ಸದ್ಗುರು(ಸೌ.) ಅಂಜಲಿ ಗಾಡಗೀಳ ಇವರಲ್ಲಿರುವ ಈಶ್ವರೀ ಚೈತನ್ಯದಿಂದಾಗಿ ಇಂಡೋನೆಶಿಯಾದಲ್ಲಿ ಜನರು ಅವರ ಕಡೆಗೆ ತಾವಾಗಿ ಆಕರ್ಷಿತಗೊಳ್ಳುವುದು !

‘ಪರಾತ್ಪರ ಗುರು ಡಾ. ಆಠವಲೆಯವರು ನಮ್ಮೊಂದಿಗೆ ಇದ್ದಾರೆ ಎಂಬ ಅನುಭೂತಿಯನ್ನು ದೇವರು ನಮಗೆ ಕೊಟ್ಟೇ ಕೊಡುವನು, ಎಂದು ಸದ್ಗುರು(ಸೌ.) ಅಂಜಲೀ ಗಾಡಗೀಳ ಇವರು ಮೊದಲೇ ಹೇಳುವುದು

‘ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಭಾರತದಿಂದ ಇಂಡೋನೇಶಿಯಾಕ್ಕೆ ತೆರಳುತ್ತಿರುವಾಗ ಅವರು ತಮ್ಮ ಸೀರೆಗಳಿಗೆ ಮತ್ತು ಒಡವೆಗಳಿಗೆ (ಕಿವಿಯ ಓಲೆಗಳಿಗೆ), ‘ಈ ಸೀರೆಗಳ ಮೂಲಕ ಪರಾತ್ಪರ ಗುರು ಡಾಕ್ಟರರ ಚೈತನ್ಯ ಎಲ್ಲೆಡೆ ಪ್ರಕ್ಷೇಪಿತವಾಗಲಿ, ಹಾಗೆಯೇ ಇದರಿಂದ ಧರ್ಮಪ್ರಸಾರವೂ ಆಗಲಿ, ಎಂದು ಪ್ರಾರ್ಥನೆ ಮಾಡಿದರು. ಇದರ ಬಗ್ಗೆ ಅವರು ನಮಗೆ ವಿಮಾನ ಪ್ರಯಾಣದಲ್ಲಿ ಹೇಳಿದ್ದರು. ಆಗ ಸದ್ಗುರು ಕಾಕೂ ಅವರು ನಮಗೆ, ಸೀರೆಗಳ ಮೂಲಕವೂ ಪರಾತ್ಪರ ಗುರು ಡಾಕ್ಟರರು ನಮ್ಮೊಂದಿಗೆ ಇರುತ್ತಾರೆ. ದೇವರು ನಮಗೆ ಈ ಸಂದರ್ಭದಲ್ಲಿ ಅನುಭೂತಿಯನ್ನು ಕೊಟ್ಟೇ ಕೊಡುತ್ತಾನೆ , ಎಂದು ಹೇಳಿದ್ದರು ! – ಶ್ರೀ. ವಿನಾಯಕ ಶಾನಭಾಗ, ಯೋಗ್ಯಕರ್ತಾ, ಇಂಡೋನೆಶಿಯಾ. (೧೩.೩.೨೦೧೮)

೧. ಇಂಡೋನೇಶಿಯಾದಲ್ಲಿ ಅಲ್ಲಲ್ಲಿ ಸದ್ಗುರು (ಸೌ.) ಅಂಜಲೀ ಗಾಡಗೀಳ ಇವರೊಂದಿಗೆ ಛಾಯಾಚಿತ್ರ ತೆಗೆದುಕೊಳ್ಳುವುದು

ಇಂಡೋನೆಶಿಯಾದಲ್ಲಿ ೯ ಮಾರ್ಚ್ ೨೦೧೮ ರಂದು ನಾವು ಸದ್ಗುರು ಕಾಕೂ ಅವರೊಡನೆ ಜಕಾರ್ತಾದ ರಾಷ್ಟ್ರೀಯ ಸ್ಮಾರಕವಾಗಿದ್ದ ‘ಮೊನಾಸ’ಗೆ ಹೋದೆವು. ಅಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಆಗ ನಾವು ಟಿಕೇಟನ್ನು ಪಡೆಯುವುದಕ್ಕೆಂದು ಪ್ರವೇಶದ್ವಾರದ ಬಳಿ ನಿಂತಿದ್ದೆವು. ಸಮೀಪದಲ್ಲಿಯೇ ಇರುವ ಕೆಲವು ಹೆಣ್ಣುಮಕ್ಕಳು ಕಾಕೂ ಅವರ ಹತ್ತಿರ ಬಂದು, ‘ನಮಗೆ ನಿಮ್ಮೊಡನೆ ಒಂದು ಛಾಯಾಚಿತ್ರ ತೆಗೆಯಲಿಕ್ಕಿದೆ ಎಂದು ಹೇಳುತ್ತಿದ್ದರು’. ಸದ್ಗುರು ಕಾಕೂ ‘ಆಯಿತು’ ಎಂದು ಹೇಳಿದಾಗ ಅವರು ಛಾಯಾಚಿತ್ರ ತೆಗೆದರು. ಕೆಲವು ಸಮಯದ ನಂತರ ಇನ್ನೊಂದು ಗುಂಪು ಬಂದಿತು. ಅನಂತರ ನಾವು ಇಂಡೋನೆಶಿಯಾದಲ್ಲಿ ಎಲ್ಲೆಲ್ಲಿ ಹೋದೆವೂ ಅಲ್ಲಲ್ಲಿ ಅನೇಕ ಜನರು ಬಂದು ಸದ್ಗುರು ಕಾಕೂ ಅವರೊಂದಿಗೆ ನಿಂತು ಛಾಯಾಚಿತ್ರ ತೆಗೆದುಕೊಳ್ಳುತ್ತಿದ್ದರು.

