ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಹಿಂದೂಗಳ ಪರಾಕ್ರಮಿ ರಾಜ ವಿಕ್ರಮಾದಿತ್ಯರ ಕುಲದೇವಿ ಶ್ರೀ ಹರಸಿದ್ಧಿ ದೇವಿ

ಭಕ್ತರ ಮೇಲೆ ಕೃಪೆಯ ಮಳೆಗರೆಯುವಶ್ರೀ ಹರಸಿದ್ಧೀದೇವಿಯ ಮನೋಹರ ಮೂರ್ತಿ


ಶ್ರೀ ಹರಸಿದ್ಧೀದೇವಿಯ ದೇವಸ್ಥಾನ

ಮಧ್ಯಪ್ರದೇಶದ ಉಜ್ಜೈನಿಯಲ್ಲಿಯ ಪ್ರಮುಖ ದೇವಸ್ಥಾನಗಳಲ್ಲಿ ಶ್ರೀ ಹರಸಿದ್ಧೀದೇವಿ ದೇವಸ್ಥಾನವು ಮೊದಲ ವಿಕ್ರಮಾದಿತ್ಯರಾಜನ ಕುಲದೇವಿಯಾಗಿದ್ದಳು. ಪ್ರಾಚೀನ ಕಾಲದಲ್ಲಿ ದೇವಿಯು ಮಾಂಗಲಚಾಂಡಿಕೀ ಹೆಸರಿನಿಂದ ಗುರುತಿಸಲ್ಪಡುತ್ತಿದ್ದು ಗಢಕಾಳಿಕಾದೇವಿಯಂತೆಯೇ ಇಲ್ಲಿಯ ಮಂದಿರದಲ್ಲಿ ಮಹಾಲಕ್ಷ್ಮೀ ಹಾಗೂ ಮಹಾಸರಸ್ವತಿ ದೇವಿಯರ ಮೂರ್ತಿಯ ಮಧ್ಯಭಾಗದಲ್ಲಿ ಶ್ರೀ ಹರಸಿದ್ಧೀದೇವಿಯ ಸಿಂಧೂರ ಲೇಪಿತ ಮೂರ್ತಿಯಿದೆ. ತಾಂತ್ರಿಕ ಪರಂಪರೆಯಲ್ಲಿ ಈ ಸ್ಥಾನವನ್ನು ಸಿದ್ಧಪೀಠವೆಂದು ತಿಳಿಯಲಾಗುತ್ತದೆ. ಶಿವಪುರಾಣಕ್ಕನುಸಾರ ಇದು ೫೧ ಶಕ್ತಿಪೀಠಗಳಲ್ಲಿ ಒಂದು ಶಕ್ತಿಪೀಠವಾಗಿದ್ದು ಈ ದೇವಸ್ಥಾನವು ಊರ್ಜೆಯ ದೊಡ್ಡ ಸ್ರೋತವಾಗಿದೆ. ಸತಿಯ ಕೈಯ ಮೊಣಕೈಯು ಈ ಜಾಗದಲ್ಲಿ ಬಿದ್ದಿತ್ತು. ಸ್ಕಂದಪುರಾಣಕ್ಕನುಸಾರ ಚಂಡ ಮತ್ತು ಪ್ರಚಂಡ ಈ ದೈತ್ಯರ ಸಂಹಾರಮಾಡಿದುದರಿಂದ ದೇವಿ ಹರಸಿದ್ಧಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ ಇಲ್ಲಿ ಎಮ್ಮೆಯನ್ನು ಬಲಿ ನೀಡುವ ಪದ್ಧತಿಯಿದೆ.

