ತನೋಟಮಾತಾ ದೇವಾಲಯ (ಜೈಸಲ್ಮೇರ್, ರಾಜಸ್ಥಾನ)

ತನೋಟಮಾತೆಯ ದರ್ಶನಕ್ಕಾಗಿ ಜಯಪುರದಿಂದ ಜೈಸಲ್ಮೇರ್‌ಗೆ ಪ್ರಯಾಣ

‘ಮಹರ್ಷಿಗಳು ಇಂದು ನಮಗೆ ಭಾರತ ಹಾಗೂ ಪಾಕ್ ಗಡಿಯಲ್ಲಿರುವ ಜೈಸಲ್ಮೇರ್‌ನಲ್ಲಿನ ತನೋಟಮಾತಾ ದೇವಾಲಯದಲ್ಲಿ ದರ್ಶನ ಪಡೆದುಕೊಳ್ಳಲು ಅಲ್ಲಿಗೆ ಹೋಗಲು ಹೇಳಿದರು. ಜಯಪುರದಿಂದ ಜೈಸಲ್ಮೇರ್‌ಗೆ ೬೧೩ ಕಿ.ಮೀ. ಅಂತರವಿದ್ದು ಅಲ್ಲಿಗೆ ತಲುಪಲು ಚತುಶ್ಚಕ್ರ ವಾಹನಕ್ಕೆ ಸುಮಾರು ೧೦ ತಾಸು ಬೇಕಾಗುತ್ತದೆ. ನಾವು ಇಂದು ಬೆಳಗ್ಗೆ ಜಯಪುರದಿಂದ ಹೊರಟಿದ್ದೇವೆ.

ಭಾರತದ ಗಡಿಯನ್ನು ರಕ್ಷಿಸುವ ಶ್ರೀ ತನೋಟಮಾತಾ ದೇವಿಯ ದೇವಸ್ಥಾನ

ತನೋಟಮಾತಾ ದೇವಿ

೧. ತನೋಟಮಾತಾ ದೇವಿಯ ದರ್ಶನ ಪಡೆದು ಕೊಂಡು ಅವಳಿಗೆ ಪ್ರಾರ್ಥನೆ ಮಾಡಿದ ಬಳಿಕ ಆಕೆಯವರೆಗೆ ಪ್ರಾರ್ಥನೆ ತಲುಪಿ ದುದರ ಸಾಕ್ಷಿ ನೀಡುವುದು :  ‘ಈ ದಿನ ಬೆಳಗ್ಗೆ ೧೦.೩೦ ಕ್ಕೆ ತನೋಟಮಾತಾ ದೇವಾಲಯಕ್ಕೆ ನಾವು ತಲುಪಿದೆವು. ಈ ದೇವಾಲಯವು ಭಾರತ – ಪಾಕಿಸ್ತಾನದ ಗಡಿಯಲ್ಲಿದೆ. ಈ ದೇವಾಲಯಕ್ಕೆ ಹೋಗಿ ದೇವಿಯ ಮುಂದೆ ನಿಂತುಕೊಂಡೆವು ಹಾಗೂ ಆಕೆಯಲ್ಲಿ, ‘ಹೇ ದೇವಿಮಾತೇ, ನೀನು ಹೇಗೆ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಭಾರತೀಯರನ್ನು ರಕ್ಷಿಸಿದೆಯೋ ಹಾಗೂ ನಾವು ಜಯಿಸುವಂತೆ ಮಾಡಿದೆಯೋ, ಅದೇ ರೀತಿ ಮುಂಬರುವ ಮೂರನೇ ಮಹಾಯುದ್ಧದ ಸಮಯದಲ್ಲಿಯೂ ನಮ್ಮ ಸಾಧಕರನ್ನು ರಕ್ಷಿಸು ಹಾಗೂ ನಮಗೆ ಜಯ ಪ್ರಾಪ್ತ ವಾಗುವಂತೆ ಮಾಡು’ ಎಂದು ನಾನು ಪ್ರಾರ್ಥನೆ ಮಾಡಿ ದೇವಿಗೆ ನಮಸ್ಕಾರ ಮಾಡಿದಾಗ ಆಕೆಯ ದೇಹದ ಮೇಲಿದ್ದ ಗುಲಾಬಿಯ ದಳ ಕೆಳಗೆ ಬಿತ್ತು ಹಾಗೂ ನಮ್ಮ ಪ್ರಾರ್ಥನೆ ದೇವಿಗೆ ತಲುಪಿದುದರ ಸಾಕ್ಷಿ ನೀಡಿದಳು.

