ಗುಜರಾತಿನ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನ, ವೇರಾವಲ್ ಎಂಬಲ್ಲಿನ ‘ಭಾಲಕಾ ತೀರ್ಥ’ ಮತ್ತು ಸೋಮನಾಥದ ಜ್ಯೋತಿರ್ಲಿಂಗ

ಗುಜರಾತಿನ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನ ಮತ್ತು ವೇರಾವಲ್ ಎಂಬಲ್ಲಿನ ‘ಭಾಲಕಾ ತೀರ್ಥ’ ದರ್ಶನ !

೧. ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನದ ಇತಿಹಾಸ

ಗುಜರಾತಿನ ಸ್ವಾಮಿನಾರಾಯಣ ಸಂಪ್ರದಾಯದ ಗುರು ಸ್ವಾಮಿ ಗೋಪಾಲಾನಂದರು ಸಾರಂಗಪುರಕ್ಕೆ ಬಂದಿದ್ದಾಗ ಅಲ್ಲಿ ಅನೇಕ ವರ್ಷಗಳಿಂದ ಮಳೆ ಬಾರದಿರುವ ಕಾರಣ ಊರಿಗೆ ಊರೇ ಬರಿದಾಗಿತ್ತು ಎಂದು ಅವರಿಗೆ ತಿಳಿಯಿತು. ಆಗ ಅವರು ಹನುಮಂತನಿಗೆ ಪ್ರಾರ್ಥಿಸಿ, ದೈವ ಪ್ರೇರಣೆಯಿಂದ ಆ ಸ್ಥಳದಲ್ಲಿ ಹನುಮಂತನನ್ನು ಸ್ಥಾಪಿಸಿದರು. ಹನುಮಂತನಿಂದಾಗಿ ಎಲ್ಲರ ಕಷ್ಟಗಳ ಪರಿಹಾರವಾದುದರಿಂದ ಆ ದೇವಸ್ಥಾನಕ್ಕೆ ‘ಕಷ್ಟಭಂಜನ ಹನುಮಾನ್ ಮಂದಿರ’ ಎಂಬ ಹೆಸರು ಬಂತು. ಮೂರ್ತಿಯನ್ನು ಸ್ಥಾಪಿಸುವಾಗ ಪ್ರಾಣಪ್ರತಿಷ್ಠೆಯ ಸಮಯದಲ್ಲಿ ಸ್ವಾಮಿ ಗೋಪಾಲಾನಂದರು ಆ ಮೂರ್ತಿಯನ್ನು ಬೆಳ್ಳಿಯ ಕೋಲಿನಿಂದ ಸ್ಪರ್ಶಿದ್ದರು, ಆಗ ಕೆಲವು ಕ್ಷಣಗಳಿಗೆ ಆ ಮೂರ್ತಿಯು ಸಜೀವವಾಗಿ ಹನುಮಂತನು ಹಲ್ಲು ತೋರಿಸಿ ನಗೆಯನ್ನು ಬೀರಿದನು. ಇಂದಿಗೂ ಆ ಮೂರ್ತಿಯು ಅದೇ ಸ್ಥಿತಿಯಲ್ಲಿದೆ.

ಭಕ್ತರ ಕಷ್ಟಗಳನ್ನು ಬಗೆಹರಿಸುವ ಕಷ್ಟಭಂಜನ ಹನುಮಂತನ ಮೂರ್ತಿ !

೨. ವೇರಾವಲ್ ಎಂಬಲ್ಲಿನ ‘ಭಾಲಕಾ ತೀರ್ಥದ’ ಇತಿಹಾಸ

ದ್ವಾಪರಯುಗದಲ್ಲಿ ಶ್ರೀಕೃಷ್ಣನು ಇದೇ ಭಾಲಕಾ ತೀರ್ಥ ಎಂಬಲ್ಲಿ ಅಶ್ವಥ ಮರದಡಿಯಲ್ಲಿ ತನ್ನ ಅವತಾರವನ್ನು ಅಂತ್ಯಗೊಳಿಸಿದ್ದು !

