ಶ್ರೀವಿಷ್ಣು ಮತ್ತು ಆಂಡಾಳದೇವಿಯ ವಿವಾಹ

ಪೂ.ಡಾ.ಓಂ ಉಲಗನಾಥನ್ ಇವರು ಮಹರ್ಷಿಗಳ ಆಜ್ಞೆಗನುಸಾರ ವೈಕುಂಠ ಏಕಾದಶಿಯ ಪ್ರಯುಕ್ತ ಶ್ರೀವಿಷ್ಣು ದೇವಸ್ಥಾನದಲ್ಲಿ ಒಂದು ನೃತ್ಯದ ಕಾರ್ಯಕ್ರಮವನ್ನು ಆಯೋಜಿಸುವುದು

‘೮.೧.೨೦೧೭ ರಂದು ವೈಕುಂಠ ಏಕಾದಶಿಯ ಪ್ರಯುಕ್ತ ತಮಿಳುನಾಡಿನ ಈರೋಡದ ‘ಕಸ್ತೂರಿ ರಂಗನಾಥನ್’ ಎಂಬ ಶೇಷಶಾಯಿ ಶ್ರೀವಿಷ್ಣು ದೇವಸ್ಥಾನದಲ್ಲಿ ಒಂದು ನೃತ್ಯದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೂ. ಡಾ. ಓಂ ಉಲಗನಾಥನ್ ಇವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಕಳೆದ ೨ ವರ್ಷಗಳಿಂದ ಅವರು ವೈಕುಂಠ ಏಕಾದಶಿಯ ಪ್ರಯುಕ್ತ ಈ ದೇವಸ್ಥಾನದಲ್ಲಿ ಈ ಕಾರ್ಯಕ್ರಮದ ಸೇವೆಯನ್ನು ಮಹರ್ಷಿಗಳ ಆಜ್ಞೆಗನುಸಾರ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಹೆಸರು ‘ಆಂಡಾಳ ಥಿರುಕಲ್ಯಾಣಮ್ (ವಿವಾಹ) ನೃತ್ಯನಾಟ್ಯಮ್’, ಎಂಬುದಾಗಿದೆ. ಶ್ರೀವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿ ಎಂಬ ಇಬ್ಬರು ದೇವಿಯರಿದ್ದಾರೆ. ಆಂಡಾಳದೇವಿ ಇವಳು ಭೂದೇವಿಯ ಅವತಾರವಾಗಿದ್ದು, ಅದು ೩ ಸಾವಿರ ವರ್ಷಗಳ ಹಿಂದೆಯಾಗಿತ್ತು. ಈ ನೃತ್ಯನಾಟ್ಯದಲ್ಲಿ ಆಂಡಾಳದೇವಿಯ ಪಾತ್ರವನ್ನು ಪೂ. ಡಾ. ಓಂ ಉಲಗನಾಥನ್ ಇವರ ಸುಪುತ್ರಿ ಕು. ಓಂ ಅಕ್ಷರಾ ಮಾಡಲಿದ್ದಾಳೆ. ಭರತನಾಟ್ಯಮ್‌ನ ಖ್ಯಾತ ಗುರುಗಳಾದ ಶ್ರೀ. ಬಿನೇಶ ಮಹಾದೇವನ್ ಮತ್ತು ಅವರ ವಿದ್ಯಾರ್ಥಿಗಳು ಈ ನೃತ್ಯನಾಟ್ಯವನ್ನು ಪ್ರಸ್ತುತ ಪಡಿಸುತ್ತಾರೆ. ಆಂಡಾಳದೇವಿಯ ವಿವಾಹ ಪ್ರಸಂಗದ ಕಥೆ ಹೀಗಿದೆ.

ಶ್ರೀವಿಷ್ಣು ಮತ್ತು ಆಂಡಾಳದೇವಿಯ ವಿವಾಹ ಹೀಗಾಯಿತು !

