ಥಾರ್ ಮರುಭೂಮಿಯಲ್ಲಿ ಪ್ರಾರ್ಥನೆ

 ಥಾರ್ ಮರುಭೂಮಿಯಲ್ಲಿ ಹೋಗಿ ಪ್ರಾರ್ಥನೆ ಮಾಡುವುದು

‘ಮರುಭೂಮಿ’ ಇದು ಸಂಸ್ಕೃತ ಪದವಾಗಿದೆ. ನಾವು ಭೂಮಿಯ ಈ ಪ್ರಕಾರಕ್ಕೂ ನೈಸರ್ಗಿಕ, ಹಾಗೆಯೇ ಇತರ ಆಪತ್ತುಗಳಿಂದ ಸಾಧಕರ ರಕ್ಷಣೆಯಾಗಲಿ, ಎಂದು ಪ್ರಾರ್ಥನೆ ಮಾಡಿದೆವು. ನಾವು ಥಾರ್ ಮರುಭೂಮಿಗೆ ಸೂರ್ಯೋದಯದ ಸಮಯದಲ್ಲಿ ಹೋಗಿದ್ದೆವು. ಆದ್ದರಿಂದ ಉದಯಿಸುವ ಸೂರ್ಯನಿಗೂ ಪ್ರಾರ್ಥನೆ ಮಾಡಿದೆವು. ‘ಈ ಆಪತ್ಕಾಲದಲ್ಲಿ ನಾವು ನಿಸರ್ಗಕ್ಕೆ ಎಷ್ಟು ಪ್ರಾರ್ಥನೆ ಮಾಡುವೆವೋ, ಅಷ್ಟು ನಮ್ಮ ರಕ್ಷಣೆಯಾಗುವುದು’ ಎಂದು ಮಹರ್ಷಿಗಳು ಹೇಳಿದ್ದಾರೆ.

ರಾಜಸ್ಥಾನದಲ್ಲಿರುವ ಒಂಟೆಯ ಮಹತ್ವ

ರಾಜಸ್ಥಾನದಲ್ಲಿ ಥಾರ್ ಮರುಭೂಮಿ ಇದೆ. ಅಲ್ಲಿ ಬಿರುಗಾಳಿ ಬೀಸಿದಾಗ, ಅಲ್ಲಿದ್ದ ಉಸುಕಿನ ಗುಡ್ಡಗಳು ಇಲ್ಲದಂತಾಗುತ್ತವೆ. ಅವುಗಳ ಸ್ಥಾನ ಬದಲಾಗುತ್ತದೆ. ಇಂದು ಇಲ್ಲಿರುವ ಉಸುಕಿನ ಗುಡ್ಡವು, ನಾಳೆ ಬೇರೆ ಕಡೆಗೆ ಇರುತ್ತದೆ. ಆದುದರಿಂದ ಮರುಭೂಮಿಯಲ್ಲಿ ಮಾರ್ಗ ಸಿಗುವುದು ತುಂಬ ಕಠಿಣವಿರುತ್ತದೆ. ಅಲ್ಲಿ ಆ ಪರಿಸ್ಥಿತಿಯಲ್ಲಿಯೂ ಒಂಟೆಯು ನಮಗೆ ಸರಿಯಾಗಿ ಮನೆಗೆ ತಲುಪಿಸುತ್ತದೆ; ಆದುದರಿಂದಲೇ ಮರಾಠಿಯಲ್ಲಿ ‘ಉಂಟಾವರಚಾ ಶಹಾಣಾ’ ಅಂದರೆ ‘ಒಂಟೆ ಮೇಲಿನ ಬುದ್ಧಿವಂತ’ ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ಬುದ್ಧಿವಂತ ಒಂಟೆಯ ಮೇಲಿನ ಮನುಷ್ಯನಾಗಿರದೇ ಒಂಟೆಯಾಗಿರುತ್ತದೆ !

