ಕೌಂಡಿಣ್ಯ ಋಷಿಗಳ ಕ್ಷೇತ್ರ, ಮಹಾಭಾರತದಲ್ಲಿನ ಕಂಭೋಜ ದೇಶ – ಕಾಂಬೋಡಿಯಾ

ಕೌಂಡಿಣ್ಯ ಋಷಿಗಳ ಕ್ಷೇತ್ರವಿರುವ ಕಾಂಬೋಡಿಯಾ !

ಪ್ರಸಕ್ತ ಬೌದ್ಧ ರಾಷ್ಟ್ರವಾಗಿದ್ದರೂ ಕಾಂಬೋಡಿಯಾ ಭಗವಾನ ಶ್ರೀ ವಿಷ್ಣುವಿನ ಮೇಲಿನ ಶ್ರದ್ಧೆಯಿರುವ ಮಹಾಭಾರತ ಮತ್ತು ರಾಮಾಯಣ ಇವುಗಳ ಪ್ರಸಂಗವನ್ನಾಧರಿಸಿದ ಕಾಂಬೋಡಿಯಾದ ಪಾರಂಪರಿಕ ‘ಅಪ್ಸರಾ ನೃತ್ಯ’.

ಮಹಾಭಾರತದಲ್ಲಿ ಕಂಭೋಜ ದೇಶವೇ ಈಗಿನ ಕಂಬೋಡಿಯಾ ದೇಶ ! ಇಲ್ಲಿ ೧೫ ನೇ ಶತಮಾನದವರೆಗೆ ಹಿಂದೂಗಳು ನೆಲೆಸುತ್ತಿದ್ದರು. ಇಲ್ಲಿ ೮೦೨ ರಿಂದ ೧೪೨೧ ರವರೆಗೆ ಹಿಂದೂ ಸಾಮ್ರಾಜ್ಯವಿತ್ತು ಎಂದು ಹೇಳಲಾಗುತ್ತದೆ. ಕಂಭೋಜ ಪ್ರದೇಶವು ಕೌಂಡಿನ್ಯ ಋಷಿಗಳ ಕ್ಷೇತ್ರವಾಗಿತ್ತು. ಅಲ್ಲದೇ ಕಂಭೋಜ ದೇಶವು ನಾಗಲೋಕವಾಗಿತ್ತು. ‘ಕಂಭೋಜ ದೇಶದ ರಾಜನು ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದನು’, ಎಂಬ ಉಲ್ಲೇಖವೂ ಇಲ್ಲಿ ದೊರಕುತ್ತದೆ. ನಾಗಲೋಕವಾದುದರಿಂದ ಅದು ಶಿವಕ್ಷೇತ್ರವೂ ಆಗಿದೆ ಮತ್ತು ಇಲ್ಲಿನ ಮಹೇಂದ್ರ ಪರ್ವತದಲ್ಲಿ ಶ್ರೀವಿಷ್ಣುವಿನ ವಾಹನವಾದ ಗರುಡ ಇದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದು ವಿಷ್ಣುಕ್ಷೇತ್ರವೂ ಆಗಿದೆ. ಹೀಗೆ ಹರಿಹರ ಕ್ಷೇತ್ರವಾಗಿರುವ ಈ ಕಂಭೋಜ ದೇಶದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಅವರೊಂದಿಗಿರುವ ೪ ವಿದ್ಯಾರ್ಥಿ ಸಾಧಕರು ಮಾಡಿದ ಆಧ್ಯಾತ್ಮಿಕ ಪ್ರಯಾಣದ ಕೆಲವು ಮಹತ್ವದ ಅಂಶಗಳನ್ನು ನಾವು ನಮ್ಮ ವಾಚಕರಿಗಾಗಿ ಇಲ್ಲಿ ನೀಡುತ್ತಿದ್ದೇವೆ.

