ಇಂಡೋನೇಷ್ಯಾದ ಜಗತ್ಪ್ರಸಿದ್ಧ ಭವ್ಯ ಬೊರೋಬುದೂರ್ ಬೌದ್ಧ ಮಂದಿರ !

೧. ಭಾರತದಲ್ಲಿನ ಭವ್ಯ ದೇವಸ್ಥಾನಗಳು ಮತ್ತು ಬೌದ್ಧ ಸ್ಥಳಗಳಂತೆ ರಚನೆ ಇರುವ ಭವ್ಯ ಬೋರೊಬುದೂರ್ (ಬೌದ್ಧ ದೇವಾಲಯ)

ಇಂಡೋನೇಷ್ಯಾದ ಜಗತ್ಪ್ರಸಿದ್ಧ ಭವ್ಯ ಬೊರೋಬುದೂರ್ ಬೌದ್ಧ ಮಂದಿರ !

‘ಇಂಡೋನೇಷ್ಯಾದಲ್ಲಿ ‘ಯೋಗ್ಯಕರ್ತಾ’ ನಗರದಿಂದ ೨೫ ಕಿಲೋಮೀಟರ್ ದೂರದಲ್ಲಿ ಬೋರೊಬುದೂರ್ ಎಂಬ ಗ್ರಾಮವಿದೆ. ಅಲ್ಲಿ ಜಗತ್ಪ್ರಸಿದ್ಧ ಭವ್ಯ ಬೌದ್ಧ ದೇವಾಲಯವಿದೆ. ಆ ದೇವಾಲಯದ ಹೆಸರು ಬೋರೊಬುದೂರ್. ಈ ಬೌದ್ಧ ದೇವಾಲಯಕ್ಕೆ ನಾವು ೧೩.೩.೨೦೧೮ ರಂದು ಭೇಟಿ ನೀಡಿದೆವು. ಬುದೂರ್ ಅಂದರೆ ಬುದ್ಧ ಮತ್ತು ಬೋರೊ ಅಂದರೆ ಸಣ್ಣ ಬೆಟ್ಟ. ‘ಒಂದು ಬೆಟ್ಟದ ಮೇಲಿರುವ ಬುದ್ಧನ ಸಣ್ಣ ದೇವಾಲಯ’, ಎಂಬುದು ಅದರ ಅರ್ಥ. ಇದು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಬೌದ್ಧ ದೇವಾಲಯವಾಗಿದೆ. ಅನೇಕ ಪರ್ವತದ ಸಾಲುಗಳ ಮಧ್ಯದಲ್ಲಿ ನದಿಯ ತೀರದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಹಿಂದೂ ಮತ್ತು ಬೌದ್ಧರು ಒಟ್ಟಾಗಿರುವ ಕಾಲದಲ್ಲಿ ದೇವಾಲಯವು ನಿರ್ಮಾಣವಾಗಿದೆ. ೭ ನೇ ಮತ್ತು ೮ ನೇ ಶತಮಾನದಲ್ಲಿ ಇಲ್ಲಿ ಮಾತರಮ್, ಶೈಲೇಂದ್ರ ಮತ್ತು ಸಂಜಯ ಎಂಬ ಸಾಮ್ರಾಜ್ಯಗಳಿದ್ದವು. ಅದರಲ್ಲಿನ ಶೈಲೇಂದ್ರ ಸಾಮ್ರಾಜ್ಯದ ಅರಸರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಾಲಯವನ್ನು ನಿರ್ಮಿಸುವ ಮೊದಲು ಇಂಡೋನೇಷ್ಯಾದ ಹಿಂದೂ ಮತ್ತು ಬೌದ್ಧರು ಭಾರತಕ್ಕೆ ಬಂದು ಇಲ್ಲಿನ ಭವ್ಯ ದೇವಸ್ಥಾನಗಳನ್ನು ಮತ್ತು ಬೌದ್ಧ ಸ್ಥಳಗಳನ್ನು ನೋಡಿದರು. ಅನಂತರ ಅವರು ಬೋರೊಬುದೂರ್‌ನಲ್ಲಿ ದೇವಾಲಯವನ್ನು ನಿರ್ಮಿಸಲು ಪ್ರಯತ್ನಿಸಿದರು.

