ಕಂಬೋಡಿಯಾದಲ್ಲಿ ಗಂಗೆಯಂತೆ ಪವಿತ್ರ ನೀರಿಗಾಗಿ, ಭೂಮಿ ಫಲವತ್ತಾಗಲಿಕ್ಕೆ ಕುಲೆನ್ ನದಿ ನೀರಿನಲ್ಲಿ ಸಾವಿರ ಶಿವಲಿಂಗಗಳ ಕೆತ್ತನೆ!

ಕುಲೆನ್ ನದಿಯ ನೀರನ್ನು ತಡೆದು ನದಿಪಾತ್ರದಲ್ಲಿರುವ ಕಲ್ಲುಗಳ ಮೇಲೆ ಕೆತ್ತಿದ ಶಿವಲಿಂಗ !


ಮೊದಲ ಛಾಯಾಚಿತ್ರದಲ್ಲಿ ಶಾಲಿಗ್ರಾಮದೊಂದಿಗೆ ಇರುವ ಶಿವಲಿಂಗವಾದರೆ, ಎರಡನೇ ಛಾಯಾಚಿತ್ರದಲ್ಲಿ ಅನೇಕ ಶಿವಲಿಂಗಗಳು ಕಾಣಿಸುತ್ತಿವೆ ! ಈ ಶಿವಲಿಂಗಗಳ ಭಾವಪೂರ್ಣ ದರ್ಶನ ಪಡೆಯೋಣ !

1. ಹಿಂದೆ ಕಂಭೋಜ ದೇಶದ ರಾಜಧಾನಿ ಮಹೇಂದ್ರ ಪರ್ವತದ ಮೇಲೆ ಇರುವುದು, ಹಿಂದೂ ರಾಜರು ಸ್ಥಾಪಿಸಿದ ಪರ್ವತದ ಮೇಲಿನ ನಗರದ ಅವಶೇಷಗಳು ಈಗ ದೊರಕುವುದು ಮತ್ತು ಪರ್ವತದ ಮೇಲೆ ಉಗಮವಾಗುವ ನದಿಗೆ ಪವಿತ್ರ ಗಂಗಾನದಿಯ ಸ್ಥಾನ ಕೊಡುವುದು

ಕುಂಭೋಜ ದೇಶದ ಉತ್ತರದಲ್ಲಿ ಮಹೇಂದ್ರ ಪರ್ವತ ಮತ್ತು ಉತ್ತರದಿಂದ ದಕ್ಷಿಣಕ್ಕೆ ಹರಿಯುವ ‘ಮೆಕಾಂಗ’ (Mekong) ನದಿ ಇದೆ, ಹಾಗೆಯೆ ದಕ್ಷಿಣದಲ್ಲಿ ಸಮುದ್ರ ಇದೆ. ಇಂತಹ ವಿಶಾಲ ಕುಂಭೋಜ ದೇಶದ ರಾಜಧಾನಿ ಮಹೇಂದ್ರ ಪರ್ವತದ ಮೇಲೆ ಇತ್ತು. ಈ ಪರ್ವತಕ್ಕೆ ಸ್ಥಳೀಯ ಭಾಷೆಯಲ್ಲಿ ಈಗ ‘ಕುಲೆನ್ ಪರ್ವತ’ (Phnom Kulen) ಎಂದು ಕರೆಯುತ್ತಾರೆ. ಹಿಂದೂ ರಾಜರು ಆ ಸಮಯದಲ್ಲಿ ಈ ಪರ್ವತದ ಮೇಲೆ ಸ್ಥಾಪಿಸಿದ ನಗರದ ಅವಶೇಷಗಳು ಈಗ ದೊರಕುತ್ತಿವೆ. 10ನೇ ಶತಮಾನದ ವರೆಗೆ ಹಿಂದೂ ರಾಜರು ಮಹೇಂದ್ರ ಪರ್ವತದಲ್ಲಿ ರಾಜ್ಯವನ್ನು ಆಳುತ್ತಿದ್ದರು. ಆ ಸಮಯಲ್ಲಿ ಅವರು ಪರ್ವತದ ಮೇಲೆ ಉಗಮವಾಗುವ ‘ಕುಲೆನ್’ ನದಿಗೆ ಪವಿತ್ರ ಗಂಗಾನದಿಯ ಸ್ಥಾನ ನೀಡಿದರು.