೨. ನಾವು ಸಾಧಕರ ರಕ್ಷಣೆಯಾಗಲು ದೇವಾಲಯದಿಂದ ದೇವಿಯ ಶಕ್ತಿಯಿಂದ ತುಂಬಿರುವ ಕೆಂಪು ದಾರ ಹಾಗೂ ವಿಭೂತಿ ತೆಗೆದುಕೊಂಡೆವು.

೩. ನಾವು ದೇವಾಲಯದಲ್ಲಿರುವ ಪೂಜಾರಿಗಳಿಗೆ ೨೦೧೭ ರ ಸನಾತನ ಪಂಚಾಂಗವನ್ನು ಅರ್ಪಿಸಿದೆವು. ಅವರು ತಕ್ಷಣ ಅದನ್ನು ದೇವಾಲಯದಲ್ಲಿ ಹಾಕಿದರು.

೪. ದೇವಸ್ಥಾನ ಪರಿಸರದಲ್ಲಿರುವ ಶಮಿಯ ಐತಿಹಾಸಿಕ ಸ್ಥಳವೃಕ್ಷ ಇಲ್ಲಿ ದೇವಸ್ಥಾನದ ಪರಿಸರದಲ್ಲಿ ಶಮಿಯ ಐತಿಹಾಸಿಕ ಸ್ಥಳವೃಕ್ಷ ಇದೆ. ಈ ವೃಕ್ಷದ ಆಧ್ಯಾತ್ಮಿಕ ಮಹತ್ವವೆಂದರೆ – ‘ವರ್ಷ ೧೯೬೫ ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಈ ಸ್ಥಳದಲ್ಲಿ ಹೋರಾಡುತ್ತಿದ್ದ ಭಾರತೀಯ ಸೈನಿಕರಿಗೆ ದೇವಿಯು ಈ ಮರದ ಕೆಳಗೆ ಪ್ರತ್ಯಕ್ಷ ದೃಷ್ಟಾಂತ ನೀಡಿ ರಕ್ಷಿಸಿದ್ದಳು. ಆದ್ದರಿಂದ ಈ ವೃಕ್ಷವನ್ನು ಜನರು ಭಕ್ತಿಭಾವದಿಂದ ನೋಡುತ್ತಾರೆ. ಅವರು ತಮ್ಮ ಮನೋಇಚ್ಛೆ ಪೂರ್ಣಗೊಳ್ಳಲು ಈ ವೃಕ್ಷಕ್ಕೆ ರುಮಾಲಿನಂತಹ ಕೆಂಪು ಬಟ್ಟೆಯನ್ನು ಕಟ್ಟುತ್ತಾರೆ.

೪ ಅ. ಐತಿಹಾಸಿಕ ಸ್ಥಳ ವೃಕ್ಷದ ಮೂಲದಲ್ಲಿರುವ ದೇವಿಯ ಮೂರ್ತಿಯ ಬಳಿ ಒಂದು ಆಡು ಬಂದು ಅದು ದೇವಿಗೆ ತುಂಬ ಸಮಯದವರೆಗೆ ಹೂಂಕರಿಸುವುದು : ನಾವು ಈ ಸ್ಥಳವೃಕ್ಷದ ದರ್ಶನ ಪಡೆದುಕೊಂಡೆವು.

