ಸಂಪೂರ್ಣ ಗುರುಪೂಜೆ

ಮುಂದಿನ ಶೀರ್ಷಿಕೆಗಳ ಮೇಲೆ ಕ್ಲಿಕ್ ಮಾಡಿ ಆಯಾ ವಿಷಯಗಳನ್ನು ಓದಬಹುದು…

  1. ಪೂಜೆಯ ಸಾಹಿತ್ಯ
  2. ಗುರುಪೂಜೆಯ ಸಿದ್ಧತೆ ಮಾಡುವ ಸಂದರ್ಭದಲ್ಲಿನ ಸೂಚನೆ
  3. ಪೂಜೆಗೆ ಕುಳಿತುಕೊಳ್ಳುವ ಸಾಧಕರಿಗೆ ಸೂಚನೆಗಳು
  4. ಪೂಜೆಯ ಮಂಡಣೆ
  5. ಗಣಪತಿಯ ಪೂಜೆಯ ಮಂಡಣೆ
  6. ಗುರುಪೂಜೆ

ಪೂಜೆಯ ಸಾಹಿತ್ಯ

ಶ್ರೀಗುರುಗಳ ಭಾವಚಿತ್ರ, ಕುಂಕುಮ, ಅರಶಿನ, ಗಂಧ, ಸಿಂಧೂರ,ಅಕ್ಷತೆ ಊದುಬತ್ತಿ, ಧೂಪ, ಹತ್ತಿಯ ಬತ್ತಿ, ಕರ್ಪೂರ, ರಂಗೋಲಿ, ದೇವರ ಮಂಟಪ / ಚೌರಂಗ, ಎರಡು ಕಲಶಗಳು, ಪಂಚಪಾತ್ರೆ, ಉದ್ಧರಣೆ, ಹರಿವಾಣ (3), ಮಂಟಪ ಚೌರಂಗ, ಮೂರು ಸ್ಟೀಲಿನ ತಟ್ಟೆಗಳು, ನಾಲ್ಕು ಬಟ್ಟಲುಗಳು, ಎರಡು ಕಾಲುದೀಪಗಳು, ಎರಡು ನೀಲಾಂಜನಗಳು, ಪಂಚಾರತಿ, ಘಂಟೆ, ಬೆಂಕಿಪೊಟ್ಟಣ, ಗೆಜ್ಜೆವಸ್ತ್ರ, ಐದು ತೆಂಗಿನಕಾಯಿ, ಒಂದು ಕಿಲೋ ಅಕ್ಕಿ, ಐದು ಅಡಿಕೆಗಳು, ಇಪ್ಪತ್ತು ವೀಳ್ಯದ ಎಲೆಗಳು, ಐದು ಪ್ರಕಾರದ ಹಣ್ಣುಗಳು (ಎರಡೆರಡು), ಒಂದು ರೂಪಾಯಿಯ ಐದು ನಾಣ್ಯಗಳು, ಒಂದು ಬಟ್ಟಲಿನಷ್ಟು ಕೊಬ್ಬರಿ ಮತ್ತು ಬೆಲ್ಲ, ಅರ್ಧ ಕಿಲೋ ಪೇಡಾ, ಊದುಬತ್ತಿಯ ಕಟ್ಟುಗಳು, ಮಂಟಪವನ್ನು ಅಲಂಕರಿಸುವ ಸಾಹಿತ್ಯ, ಉದಾ. ಹೂವು ಮತ್ತು ಹಾರ, ಎರಡು ಮಣೆಗಳು, ತುಳಸಿ, ದೂರ್ವೆ (ಗರಿಕೆ), ಬಿಲ್ವಪತ್ರೆ, ನಾಲ್ಕು ಬಾಳೆಯ ಸಸಿಗಳು, ಚೌರಂಗವನ್ನು ಅಲಂಕರಿಸಲು ಬಿಡಿ ಹೂವುಗಳು, ಎಣ್ಣೆ (ದೀಪಕ್ಕೆ ಹಾಕಲು), ತುಪ್ಪ (ನೀಲಾಂಜನದಲ್ಲಿ ಹಾಕಲು)

