ಕಂಬೋಡಿಯಾ ಬೌದ್ಧ ರಾಷ್ಟ್ರವಾಗಿದ್ದರೂ ಅಲ್ಲಿನ ಅರಮನೆಯಲ್ಲಿ ಎಲ್ಲ ಚಿಹ್ನೆಗಳು ಸನಾತನ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಿರುವುದು !

ಕಂಬೋಡಿಯಾದ ರಾಜನ ವೈಶಿಷ್ಟ್ಯಪೂರ್ಣ ಅರಮನೆ

ಕಂಬೋಡಿಯಾ ಬೌದ್ಧ ರಾಷ್ಟ್ರವಾಗಿದ್ದರೂ ಅಲ್ಲಿನರಾಜ ನರೋದೋಮ ಸಿಂಹಮೋನಿಯವರ ಅರಮನೆಯಲ್ಲಿ ಎಲ್ಲ ಚಿಹ್ನೆಗಳು ಸನಾತನ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಿರುವುದು !

೧. ಕಂಬೋಡಿಯಾದ ರಾಜ ನರೋದೋಮ ಸಿಂಹಮೋನಿ (ರಾಜ ನರೋತ್ತಮ ಸಿಂಹಮುನಿ) ಇವನು ಫ್ರೆಂಚ್ ಸರಕಾರದ ಸಹಾಯದಿಂದ ‘ನೋಮ ಫೆನ’ ನಗರಕ್ಕೆ ಶಾಶ್ವತವಾದ ರಾಜಧಾನಿಯನ್ನಾಗಿ ಮಾಡಿ ೪ ನದಿಗಳ ಸಂಗಮದ ಸ್ಥಳದಲ್ಲಿ ಅರಮನೆ ಕಟ್ಟುವುದು

ನಾವು ಮಾರ್ಚ್ ೨೪ ರಂದು ಕಂಬೋಡಿಯಾದ ರಾಜನ ಅರಮನೆ, ಕಂಬೋಡಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ರಾಷ್ಟ್ರೀಯ ಸ್ಮಾರಕಗಳನ್ನು ನೋಡಲು ನಿಶ್ಚಯಿಸಿದೆವು. ಅದರಂತೆ ನಾವು ಬೆಳಗ್ಗೆ ೮ ಗಂಟೆಗೆ ಅರಮನೆಗೆ ಹೊರಟೆವು. ೧೫ ನೇ ಶತಮಾನದವರೆಗೆ ಕಂಬೋಡಿಯಾದ ರಾಜಧಾನಿಯು ಅಲ್ಲಿರುವ ‘ಸೀಮ ರಿಪ್’ನ ಪ್ರದೇಶದಲ್ಲಿತ್ತು. ಆ ನಗರಕ್ಕೆ ಈಗ ‘ಅಂಕೋರ ನಗರ’ ಎನ್ನುತ್ತಾರೆ. ಅನಂತರ ಅಲ್ಲಿನ ಖಮೇರ ಹಿಂದೂ ಸಾಮ್ರಾಜ್ಯವು ಬೌದ್ಧ ರಾಷ್ಟ್ರಗಳ ಆಕ್ರಮಣದಿಂದಾಗಿ ನಾಶವಾಯಿತು. ೧೬ ರಿಂದ ೧೮ ನೇ ಶತಮಾನದವರೆಗೆ ಕಂಬೋಡಿಯಾದ ರಾಜಧಾನಿಯು ಅನೇಕ ಬಾರಿ ಬದಲಾಯಿತು. ಕೊನೆಗೆ ೧೮೬೬ ರಲ್ಲಿ ಅಂದಿನ ಕಂಬೋಡಿಯಾದ ರಾಜಾ ನರೋದೋಮ ಸಿಂಹಮೋನಿ (ರಾಜಾ ನರೋತ್ತಮ ಸಿಂಹಮುನಿ) ಇವನು ಫ್ರೆಂಚ್ ಸರಕಾರದ ಸಹಾಯದಿಂದ ‘ನೋಮ ಫೆನ’ ಎಂಬ ನಗರವನ್ನು ಶಾಶ್ವತವಾದ ರಾಜಧಾನಿ ಮಾಡಿದನು. ‘ನೋಮ ಫೆನ’ದಲ್ಲಿ ೪ ನದಿಗಳ ಸಂಗಮ ಅದರ ತೀರದಲ್ಲಿ ಅರಮನೆಯನ್ನು ಕಟ್ಟಿದನು. ಅಂದಿನಿಂದ ಇಂದಿನವರೆಗೆ ಅದು ಕಂಬೋಡಿಯಾದ ಎಲ್ಲ ರಾಜರ ಮುಖ್ಯ ಕೇಂದ್ರವಾಗಿದೆ. ಪ್ರಸ್ತುತ ರಾಜನಿಗೆ ಗೌರವದ ಸ್ಥಾನವಿದ್ದರೂ ಕಂಬೋಡಿಯಾದ ಸರಕಾರದ ಮೇಲೆ ಅವನ ನಿಯಂತ್ರಣವಿಲ್ಲ.