ಬೋರೊಬುದೂರ್ ಇಲ್ಲಿನ ಬುದ್ಧನ ಮೂರ್ತಿ; ಮೂರ್ತಿಯ ಹಿಂದಿರುವ ಗಂಟೆಯ ಆಕಾರದ ಶಿಲ್ಪದಲ್ಲಿಯೂ ಬುದ್ಧನ ಅನೇಕ ಮೂರ್ತಿಗಳಿವೆ

೨. ಸಗುಣದಿಂದ ನಿರ್ಗುಣದ ಕಡೆಗೆಪ್ರಯಾಣಿಸುವ ದಾರಿ ತೋರಿಸುವ ದೇವಾಲಯ

ಮೇಲಿನಿಂದ ಈ ದೇವಾಲಯವನ್ನು ನೋಡುವಾಗ ಅದರ ಆಕಾರವು ‘ಶ್ರೀ’ ಯಂತ್ರದಂತೆ ಕಾಣಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ಇದಕ್ಕೆ ‘ಮಂಡಲ’ ಎನ್ನುತ್ತಾರೆ. ಈ ದೇವಾಲಯದ ರಚನೆಯನ್ನು ಮೂರು ಹಂತಗಳಲ್ಲಿ ಮಾಡಲಾಗಿದೆ. ಮೊದಲನೇ ಹಂತವು ಕಾಮಧಾತೂ, ಎರಡನೇ ಹಂತ ರೂಪಧಾತೂ ಮತ್ತು ಮೂರನೆಯದು ಅರೂಪಧಾತೂ. ‘ಕಾಮಧಾತೂ’ ಅಂದರೆ ಸಾಮಾನ್ಯ ಮನುಷ್ಯನ ಜೀವನ. ಯಾವ ಮನುಷ್ಯನಿಗೆ ವಿವಿಧ ವಾಸನೆ, ಇಚ್ಛೆಗಳಿರುತ್ತವೆಯೊ, ಅವುಗಳನ್ನು ಪೂರ್ಣಗೊಳಿಸಲು ಅವನು ಪ್ರಯತ್ನಿಸುತ್ತಾನೆ; ಆದ್ದರಿಂದ ಅವನು ಸುಖ-ದುಃಖಗಳನ್ನು ಭೋಗಿಸಬೇಕಾಗುತ್ತದೆ. ‘ರೂಪಧಾತೂ’ ಅಂದರೆ ಸಗುಣ. ಈ ಹಂತದಲ್ಲಿ ಮನುಷ್ಯನ ಒಲವು ದೇವರ ಕಡೆಗೆ ಇರುತ್ತದೆ. ದೇವರ ಉಪಾಸನೆ, ಪೂಜೆ ಇತ್ಯಾದಿ ಮಾಡುತ್ತಾನೆ. ಆದ್ದರಿಂದ ರೂಪಧಾತೂ, ಈ ಹಂತದ ವರೆಗೆ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ನಾವು ವಿವಿಧ ಚಿತ್ರಗಳನ್ನು ನೋಡಬಹುದು. ಅವರು ವಿಗ್ರಹದ ಸುಂದರವಾದ ರಚನೆಯನ್ನು ಮಾಡಿದ್ದಾರೆ. ‘ಅರೂಪಧಾತೂ’ ಅಂದರೆ ಕೊನೆಯ ಹಂತವಾಗಿದ್ದು, ಅದು ನಿರ್ಗುಣಸ್ತರವಾಗಿದೆ. ಇಲ್ಲಿ ಯಾವುದೇ ವಿಗ್ರಹಗಳು ಇರುವುದಿಲ್ಲ. ಕೇವಲ ಸ್ತೂಪ ಇರುತ್ತದೆ. ಈ ದೇವಾಲಯದಲ್ಲಿ ೫೦೪ ಬೌದ್ಧರ ವಿಗ್ರಾ (ವಿಗ್ರಹಗಳು) ಇವೆ. ಅವುಗಳಲ್ಲಿ ೨೦೦ ವಿಗ್ರಾಗಳ ತಲೆಗಳನ್ನು ಆಕ್ರಮಣಕಾರಿಗಳು ನಾಶಗೊಳಿಸಿದ್ದಾರೆ ಅಥವಾ ಕಾಲದ ಪ್ರವಾಹದಲ್ಲಿ ನಾಶವಾಗಿವೆ.