ಗುರುಪೂಜೆಯ ಸಿದ್ಧತೆ ಮಾಡುವ ಸಂದರ್ಭದಲ್ಲಿನ ಸೂಚನೆ

ಅ. ಗುರುಪೂಜೆಗಾಗಿ ದೇವರ ಮಂಟಪ ಅಥವಾ ಚೌರಂಗವನ್ನು ಉಪಯೋಗಿಸಬೇಕು. ಮಂಟಪಕ್ಕೆ ಅಥವಾ ಚೌರಂಗಕ್ಕೆ ಬಾಳೆಕಂಬವನ್ನು (ಸಸಿಗಳನ್ನು) ಕಟ್ಟಬೇಕು. ಅಲಂಕಾರಕ್ಕಾಗಿ ಥರ್ಮೋಕೋಲ್‌ನ್ನು ಉಪಯೋಗಿಸಬಾರದು. ಅದರಿಂದ ಒಳ್ಳೆಯ ಸ್ಪಂದನಗಳು ಬರುವುದಿಲ್ಲ.
ಆ. ಪೂಜೆಗಿಂತ ಮೊದಲು ಮತ್ತು ಪೂಜೆಯ ನಂತರ ದೇವರ ಮಂಟಪದ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛವಾಗಿಡಬೇಕು. ಉದಾ.:ತಟ್ಟೆ, ಲೋಟ, ಹೂವು ಅವ್ಯವಸ್ಥೆಯಿಂದ ಬಿದ್ದಿರಬಾರದು.
ಇ. ಪೂಜೆಗೆ ಶ್ರೀಗುರುಗಳ ಭಾವಚಿತ್ರವನ್ನಿಡಬೇಕು. ಭಾವಚಿತ್ರವನ್ನು ಮಂಟಪದಲ್ಲಿಯೇ ಇಡಬೇಕು.
ಈ. ಶ್ರೀಗುರುಗಳ ಭಾವಚಿತ್ರಕ್ಕೆ ಹೂವು ಮತ್ತು ಮಾಲೆಯನ್ನು ಹಾಕುವಾಗ ಶ್ರೀಗುರುಗಳ ದರ್ಶನವಾಗುವಂತೆ ಹಾಕಬೇಕು. (ಹೂವು ಮತ್ತು ಮಾಲೆಯನ್ನು ಹಾಕುವಾಗ ಶ್ರೀಗುರುಗಳ ಭಾವಚಿತ್ರವು ಮುಚ್ಚುವಂತೆ ಹಾಕಬಾರದು)

ಪೂಜೆಗೆ ಕುಳಿತುಕೊಳ್ಳುವ ಸಾಧಕರಿಗೆ ಸೂಚನೆಗಳು

ಅ. ಪೂಜೆಗೆ ಕುಳಿತುಕೊಳ್ಳುವಾಗ ಪತಿ-ಪತ್ನಿಯರು ಸ್ನಾನ ಮಾಡಿ ಮಡಿವಸ್ತ್ರಗಳನ್ನು ಧರಿಸಿ ಕುಳಿತುಕೊಳ್ಳಬೇಕು. ಪತಿಯು ಮೈಮೇಲೆ ಉಪರಣೆಯನ್ನು (ಶಾಲು) ಹಾಕಿಕೊಳ್ಳಬೇಕು. ಪತ್ನಿಯು ಪತಿಯ ಬಲಬದಿಯಲ್ಲಿ ಕುಳಿತುಕೊಳ್ಳಬೇಕು.
ಆ. ತಮ್ಮ ಬಳಿಯಲ್ಲಿ ನೀರಿನಿಂದ ತುಂಬಿರುವ ಕಲಶ, ಪಂಚಪಾತ್ರೆ, ಹರಿವಾಣ ಮತ್ತು ಉದ್ಧರಣೆ ಮುಂತಾದ (ಆಚಮನಕ್ಕೆ ಬೇಕಾಗುವ) ಸಾಹಿತ್ಯಗಳನ್ನು ಇಟ್ಟುಕೊಳ್ಳಬೇಕು. ಅದೇ ರೀತಿ ಒಂದು ತಟ್ಟೆಯಲ್ಲಿ ಸಣ್ಣ ಬಟ್ಟಲುಗಳಲ್ಲಿ ಅರಶಿನ, ಕುಂಕುಮ, ಅಕ್ಷತೆ, ಗಂಧ, ಹೂವು, ಪಂಚಾಮೃತ ಇತ್ಯಾದಿ ಪೂಜೆಯ ಸಾಮಗ್ರಿಗಳನ್ನು ಇಟ್ಟುಕೊಳ್ಳಬೇಕು.
ಇ. ಪ್ರತಿಯೊಂದು ಉಪಚಾರದ ಸಮಯದಲ್ಲಿ ಪತ್ನಿಯು ತನ್ನ ಬಲಗೈಯಿಂದ ಪತಿಯ ಬಲಗೈಯನ್ನು ಸ್ಪರ್ಶಿಸಬೇಕು.
ಈ. ಪೂಜೆಯ ಸಮಯದಲ್ಲಿ ತಮ್ಮ ಗಮನವು ಪೂಜೆಯತ್ತ ಇರಬೇಕು. ಇತರರೊಂದಿಗೆ ಅವಶ್ಯಕತೆಯಿದ್ದಲ್ಲಿ ಮಾತ್ರ ಮಾತನಾಡಬೇಕು.
ಉ. ಪೂಜೆ ಮಾಡುವಾಗ ನಮ್ಮೆದುರು ಸಾಕ್ಷಾತ್ ಗುರುಗಳು ಕುಳಿತುಕೊಂಡಿದ್ದಾರೆ ಮತ್ತು ನಾವು ಅವರ ಪೂಜೆಯನ್ನು ಮಾಡುತ್ತಿದ್ದೇವೆ ಎಂಬ ಾವ ಇರಬೇಕು.
ಊ. ಆರತಿ ಮಾಡುವ ಮೊದಲು ಅದರ ಾವಾರ್ಥವನ್ನು ಅರಿತುಕೊಳ್ಳಿರಿ. ಇದರಿಂದ ಾವಜಾಗೃತಿಯಾಗಲು ಸಹಾಯವಾಗುತ್ತದೆ.

ದೇಶಕಾಲದ ಸಂದರ್ದಲ್ಲಿ ‘ಪೂರ್ವಾಷಾಢ ದಿವಸ ನಕ್ಷತ್ರೆ’ ಮತ್ತು ‘ಉತ್ತರಾಷಾಢ ದಿವಸ ನಕ್ಷತ್ರೆ’ ಎಂದು ದೇಶಕಾಲವನ್ನು ಹೇಳುವಾಗ ಪುರೋಹಿತರಲ್ಲಿ ಕೇಳಿ ಅದರಲ್ಲಿ ಬದಲಾವಣೆ ಮಾಡಬೇಕು.