೨. ಅರಮನೆಯ ಹೊರಗೆ ಮತ್ತು ಒಳಗಿನ ಎಲ್ಲ ಚಿಹ್ನೆಗಳು ‘ಸನಾತನ ಹಿಂದೂ ಧರ್ಮ’ಕ್ಕೆ ಸಂಬಂಧ ಪಟ್ಟಿರುವುದಾಗಿದೆ

ಅರಮನೆಯ ಮೆಟ್ಟಿಲುಗಳ ಬದಿಗೆ ಇರುವಸರ್ಪಗಳ ಮೂರ್ತಿಯು ಗೋಲಾಕಾರದಲ್ಲಿ ಕಾಣಿಸುತ್ತಿದೆ.

ಅರಮನೆಯ ವೈಶಿಷ್ಟ್ಯವೇನೆಂದರೆ, ಈ ಅರಮನೆಯನ್ನು ಚೀನಾ ಮತ್ತು ಫ್ರೆಂಚ್ ವಾಸ್ತುಶೈಲಿಯಲ್ಲಿ ಕಟ್ಟಲಾಗಿದೆ; ಆದರೆ ಅರಮನೆಯ ಎಲ್ಲ ಚಿಹ್ನೆಗಳು ‘ಸನಾತನ ಹಿಂದೂ ಧರ್ಮ’ಕ್ಕೆ ಸಂಬಂಧಪಟ್ಟಿದ್ದಾಗಿದೆ. ಅರಮನೆಯ ಪರಿಸರದಲ್ಲಿ ಪ್ರವೇಶಿಸುವಾಗ ಶ್ರೀವಿಷ್ಣು ಮತ್ತು ಶಿವ ಒಟ್ಟಿಗೆ ಇರುವ ‘ಹರಿಹರ’ ಮೂರ್ತಿ ಕಾಣಿಸುತ್ತವೆ. ಅಲ್ಲಿ ಮುಖ್ಯ ಅರಮನೆಯಲ್ಲಿನ ಮೆಟ್ಟಿಲುಗಳ ಎರಡು ಬದಿಗೆ ‘ವಾಸುಕಿ’ ಮತ್ತು ‘ತಕ್ಷಕ’ ಈ ಎರಡು ಸರ್ಪಗಳ ವಿಗ್ರಹಗಳು ಇರುತ್ತವೆ. (ಛಾಯಾಚಿತ್ರ ಕ್ರಮಾಂಕ ೧ ನೋಡಿ)

ಅರಮನೆಯ ಚಪ್ಪರಕ್ಕೆ ನೀಡಿರುವ ಸ್ತೂಪದ ಆಕಾರ ಮತ್ತು ಅದರ ಮೇಲೆ ಕೆತ್ತಿರುವ ಚತುರ್ಮುಖ ಬ್ರಹ್ಮನನ್ನು ಗೋಲಾಕಾರದಲ್ಲಿ ತೋರಿಸಲಾಗಿದೆ.

‘ವಾಸುಕಿ’ ಸರ್ಪದ ಮೇಲೆ ಯಾವ ರೀತಿ ಹೆಡೆ ಇರುತ್ತದೆಯೋ ಅದೇ ರೀತಿಯ ಹೆಡೆಯನ್ನು ಅರಮನೆಯ ಚಪ್ಪರಕ್ಕೆ ಚೀನಿ ಶೈಲಿಯಲ್ಲಿ ಮಾಡಿರುತ್ತಾರೆ. ಅರಮನೆಯ ಚಪ್ಪರಕ್ಕೆ ಮಧ್ಯಭಾಗಕ್ಕೆ ಸ್ತೂಪದ ಆಕಾರ ನೀಡಿದ್ದು ಅದಕ್ಕೆ ಅವರು ‘ಸುಮೇರು ಪರ್ವತ’ ಎಂದು ಕರೆಯುತ್ತಾರೆ. ಆ ಸುಮೇರಿನ ಕೆಳಗಡೆ ೪ ಮುಖಗಳಿದ್ದು ಅದು ‘ಚತುರ್ಮುಖ ಬ್ರಹ್ಮ’ವಾಗಿದೆ. (ಛಾಯಾಚಿತ್ರ ಕ್ರಮಾಂಕ ೨ ನೋಡಿ)

