದ್ಯುತ್ ನಿರ್ಮಿತಿಯ ವ್ಯವಸ್ಥೆ ಇಲ್ಲವೋ ಅಂತಹವರು ಸೊಲಾರ್ ಕುಕ್ಕರ್ ನಂತಹ ಉಪಕರಣಗಳನ್ನು ಖರೀದಿಸಿಡಬೇಕು.

ಸೊಲಾರ್ ಕುಕ್ಕರ್

೨. ಯಾರ ಬಳಿ ಸೌರಶಕ್ತಿಯಿಂದ ವಿದ್ಯುತ್ ನಿರ್ಮಿತಿಯ ವ್ಯವಸ್ಥೆ ಇದೆಯೋ ಅವರು ವಿದ್ಯುತ್‌ನಿಂದ ಆಹಾರ ತಯಾರಿಸುವ ಇಂಡಕ್ಷನ್ ಒಲೆ ಮತ್ತು ಆ ಒಲೆಯ ಸಂದರ್ಭದಲ್ಲಿ ಉಪಯುಕ್ತವಿರುವ ಅಡುಗೆಯ ಪಾತ್ರೆಗಳನ್ನು ಖರೀದಿಸಿಡಬೇಕು (ಮೋಡದ ವಾತಾವರಣದಲ್ಲಿ ಸೌರಶಕ್ತಿಯು ಸಿಗಲು ಮಿತಿಯುಂಟಾಗುತ್ತದೆ.)

ಇಂಡಕ್ಷನ್ ಒಲೆ

ಇ. ಸಾಕಾಗುವಷ್ಟು ಪ್ರಮಾಣದಲ್ಲಿ ಹಸಿಕಸವನ (ಸೊಪ್ಪುಕಾಯಿಪಲ್ಲೆಗಳ ದಂಟುಗಳು, ತಂಗಳು, ಕೊಳೆಯುವಂತಹ ಆಹಾರ ಪದಾರ್ಥ ಇತ್ಯಾದಿ) ಲಭ್ಯವಿರುವವರು ಬಯೋ-ಗ್ಯಾಸ್ ಘಟಕವನ್ನು ಕಟ್ಟುವುದು

ಬಯೋ-ಗ್ಯಾಸ್ ಘಟಕ

ಈ ಯಂತ್ರದಲ್ಲಿ ಸೆಗಣಿಯನ್ನು ಕೂಡ ಉಪಯೋಗಿಸಬಹುದು. ಅದೇ ರೀತಿ ಈ ಘಟಕಕ್ಕೆ ಶೌಚಾಲಯವನ್ನು ಜೋಡಿಸ ಬಹುದು. ಕೆಲವು ರಾಜ್ಯಗಳಲ್ಲಿ ಸರಕಾರವು ಬಯೊ-ಗ್ಯಾಸ್ ಘಟಕ ಕಟ್ಟುವ ಸಂಪೂರ್ಣ ಖರ್ಚನ್ನು ನೀಡುತ್ತದೆ ಹಾಗೂ ಕೆಲವು ರಾಜ್ಯಗಳಲ್ಲಿ ಸರಕಾರವು ಇಂತಹ ಯಂತ್ರ ಅಳವಡಿಸಲು ಸ್ವಲ್ಪ ಪ್ರಮಾಣದಲ್ಲಿ ಅನುದಾನವನ್ನು ನೀಡುತ್ತದೆ.

ಈ. ಗೋವು, ಎತ್ತು ಮುಂತಾದ ಸಾಕು ಪ್ರಾಣಿಗಳಿರುವವರು, ಗೋಬರ್ ಗ್ಯಾಸ್ ಘಟಕವನ್ನು ಕಟ್ಟುವುದು

ಗೋಬರ್ ಗ್ಯಾಸ್ ಘಟಕ

ಇದಕ್ಕೆ ಶೌಚಾಲಯವನ್ನು ಕೂಡ ಜೋಡಿಸಬಹುದು. ಈ ಘಟಕವನ್ನು ಅಳವಡಿಸಲು ರೈತರಿಗೆ ರಾಜ್ಯ ಸರಕಾರದಿಂದ ವಿಶಿಷ್ಟ ನಿಯಮಗಳಿಗನುಸಾರ ಅನುದಾನ ಸಿಗಬಲ್ಲದು.

೨. ಅಡುಗೆಯನ್ನು ಮಾಡುವಾಗ ಯಂತ್ರದ (ಉದಾ. ಮಿಕ್ಸರ್‌ನ) ಉಪಯೋಗವನ್ನು ಮಾಡದೇ ಪಾರಂಪರಿಕ ವಸ್ತುಗಳನ್ನು ಉಪಯೋಗಿಸುವ ಅಭ್ಯಾಸ ಈಗಿನಿಂದಲೇ ಮಾಡಿಕೊಳ್ಳಬೇಕು

ಅರೆಯುವ ಕಲ್ಲು

ಅ. ಯಾಂತ್ರಿಕ ಕಡುಗೋಲಿನಿಂದ ಮಜ್ಜಿಗೆ ಕಡೆಯುವಂತಹ ಕೃತಿಗಳನ್ನು ಕಡಿಮೆ ಮಾಡಿ ಸರಳ ಕಡುಗೋಲಿನಿಂದ ಮಜ್ಜಿಗೆಯನ್ನು ಕಡೆಯಬೇಕು.

ಆ. ಮಿಕ್ಸರ್ ಬದಲು ಚಟ್ನಿಯನ್ನು ಅರೆಯಲು ಅರೆಯುವ ಕಲ್ಲು ಮತ್ತು ನೆಲಗಡಲೆಯ ಪುಡಿ ಮಾಡಲು ಒರಳುಕಲ್ಲನ್ನು ಉಪಯೋಗಿಸಬೇಕು.

ಒರಳುಕಲ್ಲು

ಇ. ಇತರ ಪಾರಂಪರಿಕ ವಸ್ತು (ಉದಾ. ಹಿಟ್ಟು ಬೀಸಲು ಕಲ್ಲು, ಕುಟ್ಟಲು ಒರಳು ಮತ್ತು ಒನಕೆ) ಉಪಯೋಗಿಸುವ ಅಭ್ಯಾಸ ಮಾಡಬೇಕು.

(ಆಧಾರ : ಸನಾತನದ ಮುಂಬರುವ ಗ್ರಂಥ ‘ಮುಂಬರುವ ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವಸಿದ್ಧತೆ’)

ಲೇಖನ ೧ | ಲೇಖನ ೨ | ಲೇಖನ ೪ | ಲೇಖನ ೫

© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.

1 thought on “ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೩”

Leave a Comment