ಪೂಜೆಯ ಮಂಡಣೆ

ದೇವರ ಮಂಟಪ ಅಥವಾ ಚೌರಂಗವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖಮಾಡಿ ಇಡಬೇಕು. ಅದಕ್ಕೆ ನಾಲ್ಕು ಬಾಳೆಯ ಸಸಿಗಳನ್ನು ಕಟ್ಟಿ ಅಲಂಕರಿಸಬೇಕು. ಮಂಟಪದ ಮಧ್ಯದಲ್ಲಿ ನಮ್ಮ ಕಡೆಗೆ ಮುಖ ಮಾಡಿರುವಂತೆ ಶ್ರೀಗುರುಗಳ ಭಾವಚಿತ್ರವನ್ನು ಇಡಬೇಕು. ಭಾವಚಿತ್ರದ ಮುಂದೆ ಎರಡು ವೀಳ್ಯದ ಎಲೆಗಳ ಮೇಲೆ, ಅಡಿಕೆ ಮತ್ತು ಒಂದು ರೂಪಾಯಿಯ ನಾಣ್ಯವನ್ನು ಇಡಬೇಕು. ಅದರೊಂದಿಗೆ ಇನ್ನೆರಡು ವೀಳ್ಯದ ಎಲೆಗಳ ಮೇಲೆ ತೆಂಗಿನಕಾಯಿಯನ್ನು ಇಡಬೇಕು. ತೆಂಗಿನಕಾಯಿಯ ಜುಟ್ಟನ್ನು ಗುರುಗಳ ಭಾವಚಿತ್ರದ ಕಡೆಗೆ ಮಾಡಿ ಇಡಬೇಕು. ಚೌರಂಗದ ಮುಂದೆ ಐದು ಪ್ರಕಾರದ ಹಣ್ಣುಗಳನ್ನು ಒಂದು ತಟ್ಟೆಯಲ್ಲಿ ಹಾಕಿ ಇಡಬೇಕು. ಚೌರಂಗದ ಎರಡೂ ಬದಿಗಳಲ್ಲಿ ಕಾಲುದೀಪಗಳನ್ನು (ಸಮಯಿ) ಇಡಬೇಕು.

ಗಣಪತಿಯ ಪೂಜೆಯ ಮಂಡಣೆ

ಒಂದು ತಟ್ಟೆಯಲ್ಲಿ ಅಥವಾ ಹರಿವಾಣದಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ತೆಂಗಿನಕಾಯಿಯನ್ನು ಇಡಬೇಕು. (ತೆಂಗಿನಕಾಯಿಯ ಜುಟ್ಟನ್ನು ನಮ್ಮ ಕಡೆಗೆ ಮಾಡಬೇಕು.)  ಜೊತೆಯಲ್ಲಿ ವೀಳ್ಯದ ಎಲೆಯನ್ನಿಡಬೇಕು. ನೈವೇದ್ಯಕ್ಕಾಗಿ ಬಾಳೆಹಣ್ಣು ಅಥವಾ ಬೆಲ್ಲ, ಕೊಬ್ಬರಿಯನ್ನಿಡಬೇಕು. ದೇವರ ಮಂಟಪ ಮತ್ತು ಗಣಪತಿ ಪೂಜೆಯ ಮಂಡಣೆಯ ಎದುರು ಎರಡು ಮಣೆಗಳನ್ನಿಡಬೇಕು. ದೇವರ ಮಂಟಪ ಮತ್ತು ಮಣೆಗಳಿರುವಲ್ಲಿ ಸುಶೋಿತವಾಗಿರುವಂತಹ ರಂಗೋಲಿಯನ್ನು ಹಾಕಬೇಕು.

ಗುರುಪೂಜೆ

ಆಚಮನ

ಮುಂದಿನ ಮೂರು ಹೆಸರುಗಳನ್ನು ಉಚ್ಚರಿಸಿದ ನಂತರ ಪ್ರತಿಯೊಂದು ಹೆಸರಿನ ಕೊನೆಗೆ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ತೆಗೆದು ಬಲಗೈಯಲ್ಲಿ ಹಾಕಿ ಪ್ರಾಶನ ಮಾಡಬೇಕು.
ಶ್ರೀ ಕೇಶವಾಯ ನಮಃ | ಶ್ರೀ ನಾರಾಯಣಾಯ ನಮಃ | ಶ್ರೀ  ಮಾಧವಾಯ ನಮಃ | ‘ಶ್ರೀ ಗೋವಿಂದಾಯ ನಮಃ |’ ಈ ಹೆಸರನ್ನು ಹೇಳಿ ಕೈಯಲ್ಲಿ ನೀರು ತೆಗೆದುಕೊಂಡು ತಟ್ಟೆಯಲ್ಲಿ ಬಿಡಬೇಕು.
ನಂತರ ಮುಂದಿನ ಹೆಸರುಗಳನ್ನು ಅನುಕ್ರಮವಾಗಿ ಉಚ್ಚರಿಸಬೇಕು.
ವಿಷ್ಣವೇ ನಮಃ | ಮಧೂಸೂದನಾಯ ನಮಃ | ತ್ರಿವಿಕ್ರಮಾಯ ನಮಃ | ವಾಮನಾಯ ನಮಃ | ಶ್ರೀಧರಾಯ ನಮಃ | ಹೃಷಿಕೇಶಾಯ ನಮಃ | ಪದ್ಮನಾಭಾಯ ನಮಃ  | ದಾಮೋದರಾಯ ನಮಃ | ಸಂಕರ್ಷಣಾಯ ನಮಃ | ವಾಸುದೇವಾಯ ನಮಃ | ಪ್ರದ್ಯುಮ್ನಾಯ ನಮಃ | ಅನಿರುದ್ಧಾಯ ನಮಃ | ಪುರುಷೋತ್ತಮಾಯ ನಮಃ | ಅಧೋಕ್ಷಜಾಯ ನಮಃ | ನಾರಸಿಂಹಾಯ ನಮಃ | ಅಚ್ಯುತಾಯ ನಮಃ | ಜನಾರ್ದನಾಯ ನಮಃ | ಉಪೇಂದ್ರಾಯ ನಮಃ | ಹರಯೇ ನಮಃ | ಶ್ರೀ  ಕೃಷ್ಣಾಯ ನಮಃ |
(ನಮಸ್ಕಾರ ಮಾಡಬೇಕು)