ಯಾವಾಗ ಶ್ರೀವಿಷ್ಣು ವರಾಹ ಅವತಾರವನ್ನು ತಾಳಿ ಹಿರಣ್ಯಾಕ್ಷನ ವಶದಲ್ಲಿದ್ದ ಪೃಥ್ವಿಯನ್ನು (ಭೂದೇವಿ) ಬಿಡಿಸಿಕೊಂಡು ಪುನಃ ಸಮುದ್ರದ ಆಳದಿಂದ ಮೇಲಕ್ಕೆತ್ತಿ ತಂದನೋ, ಆಗ ಅವಳು ಶ್ರೀವಿಷ್ಣುವಿಗೆ, ‘ನೀನು ವರಾಹ ಅವತಾರವನ್ನು ತಾಳಿ ಏಕೆ ಬಂದೆ ? ಇದನ್ನು ನೋಡಿ ಜನರು ನನ್ನ ಹಾಸ್ಯ ಮಾಡುವರು’ ಎಂದಳು. ಆಗ ವರಾಹ ಸ್ವಾಮಿಯು ಅವಳಿಗೆ ವಚನ ನೀಡಿ, ‘ಮುಂದೆ ನಾನು ಶ್ರೀವಿಳ್ಳಿಪುಥುರ್ ಎಂಬಲ್ಲಿ ಅವತಾರ ತಾಳಿದಾಗ ನಿನ್ನ ಜೊತೆ ವಿವಾಹವಾಗುವೆನು. ಆಗ ನೀನು ಅಲ್ಲಿ ‘ಆಂಡಾಳ’ ಹೆಸರಿನಿಂದ ಜನ್ಮವೆತ್ತಿರುವೆ’, ಎಂದು ಹೇಳಿದರು. ಅದಕ್ಕನುಸಾರ ಭೂದೇವಿಯು ‘ಆಂಡಾಳ’ ಹೆಸರಿನಿಂದ ಜನ್ಮತಾಳಿದಳು. ತಮಿಳುನಾಡಿನ ಶ್ರೀವಿಳ್ಳಿಪುಥುರ್‌ದಲ್ಲಿಯ ಶ್ರೀವಿಷ್ಣು ದೇವಸ್ಥಾನದ ಅರ್ಚಕರಾಗಿದ್ದ ವಿಷ್ಣು ಚಿತ್ತರ ಇವರಿಗೆ ಅವರ ತೋಟದಲ್ಲಿ ತುಳಸಿ ಗಿಡದ ಕೆಳಗೆ ಸುಂದರ ಬಾಲಕಿ ಮಲಗಿರುವುದು ಕಾಣಿಸಿತು. ಭೂದೇವಿಯ ವರದಾನವೆಂದು ಅವರು ಅವಳನ್ನು ತಮ್ಮ ಪತ್ನಿಗೆ ತಂದು ಒಪ್ಪಿಸಿದರು ಹಾಗೂ ಅವಳ ಪಾಲನೆ ಪೋಷಣೆ ಮಾಡಿದರು.