ಶ್ರೀ ಹರಸಿದ್ಧೀಮಾತೆಯ ಚರಣಗಳಲ್ಲಿ ೧೧ ಸಲ ತನ್ನ ಶಿರವನ್ನು ಅರ್ಪಣೆ ಮಾಡಿದ ರಾಜ ವಿಕ್ರಮಾದಿತ್ಯ

ಉಜ್ಜೈನಿಯ ಸಾಮ್ರಾಟನಾಗಿದ್ದ ವಿಕ್ರಮಾದಿತ್ಯ ರಾಜನು ಬುದ್ಧಿ, ಪರಾಕ್ರಮ ಮತ್ತು ಉದಾರತೆ ಈ ಗುಣಕ್ಕಾಗಿ ಗುರುತಿಸಲಾಗುತ್ತಿತ್ತು ಈ ವಿಕ್ರಮಾದಿತ್ಯ ರಾಜನ ಹೆಸರಿನಿಂದ ವಿಕ್ರಮ ಸಂವತ್ಸರವೆಂದು ಆರಂಭವಾಯಿತು. ಪ್ರತಿ ಅಮವಾಸ್ಯೆಗೆ ವಿಕ್ರಮಾದಿತ್ಯ ರಾಜನು ಶ್ರೀ ಹರಸಿದ್ಧೀದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಿದ್ದನು. ರಾಜನ ಮನಸ್ಸಿನಲ್ಲಿ ದೇವಿಯ ಬಗ್ಗೆ ಗಾಢ ಭಕ್ತಿಯಿದ್ದುದರಿಂದ ರಾಜನು ಶಿರವನ್ನು ತುಂಡರಿಸಿ ಮಾತೆಯ ಚರಣಗಳಲ್ಲಿ ಅರ್ಪಣೆ ಮಾಡಿದನು. ಆಗ ದೇವಿಯು ವಿಕ್ರಮಾದಿತ್ಯನ ಶಿರವನ್ನು ಪುನಃ ಜೋಡಿಸಿದಳು. ಹೀಗೆ ೧೧ ಸಲ ವಿಕ್ರಮಾದಿತ್ಯನು ದೇವಿಯ ಚರಣಗಳಲ್ಲಿ ಶಿರವನ್ನು ಅರ್ಪಣೆಯನ್ನು ಮಾಡಿದ್ದನು.

ದೇವಸ್ಥಾನದ ಇತಿಹಾಸ

೧೩ ನೇ ಶತಕದಲ್ಲಿಯ ಕೆಲವು ಗ್ರಂಥಗಳಲ್ಲಿ ಈ ದೇವಸ್ಥಾನದ ಉಲ್ಲೇಖವಿದೆ. ಆದರೆ ಈಗಿನ ದೇವಸ್ಥಾನ ೧೪೪೭ ರಲ್ಲಿ ಮರಾಠರು ಪುನರ್‌ಸ್ಥಾಪನೆ ಮಾಡಿದರು. ದೇವಸ್ಥಾನದ ಪೂರ್ವಕ್ಕೆ ಮಹಾಕಾಲ ಮಂದಿರ ಹಾಗೂ ಪಶ್ಚಿಮಕ್ಕೆ ರಾಮಘಾಟವಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಮರಾಠಾ ಶೈಲಿಯ ೨ ದೀಪಸ್ತಂಭಗಳಿವೆ. ನವರಾತ್ರಿಯ ಕಾಲದಲ್ಲಿ ಇಲ್ಲಿ ಅನೇಕ ದೀಪಗಳನ್ನು ಹಚ್ಚಲಾಗುತ್ತದೆ. ಇದರಿಂದ ದೇವಸ್ಥಾನದ ಪರಿಸರವು ಪ್ರಕಾಶಮಾನವಾಗುತ್ತದೆ. ದೇವಸ್ಥಾನದ ದೇವಿಯ ಗರ್ಭಗೃಹದ ಮುಂದಿನ ಸಭಾಮಂಟಪದೊಳಗೆ ದೇವಿಯ ಯಂತ್ರವಿದೆ. ಪ್ರಾಂಗಣದಲ್ಲಿ ೮೪ ಮಹಾದೇವರ ಪೈಕಿ ಕರ್ಕೋಟೆಶ್ವರ ಮಹಾದೇವನ ಮಂದಿರವಿದೆ ಹಾಗೂ ಇತರ ಕೆಲವು ದೇವರ ಮಂದಿರವಿದೆ. ಮಂದಿರದ ಒಳಗಿನ ಗುಮ್ಮಟದಲ್ಲಿ ಮಹಾತ್ರಿಪುರ ಸುಂದರಿ, ಶಿವಕಾಮೇಶ್ವರಿ ಕಾಲ್ಥಾ ಶಿವ, ಷೋಡಶೀ ಮಹಾನಿತ್ಯಾ ಈ ದೇವಿ ಮತ್ತು ಅವರಿಗೆ ಸಂಬಂಧಿಸಿದ ಇತರ ದೇವಿಯರ ಸುಂದರಚಿತ್ರಗಳನ್ನು ಬಿಡಿಸಲಾಗಿದೆ. ಚೈತ್ರಮತ್ತು ಆಶ್ವಯುಜ ಮಾಸದಲ್ಲಿಯ ನವರಾತ್ರಿಯ ಕಾಲಾವಧಿಯಲ್ಲಿ ದೇವಸ್ಥಾನದಲ್ಲಿ ಉತ್ಸವಗಳನ್ನು ಆಚರಿಸಲಾಗುತ್ತದೆ.

ಸಂದರ್ಭ : ಜಾಲತಾಣ – ಸಿಂಹಸ್ಥ ಉಜ್ಜೈನಿ, ಪತ್ರಿಕೆ