ಪ್ರಾರ್ಥನೆ

ನಂತರ ಎರಡೂ ಕೈಗಳನ್ನು ಜೋಡಿಸಿ ಶಾಂತ ಮನಸ್ಸಿನಿಂದ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು.

ಶ್ರೀಮನ್ಮಹಾಗಣಾಧಿಪತಯೇ ನಮಃ | ಇಷ್ಟದೇವತಾಭ್ಯೋ ನಮಃ | ಕುಲದೇವತಾಭ್ಯೋ ನಮಃ | ಗ್ರಾಮದೇವತಾಭ್ಯೋ ನಮಃ | ಸ್ಥಾನದೇವತಾಭ್ಯೋ ನಮಃ|
ವಾಸ್ತುದೇವತಾಭ್ಯೋ ನಮಃ | ಆದಿತ್ಯಾದಿ ನವಗ್ರಹದೇವತಾಭ್ಯೋ ನಮಃ | ಸರ್ವೇಭ್ಯೋ ದೇವೇಭ್ಯೋ ನಮಃ | ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅವಿಘ್ನಮಸ್ತು |
ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ |
ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚಂದ್ರೋ ಗಜಾನನಃ | ದ್ವಾದಶೈತಾನಿ ನಾಮಾನಿ ಯಃ ಪಠೇಛ್ಚಣುಯಾದಪಿ |
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ | ಸಂಗ್ರಾಮೇ ಸಂಕಟೇಚೈವ ವಿಘ್ನಸ್ತಸ್ಯ ನ ಜಾಯತೇ |
ಶುಕ್ಲಾಂಬರಧರಂ ದೇವಂ ಶಶಿವರ್ಣಂ ಚತುರ್ಭುಜಂ | ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ |
ಸರ್ವಮಂಗಲಮಾಂಗಲ್ಯೇ ಶಿವೇ ಸವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ |
ಸರ್ವದಾ ಸರ್ವಕಾರ್ಯೇಷು ನಾಸ್ತಿತೇಷಾಮಮಂಗಲಮ್ | ಯೇಷಾಂ ಹೃದಿಸ್ಥೋ ಭಗವಾನ್ಮಂಗಲಾಯತನಂ ಹರಿಃ |
ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ | ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತ್ಜೇಂಘ್ರಿಯುಗಂ ಸ್ಮರಾಮಿ |
ಲಾಭಸ್ತೇಷಾಂ ಜಯಸ್ತೇಷಾಂ ಕೃತಸ್ತೇಷಾಂ ಪರಾಜಯಃ | ಯೇಷಾಮಿಂದೀವರಶ್ಯಾಮೋ ಹೃದಯಸ್ಥೋ ಜನಾರ್ದನಃ |
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ | ತತ್ರ ಶ್ರೀರ್ವಿಜಯೋ ಭ ೂತಿರ್ಧ್ರುವಾ ನೀತಿರ್ಮತಿರ್ಮಮ|
ವಿನಾಯಕಂ ಗುರುಂ ಭಾನುಂ ಬ್ರಹ್ಮವಿಷ್ಣುಮಹೇಶ್ವರಾನ್ | ಸರಸ್ವತಿಂ ಪ್ರಣೌಮ್ಯಾದೌ ಸರ್ವಕಾರ್ಯಾರ್ಥಸಿದ್ಧಯೇ |
ಅಭೀಸ್ಪಿತಾರ್ಥ ಸಿದ್ಧ್ಯರ್ಥಂ ಪೂಜಿತೋ ಯಃ ಸುರಾಸುರೈಃ | ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮಃ |
ಸರ್ವೇಷ್ವಾರಬ್ಧಕಾರ್ಯೇಷು ತ್ರಯಸ್ತ್ರಿಭುವನೇಶ್ವರಾಃ | ದೇವಾ ದಿಶಂತು ನಃ ಸಿದ್ಧಿಂ ಬ್ರಹ್ಮೇಶಾನಜನಾರ್ಧನಾಃ |

ದೇಶಕಾಲ

ತಮ್ಮ ಕಣ್ಣಿಗೆ ನೀರು ಹಚ್ಚಿಕೊಂಡು ಮುಂದಿನ ದೇಶಕಾಲ ಹೇಳಬೇಕು.

ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತವಾರಾಹಕಲ್ಪೇ ವೈವಸ್ವತಮನ್ವನ್ತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮಚರಣೇ ಜಮ್ಬುದ್ವೀಪೇ ಭರತವರ್ಷೇ ಭರತಖಣ್ಡೇ ದಕ್ಷಿಣಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ಆರ್ಯಾವರ್ತ ದೇಶೇ ಶಾಲಿವಾಹನ ಶಕೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಶೋಭಕೃತ್ ನಾಮ ಸಂವತ್ಸರೇ ದಕ್ಷಿಣಾಯನೇ ಗ್ರೀಷ್ಮ ಋತೌ ಆಷಾಢ ಮಾಸೇ ಶುಕ್ಲಪಕ್ಷೇ ಪೌರ್ಣಿಮಾಯಾಂ ತಿಥೌ (೧೭.೦೯ ಪರ್ಯಂತ) ಇಂದು ವಾಸರೇ ಮೂಲಾ (೧೧.೦೨ ನಂತರ ಪೂರ್ವಾಷಾಢಾ) ದಿವಸ ನಕ್ಷತ್ರೇ, ಬ್ರಹ್ಮಾ (೧೫:೪೫ ನಂತರ ಐಂದ್ರ) ಯೋಗೇ, ವಿಷ್ಟಿ (೬.೪೮ ನಂತರ ಬಾಲವ, ೧೯.೦೯ ನಂತರ ಬವ) ಕರಣೇ, ಧನು ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ಮಿಥುನ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ಮೇಷ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್ಚರೌ, ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಙ್ ಗ್ರಹ-ಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…

(ಬಲ ಕೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ಮುಂದಿನ ಸಂಕಲ್ಪ ಹೇಳಬೇಕು.)

ಮಮ ಆತ್ಮನಃ ಪರಮೇಶ್ವರ- ಆಜ್ಞಾರೂಪ-ಸಕಲ-ಶಾಸ್ತ್ರ- ಶ್ರುತಿಸ್ಮೃತಿ-ಪುರಾಣೋಕ್ತ-ಫಲ- ಪ್ರಾಪ್ತಿದ್ವಾರಾ ಶ್ರೀ ಪರಮೇಶ್ವರ – ಪ್ರೀತ್ಯರ್ಥಂ ಶ್ರೀ ಸದ್ಗುರುನಾಥದೇವತಾ ಪ್ರೀತ್ಯರ್ಥಂ ಪೂಜನಂ ಅಹಂ ಕರಿಷ್ಯೆ | ತತ್ರಾದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾಗಣಪತಿ ಪೂಜನಂ ಕರಿಷ್ಯೇ | ಶರೀರಶುದ್ಧಯರ್ಥಂ ದಶವಾರಂ ವಿಷ್ಣುಸ್ಮರಣಂ ಕರಿಷ್ಯೆ | ಕಲಶ-ಘಂಟಾ-ದೀಪ-ಪೂಜನಂ ಕರಿಷ್ಯೇ |

(ಕರಿಷ್ಯೇ ಎಂದು ಹೇಳಿದ ಮೇಲೆ ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ಬಲಗೈಯಲ್ಲಿ ತೆಗೆದುಕೊಂಡು ಹರಿವಾಣದಲ್ಲಿ ಬಿಡಬೇಕು.)