ಸೋಮನಾಥ ಜ್ಯೋತಿರ್ಲಿಂಗದಿಂದ ಸಾಧಾರಣ ೧೦ ಕಿ.ಮೀ. ದೂರದಲ್ಲಿ ವೇರಾವಲ್ ಎಂಬ ಊರಿದೆ. ದ್ವಾಪರಯುಗದಲ್ಲಿ ಯದುಕುಲದ ನಾಶವಾದ ನಂತರ ಮತ್ತು ದ್ವಾರಕೆಯು ಸಮುದ್ರದಲ್ಲಿ ಮುಳುಗಿದ ನಂತರ ಭಗವಾನ್ ಶ್ರೀಕೃಷ್ಣನು ವೇರಾವಲ್ ಊರಿನಲ್ಲಿ ಒಂದು ಅಶ್ವತ್ಥ ಮರದಡಿಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದನು. ಆಗ ಜರಾ ಎಂಬ ಬೇಟೆಗಾರನು ಶ್ರೀಕೃಷ್ಣ ಚರಣಗಳನ್ನು ನೋಡಿ ‘ಇದು ಜಿಂಕೆ ಇರಬೇಕು’ ಎಂದು ತಿಳಿದುಕೊಂಡು ಬಾಣವನ್ನು ಬಿಟ್ಟ. ಹತ್ತಿರ ಬಂದು ನೋಡಿದಾಗ ಶ್ರೀಕೃಷ್ಣನ ಕಾಲಿಗೆ ಬಾಣ ತಗುಲಿರುವುದು ಜರಾನಿಗೆ ಕಂಡುಬಂತು. ಅವನಲ್ಲೇ ಕುಸಿದು ಪಶ್ಚಾತಾಪದಿಂದ ಬಿಕ್ಕಿ ಬಿಕ್ಕಿ ಅಳತೊಡಗಿದ.

ತಾನು ಗುರಿಯಿಟ್ಟಿದ್ದು ಶ್ರೀಕೃಷ್ಣನಿಗೇ ಎಂದು ತಿಳಿದಾಗ ಜರಾ ಎಂಬ ಬೇಟೆಗಾರನು ಶ್ರೀಕೃಷ್ಣನ ಕ್ಷಮೆಯಾಚಿಸುವ ಸನ್ನಿವೇಶವನ್ನು ಈ ಮೂರ್ತಿಯಲ್ಲಿ ಸೆರೆಹಿಡಿಯಲಾಗಿದೆ

ಶ್ರೀಕೃಷ್ಣನು ಅವನನ್ನು ಸಂತೈಸುತ್ತ, ‘ತ್ರೇತಾಯುಗದಲ್ಲಿ ನಾನು ಶ್ರೀರಾಮನ ಅವತಾರ ತಾಳಿದಾಗ ನೀನು ವಾಲಿಯಾಗಿದ್ದೆ. ಆಗ ಶ್ರೀರಾಮನು ಬಾಣದಿಂದ ವಾಲಿಯನ್ನು ವಧಿಸಿದ್ದನು. ಈಗ ಅದರ ಕೊಡಕೊಳ್ಳುವ ಲೆಕ್ಕ ತೀರಿದೆ’ ಎಂದು ಹೇಳಿ ಶ್ರೀಕೃಷ್ಣನು ಜರಾನನ್ನು ಕ್ಷಮಿಸುತ್ತಾನೆ. ಶ್ರೀಕೃಷ್ಣನು ಅದೇ ಅಶ್ವತ್ಥ ಮರದಡಿಯಲ್ಲಿ ತನ್ನ ಅವತಾರವನ್ನು ಅಂತ್ಯಗೊಳಿಸುತ್ತಾನೆ. ಈಗ ಆ ಸ್ಥಾನವು ‘ಭಾಲಕಾ ತೀರ್ಥ’ವೆಂದು ಪ್ರಸಿದ್ಧವಾಗಿದೆ.

1 thought on “ಗುಜರಾತಿನ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನ, ವೇರಾವಲ್ ಎಂಬಲ್ಲಿನ ‘ಭಾಲಕಾ ತೀರ್ಥ’ ಮತ್ತು ಸೋಮನಾಥದ ಜ್ಯೋತಿರ್ಲಿಂಗ”

Leave a Comment