ದೇವಿಯ ಮೂರ್ತಿಯ ಎದುರು ಆಡು ಹೂಂಕರಿಸುವುದು

ಈ ವೃಕ್ಷದ ಬುಡದಲ್ಲಿ ದೇವಿಯ ಸಣ್ಣ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಅವಳಿಗೂ ಪ್ರಾರ್ಥನೆ ಮಾಡಿದೆವು. ಆ ಸಮಯದಲ್ಲಿ ಒಂದು ಆಡು ಬಂತು. ಅದು ದೇವಿಯ ಮೂರ್ತಿಯ ಸಮೀಪ ಬಂದು ಹೂಂಕರಿಸಲಾರಂಭಿಸಿತು. ಅದು ೨-೩ ನಿಮಿಷ ದೇವಿಗೆ ಹೂಂಕರಿಸಿತು. ಆ ಆಡನ್ನು ನೋಡುವಾಗ ನನಗೆ ಒಳ್ಳೆಯದೆನಿಸಿತೆಂದು ನಾನು ಅದರ ಬೆನ್ನಿನ ಮೇಲೆ ಕೈಯಾಡಿಸಿದೆನು. ಅದು ನನಗೆ ಹಾಗೆ ಮಾಡಲು ಬಿಟ್ಟಿತು. ನಂತರ ಅದು ಆ ವೃಕ್ಷದಿಂದ ಸುಮಾರು ೫೦ ಅಡಿ ದೂರದಲ್ಲಿ ತನೋಟಾಮಾತೆ ದೇವಸ್ಥಾನದ ಪರಿಸರದಲ್ಲೇ ಇರುವ ಪೀರ್‌ಬಾಬಾ ಸಮಾಧಿ ಬಳಿ ಹೋಗಿ ಕುಳಿತುಕೊಂಡಿತು. ಅಲ್ಲಿ ವಿಚಾರಿಸಿದ ನಂತರ, ಈ ಪೀರ್‌ಬಾಬಾನೆಂದರೆ ಪಾಕಿಸ್ತಾನದ ಸೈನಿಕನಾಗಿದ್ದನು ಎಂಬುದು ತಿಳಿಯಿತು. ಭಾರತ-ಪಾಕ್ ಯುದ್ಧದ ಸಮಯದಲ್ಲಿ ಅವನು ಮತ್ತು ಅವನೊಂದಿಗೆ ಇತರ ಸೈನಿಕರು ಸಹ ಇಲ್ಲಿಯವರೆಗೆ ಬಂದಿದ್ದರು. ಆಗ ದೇವಿಯು ಕೇವಲ ಆ ಸೈನಿಕನಿಗೆ ದೃಷ್ಟಾಂತ ನೀಡಿ, ನಾನು ಭಾರತಕ್ಕೆ ಏನೂ ಆಗಲು ಬಿಡುವುದಿಲ್ಲ. ನೀವು ಗೆಲ್ಲಲು ಸಾಧ್ಯವಿಲ್ಲ ನೀವು ಮರಳಿ ಹೋಗಿರಿ ಎಂದಳು. ನಂತರ ಅವನು ಆ ದೃಷ್ಟಾಂತವನ್ನು ತನ್ನ ಅಧಿಕಾರಿಗೆ ಹೇಳಿದನು ಹಾಗೂ ‘ನಾವು ಮರಳಿ ಹೋಗೋಣ’ ಎಂದು ಕೂಡ ಹೇಳಿದನು; ಆದರೆ ಪಾಕ್ ಸೈನಿಕರು ಅವನು ಪಿತೂರಿ ಮಾಡುತ್ತಿದ್ದಾನೆ ಎಂದು ತಿಳಿದು ಅವನ ಕೈ-ಕಾಲುಗಳನ್ನು ಮುರಿದು ಹಾಕಿ ಅವನನ್ನು ಅಲ್ಲಿಯೇ ಬಿಟ್ಟು ಮುಂದೆ ಹೋದರು; ಆದರೆ ಮುಂದೆ ಆ ಸೈನಿಕರು ಭಾರತೀಯ ಸೈನಿಕರಿಂದ ಕೊಲ್ಲಲ್ಪಟ್ಟರು.