ಶ್ರೀಗಣಪತಿ ಪೂಜೆ

(ಹರಿವಾಣ ಅಥವಾ ಮಣೆಯ ಮೇಲೆ ಅಕ್ಕಿಯನ್ನು ಇಟ್ಟು, ಅದರ ಮೇಲೆ ವೀಳ್ಯೆದೆಲೆ ಮತ್ತು ತೆಂಗಿನಕಾಯಿಯನ್ನು ಇಡಬೇಕು. ಮುಂದಿನ ಮಂತ್ರವನ್ನು ಹೇಳಿ ತೆಂಗಿನಕಾಯಿಯಲ್ಲಿ ಗಣಪತಿಯ ಆವಾಹನೆ ಮಾಡಿ, ಪೂಜೆಯನ್ನು ಮಾಡಬೇಕು.)
ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ |
ಋದ್ಧಿ-ಬುದ್ಧಿ-ಶಕ್ತಿ-ಸಹಿತ ಮಹಾಗಣಪತಯೇ ನಮೋ ನಮಃ |
ಮಹಾಗಣಪತಿಂ ಸಾಂಗಂ ಸಪರಿವಾರಂ ಸಾಯುಧಂ ಸಶಕ್ತಿಕಂ ಆವಾಹಯಾಮಿ |
ಮಹಾಗಣಪತಯೇ ನಮಃ ಆವಾಹಯಾಮಿ | (ತೆಂಗಿನಕಾಯಿಗೆ ಅಕ್ಷತೆಯನ್ನು ಅರ್ಪಿಸಬೇಕು.)
ಮಹಾಗಣಪತಯೇ ನಮಃ | ಆಸನಾರ್ಥೇ ಅಕ್ಷತಾಂ ಸಮರ್ಪಯಾಮಿ | (ತೆಂಗಿನಕಾಯಿಗೆ ಅಕ್ಷತೆಯನ್ನು ಅರ್ಪಿಸಬೇಕು)
ಮಹಾಗಣಪತಯೇ ನಮಃ | ಪಾಧ್ಯಂ ಸಮರ್ಪಯಾಮಿ | (ತೆಂಗಿನಕಾಯಿಯ ಮೇಲೆ ಒಂದು ಉದ್ಧರಣೆ ನೀರು ಹಾಕಬೇಕು)
ಮಹಾಗಣಪತಯೇ ನಮಃ | ಅರ್ಘ್ಯಂ ಸಮರ್ಪಯಾಮಿ | (ಒಂದು ಉದ್ಧರಣೆ ನೀರನ್ನು ತೆಗೆದುಕೊಂಡು ಅದರಲ್ಲಿ ಗಂಧ ಮತ್ತು ಹೂವನ್ನು ಹಾಕಿ ಆ ನೀರನ್ನು ತೆಂಗಿನಕಾಯಿಯ ಮೇಲೆ ಸಿಂಪಡಿಸಬೇಕು.)
ಮಹಾಗಣಪತಯೇ ನಮಃ | ಆಚಮನೀಯಂ ಸಮರ್ಪಯಾಮಿ | (ತೆಂಗಿನಕಾಯಿಯ ಮೇಲೆ ಒಂದು ಉದ್ಧರಣೆ ನೀರನ್ನು ಹಾಕಬೇಕು)
ಮಹಾಗಣಪತಯೇ ನಮಃ | ಸ್ನಾನಂ ಸಮರ್ಪಯಾಮಿ| (ತೆಂಗಿನಕಾಯಿಯ ಮೇಲೆ ಒಂದು ಉದ್ಧರಣೆ ನೀರನ್ನು ಹಾಕಬೇಕು.)
ಮಹಾಗಣಪತಯೇ ನಮಃ | ಕಾರ್ಪಾಸವಸ್ತ್ರಂ ಸಮರ್ಪಯಾಮಿ | (ಅಕ್ಷತೆ ಅಥವಾ ಗೆಜ್ಜೆವಸ್ತ್ರವನ್ನು ಅರ್ಪಿಸಬೇಕು.)
ಮಹಾಗಣಪತಯೇ ನಮಃ | ಉಪವೀತಾರ್ಥೇ (ಯಜ್ಞೋಪವೀತಂ / ಅಕ್ಷತಾನ್) ಸಮರ್ಪಯಾಮಿ | (ತೆಂಗಿನಕಾಯಿಗೆ ಜನಿವಾರ / ಅಕ್ಷತೆ ಅರ್ಪಿಸಬೇಕು)
ಮಹಾಗಣಪತಯೇ ನಮಃ | ಚಂದನಂ ಸಮರ್ಪಯಾಮಿ | (ತೆಂಗಿನಕಾಯಿಗೆ ಗಂಧವನ್ನು ಹಚ್ಚಬೇಕು)
ಋದ್ಧಿ-ಸಿದ್ಧಿಭ್ಯಾo ನಮಃ | ಹರಿದ್ರಾ ಕುಂಕುಮಂ ಸಮರ್ಪಯಾಮಿ | (ತೆಂಗಿನಕಾಯಿಗೆ ಅರಶಿಣ ಮತ್ತು ಕುಂಕುಮವನ್ನು ಅರ್ಪಿಸಬೇಕು)
ಮಹಾಗಣಪತಯೇ ನಮಃ | ಸಿಂಧೂರಂ ಸಮರ್ಪಯಾಮಿ | (ತೆಂಗಿನಕಾಯಿಗೆ ಸಿಂಧೂರವನ್ನು ಅರ್ಪಿಸಬೇಕು)
ಮಹಾಗಣಪತಯೇ ನಮಃ | ಅಲಂಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ | (ತೆಂಗಿನಕಾಯಿಗೆ ಅಕ್ಷತೆಯನ್ನು ಅರ್ಪಿಸಬೇಕು)
ಮಹಾಗಣಪತಯೇ ನಮಃ | ಪೂಜಾರ್ಥೇ ಕಾಲೋದ್ಭವಪುಷ್ಪಾಣಿ ಸಮರ್ಪಯಾಮಿ | (ತೆಂಗಿನಕಾಯಿಯ ಮೇಲೆ ಹೂವುಗಳನ್ನು ಹಾಕಬೇಕು.)
ಮಹಾಗಣಪತಯೇ ನಮಃ | ದೂರ್ವಾಂಕುರಾನ್ ಸಮರ್ಪಯಾಮಿ | (ದೂರ್ವೇಯನ್ನು ಅರ್ಪಿಸಬೇಕು)
ಮಹಾಗಣಪತಯೇ ನಮಃ | ಧೂಪಂ ಸಮರ್ಪಯಾಮಿ | (ಊದುಬತ್ತಿಯಿಂದ ಬೆಳಗಿಸಬೇಕು)
ಮಹಾಗಣಪತಯೇ ನಮಃ | ದೀಪಂ ಸಮರ್ಪಯಾಮಿ| (ತೆಂಗಿನಕಾಯಿಗೆ ನೀಲಾಂಜನದಿಂದ ಬೆಳಗಿಸಬೇಕು)
ಮಹಾಗಣಪತಯೇ ನಮಃ | ನೈವೇದ್ಯಾರ್ಥೇ  ನೈವೇದ್ಯಂ ನಿವೇದಯಾಮಿ |  (ಬೆಲ್ಲ-ಕೊಬ್ಬರಿ, ಬಾಳೆ)

ಎಡಗೈಯಿಂದ ಕಣ್ಣುಗಳನ್ನು ಮುಚ್ಚಿ, (ಬಲಗೈಯಲ್ಲಿ ಗರಿಕೆ ಮತ್ತು ಹೂವನ್ನು ತೆಗೆದುಕೊಂಡು ಅದರ ಮೇಲೆ ನೀರನ್ನು ಹಾಕಿ ಆ ನೀರನ್ನು ನೈವೇದ್ಯದ ಮೇಲೆ ಸಿಂಪಡಿಸಿ ನೈವೇದ್ಯ ಮಾಡಬೇಕು ಹಾಗೂ ಮುಂದಿನ ಮಂತ್ರವನ್ನು ಹೇಳಬೇಕು.)

