ಆರೋಗ್ಯ ಎಂದರೇನು ?

ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯದಾಯಕವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳನ್ನು ಪಾಲಿಸುವುದರಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ; ಆದರೆ ಜೀವನದಾತನ ಜೀವನಶಕ್ತಿಯು ಸಹಕರಿಸಿದಾಗ ಮಾತ್ರ ವೈದ್ಯರ ಚಿಕಿತ್ಸೆಗಳು ಯಶಸ್ವಿಯಾಗುತ್ತವೆ ಹಾಗೂ ರೋಗಿ ಗುಣಮುಖನಾಗುತ್ತಾನೆ !

ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಆರೋಗ್ಯವೆಂದರೆ ಸುಖಸಂವೇದನೆಯನ್ನು ಅನುಭವಿಸುವ ಅವಸ್ಥೆ, ಅಂದರೆ ಆರೋಗ್ಯ

ಬಲಶಾಲಿ, ಒಳ್ಳೆಯ ಮೈಕಟ್ಟು ಹಾಗೂ ದಷ್ಟಪುಷ್ಟ ಶರೀರ, ತೇಜಸ್ವಿ ಕಣ್ಣುಗಳು, ಕಾಂತಿಯುಕ್ತ ತ್ವಚೆ, ಹೊಳೆಯುವ ಕೂದಲು, ಒಳ್ಳೆಯ ಹಸಿವು, ಶಾಂತ ನಿದ್ರೆ, ನಾಡಿ, ಶ್ವಾಸ, ಮಲ-ಮೂತ್ರ, ಕೀಲುಗಳ ಚಲನೆ, ಇತರ ಎಲ್ಲ ಅವಯವಗಳ ಹಾಗೂ ಎಲ್ಲ ಇಂದ್ರಿಯಗಳ ಕಾರ್ಯಗಳು ವ್ಯವಸ್ಥಿತ ಹಾಗೂ ಸಹಜವಾಗಿ ನಡೆಯುವುದು ಎಂದರೆ ಶಾರೀರಿಕ ಆರೋಗ್ಯದ ಲಕ್ಷಣಗಳಾಗಿವೆ.

ಮನಸ್ಸಿನಲ್ಲಿ ಯಾವುದೇ ದುಃಖ ಅಥವಾ ಒತ್ತಡ ಇಲ್ಲದಿರುವುದು, ಕಾಮ-ಕ್ರೋಧಾದಿ ಷಡ್ರಿಪುಗಳು ಹತೋಟಿಯಲ್ಲಿರುವುದು, ಕರ್ತವ್ಯ ದಕ್ಷನಾಗಿರುವುದು, ಪ್ರತಿಯೊಂದು ಕೃತಿಯನ್ನು ಕೌಶಲ್ಯದಿಂದ ಹಾಗೂ ಉತ್ಸಾಹದಿಂದ ಮಾಡುವುದು, ಇದು ಮಾನಸಿಕ ಆರೋಗ್ಯದ ಲಕ್ಷಣಗಳಾಗಿವೆ.

ಸತತವಾಗಿ ಸಚ್ಚಿದಾನಂದ ಸ್ವರೂಪದಲ್ಲಿರುವುದು, ಅದಕ್ಕಾಗಿ ಸ್ವಾರ್ಥ ಹಾಗೂ ಆಸಕ್ತಿಯನ್ನು ತ್ಯಜಿಸಿ ನಿಷ್ಕಾಮ ಬುದ್ಧಿಯಿಂದ ಭಗವದ್ಭಕ್ತಿಯನ್ನು ಮಾಡುವುದು ಹಾಗೂ ಅದರಲ್ಲಿ ಸಮಾಧಾನದಲ್ಲಿರುವುದು ಅಂದರೆ ಆಧ್ಯಾತ್ಮಿಕ ಆರೋಗ್ಯವಾಗಿದೆ.

