ಯಾರೂ ಪರಿಚಯದವರು ಇಲ್ಲದಿರುವ ಕಂಬೋಡಿಯಾದಲ್ಲಿ ಭಗವಂತನ ಅಸ್ತಿತ್ವದ ಅನುಭೂತಿ !

ಕಂಬೋಡಿಯಾದಲ್ಲಿ ಯಾರೂ ಪರಿಚಯದವರು ಇಲ್ಲದಿರುವಾಗ ಈಶ್ವರನ ಕೃಪೆಯಿಂದ ಪ್ರಯಾಣದಲ್ಲಿಯೇ ಓರ್ವವ್ಯಕ್ತಿಯು ಸಹಾಯ ಮಾಡುವುದು, ಇದು ಭಗವಂತನ ಅಸ್ತಿತ್ವದ ಅನುಭೂತಿ !

೧. ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಶ್ರೀ. ದಾಮೋದರ ಎಂಬ ವ್ಯಕ್ತಿಯು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ತಲೆಬಾಗಿ ನಮಸ್ಕರಿಸುವುದು

ಬಾಲಿ (ಇಂಡೋನೇಶಿಯಾ)ಯಿಂದ ನಾವು (ಸದ್ಗುರು) ಸೌ. ಅಂಜಲಿ ಗಾಡಗೀಳ ಇವರೊಂದಿಗೆ ಕಂಬೋಡಿಯಾಕ್ಕೆ ಹೊರಟಿದ್ದೆವು. ಆಗ ಪ್ರವಾಸದಲ್ಲಿ ಕೌಲಾಲಂಪೂರದಲ್ಲಿ ಕೆಲವು ಗಂಟೆ ನಿಲ್ಲ ಬೇಕಾಯಿತು. ಅಲ್ಲಿಂದ ಕಂಬೋಡಿಯಾದ ರಾಜಧಾನಿ ನೋಮ ಫೇನಕ್ಕೆ ಹೋಗಬೇಕಿತ್ತು. ನಾವು ವಿಮಾನ ನಿಲ್ದಾಣದಲ್ಲಿರುವಾಗ ನಮ್ಮ ಪಕ್ಕದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಬಂದರು. ಸಹಜವಾಗಿ ಆ ವ್ಯಕ್ತಿಗಳ ಪರಿಚಯವಾಯಿತು ಮತ್ತು ನಮಗೆ ಅವರೂ ಕೂಡ ಕಂಬೋಡಿಯಾಕ್ಕೆ ಹೊರಟಿದ್ದಾರೆ ಎಂದು ಹೇಳಿದರು. ಅವರ ಹೆಸರು ಶ್ರೀ. ದಾಮೋದರ, ಮೂಲತಃ ಭಾರತದ ತೆಲಂಗಾಣದ ನಿಝಾಮಾಬಾದ ಜಿಲ್ಲೆಯವರಾಗಿದ್ದಾರೆ. ಶ್ರೀ. ದಾಮೋದರ ಇವರಿಗೆ ಜರ್ಮನಿ, ಮಲೇಶಿಯಾ ಮತ್ತು ಕಂಬೋಡಿಯಾ ಈ ಮೂರು ದೇಶಗಳಲ್ಲಿ ಉಪಹಾರಗೃಹಗಳಿವೆ. ಸದ್ಗುರು (ಸೌ.) ಅಂಜಲಿ ಗಾಡಗೀಳರವರು ಅಧ್ಯಾತ್ಮದಲ್ಲಿನ ಅಧಿಕಾರಿ ವ್ಯಕ್ತಿಗಳಾಗಿದ್ದಾರೆಂದು ತಿಳಿಯಿತು ಮತ್ತು ಅವರು ಮೊದಲ ಬಾರಿ ಕಂಬೋಡಿಯಾಕ್ಕೆ ಹೋಗುತ್ತಿದ್ದಾರೆಂದು ತಿಳಿದಾಗ ಅವರು ತಾವಾಗಿಯೇ ನಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು. ಅವರು ಸದ್ಗುರು ಕಾಕೂರವರಿಗೆ ಬಗ್ಗಿ ನಮಸ್ಕರಿಸಿದರು.