ಪ್ರಾಣಾಯ ಸ್ವಾಹಾ | ಅಪಾನಾಯಾ ಸ್ವಾಹಾ | ವ್ಯಾನಾಯ ಸ್ವಾಹಾ | ಉದಾನಾಯ ಸ್ವಾಹಾ | ಸಮಾನಾಯ ಸ್ವಾಹಾ | ಬ್ರಹ್ಮಣೇ ಸ್ವಾಹಾ |
(ಆ ಹೂವನ್ನು ಮತ್ತು ಗರಿಕೆಯನ್ನು ತೆಂಗಿನಕಾಯಿಗೆ ಅರ್ಪಿಸಬೇಕು)

ಮಹಾಗಣಪತಯೇ ನಮಃ | ನೈವೇದ್ಯಂ ಸಮರ್ಪಯಾಮಿ | ಮಧ್ಯೆ ಪಾನೀಯಂ ಸಮರ್ಪಯಾಮಿ | ಉತ್ತರಾಪೋಷನಂ ಸಮರ್ಪಯಾಮಿ |  ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ |  ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ | ಮುಖವಾಸಾರ್ಥೇ ಪೂಗೀಫಲಂ ತಾಂಬೂಲಂ ಸಮರ್ಪಯಾಮಿ | ದಕ್ಷಿಣಾಂ ಸಮರ್ಪಯಾಮಿ |
(ಪ್ರತಿಯೊಂದು ಸಲ ‘ಸಮರ್ಪಯಾಮಿ’ ಎಂದು ಹೇಳುವಾಗ ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಹರಿವಾಣದಲ್ಲಿ ಬಿಡಬೇಕು)

ಮಹಾಗಣಪತಯೇ ನಮಃ | ಕರ್ಪೂರ ದೀಪಂ ಸಮರ್ಪಯಾಮಿ | (ಕರ್ಪೂರದ ಆರತಿಯನ್ನು ತೋರಿಸಬೇಕು)
ಅಚಿಂತ್ಯಾ ವ್ಯಕ್ತರೂಪಾಯ ನಿರ್ಗುಣಾಯ ಗುಣಾತ್ಮನೇ | ಸಮಸ್ತ ಜಗದಾಧಾರಮೂರ್ತಯೇ ಬ್ರಹ್ಮಣೇ ನಮಃ |
ಮಹಾಗಣಪತಯೇ ನಮಃ | ಮಂತ್ರ ಪುಷ್ಪಾಂಜಲಿಂ ಸಮರ್ಪಯಾಮಿ | (ಗಂಧಪುಷ್ಪ, ಅಕ್ಷತೆ ಮತ್ತು ಗರಿಕೆಯನ್ನು ತೆಂಗಿನಕಾಯಿಗೆ ಅರ್ಪಿಸಬೇಕು.)
ಮಹಾಗಣಪತಯೇ ನಮಃ | ನಮಸ್ಕಾರಾನ್ ಸಮರ್ಪಯಾಮಿ | (ನಮಸ್ಕಾರವನ್ನು ಮಾಡಬೇಕು)
ಮಹಾಗಣಪತಯೇ ನಮಃ | ಪ್ರದಕ್ಷಿಣಾಂ ಸಮರ್ಪಯಾಮಿ | (ಪ್ರದಕ್ಷಿಣೆಯನ್ನು ಹಾಕಬೇಕು)
ಕಾರ್ಯಂ ಮೇ ಸಿದ್ಧಿಮಾಯಾಂತು ಪ್ರಸನ್ನೇ ತ್ವಯಿಧಾತರಿ | ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ ||
ಅನಯಾ ಪೂಜಯಾ ಸಕಲ ವಿಘ್ನೇಶ್ವರ ವಿಘ್ನಹರ್ತಾ ಮಹಾಗಣಪತಿಃ ಪ್ರೀಯತಾಂ | (ಹೂವುಗಳನ್ನು ಅರ್ಪಿಸಬೇಕು.)
(ಬಲಗೈಯಲ್ಲಿ ನೀರನ್ನು ಹಾಕಿಕೊಂಡು ಅದನ್ನು ಹರಿವಾಣದಲ್ಲಿ ಬಿಡಬೇಕು)

ಅದರ ನಂತರ ಹತ್ತು ಬಾರಿ ವಿಷ್ಣುವಿನ ಸ್ಮರಣೆಯನ್ನು ಮಾಡಬೇಕು. ಒಂಬತ್ತು ಬಾರಿ ‘ವಿಷ್ಣವೇ ನಮೋ’ ಮತ್ತು ಕೊನೆಗೆ ‘ವಿಷ್ಣವೇ ನಮಃ’ ಎಂದು ಹೇಳಬೇಕು.