೧. ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಅವರೊಂದಿಗಿರುವ ವಿದ್ಯಾರ್ಥಿ ಸಾಧಕರು ಇಂಡೋನೇಶಿಯಾದಿಂದ ವಿಮಾನ ಪ್ರಯಾಣ ಮಾಡಿ ಕಂಬೋಡಿಯಾದ ರಾಜಧಾನಿ ನೋಮ ಫೇನನಲ್ಲಿ ತಲುಪುವುದು

ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಅವರೊಂದಿಗಿರುವ ೪ ವಿದ್ಯಾರ್ಥಿ ಸಾಧಕರು ಮಾರ್ಚ್ ೨೨ ರಂದು ಇಂಡೋನೇಶಿಯಾದ ಬಾಲಿ ದ್ವೀಪದಿಂದ ಕಂಬೋಡಿಯಾಗೆ ವಿಮಾನ ಪ್ರಯಾಣ ಮಾಡಿದರು. ಮಲೇಶಿಯಾದ ರಾಜಧಾನಿಯಾದ ಕ್ವಾಲಾಲಂಪುರದಲ್ಲಿ ಮುಂದಿನ ವಿಮಾನ ಬರುವ ಸಮಯದ ವರೆಗೆ ೭ ಗಂಟೆಯ ನಂತರ ಮುಂದಿನ ವಿಮಾನ ಪ್ರಯಾಣ ಪ್ರಾರಂಭವಾಯಿತು. ಮಾರ್ಚ್ ೨೩ ರಂದು ಬೆಳಗ್ಗೆ ೨ ಗಂಟೆ ಪ್ರಯಾಣ ಮಾಡಿದ ನಂತರ ಬೆಳಗ್ಗೆ ೧೦.೪೦ ಕ್ಕೆ ನಾವು ಕಂಬೋಡಿಯಾದ ರಾಜಧಾನಿ ನೋಮ ಫೇನನಲ್ಲಿ ತಲುಪಿದೆವು. ನಮ್ಮಲ್ಲಿ ಕೇವಲ ಮಾರ್ಚ್ ೨೩ ರ ಅರ್ಧ ದಿನ ಮತ್ತು ಮಾರ್ಚ್ ೨೪ ರ ಇಡೀ ದಿನ ಇತ್ತು. ಆ ಸಮಯದೊಳಗೆ ನಮಗೆ ಕಂಬೋಡಿಯಾದ ರಾಷ್ಟ್ರೀಯ ವಸ್ತು ಸಂಗ್ರಹಾಲಯ, ಕಂಬೋಡಿಯಾದ ರಾಜನ ಅರಮನೆ, ಕಂಬೋಡಿಯಾದ ಪರಂಪರೆಯ ‘ಅಪ್ಸರೆಯರ ನೃತ್ಯ’ ಮತ್ತು ರಾಷ್ಟ್ರೀಯ ಸ್ಮಾರಕ ಇಷ್ಟು ಸ್ಥಳಗಳನ್ನು ನೋಡಬೇಕಿತ್ತು. ಮಾರ್ಚ್ ೨೩ ರಂದು ನೋಮ ಫೇನಗೆ ತಲುಪಿದಾಗ ಅಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಪರಿಸರದಲ್ಲಿ ಸಮುದ್ರ ಮಂಥನದ ದೃಶ್ಯಗಳಿರುವ ‘ಅಪ್ಸರೆಯರ ನೃತ್ಯ’ ತೋರಿಸಲಾಗುತ್ತದೆ ಎಂದು ತಿಳಿಯಿತು. ಆದ್ದರಿಂದ ನಾವು ಆ ದಿನ ನೃತ್ಯವನ್ನು ನೋಡಲು ನಿರ್ಧರಿಸಿದೆವು.