ಒಂಟೆಯ ನಾಲ್ಕು ದಿನಗಳ ಮರಿ

ಒಂಟೆಯ ಗುಂಪಿನಲ್ಲಿ ತಾಯಿಯ ಹಾಲು ಕುಡಿಯುತ್ತಿರುವಾಗ ೪ ದಿನಗಳ ಒಂಟೆಯ ಮರಿ

ಒಂದು ಸ್ಥಳದಲ್ಲಿ ಒಂಟೆಗಳ ಗುಂಪಿತ್ತು. ಆ ಗುಂಪಿನಲ್ಲಿ ಒಂದು ೪ ದಿನಗಳ ಒಂಟೆ ಮರಿ ಇತ್ತು. ಅದು ತನ್ನ ತಾಯಿಯ ಹಾಲು ಕುಡಿಯುತ್ತಿತ್ತು. ಕೇವಲ ೪ ದಿನಗಳದ್ದಿದ್ದರೂ ಅದು ನೋಡಲು ತುಂಬಾ ದೊಡ್ಡದಿತ್ತು. ಹೆಣ್ಣು ಒಂಟೆಯು ೧೩ ತಿಂಗಳ ನಂತರ ಮರಿಗೆ ಜನ್ಮ ನೀಡುತ್ತದೆ. ‘ಈ ಮರಿಗೆ ಕೈಯಿಂದ ಸ್ಪರ್ಷಿಸಿ. ಅವಳ ತಾಯಿ ಏನೂ ಮಾಡುವುದಿಲ್ಲ ಎಂದು ಒಂಟೆಯ ಗುಂಪು ಕಾಯುವವನು ನನಗೆ ಹೇಳಿದನು. ತಾಯಿಯ ಹಾಲು ಕುಡಿಯುತ್ತಿದ್ದ ಒಂಟೆಯ ಮರಿಯ ಬೆನ್ನಿನ ಮೇಲಿಂದ ನಾನು ಕೈಯಾಡಿಸಿದಾಗ ಅದಕ್ಕೆ ಹಾಲು ಕುಡಿಯಲು ವ್ಯತ್ಯಯವಾದುದರಿಂದ ಅದು ತನ್ನ ಸಣ್ಣ ಬಾಲವನ್ನು ಅಲುಗಾಡಿಸಿತು ಒಂಟೆಯ ಬಾಲದ ಕೂದಲು ಸಣ್ಣದಿದ್ದರೂ ಒರಟಾಗಿರುತ್ತವೆ. ಇದು ೪ ದಿನಗಳ ಮರಿಯಾಗಿತ್ತು. ಆದರೂ ಅದರ ಬಾಲವು ನನ್ನ ಕೈಗೆ ತಗಲಿದಾಗ ಅದರ ಒಂದು ಕೂದಲು ನನ್ನ ಕೈಯಲ್ಲಿ ಹೊಕ್ಕಿತು. ಮುಳ್ಳು ಚುಚ್ಚಿದಂತೆ ಹೊಕ್ಕ ಆ ಕೂದಲನ್ನು ತೆಗೆಯುವ ವರೆಗೆ ಸಾಕಾಗಿ ಹೋಯಿತು. ಇಂತಹ ಒಂಟೆಗಳನ್ನು ಅಲ್ಲಿಯ ಜನರು ಹೇಗೆ ಜೋಪಾನ ಮಾಡುತ್ತಾರೋ, ಏನೋ ! ಒಂಟೆಯ ಹಾಲು ಔಷಧಿಯಾಗಿದೆ. ನಮಗೆ ಆ ಜನರು ಒಂಟೆಯ ಹಾಲಿನ ಚಹಾ ಮಾಡಿಕೊಟ್ಟರು.