ಅರಮನೆಯಲ್ಲಿ ಎಲ್ಲಿ ರಾಜನು ಕುಳಿತುಕೊಳ್ಳುತ್ತಾನೆ, ಆ ರಾಜದರ್ಬಾರದ ಒಳಗಿನ ಎಲ್ಲ ಗೋಡೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತಗಳಲ್ಲಿನ ಪ್ರಸಂಗದ ಚಿತ್ರಗಳನ್ನು ಬಿಡಿಸಿದ್ದಾರೆ. ‘ಅರಮನೆ ಎಂದರೆ ದೇವಲೋಕವಾಗಿದ್ದು ಅಲ್ಲಿರುವ ರಾಜನು ಶ್ರೀ ಮಹಾವಿಷ್ಣುವಿನ ಪ್ರತೀಕವಾಗಿರುವನು’, ಎಂದು ಕಂಬೋಡಿಯಾದ ಜನರಲ್ಲಿ ನಂಬಿಕೆ ಇದೆ. ಅರಮನೆಯ ಬಹುತೇಕ ಕಂಬಗಳ ಮೇಲೆ ವಿಷ್ಣುವಾಹನ ‘ಗರುಡ’ವಿದೆ. ‘ಗರುಡ’ವು ವಿಷ್ಣುವಾಹನವಾಗಿರುವುದರಿಂದ ಕಂಬೋಡಿಯಾದಲ್ಲಿ ಅದಕ್ಕೆ ಮಹತ್ವವಿದೆ. (ಛಾಯಾಚಿತ್ರ ಕ್ರಮಾಂಕ ೩ ನೋಡಿ)

ಅರಮನೆಯ ಕಂಬದ ಮೇಲೆ ಕೆತ್ತಿರುವ ವಿಷ್ಣು ವಾಹನ ಗರುಡನ ಮೂರ್ತಿಯನ್ನು ಗೋಲಾಕಾರದಲ್ಲಿ ತೋರಿಸಲಾಗಿದೆ.

೩. ಅರಮನೆಯ ಪರಿಸರದಲ್ಲಿರುವ ಪಗೋಡದ ಪಕ್ಕದಲ್ಲಿ ನಂದಿ ಮತ್ತು ಕೈಲಾಸ ಪರ್ವತಗಳ ದೇವಸ್ಥಾನವಿರುವುದು

ಅರಮನೆಯ ಪರಿಸರದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಪಟ್ಟ ಒಂದು ಬೌದ್ಧ ದೇವಸ್ಥಾನವಿದೆ. ಅದಕ್ಕೆ ‘ಸಿಲ್ವರ ಪಗೋಡಾ’ ಎಂದು ಕರೆಯುತ್ತಾರೆ; ಏಕೆಂದರೆ ಅದರ ಒಳಗಡೆ ೫ ಸಾವಿರ ೩೨೯ ಬೆಳ್ಳಿಯ ಹಾಸುಗಲ್ಲುಗಳನ್ನು ಹಾಕಿದ್ದಾರೆ. ದೇವಸ್ಥಾನದ ಮಧ್ಯಭಾಗದಲ್ಲಿ ೬೦೦ ವರ್ಷಗಳ ಹಳೆಯ ಪಚ್ಚೆಯ ಬುದ್ಧನ ಮೂರ್ತಿ ಇದೆ. ಅದನ್ನು ಇಲ್ಲಿಯ ಜನರು ಪವಿತ್ರವೆಂದು ನಂಬುತ್ತಾರೆ. ರಾಜಮನೆತನಕ್ಕೆ ವಿವಿಧ ದೇಶದವರು ಉಡುಗೊರೆಯಲ್ಲಿ ಕೊಟ್ಟಿರುವ ೧ ಸಾವಿರ ೬೫೦ ಸಣ್ಣ-ಪುಟ್ಟ ಬುದ್ಧನ ಮೂರ್ತಿಗಳು ಈ ದೇವಸ್ಥಾನದಲ್ಲಿವೆ. ಪಚ್ಚೆಯ ಬುದ್ಧನ ಮೂರ್ತಿಯ ಎದುರಿಗೆ ೯೦ ಕಿಲೋ ಚಿನ್ನ ಮತ್ತು ೨ ಸಾವಿರ ೮೬ ಬೆಲೆಬಾಳುವ ವಜ್ರಗಳಿಂದ ನಿರ್ಮಿಸಿದ ಬುದ್ಧನ ನಿಂತಿರುವ ಮೂರ್ತಿ ಇದೆ. ಈ ಪಗೋಡದ ಪಕ್ಕದಲ್ಲಿ ಭಗವಾನ ಶಿವನ ವಾಹನ ನಂದಿ ಮತ್ತು ಕೈಲಾಸ ಪರ್ವತ ಎಂಬ ಎರಡು ದೇವಸ್ಥಾನಗಳಿವೆ. ಇದರಿಂದ ‘ಒಂದು ಕಾಲದಲ್ಲಿ ‘ಸಿಲ್ವರ ಪಗೋಡಾ’ ಇದು ‘ಶಿವ ಮಂದಿರ’ವಿರಬಹುದು’, ಎಂದು ಅನಿಸುತ್ತದೆ. ನಮ್ಮ ಜೊತೆಗೆ ಇರುವ ಮಾರ್ಗದರ್ಶಕನು (‘ಗೈಡ’ನು) ನಮಗೆ ಕಳೆದ ೧೬೦ ವರ್ಷಗಳಲ್ಲಿ ಕಂಬೋಡಿಯಾದಲ್ಲಿ ೪ ಸಾವಿರಕ್ಕೂ ಹೆಚ್ಚು ‘ಪಗೋಡ’ಗಳು ನಿರ್ಮಾಣವಾಗಿವೆ. ಅರಮನೆಯ ಪಕ್ಕದಲ್ಲಿಯೇ ಇರುವ ‘ಸಿಲ್ವರ ಪಗೋಡಾ’ದ ಎಡಕ್ಕೆ ಒಂದು ಮಂಟಪವಿದೆ. ಅದರ ಗೋಡೆಯ ಮೇಲೆ ರಾಮಾಯಣ ಮತ್ತು ಮಹಾಭಾರತದ ದೃಶ್ಯಗಳನ್ನು ಬಿಡಿಸಿದ್ದಾರೆ. ಅದೇ ಪರಿಸರದಲ್ಲಿ ರಾಜರು ಅವರ ಪೂರ್ವಜರ ಅಸ್ಥಿಯನ್ನು ಇಟ್ಟಿರುವ ಸ್ತೂಪ ಕಟ್ಟಿದ್ದು ನಾಲ್ಕೂ ದಿಕ್ಕುಗಳಿಗೆ೪ ಸ್ತೂಪಗಳಿವೆ, ಇದನ್ನು ‘ರಾಜ ಸ್ತೂಪ’ ಎನ್ನುತ್ತಾರೆ ಎಂದನು.