೨. ‘ಬೌದ್ಧ ರಾಷ್ಟ್ರವಾಗಿದ್ದರೂ ಅಲ್ಲಿನ ಜನರಿಗೆ ಭಗವಾನ ಶ್ರೀವಿಷ್ಣು ಮತ್ತು ಭಗವಾನ ಶಿವನ ಮೇಲೆ ಶ್ರದ್ಧೆ ಇರುವುದು ಮತ್ತು ಅವರಿಗೆ ಹಿಂದೂ ಧರ್ಮದ ಮಹತ್ವ ತಿಳಿದಿರುವುದು

ಕಂಬೋಡಿಯಾ ಬೌದ್ಧ ರಾಷ್ಟ್ರವಾಗಿದ್ದರೂ, ಅಲ್ಲಿನ ಜನರಿಗೆ ಭಗವಾನ್ ವಿಷ್ಣು ಮತ್ತು ಭಗವಾನ ಶಿವನ ಮೇಲೆ ಶ್ರದ್ಧೆ ಇದೆ. ಕಂಬೋಡಿಯಾದ ಜನರಿಗೆ ಭಗವಾನ್ ಶ್ರೀವಿಷ್ಣು ನಮ್ಮ ರಕ್ಷಣೆ ಮಾಡುತ್ತಾನೆಂಬ ಶ್ರದ್ಧೆಯಿದೆ. ಇದರಿಂದ ಗರುಡ, ವಾಸುಕಿ, ಸಮುದ್ರ ಮಂಥನ, ಸುಮೇರು ಪರ್ವತ, ರಾಮಾಯಣ, ಮಹಾಭಾರತ, ಹೀಗೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಹೆಸರುಗಳು ಮತ್ತು ಅವುಗಳ ಮಹತ್ವ ಅವರಿಗೆ ತಿಳಿದಿದೆ ಎಂಬುದು ಗಮನಕ್ಕೆ ಬಂದಿತು. ಇದರ ಒಂದು ದಾಖಲೆಯೆಂದರೆ ಪ್ರತಿದಿನ ಕಂಬೋಡಿಯಾದ ರಾಷ್ಟ್ರೀಯ ವಸ್ತು ಸಂಗ್ರಹಾಲಯದ ಪರಿಸರದಲ್ಲಿ ‘ಅಪ್ಸರಾ ನೃತ್ಯ’ !

ಕಂಬೋಡಿಯಾದ ನೃತ್ಯ ಶೈಲಿಯನ್ನು ಅಪ್ಸರಾ ನೃತ್ಯ ಎಂದು ಕರೆಯಲಾಗುತ್ತದೆ. ಇಲ್ಲಿನ ಹಿಂದೂ ದೇವಸ್ಥಾನಗಳ ಗೋಡೆಗಳಲ್ಲಿ ಬೇರೆ ಬೇರೆ ಮುದ್ರೆಗಳಲ್ಲಿರುವ ಅಪ್ಸರೆಯರು ಮತ್ತು ಅವರ ನೃತ್ಯ ಶೈಲಿಯನ್ನು ನೋಡಲು ಸಿಗುತ್ತದೆ. ಹೆಚ್ಚಿನಾಂಶ ಈ ಮೂರ್ತಿಗಳಿಂದಲೇ ನೃತ್ಯಕಲೆ ಬಂದಿರಬಹುದು, ಎಂದು ಅನಿಸುತ್ತದೆ.

೩. ಅಪ್ಸರಾ ನೃತ್ಯದಲ್ಲಿ ಪ್ರತಿದಿನ ಬೇರೆಬೇರೆ ದೃಶ್ಯಗಳು ಇರುತ್ತದೆ ಮತ್ತು ಆ ನೃತ್ಯದಲ್ಲಿ ಸಹಭಾಗಿಯಾಗಿರುವ ಕಲಾವಿದರು ಭಾರತದ ಪಾರಂಪರಿಕ ವೇಷಭೂಷಣ ಹೋಲುವ ವೇಷಭೂಷಣ ಧರಿಸುವುದು !