೨. ಶ್ರೀ. ದಾಮೋದರರವರು ಕಂಬೋಡಿಯಾದ ನೋಮ ಫೇನ ವಿಮಾನ ನಿಲ್ದಾಣದಲ್ಲಿ ಸಹಾಯ ಮಾಡುವುದರೊಂದಿಗೆ ಸಸ್ಯಹಾರಿ ಭೋಜನದ ವ್ಯವಸ್ಥೆಯನ್ನೂ ಮಾಡಿದರು

ಶ್ರೀ. ದಾಮೋದರರವರು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ “ಕಂಬೋಡಿಯಾದ ವಿಮಾನ ನಿಲ್ದಾಣಕ್ಕೆ ನನ್ನ ಸಹೋದರ ಮತ್ತು ಕೆಲಸಗಾರರು ಬರುತ್ತಾರೆ ಅವರಿಗೆ ನಿಮ್ಮ ಪರಿಚಯ ಮಾಡಿಕೊಡುತ್ತೇನೆ” ಎಂದು ಹೇಳಿದರು. ಕಂಬೋಡಿಯಾದ ರಾಜಧಾನಿ ನೋಮ ಫೇನ್‌ನ ವಿಮಾನ ನಿಲ್ದಾಣದಲ್ಲಿ ಇಳಿದ ಮೇಲೆ ಅವರು ನಮಗೆ ವಿಸಾ ಪಡೆಯಲು ಸಹಾಯ ಮಾಡಿದರು. ವಿಮಾನ ನಿಲ್ದಾಣದಿಂದ ಹೊರಗೆ ಬಂದ ಬಳಿಕ ಸ್ಥಳೀಯ ಸಂಚಾರಿವಾಣಿಯ ‘ಸಿಮ್ ಕಾರ್ಡ್’ ಪಡೆಯುವುದಕ್ಕೂ ನಮಗೆ ಸಹಾಯ ಮಾಡಿದರು. ಸದ್ಗುರು (ಸೌ.) ಕಾಕೂರವರು ಮಹರ್ಷಿ ಅಧ್ಯಾತ್ಮವಿಶ್ವವಿದ್ಯಾಲಯವು ಮಾಡುತ್ತಿರುವ ಕಾರ್ಯದ ಮಾಹಿತಿಯನ್ನು ಹೇಳಿದರು. ಆಗ ಅವರಿಗೆ ಸಾಧಕರು ಸೇವೆಯೆಂದು ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆಂದು ಶ್ರೀ. ದಾಮೋದರ ಇವರಿಗೆ ತಿಳಿಯಿತು. ಆಗ ಅವರು “ನನ್ನಿಂದ ಒಂದು ಸೇವೆಯಾಗಲಿ. ಮುಂದಿನ ೨ ದಿನ ನಿಮ್ಮ ಭೋಜನದ ವ್ಯವಸ್ಥೆ ನನ್ನ ಉಪಹಾರಗೃಹದಲ್ಲಿ ಮಾಡುತ್ತೇನೆ ಎಂದು ಹೇಳಿದರು. “ಭಾರತೀಯ ಸಸ್ಯಹಾರಿ ಭೋಜನವನ್ನು ನಿಮ್ಮ ನಿವಾಸಕ್ಕೆ ನನ್ನ ಸಹೋದರನು ಪ್ರತಿದಿನ ತಲುಪಿಸುವನು” ಎಂದು ಹೇಳಿದರು.