ಮುಂದೆ ಆಂಡಾಳ ಇವಳು ವಿವಾಹ ಯೋಗ್ಯಳಾದಳು, ಆಗ ವಿಷ್ಣು ಚಿತ್ತರ ಇವರು ಅವಳ ವಿವಾಹಕ್ಕೆ ಯೋಗ್ಯವಾದವರನ ಸಂಶೋಧನೆ ಮಾಡತೊಡಗಿದರು. ಆದರೆ ಆಂಡಾಳ ಇವಳು ಅವರಿಗೆ, ‘ನಾನು ಬೇರೆ ಯಾರೊಂದಿಗೂ ವಿವಾಹವಾಗದೇ, ಸಾಕ್ಷಾತ್ ವಿಷ್ಣು ಪತ್ನಿಯಾಗಲು ನಿಶ್ಚಯಿಸಿದ್ದೇನೆ ಹಾಗೂ ಈಶ್ವರನೊಂದಿಗೆ (ಶ್ರೀವಿಷ್ಣು) ಐಕ್ಯವಾಗುವ ಧ್ಯೇಯವನ್ನಿಟ್ಟಿದ್ದು  ಅದಕ್ಕಾಗಿಯೇ ಪ್ರಯತ್ನ ಮಾಡಿ ನಾನು ನನ್ನ ಇದುವರೆಗಿನ ಜೀವನವನ್ನು ಸಮರ್ಪಿಸಿದ್ದೇನೆ’, ಎಂದು ಹೇಳಿದಳು. ಅವಳು ತಂದೆಯನ್ನು ಉದ್ದೇಶಿಸಿ ‘ನಿಮಗೆ ಗೊತ್ತಿರುವ ಹಾಗೂ ವಿವಿಧೆಡೆಯ ಪವಿತ್ರ ಕ್ಷೇತ್ರಗಳಲ್ಲಿ ಜೋಪಾನವಾಗಿಟ್ಟಿರುವ ಶ್ರೀವಿಷ್ಣುವಿನ ವೈಶಿಷ್ಟ್ಯಗಳನ್ನು ನನಗೆ ತಿಳಿಸಿ ಹೇಳಿರಿ’, ಎಂಬುದಾಗಿ ಇಚ್ಛೆ ವ್ಯಕ್ತ ಪಡಿಸಿದಳು. ಆಗ ವಿಷ್ಣು ಚಿತ್ತರ ಇವರು ಶ್ರೀವಿಷ್ಣುವಿನ ೧೦೮ ಕ್ಷೇತ್ರಗಳ ವೈಶಿಷ್ಟ್ಯಗಳನ್ನು ಕಥನ ಮಾಡಿದರು. ಅವಳ ತಂದೆಯವರು ಯಾವಾಗ ಶ್ರೀರಂಗಮ್ ಇಲ್ಲಿಯ ರಂಗನಾಥನ ಸೌಂದರ್ಯದ ಕುರಿತು ವರ್ಣಿಸಿ ಹೇಳಿದರೋ ಆಗ, ಅವಳ ಕಣ್ಣಲ್ಲಿ ಆನಂದದಿಂದ ಭಾವಾಶ್ರು ಹರಿಯತೊಡಗಿದವು. ಅವಳು ರಂಗನಾಥನಿಗೆ (ಶೇಷಶಯನ ವಿಷ್ಣುವಿಗೆ ‘ರಂಗನಾಥ’ ಎಂದು ಕರೆಯುತ್ತಾರೆ.) ಮನದಲ್ಲಿಯೇ ‘ನೀನೇ ಬಂದು ನನ್ನನ್ನು ನಿನ್ನ ‘ಪತ್ನಿ’ ಎಂದು ಸ್ವೀಕರಿಸು ಎಂದು ಪ್ರಾರ್ಥನೆ ಮಾಡಿದಳು. ‘ಆಂಡಾಳಳ ವಿವಾಹವು ಈಶ್ವರನೊಂದಿಗೆ ಆಗಲು ಹೇಗೆ ಸಾಧ್ಯವಿದೆ ?, ಎಂಬುದಾಗಿ ಅಲ್ಲಿಯ ಸಂತರಾದ ಪೆರಿಯಾ ಆಳ್ವಾರ ಇವರಿಗೆ ಆಶ್ಚರ್ಯವೆನಿಸಿತು. ಆದರೆ ಒಂದು ದಿನ ಪೆರಿಯಾ ಆಳ್ವಾರ ಇವರ ಸ್ವಪ್ನದಲ್ಲಿ ಭಗವಾನ ರಂಗನಾಥನು ಬಂದು ಶ್ರೀರಂಗಮ್ ಇಲ್ಲಿಯ ದೇವಸ್ಥಾನದಲ್ಲಿ ಆಂಡಾಳ ಇವಳನ್ನು ಕರೆದುಕೊಂಡು ಬರಲು ಹೇಳಿದರು. ಅಲ್ಲಿ ಭಗವಾನ ರಂಗನಾಥರು ವಿವಾಹ ಮಾಡುವವರಿದ್ದರು.