೨. ಬೊರೋಬುದುರ ಇಲ್ಲಿ ಮಕ್ಕಳು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮ ಪುಸ್ತಕದ ಮೇಲೆ ಅವರ ಹೆಸರು ಬರೆಯಲು ಹೇಳುವುದು

ಬೊರೋಬುದುರ ಎಂಬಲ್ಲಿ ದೇವಸ್ಥಾನದ ಚಿತ್ರೀಕರಣವನ್ನು ಮಾಡಲು ನಾವು ಹೋಗಿದ್ದೆವು. ಆಗ ಶಾಲೆಯ ಮಕ್ಕಳ ಒಂದು ಗುಂಪು ಬಂತು. ಆ ಗುಂಪಿನಲ್ಲಿ ಮಕ್ಕಳಿದ್ದರು. ಅವರಲ್ಲಿ ಸಂಚಾರಿವಾಣಿ ಇರಲಿಲ್ಲ. ಅವರ ಗುಂಪಿನಲ್ಲಿಯ ದೊಡ್ಡ ಮಕ್ಕಳು ತಮ್ಮ ತಮ್ಮ ಸಂಚಾರಿವಾಣಿಯಿಂದ ಛಾಯಾಚಿತ್ರಗಳನ್ನು ತೆಗೆದರು. ಆ ಎಲ್ಲ ಸಣ್ಣ ಮಕ್ಕಳು ತಮ್ಮ ಪುಸ್ತಕ ಮತ್ತು ಪೆನ್ ತೆಗೆದರು ಮತ್ತು ಸದ್ಗುರು ಕಾಕೂ ಇವರಿಗೆ ಅವರ ಪುಸ್ತಕದ ಮೇಲೆ ತಮ್ಮ ಹೆಸರು ಬರೆಯಲು ಹೇಳಿದರು.

೩. ಸದ್ಗುರು(ಸೌ.) ಅಂಜಲಿ ಗಾಡಗೀಳ ಇವರು ‘ರಾಣಿ’ಯಂತೆ ಕಾಣಿಸುತ್ತಾರೆ, ಎಂದು ಓರ್ವ ಮಹಿಳಾ ‘ಗೈಡ್’ ಹೇಳುವುದು

‘ಯೋಗ್ಯಕರ್ತಾ’ ಎಂಬ ನಗರದಲ್ಲಿ ಸುಲ್ತಾನನ ಅರಮನೆಗೆ ಹೋದಾಗ ಅಲ್ಲಿಯ ಓರ್ವ ಮಹಿಳಾ ಗೈಡ್ ಇವಳು ಸದ್ಗುರು ಕಾಕೂ ಇವರನ್ನು ನೋಡಿದಳು ಮತ್ತು ‘ನೀವು ‘ರಾಣಿ’ಯಂತೆ ಕಾಣಿಸುತ್ತೀರಿ’, ಎಂದು ಹೇಳಿದಳು. ಪ.ಪೂ. ಗುರುದೇವರೇ, ಸದ್ಗುರು ಕಾಕೂ ಇವರಿಂದ ಪ್ರಕ್ಷೇಪಿತವಾಗುವ ಚೈತನ್ಯವೇ ಅವರ ನಿಜವಾದ ಅಲಂಕಾರವಾಗಿರುತ್ತವೆ, ಎಂಬುದು ಮೇಲಿನ ಪ್ರಸಂಗದಲ್ಲಿ ಕಲಿಯಲು ಸಿಕ್ಕಿತು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಚೈತನ್ಯವೇ ಮಹತ್ವದ್ದಾಗಿದೆ, ಎಂಬುದನ್ನು ನೀವು ಕಲಿಸಿಕೊಟ್ಟಿರಿ, ಇದಕ್ಕಾಗಿ ತಮ್ಮ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. – ಶ್ರೀ. ವಿನಾಯಕ ಶಾನಭಾಗ, ಯೋಗ್ಯಕರ್ತಾ, ಇಂಡೋನೇಶಿಯಾ. (೧೩.೩.೨೦೧೮)

Leave a Comment