ಅಪ್ಸರಾ ನೃತ್ಯದಲ್ಲಿನ ಸಮುದ್ರಮಂಥನದ ಪ್ರಸಂಗವನ್ನು ಪ್ರಸ್ತುತ ಪಡಿಸುತ್ತಿರುವಕಲಾವಿದರು. ಅದರಲ್ಲಿ ಒಂದು ಬದಿಯಲ್ಲಿ ದೇವತೆಯರು ಮತ್ತು ಇನ್ನೊಂದು ಬದಿಯಲ್ಲಿ ದಾನವರು ಕಾಣಿಸುತ್ತಿದ್ದಾರೆ. ದಾನವರ ಕೈಯಲ್ಲಿ ಸರ್ಪದ ಮುಖ ಕಾಣಿಸುತ್ತದೆ, ದೇವತೆಗಳ ಕೈಯಲ್ಲಿ ಸರ್ಪದಬಾಲ ಕಾಣಿಸುತ್ತಿದೆ. ಮಧ್ಯಭಾಗದಲ್ಲಿ ಕೂರ್ಮಾವತಾರ ತಾಳಿದ ಶ್ರೀವಿಷ್ಣು ಕಾಣಿಸುತ್ತಿದ್ದಾರೆ.

ಅಪ್ಸರೆ ನೃತ್ಯದಲ್ಲಿ ಪ್ರತಿದಿನ ವಿವಿಧ ದೃಶ್ಯಗಳು ಇರುತ್ತದೆ. ಕೆಲವೊಮ್ಮೆ ರಾಮಾಯಣದಲ್ಲಿನ ಸೀತಾ ಅಪಹರಣ ಮತ್ತು ವಾನರ-ಅಸುರ ಯುದ್ಧ, ಕೆಲವೊಮ್ಮೆ ಮಹಾಭಾರತದಲ್ಲಿನ ಆಯ್ದ ಕೆಲವು ಪ್ರಸಂಗಗಳಿದ್ದರೆ, ಕೆಲವೊಮ್ಮೆ ಸಮುದ್ರ ಮಂಥನದ ದೃಶ್ಯವಿರುತ್ತದೆ. ನಾವು ನೋಮ ಫೇನಗೆ ಹೋದ ದಿನದಂದು ನಮಗೆ ಗುರುಕೃಪೆಯಿಂದ ಸಮುದ್ರ ಮಂಥನದ ದೃಶ್ಯವಿರುವ ಅಪ್ಸರೆ ನೃತ್ಯವು ನೋಡಲು ಸಿಕ್ಕಿತು. ಅದರಲ್ಲಿ ಹಾಡುವ, ವಾದ್ಯ ಬಾರಿಸುವ ಮತ್ತು ನೃತ್ಯ ಮಾಡುವ, ಹೀಗೆ ವಿವಿಧ ಅನೇಕ ಕಲಾವಿದರು ಪಾರಂಪರಿಕ ವೇಷಭೂಷಣದಲ್ಲಿದ್ದರು. ಈ ವೇಷಭೂಷಣ ಭಾರತದ ಪಾರಂಪರಿಕ ವೇಷಭೂಷಣದೊಂದಿಗೆ ಹೋಲುತ್ತದೆ ಮತ್ತು ಅತ್ಯಂತ ಸುಂದರವಿದೆ. ‘ಭಾರತದಿಂದ ೩ ಸಾವಿರ ಕಿ.ಮೀ ದೂರದಲ್ಲಿರುವ ಕಂಬೋಡಿಯಾದಂತಹ ಬೌದ್ಧ ರಾಷ್ಟ್ರದಲ್ಲಿ ಸನಾತನ ಹಿಂದೂ ಧರ್ಮದ ಪರಂಪರೆ ನೃತ್ಯ ರೂಪದಲ್ಲಿ ಜೀವಂತವಾಗಿದೆ ಮತ್ತು ಅದು ಅವರ ಜೀವನಶೈಲಿಯಾಗಿದೆ’, ಎಂಬುದನ್ನು ಕಂಡು ಈಶ್ವರನ ಚರಣಗಳಲ್ಲಿ ನಮ್ಮಿಂದ ಕೃತಜ್ಞತೆ ವ್ಯಕ್ತವಾಯಿತು.

೪. ಕಂಬೋಡಿಯಾದಲ್ಲಿ ಸಮುದ್ರ ಮಂಥನದ ದೃಶ್ಯವನ್ನು ತೋರಿಸುವ ಹಿಂದಿನ ಕಾರಣ ಎಂದರೆ ಅವರ ಪೂರ್ವಜರು ಹಿಂದೂಗಳು ಮತ್ತು ‘ಭಗವಾನ್ ಶ್ರೀವಿಷ್ಣು ಅವರ ದೇಶದ ರಕ್ಷಣೆಯನ್ನು ಮಾಡುತ್ತಾನೆ’, ಎಂಬ ಶ್ರದ್ಧೆಯಿರುವ ಕಂಬೋಡಿಯಾದ ನಾಗರಿಕರು !