ನಾವು ಸಮಾಜದ ಒಂದು ಘಟಕವಾಗಿದ್ದು ಸಮಾಜವು ಸುಖಿಯಾಗಿದ್ದರೆ ಮಾತ್ರ, ನಾವು ಸುಖಿಯಾಗಬಹುದು. ಅದಕ್ಕಾಗಿ ಇತರರಿಗಾಗಿ ಶ್ರಮಿಸುವ ಮನೋವೃತ್ತಿಯಿರುವುದು, ಎಲ್ಲರ ಬಗ್ಗೆ ಪ್ರೀತಿ, ಕ್ಷಮಾಶೀಲತೆ, ಸಮಾಜ ಕಾರ್ಯಕ್ಕಾಗಿ ಸಮಯ ನೀಡುವುದು ಇತ್ಯಾದಿಗಳಿಂದ ಸಮಾಜದ ಆರೋಗ್ಯದ ರಕ್ಷಣೆಯಾಗ ಬಹುದು. ಕೇವಲ ರೋಗದಿಂದ ಮಾತ್ರವಲ್ಲ, ಭವರೋಗದಿಂದ ಅಂದರೆ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸಿ ಮಾನವನನ್ನು ದುಃಖದಿಂದ ಶಾಶ್ವತ ವಾಗಿ ಮುಕ್ತಗೊಳಿಸುವುದು ಹಾಗೂ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವುದೇ ಆಯುರ್ವೇದದ ಅಂತಿಮ ಧ್ಯೇಯವಾಗಿದೆ.

ರೋಗಗಳ ಉತ್ಪತ್ತಿ

ಮಾನವನು ಜನ್ಮದಿಂದ ಬೆಳೆಯುತ್ತಾ ಹೋದಂತೆ ಅವನಿಗೆ ‘ಪ್ರತಿಯೊಂದು ಕೃತಿಯನ್ನು ಈಶ್ವರನೇ ಮಾಡುತ್ತಾನೆ’ ಎಂದು ಅನಿಸುವುದಕ್ಕಿಂತ ‘ಪ್ರತಿಯೊಂದು ಕೃತಿಯನ್ನು ನಾನು ಮಾಡುತ್ತೇನೆ’ ಎಂದು ಅನಿಸುತ್ತದೆ. ಇದಕ್ಕೇ ‘ಅಹಂ’ ಎಂದು ಹೇಳುತ್ತಾರೆ. ಎಷ್ಟು ಅಹಂ ಹೆಚ್ಚೋ, ಅಷ್ಟು ಋಣ ಶಕ್ತಿ ಹೆಚ್ಚು. ಅಹಂನಿಂದಾಗಿ ಆಸಕ್ತಿ ನಿರ್ಮಾಣವಾಗುತ್ತದೆ. ಅದರಿಂದಲೇ ಮುಂದೆ ರೋಗಗಳು ಉತ್ಪತ್ತಿಯಾಗುತ್ತವೆ. ಅದರಿಂದ ನಿರ್ಮಾಣವಾಗುವ ಅಸಂಖ್ಯ ರೋಗಗಳೆಂದರೆ ಮಾನವನಲ್ಲಿರುವ ಅಹಂನ ವಿವಿಧ ಹಂತಗಳು ಹಾಗೂ ಸ್ವಭಾವದೋಷಗಳು. ರೋಗಗಳ ತೀವ್ರತೆಗನುಸಾರ ಅವುಗಳ ಅಸಂಖ್ಯ ವಿಧಗಳಿದ್ದುಅವುಗಳ ಪರಿಣಾಮವೂ ಬೇರೆಬೇರೆ ಇರುತ್ತವೆ. ರೋಗಗಳ ಅಧ್ಯಯನ ಮಾಡಲು ಯಾರೂ ಸಿದ್ಧರಿರುವುದಿಲ್ಲ. ಆದುದರಿಂದ ಅವುಗಳನ್ನು ದೂರಗೊಳಿಸಲು ಅವಶ್ಯವಿರುವ ಹಾಗೂ ಪರಿಣಾಮಕಾರಿಯಾಗಿ ಪ್ರಯತ್ನಿಸುವವರೂ ಕಡಿಮೆ ಇದ್ದಾರೆ. ವಿಕಾರಗಳನ್ನು ಹೀಗೆ ಅಧ್ಯಯನ ಮಾಡುವುದರಿಂದ ಅವುಗಳನ್ನು ದೂರಗೊಳಿಸಲು ಸುಲಭವಾಗುವುದು.