೫. ಇಲ್ಲಿರುವ ‘ಆವಡಮಾತಾ ಶಿಲೆ’ಯನ್ನು ಕೊಂಡುಕೊಳ್ಳುವುದು

ತನೋಟಮಾತಾ ದೇವಿಯ ಮೂರ್ತಿಯ ಹಿಂದೆ ಒಂದು ಶಿಲೆಯಿದೆ. ಅದು ಇಲ್ಲಿಯ ಪ್ರತ್ಯಕ್ಷ ಮೂರ್ತಿಯಾಗಿದೆ. ಮಾತಾ ತನೋಟ ಎಂದರೆ ಶ್ರೀ ಆವಡದೇವಿ. (ತನೋಟಮಾತಾ ದೇವಿಯ ಮೂರ್ತಿಯ ಹಿಂದೆ ಸಿಂಧೂರ ಬಣ್ಣದ ಅಡ್ಡ ಶಿಲೆಯಿದೆ.) ಇಸವಿ ೮೦೮ ರಲ್ಲಿ ಇಲ್ಲಿನ ಮಾಮಡಿಯಾ ಹೆಸರಿನ ಗೃಹಸ್ಥರ ಮೊದಲನೇ ಸಂತಾನದ ರೂಪದಲ್ಲಿ ಮಂಗಳವಾರ ಚೈತ್ರ ಶುಕ್ಲ ಪಕ್ಷ ನವಮಿಯ ತಿಥಿಯಂದು ಶ್ರೀ ಆವಡದೇವಿಯ ಜನನವಾಯಿತು. ಅನಂತರ ಆಕೆಗೆ ೬ ಸಹೋದರಿಯರು ಹಾಗೂ ಒಬ್ಬ ಸಹೋದರನ ಜನನ ವಾಯಿತು ಎಂಬ ಇತಿಹಾಸವಿದೆ. ಇದರಿಂದ ನನಗೆ, ‘ಈ ೭ ಹೆಣ್ಣು ಮಕ್ಕಳೆಂದರೆ ಸಪ್ತ ಮಾತೃಕೆಯರು, ಅಂದರೆ ೭ ಶಕ್ತಿ ಹಾಗೂ ೧ ಸಹೋದರನೆಂದರೆ ಕಾಲಭೈರವ’ ಸಪ್ತಮಾತೃಕೆಯರೊಂದಿಗೆ ಕಾಲಭೈರವನು ಯಾವಾಗಲೂ ಇರುತ್ತಾನೆ’ ಎಂದೆನಿಸಿತು. ಅದೇ ರೀತಿ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರ ಬಂತು, ‘ಈ ೭ ಶಕ್ತಿಗಳೆಂದರೆ ದೇಶದ ೭ ಸಂರಕ್ಷಣಾತ್ಮಕ ಶಕ್ತಿಯಾಗಿವೆ’ ಎಂಬ ವಿಚಾರ ಬಂತು. ನಂತರ ಈ ಬಗ್ಗೆ ವಿಚಾರಿಸಿದ ಬಳಿಕ, ‘ಭಾರತ ದೇಶಕ್ಕೆ ೭ ದೇಶಗಳ ೭ ಗಡಿಯಿದೆ’ ಎಂದು ತಿಳಿಯಿತು.’ ಈಗ ಅಧರ್ಮದ ವಿರುದ್ಧ ವೈಚಾರಿಕ ಹೋರಾಟ ನಡೆಸಲು ಹಾಗೂ ದೇಶದ ರಕ್ಷಣೆಗಾಗಿ ನಮಗೆ ಈ ೭ ಶಕ್ತಿಗಳ ಹಾಗೂ ಕಾಲಭೈರವನೆಂಬ ಈ ಮಾರಕ ಶಕ್ತಿಯ ಅಗತ್ಯವಿದೆ. ಇಲ್ಲಿ ಇಲ್ಲಿನ ದೇವಿ ಎಂದು ‘ಆವಡಮಾತಾ ಶಿಲೆ’ ಸಿಗುತ್ತದೆ. ನಾವು ಜೈಸಲ್ಮೇರ್‌ನಲ್ಲಿರುವ ಓರ್ವ ಶಿಲ್ಪಕಾರರಿಂದ ಈ ಮೂರ್ತಿಯನ್ನು ಕೊಂಡುಕೊಂಡೆವು. ನಾವು ಅದನ್ನು ಮಹರ್ಷಿಗಳು ಹೇಳಿದಂತೆ ರಾಮನಾಥಿ ಆಶ್ರಮದಲ್ಲಿ ಸ್ಥಾಪಿಸಲು ಕಳುಹಿಸಲಿದ್ದೇವೆ.  ‘ಆ ಮೂರ್ತಿಯನ್ನು ರಾಮನಾಥಿ ಆಶ್ರಮದಲ್ಲಿ ಸ್ಥಾಪಿಸುವುದರಿಂದ ಸಾಧಕರಿಗೆ ಆಕೆಯ ಆಶೀರ್ವಾದ ದೊರೆತು ಯುದ್ಧದ ಸಮಯದಲ್ಲಿ ಅವರ ರಕ್ಷಣೆಯಾಗುವುದು’ ಎಂದು ಮಹರ್ಷಿಗಳು ಹೇಳಿದ್ದಾರೆ.

