ನೋಟುಗಳ ಮೇಲೆ ಗಣಪತಿಯ ಚಿತ್ರ ಮುದ್ರಿಸಿದ್ದರಿಂದ ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಯಿತು ! – ಇಂಡೊನೇಶಿಯಾದ ನಾಗರಿಕರ ಅಭಿಪ್ರಾಯ

ಜಕಾರ್ತಾ – ಕೆಲವು ವರ್ಷಗಳ ಹಿಂದೆ ಇಂಡೊನೇಶಿಯಾದ ಅರ್ಥವ್ಯವಸ್ಥೆಯು ಕುಸಿಯಿತು. ತದನಂತರ ಈ ದೇಶವು ೨೦ ಸಾವಿರ ರೂಪಾಯಿಗಳ ನೋಟುಗಳನ್ನು ನಿರ್ಮಿಸಿ ಅದರ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸಬೇಕೆಂದು ನಿರ್ಧರಿಸಿತು. ಈ ನಿರ್ಣಯದ ನಂತರ ನಾಗರಿಕರು, ‘ನೋಟುಗಳ ಮೇಲೆ ಗಣಪತಿಯ ಚಿತ್ರವು ಮುದ್ರಿಸಿದ ದಿನದಿಂದ ದೇಶದ ಅರ್ಥವ್ಯವಸ್ಥೆಯ ಬಲಿಷ್ಟವಾಗಿದೆ’, ಎಂದು ಹೇಳುತ್ತಿದ್ದಾರೆ.

ಇತ್ತೀಚಿಗಷ್ಟೇ ಭಾಜಪದ ರಾಜ್ಯಸಭೆಯ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿಯವರು ನೋಟುಗಳ ಮೇಲೆ ಲಕ್ಷ್ಮೀದೇವಿಯ ಚಿತ್ರವನ್ನು ಮುದ್ರಿಸಬೇಕು. ಅದರಿಂದ ಭಾರತದ ರೂಪಾಯಿ ಡಾಲರ್‌ನ ತುಲನೆಯಲ್ಲಿ ಬಲಿಷ್ಠವಾಗುವುದು ಎಂದು ಹೇಳಿದ್ದರು. ಈ ಹೇಳಿಕೆಗಾಗಿ ಅವರನ್ನು ಟೀಕಿಸಲಾಯಿತು; ಆದರೆ ಹಿಂದೂಗಳ ದೇವತೆಯ ಚಿತ್ರವನ್ನು ಮುದ್ರಿಸಿದ ನಂತರ ಅರ್ಥವ್ಯವಸ್ಥೆಯು ಬಲಿಷ್ಠವಾದ ಉದಾಹರಣೆಯು ಇಂಡೊನೇಶಿಯಾದ ರೂಪದಲ್ಲಿ ಬೆಳಕಿಗೆ ಬಂದಿದೆ. ಜಗತ್ತಿನಲ್ಲಿ ಅತ್ಯಧಿಕ ಮುಸಲ್ಮಾನ ಜನಸಂಖ್ಯೆ (ಶೇ. ೮೭) ಇರುವ ಇಂಡೊನೇಶಿಯಾದಲ್ಲಿ ೨೦ ಸಾವಿರ ರೂಪಾಯಿಗಳ ನೋಟುಗಳ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸಲಾಗುತ್ತದೆ. ಇಂಡೊನೇಶಿಯಾದಲ್ಲಿನ ಚಲಾವಣೆಯು ಭಾರತದಲ್ಲಿನ ಚಲಾವಣೆಯಂತೆಯೇ ಇದ್ದು ಅಲ್ಲಿನ ವ್ಯವಹಾರವು ರೂಪಾಯಿಗಳಲ್ಲಿಯೇ ನಡೆಯುತ್ತದೆ. ಈ ನೋಟುಗಳ ಮೇಲೆ ಇಂಡೊನೇಶಿಯಾದ ಮೊದಲ ಶಿಕ್ಷಣ ಮಂತ್ರಿಗಳಾದ ಹಜರ ದೇವಾಂತ್ರಾ ಇವರ ಛಾಯಾಚಿತ್ರವನ್ನೂ ಮುದ್ರಿಸಲಾಗುತ್ತದೆ. ಈ ದೇಶದಲ್ಲಿ ಹಿಂದೂಗಳ ಪ್ರಮಾಣವು ಶೇ. ೩ ರಷ್ಟಿದೆ. ಅಂತೆಯೇ ಇಂಡೊನೇಶಿಯಾದಲ್ಲಿ ಗಣಪತಿ ದೇವತೆಗೆ ಕಲೆ, ವಿಜ್ಞಾನ ಹಾಗೂ ಶಿಕ್ಷಣ ಇವುಗಳ ದೇವತೆಯೆಂದು ಪರಿಗಣಿಸಲಾಗುತ್ತದೆ.

Leave a Comment