ರೋಗಗಳ ಪರಿಣಾಮ (ರೋಗಗಳು ಸ್ಥೂಲದಿಂದಲೂ ತಿಳಿಯುವುದು)

ತನ್ನ ಮೇಲಾಗುವ ಪರಿಣಾಮ : ರೋಗಗಳು ಮನಸ್ಸಿನ ವಿಚಾರಗಳನ್ನು ಹೆಚ್ಚಿಸುತ್ತವೆ ಅಥವಾ ಜೀವನದಲ್ಲಿ ಅಡಚಣೆಗಳನ್ನು ನಿರ್ಮಿಸುತ್ತವೆ. ರೋಗಗಳಿಂದ ಶಾರೀರಿಕ ಹಾಗೂ ಮಾನಸಿಕ ಕಾಯಿಲೆ ನಿರ್ಮಾಣವಾಗುತ್ತವೆ ಹಾಗೂ ಕೆಟ್ಟ ಶಕ್ತಿಗಳು ತೊಂದರೆ ನೀಡುವ ಸಾಧ್ಯತೆ ಹೆಚ್ಚಾಗುತ್ತದೆ.

ಆರೋಗ್ಯ ಹದಗೆಡಲು ಒಂದು ಕಾರಣ : ಅಹಂ !

೧. ಜೀವದ ಸುತ್ತಮುತ್ತ ಹೆಚ್ಚುತ್ತಿರುವ ಅಹಂನ ಆವರಣದಿಂದ ಜೀವದ ಮನಸ್ಸಿನ ಕಾರ್ಯವು ಹೆಚ್ಚಾಗಿ ಅದರಿಂದ ಸ್ಥೂಲದೇಹದಲ್ಲಿ ಖನಿಜಾಂಶ ಹಾಗೂ ಕ್ಯಾಲ್ಸಿಯಂನ ಸಮತೋಲನ ಹದಗೆಡುತ್ತದೆ.

೨. ಅಹಂನಿಂದ ಸ್ಥೂಲದೇಹಕ್ಕೆ ಜಡತ್ವ ಬಂದು ಜೀವದ ಚೈತನ್ಯ ಗ್ರಹಣ ಮಾಡುವ ಕ್ಷಮತೆಯು ಲೋಪವಾಗುತ್ತದೆ. ಶರೀರದ ಜೀವಕಣಗಳಲ್ಲಿ ಚೈತನ್ಯ ಕಡಿಮೆಯಾಗಿ ಸ್ನಾಯು ಮತ್ತು ಎಲುಬುಗಳಿಗೆ ಶಿಥಿಲತೆ ಹಾಗೂ ಶುಷ್ಕತೆ ಬರುತ್ತದೆ.

೩. ಅಹಂನಿಂದ ಮೆದುಳಿನ ಸುತ್ತಲಿರುವ ಕೃಷ್ಣತತ್ತ್ವ್ವವು ವಿಘಟನೆಯಾಗಿ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗಿ ವಿವಿಧ ಶಾರೀರಿಕ, ಮಾನಸಿಕ ರೋಗಗಳಾಗುತ್ತವೆ.

(ಆಧಾರ: ಸನಾತನದ ಬಿಂದುಒತ್ತಡಕ್ಕೆ ಸಂಬಂಧಿಸಿದ ಗ್ರಂಥ)

1 thought on “ಆರೋಗ್ಯ ಎಂದರೇನು ?”

Leave a Comment