ಎಡದಿಂದ ಶ್ರೀ. ಸತ್ಯಕಾಮ ಕಣಗಲೇಕರ, ಶ್ರೀ. ವಿನಾಯಕ ಶಾನಭಾಗ, ಸದ್ಗುರು (ಸೌ.) ಅಂಜಲಿ ಗಾಡಗೀಳ, ಕು. ಅಕ್ಷರಾ, ಶ್ರೀ. ಆನಂದ, ಶ್ರೀ. ದಾಮೋದರ ಮತ್ತು ಶ್ರೀ. ದಿವಾಕರ ಆಗವಣೆ

೩. ಶ್ರೀ. ದಾಮೋದರರವರು ಸದ್ಗುರು (ಸೌ.) ಗಾಡಗೀಳ ಇವರಿಂದ ಸಾಧನೆಯ ಬಗ್ಗೆ ಮಾರ್ಗದರ್ಶನ ಪಡೆದು ಸ್ವತಃ ನಾಮಜಪ ಮಾಡುವುದರೊಂದಿಗೆ ಉಪಹಾರಗೃಹದಲ್ಲಿಯೂ ದತ್ತನ ನಾಮಜಪ ಹಾಕುವುದು

ದಾಮೋದರರವರು ನಮ್ಮ ೫ ಜನರಿಗೆ ೨ ದಿನದ ಮಧ್ಯಾಹ್ನ ಮತ್ತು ರಾತ್ರಿಯ ಭೋಜನವನ್ನು ನೀಡಿದರು. ಕೊನೆಯ ದಿನ ಅವರು ಸದ್ಗುರು ಕಾಕೂರವರು ಉಪಹಾರಗೃಹಕ್ಕೆ ಬರಬೇಕೆಂದು ವಿನಂತಿ ಮಾಡಿದರು. ನಾವು ಸದ್ಗುರು ಕಾಕೂರವರೊಂದಿಗೆ ಶ್ರೀ. ದಾಮೋದರವರ ‘ರುಚಿ ಭಾರತೀಯ ರೆಸ್ಟೋರೆಂಟ್’ಗೆ ಹೋದೆವು. ಆಗ ಶ್ರೀ. ದಾಮೋದರರವರು ಅವರೊಂದಿಗೆ ಕೆಲಸ ಮಾಡುವವರ ಪರಿಚಯ ಮಾಡಿಕೊಟ್ಟರು. ಆಗ ಅವರ ೯ ವರ್ಷದ ಮಗಳು ಅಕ್ಷರಾಳು ಇದ್ದಳು. ನಂತರ ಅವರು ಅವರ ಜೀವನದಲ್ಲಿ ಘಟಿಸಿದ ಕಠಿಣ ಪ್ರಸಂಗಗಳ ಬಗ್ಗೆ ಹೇಳಿ ಸದ್ಗುರು ಕಾಕೂರವರಿಂದ ಸಾಧನೆಯ ಕುರಿತು ಮಾರ್ಗದರ್ಶನವನ್ನು ಪಡೆದರು. ಅಲ್ಲಿ ಉಪಸ್ಥಿತರಿದ್ದ ಶ್ರೀ. ದಾಮೋದರರವರ ಸ್ನೇಹಿತ ಶ್ರೀ. ಆನಂದ ಇವರೂ ಸದ್ಗುರು ಕಾಕೂ ಅವರಲ್ಲಿ ವಿಯೆಟ್ನಾಮ್ ದೇಶದಲ್ಲಿ ನನ್ನ ಪರಿಚಯದವರಿದ್ದಾರೆ, ನೀವು ಅಲ್ಲಿಗೆ ಹೋಗುವ ಆಯೋಜನೆಯಿದ್ದರೆ, ನಾನು ನಿಮಗೆ ಅವರ ಮಾಹಿತಿಯನ್ನು ಕೊಡುತ್ತೇನೆ ಎಂದು ಹೇಳಿದರು. ನಾನು ಭಾರತಕ್ಕೆ ಬಂದಾಗ ಭಾಗ್ಯನಗರದಲ್ಲಿರುವ ನಿಮ್ಮ ಸಾಧಕರಿಗೆ ಭೇಟಿಯಾಗುವೆನು’ ಎಂದು ಹೇಳಿದರು. ಸದ್ಗುರು ಕಾಕೂರವರು ಹೇಳಿದಂತೆ ಶ್ರೀ. ದಾಮೋದರರವರು ತಕ್ಷಣ ದತ್ತಗುರುಗಳ ನಾಮಜಪ ಮಾಡಲು ಪ್ರಾರಂಭಿಸಿದರು. ಅವರು ಅವರ ಉಪಹಾರ ಗೃಹದಲ್ಲಿ ದತ್ತಜಪ ಹಾಕಲು ಪ್ರಾರಂಭಿಸಿದರು. ಪತ್ನಿಗೂ ನಾಮಜಪದ ಬಗ್ಗೆ ಹೇಳಿದರು.

