ಮಹಾಕವಿ ಕಾಲಿದಾಸರಿಗೆ ದಿವ್ಯ ಜ್ಞಾನವನ್ನು ಪ್ರದಾನಿಸುವ ಉಜ್ಜೈನಿನ ಶ್ರೀ ಗಢಕಾಲಿಕಾದೇವಿ

ಉಜ್ಜೈನ, ಮಧ್ಯಪ್ರದೇಶದಲ್ಲಿ ಗಢಕಾಲಿಕಾ ದೇವಿಯ ದೇವಸ್ಥಾನ ಇದು ಶಕ್ತಿಪೀಠವಾಗಿದೆ. ಈ ದೇವಸ್ಥಾನದಲ್ಲಿಯೇ ಕವಿ ಕಾಲಿದಾಸರಿಗೆ ಕಾಲಿಕಾದೇವಿಯ ದರ್ಶನವಾಗಿತ್ತು. ಇದು ದೇವಿಯ ೫೨ ಶಕ್ತಿಪೀಠಗಳ ಪೈಕಿ ಒಂದಾಗಿದೆ. ಈ ಸ್ಥಳದಲ್ಲಿ ಸತಿ ದೇವಿಯ ಕೈಯ ಮೊಣಕೈ ಬಿದ್ದಿತ್ತು. ದೇವಿಯ ಮೂರ್ತಿಗೆ ಸಿಂಧೂರ ಲೇಪನವನ್ನು ಮಾಡಲಾಗಿದೆ. ದೇವಿಯ ಮಸ್ತಕದ ಮೇಲೆ ಚಂದ್ರನಿದ್ದು ಎಡಗಡೆಗೆ ಮತ್ತು ಬಲಗಡೆಗೆ ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಇವರ ಮೂರ್ತಿಗಳಿವೆ. ತ್ರಿಪುರಾ ಮಹಾತ್ಮೆಗನುಸಾರ ಭಾರತದಲ್ಲಿನ ೧೨ ಶಕ್ತಿಪೀಠಗಳ ಪೈಕಿ ಗಢಕಾಲಿಕಾ ದೇವಿಯ ದೇವಸ್ಥಾನ ಆರನೆಯ ಶಕ್ತಿಪೀಠವಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ಸಿಂಹದ ಮೂರ್ತಿ ಇದೆ. ಅದರಂತೆ ಸಭಾಮಂಟಪದಲ್ಲಿ ಅನೇಕ ದೇವಿ-ದೇವತೆಗಳ ಚಿತ್ರಗಳಿವೆ.

ಲೋಕಕಥೆಗಳಿಗನುಸಾರ ಶಾಕುಂತಲಮ್, ಮೇಘದೂತ ಈ ಗ್ರಂಥಗಳ ರಚನಾಕಾರ ಮತ್ತು ಸಾಮಾ್ರಟ ವಿಕ್ರಮಾದಿತ್ಯರ ನವರತ್ನಗಳ ಪೈಕಿ ಪ್ರಮುಖ ರತ್ನ (ಪ್ರಮುಖ ವ್ಯಕ್ತಿ) ಮಹಾಕವಿ ಕಾಲಿದಾಸರ ಇಷ್ಟದೇವಿ ಎಂದು (ಉಪಾಸನಾದೇವಿ) ಶ್ರೀ ಗಢಕಾಲಿಕಾ ದೇವಿಯನ್ನು ಗೌರವಿಸಲಾಗುತ್ತದೆ. ಈ ಸ್ಥಳದಲ್ಲಿ ಕವಿ ಕಾಲಿದಾಸರಿಗೆ ದಿವ್ಯ ಜ್ಞಾನ ದೊರಕಿತ್ತು. ರಾಜಾ ವಿಕ್ರಮಾದಿತ್ಯ ಮತ್ತು ಕವಿ ಕಾಲಿದಾಸ ಈ ಮಂದಿರಕ್ಕೆ ಸಾಧನೆಗಾಗಿ ಬರುತ್ತಿದ್ದರು.

ಸಾಮ್ರಾಟ ಹರ್ಷವರ್ಧನರು ೭ ನೇ ಶತಮಾನದಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿದ್ದರು. ಹತ್ತನೇ ಶತಮಾನದಲ್ಲಿನ ಪರಮಾರ ರಾಜ್ಯಕಾಲದಲ್ಲಿ ಈ ಜೀಣೋದ್ಧಾರದ ಅವಶೇಷವೂ ದೊರಕಿದ್ದವು. ೨೦ ನೇ ಶತಮಾನದಲ್ಲಿ ಪರಂಪರಾಗತ ಪೂಜಾರಿಗಳಾದ ಶ್ರೀ ಸಿದ್ಧನಾಥ ಮಹಾರಾಜರು ಸಂವತ್ಸರ ೨೦೦೧ (ವರ್ಷ ೧೯೪೪) ರಲ್ಲಿ ದೇವಸ್ಥಾನದ ಪುನಃ ಜೀರ್ಣೋದ್ಧಾರ ಮಾಡಿದ್ದರು. ದೇವಸ್ಥಾನದ ಸ್ಥಳದಲ್ಲಿ ಮೊದಲಿಗೆ ಅವಂತಿಕಾ ನಗರದ ವಾಸ್ತವ್ಯ ವಿತ್ತು. ಕಾಲಾಂತರದಲ್ಲಿ ಆ ನಗರವು ಭೂಮಿಯಲ್ಲಿ ಮುಚ್ಚಿ ಹೋಯಿತು. ದೇವಿಯ ದೇವಸ್ಥಾನವು ಗುಡ್ಡದ ಮೇಲಿರುವುದರಿಂದ ದೇವಿಗೆ ಗಢಕಾಲಿಕಾ ಎಂದು ಹೆಸರು ಬಂದಿತು.

(ಕೃಪೆ : ಪತ್ರಿಕಾ ಜಾಲತಾಣ)

1 thought on “ಮಹಾಕವಿ ಕಾಲಿದಾಸರಿಗೆ ದಿವ್ಯ ಜ್ಞಾನವನ್ನು ಪ್ರದಾನಿಸುವ ಉಜ್ಜೈನಿನ ಶ್ರೀ ಗಢಕಾಲಿಕಾದೇವಿ”

  1. ಹಿಂದೂ ಧರ್ಮದವರು ಅನ್ಯಧರ್ಮೀಯರ ಆಮಿಷಕ್ಕೆ ಬಲಿಯಾಗಿ ಮತಾಂತರಗೊಳ್ಳುವುದು ವಿಷಾದನೀಯವಾಗಿದೆ. ಬದಲಾವಣೆ ಆಗುತ್ತಿರುವ ಈ ಸಂದರ್ಭದಲ್ಲಿ ಹಿಂದೂ ಸನಾತನ ಧರ್ಮ ವನ್ನು ಉಳಿಸಿ ಬೆಳೆಸುವ ಕಾರ್ಯ ತುಂಬಾ ಸ್ವಾಗತಾರ್ಹವಾಗಿದೆ. ಹಿಂದೂ ಸನಾತನ ಧರ್ಮದ ಬಗ್ಗೆ ಮಾಹಿತಿಯನ್ನು ನೀಡುತ್ತಿರುವುದು ಶ್ಲಾಘನೀಯ.🙏🙏🙏🙏🙏🙏🙏💐 ಧನ್ಯವಾದಗಳು💐

    Reply

Leave a Comment