೪. ವಸ್ತು ಸಂಗ್ರಹಾಲಯದಲ್ಲಿನ ವಸ್ತುಗಳ ವೈಶಿಷ್ಟ್ಯಗಳು

ಅರಮನೆಯ ಪರಿಸರದಲ್ಲಿರುವ ಒಂದು ಸಣ್ಣ ವಸ್ತುಸಂಗ್ರಹಾಲಯದಲ್ಲಿ ರಾಜಾ, ರಾಣಿ ಮತ್ತು ರಾಜಗುರು ಇವರು ಬಳಸಿದ್ದ ವಸ್ತ್ರಗಳನ್ನು ಇಟ್ಟಿದ್ದಾರೆ. ರಾಣಿಯರು ಪ್ರತಿದಿನ ವಿವಿಧ ಬಣ್ಣಗಳ ಅಂದರೆ ವಾರದ ೭ ದಿನಗಳಲ್ಲಿ ೭ ಬಣ್ಣಗಳ ಬಟ್ಟೆಗಳನ್ನು ಉಪಯೋಗಿಸುತ್ತಿದ್ದರು. ಅದೇ ರೀತಿ ರಾಜನು ಸಹ ಯುದ್ಧಕ್ಕೆ ಹೋಗುವಾಗ ಪೃಥ್ವಿ, ಜಲ, ತೇಜ ಮತ್ತು ವಾಯು ಈ ತತ್ತ್ವಗಳಿಗನುಸಾರ ೪ ಬಣ್ಣಗಳಲ್ಲಿ ನಿರ್ದಿಷ್ಟ ಬಟ್ಟೆಗಳನ್ನು ಉಪಯೋಗಿಸುತ್ತಿದ್ದನು. ‘ಯಾವ ಸಮಯಕ್ಕೆ ಯಾವ ಬಣ್ಣದ ಬಟ್ಟೆ ಧರಿಸಬೇಕು ?’, ಎಂಬುದನ್ನು ರಾಜಗುರುಗಳು ರಾಜನಿಗೆ ಜ್ಯೋತಿಷ್ಯ ಶಾಸ್ತ್ರಕ್ಕನುಸಾರ ಮಾರ್ಗದರ್ಶನ ಮಾಡುತ್ತಿದ್ದರು. ರಾಜಗುರುಗಳು ಮಾತ್ರ ಹಳದಿ ಅಥವಾ ಬಿಳಿ ಬಟ್ಟೆ ಧರಿಸುತ್ತಿದ್ದರು.’
– ಶ್ರೀ. ವಿನಾಯಕ ಶಾನಭಾಗ, ‘ನೋಮ ಫೇನ’, ಕಂಬೋಡಿಯಾ (೨೪.೩.೨೦೧೮)

Leave a Comment