ಗಾಳಿಯಲ್ಲಿ ಹಾರಾಡುವ ಹುಳಗಳು ಮೂಗಿನಲ್ಲಿ ಹೋಗ ಬಾರದೆಂದು; ಹಿಂಡಿನಲ್ಲಿಯ ಎಲ್ಲ ಕುರಿಗಳು ತಲೆ ಕೆಳಗೆ ಹಾಕಿ ಪರಸ್ಪರರೊಳಗೆ ಸೇರಿಸಿ ಸ್ತಬ್ಧವಾಗಿ ನಿಂತಿದ್ದು ಕಾಣಿಸುವುದು : ಇಲ್ಲಿ ನಮಗೆ ಒಮ್ಮೆ ಮಧ್ಯಾಹ್ನದ ಸಮಯ ಕುರಿಗಳ ಹಿಂಡು ಕಾಣಿಸಿತು. ಅವೆಲ್ಲ ಕುರಿಗಳು ಕೆಲಹೊತ್ತು ತಲೆ ಕೆಳಗೆ ಹಾಕಿ ಪರಸ್ಪರರೊಳಗೆ ಬೆಸೆದುಕೊಂಡು ಸ್ತಬ್ಧವಾಗಿ ನಿಂತಿದ್ದವು. ಈ ಬಗ್ಗೆ ಅಲ್ಲಿ ನಾವು ಒಬ್ಬನಿಗೆ ಇದರ ಕಾರಣವೇನು ಎಂದು ಕೇಳಿದಾಗ, ‘ಯಾವಾಗ ಗಾಳಿಯಲ್ಲಿ ಸಣ್ಣ ಹುಳಗಳು ಹಾರಾಡಲಾರಂಭಿಸುತ್ತದೆಯೋ, ಆಗ ಆ ಹುಳಗಳು ಮೂಗಿನೊಳಗೆ ಹೋಗಬಾರದೆಂದು ಕುರಿಗಳು ತಲೆ ಕೆಳಗೆ ಹಾಕಿ ಪರಸ್ಪರರಲ್ಲಿ ಬೆಸೆದುಕೊಳ್ಳುತ್ತವೆ ಹಾಗೂ ಮುಖದ ರಕ್ಷಣೆ ಮಾಡುತ್ತವೆ ಎಂದು ತಿಳಿಯಿತು. ಆ ಹುಳಗಳು ಗಾಳಿಯಲ್ಲಿ ನಿರ್ಧಿಷ್ಟ ಎತ್ತರದಲ್ಲಿ ಹಾರಾಡುವುದರಿಂದ ತಲೆ ಕೆಳಗೆ ಹಾಕುವುದರಿಂದ ಹುಳಗಳು ಮೂಗಿನೊಳಗೆ ಹೋಗುವುದಿಲ್ಲ. ಇದರಿಂದ ದೇವರ ಲೀಲೆ ಹೇಗಿರುತ್ತದೆ ಎಂಬುದು ತಿಳಿಯುತ್ತದೆ. ದೇವರು ಪ್ರತಿಯೊಂದು ಜೀವದ ರಕ್ಷಣೆಗಾಗಿ ಏನಾದರೊಂದು ಉಪಾಯ ಕೊಟ್ಟಿರುತ್ತಾನೆ.

ಕುರಿಗಳು ಕೆಲಹೊತ್ತು ತಲೆ ಕೆಳಗೆ ಹಾಕಿ ಪರಸ್ಪರರೊಳಗೆ ಬೆಸೆದುಕೊಂಡು ಸ್ತಬ್ಧವಾಗಿ ನಿಂತಿದ್ದವು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಸಲುವಾಗಿ ರಾಜಸ್ಥಾನಿ ಪಾರಂಪರಿಕ ವಾದ್ಯಗಳನ್ನು ಖರೀದಿಸುವುದು : ನಾವು ರಾಜಸ್ಥಾನಿ ಸಂಗೀತದ ಅಧ್ಯಯನ ಮಾಡುವುದಕ್ಕಾಗಿ ಇಲ್ಲಿಯ ಕೆಲವು ಪಾರಂಪರಿಕ ವಾದ್ಯಗಳನ್ನು ಖರೀದಿಸಿದೆವು, ಉದಾ. ರಾವಣಹತ್ಯಾ, ಕಮಾಯಚಾ ಮತ್ತು ಮೋರಚಂಗ. ಇದರಲ್ಲಿ ರಾವಣಹತ್ಯಾ ಮತ್ತು ಕಮಾಯಚಾ ಇವು ತಂತಿವಾದ್ಯವಾಗಿದ್ದು ಅದು ಸಾರಂಗದಂತಿದೆ. ಮೋರಚಂಗ ಇದು ಬಾಯಲ್ಲಿಟ್ಟು ಬಾರಿಸುವ ವಾದ್ಯವಾಗಿದೆ. ಈ ವಾದ್ಯದ ನಾದ ಸುಮಧುರವಾಗಿದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ-ವಿಭಾಗದ ಸಲುವಾಗಿ ಈ ವಾದ್ಯಗಳು ಉಪಯುಕ್ತವಾಗಿರುತ್ತವೆ.
– (ಸದ್ಗುರು) ಸೌ. ಅಂಜಲಿ ಗಾಡಗೀಳ, ಜೈಸಲ್ಮೇರ್, ರಾಜಸ್ಥಾನ.

Leave a Comment