ಚಿತ್ರಕೂಟ ಪರ್ವತದ ಸಮಗ್ರ ದರ್ಶನ

ಪ್ರಭು ಶ್ರೀರಾಮನ ಪಾದಸ್ಪರ್ಶದಿಂದ ಪಾವನವಾಗಿದ್ದ ಚಿತ್ರಕೂಟ ಪರ್ವತದ ಸಮಗ್ರ ದರ್ಶನ

 

ಪ್ರಭು ಶ್ರೀರಾಮಚಂದ್ರರು ೧೪ ವರ್ಷಗಳ ವನವಾಸ ಮುಗಿಸಿದ ಬಳಿಕ ರಾವಣನನ್ನು ವಧಿಸಿ ಚೈತ್ರ ಶುಕ್ಲ ಪಕ್ಷ ಪ್ರತಿಪದೆಯಂದು ಅಯೋಧ್ಯೆಗೆ ಮರಳಿ ಬಂದರು; ಆಗ ನಗರದಲ್ಲಿ ಧರ್ಮಧ್ವಜ-ತೋರಣಗಳನ್ನು ಏರಿಸಿ ಅದ್ಧೂರಿಯ ಸ್ವಾಗತ ಮಾಡಲಾಯಿತು. ಶ್ರೀರಾಮಚಂದ್ರರು ಪ್ರಜೆಗಳನ್ನು ವಾಲಿಯ ಸಂಕಟಗಳಿಂದ ಮುಕ್ತ ಗೊಳಿಸಿದಾಗ, ಮುಕ್ತರಾದ ಪ್ರಜೆಗಳೆಲ್ಲರೂ ಅಂದು ಧರ್ಮಧ್ವಜವನ್ನು ಏರಿಸಿ ಆನಂದವನ್ನು ವ್ಯಕ್ತಪಡಿಸಿದರು. ಅದು ಶ್ರೀರಾಮನು ವಾಲಿಯ ರಾಕ್ಷಸಿ ಪ್ರವೃತ್ತಿಯನ್ನು ನಾಶಗೊಳಿಸಿದ ಸಂಕೇತವಾಗಿತ್ತು !

ಭಗವಾನ್ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಇವರು ೧೪ ವರ್ಷಗಳವರೆಗೆ ವನವಾಸದಲ್ಲಿದ್ದಾಗ ಉತ್ತರಪ್ರದೇಶದ ಚಿತ್ರಕೂಟ ಪರ್ವತದ ಮೇಲೆ ನೆಲೆಸಿದ್ದರು. ಚಿತ್ರಕೂಟ ಪರ್ವತದ ಮೇಲಿನ ಗುಪ್ತ ಗೋದಾವರಿ, ಶ್ರೀರಾಮ-ಭರತನ ಮಿಲನದ ದೇವಸ್ಥಾನ, ಶ್ರೀರಾಮಚಂದ್ರರು ವಾಲಿಯ ವಧೆ ಮಾಡಿದ ಸ್ಥಳ, ಮುಂತಾದ ದುರ್ಲಭ ಛಾಯಾಚಿತ್ರಗಳನ್ನು ರಾಮನವಮಿಯ ಶುಭಮುಹೂರ್ತದಲ್ಲಿ ವಾಚಕರ ಮುಂದಿಡುತ್ತಿದ್ದೇವೆ.

ಚಿತ್ರಕೂಟದಲ್ಲಿನ ಪರ್ಣಕುಟೀರ ಶ್ರೀರಾಮ ದೇವಸ್ಥಾನ. ಇಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ೧೧ ವರ್ಷ ಗೆಡ್ಡೆಗೆಣಸುಗಳನ್ನು ತಿಂದು ಕಳೆದರು.

ಶ್ರೀರಾಮ ದೇವಸ್ಥಾನದಲ್ಲಿನ ಶ್ರೀರಾಮನ ಚರಣ ಪಾದುಕೆಗಳು

ಚಿತ್ರಕೂಟ ಪರ್ವತದ ಮೇಲಿನ ಗುಪ್ತ ಗೋದಾವರಿಯ ಉಗಮಸ್ಥಾನ. ಶ್ರೀರಾಮನ ದರ್ಶನಕ್ಕಾಗಿ ನಾಸಿಕದಲ್ಲಿ ಗೋದಾವರಿ ದೇವಿಯು ಗುಪ್ತವಾಗಿ ಪ್ರಕಟವಾಗಿದ್ದರಿಂದ ಈ ಸ್ಥಳಕ್ಕೆ ಗುಪ್ತ ಗೋದಾವರಿ ಎಂದು ಕರೆಯುತ್ತಾರೆ.