2. ಕುಲೆನ್ ನದಿ ಗಂಗಾನದಿಯಂತೆ ಪವಿತ್ರಗೊಳಿಸಲಿಕ್ಕೆ ರಾಜಾ ಜಯವರ್ಮನ್(ಎರಡನೆಯ)ನು ಮಾಡಿದ ಪ್ರಯತ್ನ

8 ನೇ ಶತಮಾನದಲ್ಲಿ ರಾಜಾ ಜಯವರ್ಮನ (ಎರಡನೆಯನು ‘ಕುಲೆನ ನದಿ ಗಂಗಾ ನದಿಯಂತೆ ಪವಿತ್ರಗೊಳಿಸುವುದಕ್ಕೆ ಏನು ಮಾಡಬಹುದು ?’, ಎಂಬ ವಿಚಾರ ಮಾಡಿ ಒಂದು ಯೋಜನೆಯನ್ನು ಸಿದ್ಧಪಡಿಸಿದನು. ಆ ಸಮಯಕ್ಕೆ ಅವನ ಮನಸ್ಸಿನಲ್ಲಿ ಒಂದು ವಿಚಾರ ಬಂತು, ಏನೆಂದರೆ ‘ಗಂಗಾನದಿ ಇದು ಭಗವಾನ ಶಿವನ ಜಟೆಯಿಂದ ಬರುತ್ತಿರುವುದರಿಂದ ಅದು ಪವಿತ್ರವಾಗಿದೆ. ಅದರಂತೆ ಕುಲೆನ್ ನದಿಯು ಒಂದು ವೇಳೆ ಭಗವಾನ ಶಿವನ ಮಸ್ತಕದ ಮೇಲಿಂದ ಹರಿದರೆ, ಅಂದರೆ, ಭಗವಾನ ಶಿವನ ಸ್ಪರ್ಶವು ಈ ನದಿಗೆ ಆದರೆ, ಅದೂ ಕೂಡ ಪವಿತ್ರವಾಗಬಹುದು. ಇಷ್ಟೇ ಅಲ್ಲದೆ, ಈ ನದಿಯು ಎಲ್ಲಿ ಹರಿಯುತ್ತದೋ, ಅಲ್ಲಿಯ ಭೂಮಿಯೂ ಫಲವತ್ತಾಗುವುದು’. ರಾಜನಲ್ಲಿ ಎಷ್ಟೊಂದು ಭಾವವಿತ್ತು ಅಂದರೆ, ‘ಪ್ರಜೆಗಳಿಗೆ ಶಿವಲಿಂಗದ ಸ್ಪರ್ಶವಾದ ನದಿಯ ಪವಿತ್ರ ನೀರು ದೊರಕಬೇಕು’ ಎಂದು ಇದಕ್ಕಾಗಿ ರಾಜನು ಕುಲೆನ್ ನದಿಯ ನೀರನ್ನು ತಡೆದು, ಕೆಲವು ತಿಂಗಳ ಕಾಲಾವಧಿಯಲ್ಲಿ ಕುಲೆನ್ ನದಿಯಲ್ಲಿ 1 ಸಾವಿರಕ್ಕಿಂತಲೂ ಅಧಿಕ ಶಿವಲಿಂಗಗಳನ್ನು ಕೆತ್ತಿಸಿದನು, ಹಾಗೆಯೆ ಶೇಷನಾಗನ ಮೇಲೆ ಮಲಗಿದ ಶ್ರೀವಿಷ್ಣು ಮತ್ತು ಅವರ ಚರಣಗಳ ಹತ್ತಿರ ಕುಳಿತ ಶ್ರೀಮಹಾಲಕ್ಷ್ಮಿದೇವಿ ಇವರ ಅನೇಕ ಸಣ್ಣ ಮತ್ತು ದೊಡ್ಡ ಶಿಲ್ಪಗಳನ್ನು ಕೆತ್ತಿಸಿದನು. ಈ ಕಾರ್ಯವು ಪೂರ್ಣವಾದ ನಂತರ ರಾಜನು ನದಿಯ ನೀರನ್ನು ಪುನರ್ ಪ್ರವಾಹಿತಗೊಳಿಸಿದನು. 8 ನೇ ಶತಮಾನದಲ್ಲಿ ಕೆತ್ತಿದ ಈ ಶಿವಲಿಂಗಗಳು ಇನ್ನೂ ಅಸ್ತಿತ್ವದಲ್ಲಿದ್ದು ಎಲ್ಲರೂ ಅವುಗಳ ದರ್ಶನ ಪಡೆಯಬಹುದು. ನದಿಯಲ್ಲಿ, ಹಾಗೆಯೆ ನದಿಯ ತೀರದಲ್ಲಿ ಉತ್ತರಕ್ಕೆ 200 ಮೀಟರ ದೂರದ ವರೆಗೂ ಈ ಶಿಲ್ಪಗಳು ಕಾಣಿಸುತ್ತವೆ. ಯಾವಾಗ ನದಿಯ ನೀರು ನಿಧಾನವಾಗಿ ಹರಿಯುತ್ತದೋ, ಈ ದೃಶ್ಯವು ಅತ್ಯಂತ ಮನೋಹರವಾಗಿ ಕಾಣಿಸುತ್ತದೆ.