ಅ. ಶಿಲ್ಪಕಾರರು ‘ಆವಡಮಾತಾ ಶಿಲೆ’ಯನ್ನು ಕೊಂಡುಕೊಳ್ಳುವಾಗ ಅದನ್ನು ಭಾವಪೂರ್ಣವಾಗಿ ನೀಡುವುದು : ಆ ಶಿಲ್ಪಕಾರರು ಆವಡಮಾತೆಯ ಮೂರ್ತಿಯನ್ನು ನೀಡುವ ಮೊದಲು ಅದನ್ನು ಕೆಂಪು ಬಟ್ಟೆಯಲ್ಲಿಟ್ಟರು. ಅವಳಿಗೆ ಒಡೆದ ತೆಂಗಿನಕಾಯಿಯ ೨ ಭಾಗ ಹಾಗೂ ಬೆಲ್ಲವನ್ನು ನೈವೇದ್ಯವೆಂದು ಇಟ್ಟರು. ಅದಕ್ಕೆ ಹಾಗೂ ನಮ್ಮ ಮೇಲೆ ಗಂಗಾಜಲವನ್ನು ಸಿಂಪಡಿಸಿದರು. ಶಿಲೆಗೆ ಪೂಜೆ ಮಾಡಿ ಅವಳಿಗೆ ನೈವೇದ್ಯವನ್ನು ತಿನ್ನಿಸಿದರು. ಅನಂತರ ಆ ಮೂರ್ತಿಯನ್ನು ಕೆಂಪು ಬಟ್ಟೆಯಲ್ಲಿ ಕೆಂಪು ದಾರದಿಂದ ಸುತ್ತಿದರು ಹಾಗೂ ನಂತರ ನಮಗೆ ನೀಡಿದರು ಹಾಗೂ ಅವಳೊಂದಿಗೆ ರಕ್ಷಣೆಗಾಗಿ ತ್ರಿಶೂಲವನ್ನೂ ನೀಡಿದರು.

೬. ತನೋಟಮಾತೆಯ ದರ್ಶನ ಪಡೆದು ಮರಳುವಾಗ ವಾಹನದ ಬಲಗಡೆಯ ಹಿಂದಿನ ಚಕ್ರ ಒಡೆಯುವುದು, ಇದು ಒಂದು ರೀತಿ ಕಾರ್ಯದಲ್ಲಿನ ಅಡಚಣೆಯಾಗಿರುವುದು – ಸದ್ಗುರು (ಸೌ.) ಅಂಜಲಿ ಗಾಡಗೀಳ
ತನೋಟಮಾತೆಯ ದರ್ಶನ ಪಡೆದು ನಾವು ಜೈಸಲ್ಮೇರ್‌ನತ್ತ ಚತುಃಶ್ಚಕ್ರ ವಾಹನದಿಂದ ಬರುತ್ತಿರುವಾಗ ನಮ್ಮ ವಾಹನದ ಬಲಗಡೆಯ ಹಿಂದಿನ ಚಕ್ರ ಒಡೆಯಿತು. ಇದರಿಂದಾಗಿ ನಮ್ಮ ಮನಸ್ಸಿನಲ್ಲಿ, ‘ಇದೇನಾದರೂ ಅಪಶಕುನ ಇರಬಹುದೇ ? ಎಂದೆನಿಸಿ ನಾವು ಪೂ. ಡಾ. ಉಲಗನಾಥನ್‌ರವರಿಗೆ ಕೇಳಿದೆವು. ಅದಕ್ಕೆ ಅವರು, “ಇದು ಅಪಶಕುನವಲ್ಲ. ಒಂದುವೇಳೆ ನಿಮ್ಮ ವಾಹನದ ಬಲಗಡೆಯ ಮುಂದಿನ ಚಕ್ರ ಒಡೆದಿದ್ದರೆ, ‘ದೇವಿಯ ದರ್ಶನ ಪಡೆಯುವಾಗ ನಿಮ್ಮಿಂದ ಏನಾದರೂ ತಪ್ಪಾಗಿದೆ, ಎಂಬ ನಿಷ್ಕರ್ಷ ತೆಗೆಯಬಹುದಿತ್ತು; ಆದರೆ ನಿಮ್ಮ ವಾಹನದ ಬಲಗಡೆಯ ಹಿಂದಿನ ಚಕ್ರ ಒಡೆದಿದೆ. ಆದುದರಿಂದ ನೀವು ಚಿಂತಿಸಬೇಡಿರಿ, ಎಂದು ಅವರು ಹೇಳಿದರು. ಇದರಿಂದ ‘ಚಕ್ರ ಒಡೆಯುವುದು ಇದೊಂದು ರೀತಿಯಲ್ಲಿ ಕಾರ್ಯಕ್ಕೆ ಬರುವ ಅಡಚಣೆಯಾಗಿತ್ತು, ಎಂಬುದು ಗಮನಕ್ಕೆ ಬರುತ್ತದೆ; ಏಕೆಂದರೆ ನಂತರ ಜೈಸಲ್ಮೇರ್‌ಗೆ ಬಂದು ನಾವು ಶಿಲ್ಪಕಾರರಿಂದ ಆವಡಮಾತೆಯ ಶಿಲೆಯನ್ನು ಖರೀದಿಸುವವರಿದ್ದೆವು.
– (ಸದ್ಗುರು) ಸೌ. ಅಂಜಲಿ ಗಾಡಗೀಳ, ಜೈಸಲ್ಮೇರ್, ರಾಜಸ್ಥಾನ

Leave a Comment