ಚಿತ್ರಕೂಟದ ಶ್ರೀರಾಮ-ಭರತ ಮಿಲನದ ದೇವಸ್ಥಾನ. ರಾಮನು ವನವಾಸಕ್ಕೆ ಹೋಗಿರುವನೆಂದು ತಿಳಿದ ಮೇಲೆ, ಭರತನು ರಾಮನ ಭೇಟಿಗೆ ಚಿತ್ರಕೂಟಕ್ಕೆ ಬಂದ ಸ್ಥಳ

ಚಿತ್ರಕೂಟದಲ್ಲಿ ಭರತ-ರಾಮನ ಮಿಲನದ ಸಮಯದಲ್ಲಿ ಅಲ್ಲಿಯ ಬಂಡೆಗಲ್ಲು ಮೃದುವಾಗಿ ಅದರ ಮೇಲೆ ಭರತ ಮತ್ತು ಶ್ರೀರಾಮನ ಚರಣಗಳ ಹೆಜ್ಜೆಗಳು ಮೂಡಿವೆ.

ಕರ್ನಾಟಕದ ಹಂಪಿಯ ಕಿಷ್ಕಿಂಧಾ ನಗರದಲ್ಲಿ ಶ್ರೀರಾಮನು ವಾಲಿಯ ವಧೆ ಮಾಡಿದನು.

ಎಲ್ಲ ಭಕ್ತಜನರ ಭಗವಾನ ಶ್ರೀರಾಮನೆಂದರೆ ಸಮಸ್ತ ಪ್ರಜೆಗಳ ಪ್ರಭು ಶ್ರೀರಾಮಚಂದ್ರ ! ಎಲ್ಲ ದೃಷ್ಟಿಯಿಂದಲೂ ಆದರ್ಶನಾಗಿದ್ದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಆದರ್ಶವನ್ನಿಟ್ಟುಕೊಂಡು ಧರ್ಮಾಚರಣೆ ಮತ್ತು ಸಾಧನೆ ಮಾಡಿ ರಾಮರಾಜ್ಯದ ಸ್ಥಾಪನೆಗಾಗಿ ಕಟಿಬದ್ಧರಾಗೋಣ ! ಶ್ರೀರಾಮನ ಆದರ್ಶ ಧರ್ಮಪಾಲನೆಯನ್ನು ನೆನೆಸಿಕೊಂಡು ನಿತ್ಯ ಧರ್ಮಾಚರಣೆ ಮಾಡಿ ಪ್ರಭು ಶ್ರೀರಾಮನ ಕೃಪೆಗೆ ಪಾತ್ರರಾಗೋಣ ! ಪ್ರಭು ಶ್ರೀರಾಮನ ಪಾದಸ್ಪರ್ಶದಿಂದ ಪಾವನವಾಗಿದ್ದ ಈ ಸ್ಥಾನಗಳ ದರ್ಶನವನ್ನು ಭಾವಪೂರ್ಣವಾಗಿ ಪಡೆಯೋಣ !

4 thoughts on “ಚಿತ್ರಕೂಟ ಪರ್ವತದ ಸಮಗ್ರ ದರ್ಶನ”

  1. Chitrakoot photos are attractive. Kishkinda photo of Hampi in Karnataka could have been given in colour.However Sanatan Sanstha deserves sincere appreciation ❤️

    Reply
    • ನಮಸ್ಕಾರ
      ನಿಮ್ಮ ಅಭಿಪ್ರಾಯ ತಿಳಿಸಿದಕ್ಕೆ ಧನ್ಯವಾದಗಳು. ಮುಂದೆ ಈ ರೀತಿಯ ಚಿತ್ರಗಳನ್ನು ನೀಡಲು ಪ್ರಯತ್ನಿಸುತ್ತೇವೆ. ನಮ್ಮ ಜಾಲತಾಣದ ಇತರ ಲೇಖನಗಳನ್ನು ಕೂಡ ಓದಬೇಕಾಗಿ ವಿನಂತಿಸುತ್ತೇವೆ.

      Reply
      • Sir good information It s very much interesting to know valuable information. Looking forward to receiving such valuable information in the future.

        Reply

Leave a Comment