3. ಖಮೇರ ಸಾಮ್ರಾಜ್ಯದಲ್ಲಿನ ಬಹುತೇಕ ಮಂದಿರಗಳು ಮತ್ತು ವಾಸ್ತುಗಳ ಕಟ್ಟಡಕ್ಕೆ ಮಹೇಂದ್ರ ಪರ್ವತದ ಮೇಲಿನ ಕಲ್ಲುಗಳನ್ನು ಬಳಸಿರುವುದು

ಮಹೇಂದ್ರ ಪರ್ವತ ಉಸುಕಿನ ಕಲ್ಲುಬಂಡೆಗಳಿಂದ ನಿರ್ಮಾಣವಾದ ಪರ್ವತವಾಗಿದೆ. ಆದುದರಿಂದ ಖಮೇರ ಸಾಮ್ರಾಜ್ಯದಲ್ಲಿನ ಬಹುತೇಕ ಮಂದಿರಗಳು ಮತ್ತು ವಾಸ್ತುಗಳ ಕಾಮಗಾರಿಗೆ ಬಳಸಿದ ಉಸುಕಿನ ಕಲ್ಲುಬಂಡೆಗಳು ಮಹೇಂದ್ರ ಪರ್ವತದ ಮೇಲಿಂದ ತಂದಿರಬಹುದು, ಎಂದು ಇತಿಹಾಸ ತಜ್ಞರ ಅಭಿಪ್ರಾಯವಾಗಿದೆ. ಮಹೇಂದ್ರ ಪರ್ವತದ ಮೇಲೆ ಸಣ್ಣ ಮತ್ತು ದೊಡ್ಡ ಹೀಗೆ 2 ಜಲಪಾತಗಳು ಇದ್ದು ಪರ್ವತದ ಮೇಲೆ ಬರುವ ಬಹುತೇಕ ಪ್ರಯಾಣಿಕರು ಮತ್ತು ಭಾವಿಕರು ಈ ಜಲಪಾತವನ್ನೂ ಮರೆಯದೇ ನೋಡುತ್ತಾರೆ.

– ಶ್ರೀ. ವಿನಾಯಕ ಶಾನಭಾಗ, ಕಂಬೋಡಿಯಾ

Leave a Comment