ಶ್ರೀರಂಗಮ್‌ದಲ್ಲಿಯ ದೇವಸ್ಥಾನದ ಅರ್ಚಕರ ಸ್ವಪ್ನದಲ್ಲಿಯೂ ಭಗವಾನ ರಂಗನಾಥರು ಬಂದರು ಮತ್ತು ಅವರು ಅವನಿಗೂ ಶ್ರೀವಿಳ್ಳಿಪುಥುರಕ್ಕೆ ಹೋಗಿ ವಧು ಮತ್ತು ಅವಳೊಡನೆ ಬರುವ ಜನರ ಸ್ವಾಗತದ ಸಂಪೂರ್ಣ ಸಿದ್ಧತೆ ಮಾಡಲು ಆಜ್ಞೆ ಮಾಡಿದರು. ಅದೇರೀತಿ ಪಂಡ್ಯಾದ ರಾಜಾ ವಲ್ಲಭದೇವನ್ ಇವನ ಸ್ವಪ್ನದಲ್ಲಿಯೂ ಭಗವಾನ ರಂಗನಾಥನು ಬಂದು ಅವರು ಆ ರಾಜನಿಗೂ ವಧುವನ್ನು (ಆಂಡಾಳ ಇವಳನ್ನು) ಶ್ರೀರಂಗದಲ್ಲಿ ಕರೆತರಲು ಮುತ್ತು ರತ್ನಗಳಿಂದ ಶೃಂಗರಿಸಿದ ಪಲ್ಲಕಿಯನ್ನು ಸಿದ್ಧಗೊಳಿಸಲು ಆಜ್ಞೆ ಮಾಡಿದರು. ದೇವರ ಆಜ್ಞೆಯಂತೆ ಪೆರಿಯಾ ಅಳ್ವಾರ ಅವರು ಆಂಡಾಳ ಇವಳನ್ನು ವಧುವಿನ ಪಲ್ಲಕಿಯಿಂದ ಶ್ರೀರಂಗಮ್‌ಗೆ ಕರೆದುಕೊಂಡು ಬಂದರು. ಆಗ ಆಂಡಾಳ ಇವಳೂ ‘ತನ್ನ ಧ್ಯೇಯ ಪೂರ್ಣವಾಗಲಿದೆ’ ಎಂಬ ವಿಚಾರ ಮಾಡುತ್ತ ಶ್ರೀರಂಗಮ್‌ನತ್ತ ಮಾರ್ಗ ಕ್ರಮಣ ಮಾಡತೊಡಗಿದಳು. ಆ ಸಮಯದಲ್ಲಿ ಒಂದು ವಿಲಕ್ಷಣವು ಸಂಭವಿಸಿತು. ಆಂಡಾಳಳು ಅಯಸ್ಕಾಂತದಂತೆ ಭಗವಾನ್ ರಂಗನಾಥನ ಕಡೆಗೆ ಆಕರ್ಷಿತಳಾದಳು. ಆಕೆಯು ಅವನ ಸಮೀಪಕ್ಕೆ ಹೋಗಿ ಶೇಷಶಯನದ ಮೇಲೆ ಏರಿ ಭಗವಂತನಲ್ಲಿ ಐಕ್ಯಳಾದಳು. ಅವಳು ಭಗವಾನ್ ರಂಗನಾಥನನ್ನು ಆಲಿಂಗಿಸಿದಳು ಮತ್ತು ಪ್ರಕಾಶದಲ್ಲಿ ಅದೃಶ್ಯಗೊಂಡು ಏಕರೂಪ ವಾದಳು. ತನ್ನ ಸಂಪೂರ್ಣ ತನು-ಮನಗಳನ್ನು ಈಶ್ವರನಿಗೆ ಸಮರ್ಪಿಸಿ ಅತ್ಯುಚ್ಚ ಶಿಖರವನ್ನೇರಿದಳು. ಆಗ ಅವಳು ಕೇವಲ ೧೫ ವರ್ಷದವಳಾಗಿದ್ದಳು.
– ಸದ್ಗುರು (ಸೌ.) ಅಂಜಲಿ ಗಾಡಗೀಳ

Leave a Comment