ಎರಡನೇ ಪ್ರಸಂಗದಲ್ಲಿ ಸಮುದ್ರಮಂಥನದ ನಂತರ ದೊರಕಿದ ಅಮೃತ ಮತ್ತು ಇತರ ವಸ್ತುಗಳನ್ನು ಹಿಡಿದು ಕುಳಿತಿರುವ ದೇವತೆಗಳನ್ನು ತೋರಿಸಲಾಗಿದೆ.

ಅಪ್ಸರೆ ನೃತ್ಯ ಪ್ರಾರಂಭವಾಗುವ ಮೊದಲು ನಮಗೆ ಆ ನೃತ್ಯಕಲೆಯ ವಿಶಾರದೆ ಮತ್ತು ಶಿಕ್ಷಕರ ಭೇಟಿಯಾಯಿತು. ಅವರು ಸದ್ಗುರು (ಸೌ.) ಅಂಜಲಿಗಾಡಗೀಳ ಇವರನ್ನು ನೋಡಿ ‘ನೀವು ಭಾರತದಿಂದ ಬಂದಂತೆ ಕಾಣಿಸುತ್ತಿದ್ದೀರಿ. ನೀವು ಧರಿಸಿದ ಸೀರೆಯಿಂದ ನಿಮ್ಮನ್ನು ಗುರುತಿಸಿದೆ. ನಮ್ಮಲ್ಲಿ ಇವತ್ತು ಅಪ್ಸರೆ ನೃತ್ಯದಲ್ಲಿ ಸಮುದ್ರ ಮಂಥನದ ದೃಶ್ಯವಿದೆ’, ಎಂದು ಹೇಳಿದರು. ಅದಕ್ಕೆ ಸದ್ಗುರು ಕಾಕೂರವರು ‘ಕಂಬೋಡಿಯಾದಲ್ಲಿ ಸಮುದ್ರಮಂಥನದ ದೃಶ್ಯ ತೋರಿಸಲು ಕಾರಣವೇನು ?’ ಎಂದು ಕೇಳಿದರು. ಆಗ ಆ ನೃತ್ಯ ವಿಶಾರದೆ ‘ನಾವು ಬೌದ್ಧರಾಗಿದ್ದರೂ ನಮ್ಮ ಪೂರ್ವಜರು ಹಿಂದೂಗಳೇ ಆಗಿದ್ದರು. ಇಲ್ಲಿರುವವರಿಗೆ ಬುದ್ಧನಲ್ಲಿ ಎಷ್ಟು ನಂಬಿಕೆ ಇದೆಯೊ ಅಷ್ಟೇ ನಂಬಿಕೆ ಭಗವಾನ ಶ್ರೀ ವಿಷ್ಣುವಿನ ಮೇಲೆಯೂ ಇದೆ. ಭಗವಾನ್ ಶ್ರೀ ವಿಷ್ಣುವು ನಮ್ಮ ದೇಶದ ರಕ್ಷಣೆ ಮಾಡುತ್ತಾನೆ ಎಂದು ನಮಗೆ ಶ್ರದ್ಧೆ ಇದೆ’, ಎಂದು ಹೇಳಿದರು. ಅನಂತರ ನಾವು ಸಮುದ್ರ ಮಂಥನದ ದೃಶ್ಯ ಮತ್ತು ಇನ್ನಿತರ ಪಾರಂಪರಿಕ ದೃಶ್ಯಗಳಿರುವ ಆ ನೃತ್ಯವನ್ನು ನೋಡಿದೆವು.

– ಶ್ರೀ. ವಿನಾಯಕ ಶಾನಭಾಗ, ಕಂಬೋಡಿಯಾ (೨೪.೩.೨೦೧೮)

Leave a Comment