೪. ಭಗವಂತನೇ ಪರಾತ್ಪರ ಗುರು ಡಾ. ಆಠವಲೆಯವರ ಶ್ರೇಷ್ಠತೆಯನ್ನು ವಿದೇಶದಲ್ಲಿಯೂ ತಲುಪಿಸುತ್ತಿದ್ದಾನೆ !

ಕಂಬೋಡಿಯಾದಲ್ಲಿ ನಮಗೆ ಯಾರ ಪರಿಚಯವು ಇರಲಿಲ್ಲ. ‘ದೇವರೇ ನಮಗಾಗಿ ಶ್ರೀ. ದಾಮೋದರ ಇವರನ್ನು ಕಳುಹಿಸಿದ್ದಾನೆ,’ ಎಂಬ ಅನುಭೂತಿ ಬಂದಿತು. ‘ಸದ್ಗುರು ಕಾಕೂ ಇವರೊಂದಿಗೆ ಪ್ರತಿಯೊಂದು ದೇಶಕ್ಕೆ ಹೋಗುವಾಗ ದೇವರು ಯಾರನ್ನಾದರೂ ಸಹಾಯಕ್ಕೆ ಖಂಡಿತ ಕಳುಹಿಸುತ್ತಾನೆ’, ಎಂಬುದರ ಅನುಭವ ನಮಗೆ ಹೆಜ್ಜೆ ಹೆಜ್ಜೆಗೂ ಬರುತ್ತದೆ. ಭಗವಂತನು ಈ ರೀತಿಯಾಗಿ ಪ್ರತಿಯೊಂದು ದೇಶವನ್ನು ಸನಾತನದ ರಾಮನಾಥಿ ಆಶ್ರಮದೊಂದಿಗೆ ಜೋಡಿಸುತ್ತಿದ್ದಾನೆ. ಇದರಿಂದ ಭಗವಂತನು ಪರಾತ್ಪರ ಗುರು ಡಾಕ್ಟರರ ಶ್ರೇಷ್ಠತೆಯನ್ನು ಹೇಗಾದರೂ ಪ್ರತಿಯೊಂದು ದೇಶದಲ್ಲಿ ತಲುಪಿಸುತ್ತಿದ್ದಾನೆ, ಎಂಬುದು ಕಲಿಯಲು ಸಿಕ್ಕಿತು. ರಾಮನಾಥಿ ಆಶ್ರಮದ ಒಂದು ಕೋಣೆಯಲ್ಲಿದ್ದು ತಮ್ಮ ಜಗತ್ತಿನಾದ್ಯಂತ ಸಾಧಕರಿಗಾಗಿ ಏನು ಬೇಕು ಬೇಡ, ಎಂಬುದರ ಕಾಳಜಿ ವಹಿಸುವ ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’

– ಶ್ರೀ. ವಿನಾಯಕ ಶಾನಭಾಗ, ನೋಮ ಫೆನ್, ಕಂಬೋಡಿಯಾ (೨೪.೩.೨೦೧೮)

Leave a Comment