೩. ನೈಸರ್ಗಿಕ ಆಪತ್ತುಗಳಿಂದ ದೇವಾಲಯವು ಲುಪ್ತವಾದ ನಂತರ ಬ್ರಿಟಿಷ್ ‌ಜನರಲ್‌ನಿಂದ ಅದರ ಪುನರುಜ್ಜೀವನವಾಗುವುದು

ಬೋರೊಬುದೂರ್ ದೇವಾಲಯವು ಈಗ ಇರುವುದಕ್ಕಿಂತಲೂ ದೊಡ್ಡದಾಗಿತ್ತು. ೧೦೦೬ ರಲ್ಲಿ ‘ಯೋಗ್ಯಕರ್ತಾ’ ನಗರದ ಸಮೀಪದಲ್ಲಿರುವ ಮೇರಾಪಿ ಜ್ವಾಲಾಮುಖಿಯ ಸ್ಫೋಟವಾಗಿತ್ತು. ಸಂಪೂರ್ಣ ಜಾವಾ ದ್ವೀಪವು ಈ ಸ್ಫೋಟದ ಬೂದಿಯಲ್ಲಿ ಮುಚ್ಚಿಹೋಯಿತು. ಅದರೊಂದಿಗೆ ಈ ದೇವಾಲಯವೂ ಮುಚ್ಚಿಹೋಯಿತು. ಕಾಲಕ್ರಮೇಣ ೧೮೨೫ ರಲ್ಲಿ ಈ ಪ್ರದೇಶದಲ್ಲಿ ಓರ್ವ ಬ್ರಿಟಿಷ್ ಜನರಲ್ ಬಂದಿದ್ದರು. ಅವರೊಂದಿಗೆ ಮಾತನಾಡುವಾಗ ಸ್ಥಳೀಯ ಜನರು ಆ ಸ್ಥಳದಲ್ಲಿ ಒಂದು ದೇವಾಲಯ ಇರುವ ಸಾಧ್ಯತೆ ಇದೆ ಎಂದು ಹೇಳಿದರು. ಬ್ರಿಟೀಶ್‌ ಜನರಲ್ ಉತ್ಖನನ ಮಾಡಿದಾಗ ಅಲ್ಲಿ ಭವ್ಯ ದೇವಾಲಯವು ಕಂಡು ಬಂದಿತು. ಸದ್ಯ ಈ ದೇವಾಲಯವು ಯುನೆಸ್ಕೊದ ಜಾಗತಿಕ ಸ್ಮಾರಕಗಳ ಪಟ್ಟಿಯಲ್ಲಿದೆ. ಇದನ್ನು ಜಗತ್ತಿನ ಸುಪ್ರಸಿದ್ಧ ಬೌದ್ಧ ದೇವಾಲಯವೆಂದು ಪರಿಗಣಿಸಲಾಗುತ್ತದೆ. ಜಗತ್ತಿನ ಎಲ್ಲ ಬೌದ್ಧ ರಾಷ್ಟ್ರಗಳು ಈ ದೇವಾಲಯದ ನಿರ್ಮಾಣಕ್ಕೆ ಧನ ಸಹಾಯ ಮಾಡಿವೆ.’ – (ಸದ್ಗುರು) ಸೌ. ಅಂಜಲಿ ಗಾಡಗೀಳ, ಇಂಡೋನೇಷ್ಯಾ.

ದೇವಾಲಯದ ಮೇಲೆ ಹಿಂದೂಸಂಸ್ಕೃತಿಯ ಕುರುಹುಗಳು ಕಂಡು ಬರುವುದು

ಇದು ಬೌದ್ಧ ದೇವಾಲಯವಾಗಿದ್ದರೂ, ಇದರ ಆಕಾರ, ಇಲ್ಲಿನ ವಿಗ್ರಹಗಳ ರಚನೆ ಇತ್ಯಾದಿಗಳ ಮೇಲೆ ಹಿಂದೂ ಸಂಸ್ಕೃತಿಯ ಕುರುಹುಗಳು ಕಂಡುಬರುತ್ತವೆ. ಮಹಾಮಾಯಾ ಮತ್ತು ಶುದ್ಧೋಧನಾ ಇವರು ಗೌತಮ ಬುದ್ಧರ ತಾಯಿ-ತಂದೆಯರು. ‘ಮಕ್ಕಳಾಗಬೇಕು ಎಂದು ಅವರು ಬ್ರಹ್ಮ-ವಿಷ್ಣು-ಶಿವ ಇವರ ಆರಾಧನೆ ಮಾಡಿದ್ದರು. ಒಂದು ಕಾಲದಲ್ಲಿ ಸಂಪೂರ್ಣ ಪೃಥ್ವಿಯನ್ನೇ ಭಾರತವೆಂದು ತಿಳಿಯಲಾಗುತ್ತಿತ್ತು. ಹಿಂದೂ ಸಂಸ್ಕೃತಿಯು ಎಷ್ಟು ಶ್ರೇಷ್ಠವಾಗಿತ್ತು, ಎಂಬುದರ ಕುರುಹುಗಳನ್ನು ಭಾರತದಿಂದ ೪ ಸಾವಿರ ಕಿ. ಮೀ. ದೂರದಲ್ಲಿರುವ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನಾವು ನೋಡಬಹುದು.

Leave a Comment