ಕಲಶ ಪೂಜೆ

ನಂತರ ಕಲಶ, ಘಂಟೆ ಮತ್ತು ದೀಪಗಳಿಗೆ ಗಂಧ ಮತ್ತು ಹೂವನ್ನು ಅರ್ಪಿಸಬೇಕು.
ಕಲಶಕ್ಕೆ ಗಂಧ ಮತ್ತು ಹೂವನ್ನು ಅರ್ಪಿಸುವಾಗ :
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದೆ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |
ಕಲಶಾಯ ನಮಃ |
ಕಲಶೇ ಗಂಗಾದಿ ತೀರ್ಥಾನ್‌ಆವಾಹಯಾಮಿ |
ಕಲಶದೇವತಾಭ್ಯೋ ನಮಃ |
ಸಕಲ ಪೂಜಾರ್ಥೆ ಗಂಧಾಕ್ಷತಪುಷ್ಪಂ ಸಮರ್ಪಯಾಮಿ | (ಕಲಶಕ್ಕೆ ಗಂಧ, ಹೂವು ಮತ್ತು ಅಕ್ಷತೆಯನ್ನು ಅರ್ಪಿಸಬೇಕು)

ಘಂಟೆ ಪೂಜೆ

ಘಂಟೆಗೆ ಗಂಧ ಮತ್ತು ಹೂವನ್ನು ಅರ್ಪಿಸುವಾಗ :
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಂ | ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ |
ಘಂಟಾಯೈ ನಮಃ |
ಸಕಲ ಪೂಜಾರ್ಥೆ ಗಂಧಾಕ್ಷತಪುಷ್ಪಂ ಸಮರ್ಪಯಾಮಿ | (ಘಂಟೆಗೆ ಗಂಧ, ಹೂವು ಮತ್ತು ಅಕ್ಷತೆಯನ್ನು ಅರ್ಪಿಸಬೇಕು)

ದೀಪಪೂಜೆ

ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುರ್ತ್ರಾಂಶ್ಚ ಮತಿಂ ಶಾಂತಿಂ ಪ್ರಯಚ್ಛ ಮೇ |
ದೀಪದೇವತಾಭ್ಯೋ ನಮಃ |
ಸಕಲ ಪೂಜಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ | (ಕಾಲುದೀಪಗಳಿಗೆ ಗಂಧ, ಹೂವು ಹಾಗೂ ಅಕ್ಷತೆಯನ್ನು ಅರ್ಪಿಸಬೇಕು.)

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತಾ ಪಿ ವಾ | ಯಃ ಸ್ಮರೇತ್ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ |
(ಈ ಮಂತ್ರ ಪಠಿಸಿ ತುಳಸಿ ಎಲೆಯನ್ನು ನೀರಿನಲ್ಲಿ ಅದ್ದಿ ಪೂಜೆಯ ಸಾಹಿತ್ಯದ ಮೇಲೆ ಮತ್ತು ತಮ್ಮ ಶರೀರದ ಮೇಲೆ ನೀರನ್ನು ಪ್ರೋಕ್ಷಿಸಿಕೊಳ್ಳಬೇಕು.)

ಆಮೇಲೆ ಸದ್ಗುರುಗಳ ಧ್ಯಾನವನ್ನು ಮಾಡಬೇಕು.

ಅಥ ಧ್ಯಾನಂ –
ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್ |
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್|
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷಿಭೂಮ್ |
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||
ಶ್ರೀ  ಸದ್ಗುರುಭ್ಯೋ ನಮಃ | ಧ್ಯಾಯಾಮಿ |

(ಗುರುಪೂಜೆಯಲ್ಲಿ ಕೆಳಗೆ ಉಲ್ಲೇಖಿಸಿದ 15 ಉಪಚಾರಗಳಿವೆ. ಅದರಲ್ಲಿ 3 ರಿಂದ 6 ರವರೆಗಿನ ಉಪಚಾರಗಳಲ್ಲಿ ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಅದು ಗುರುಗಳ ಭಾವಚಿತ್ರವಾಗಿರದೇ ಪ್ರತ್ಯಕ್ಷ ಶ್ರೀ ಸದ್ಗುರುಗಳೇ ಎದುರಿಗೆ ಕುಳಿತಿದ್ದಾರೆ ಹಾಗೂ ಅವರ ಚರಣದ ಮೇಲೆ ಅರ್ಪಿಸುತ್ತಿದ್ದೇನೆ ಎಂಬಭಾವದಿಂದ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.)
ಅನಂತರ ಪ್ರತಿಯೊಂದು ಉಪಚಾರದ ಸಮಯದಲ್ಲಿ ಕೆಳಗಿನ ಮಂತ್ರವನ್ನು ಹೇಳಿ ಸದ್ಗುರುಗಳ ಪೂಜೆಯನ್ನು ಮಾಡಬೇಕು.
ನಮೋ ಗುರುಭ್ಯೋ | ಗುರುಪಾದುಕಾಭ್ಯೋ ನಮಃ | ಪರೇಭ್ಯಯಃ ಪರಪಾದುಕಾಭ್ಯಯಃ |
ಆಚಾರ್ಯ ಸಿದ್ಧೇಶ್ವರ ಪಾದುಕಾಭ್ಯೋ ನಮೋಸ್ತು ಲಕ್ಷ್ಮೀಪತಿ ಪಾದುಕಾಭ್ಯಯಃ |
1. ಶ್ರೀ  ಸದ್ಗುರುಭ್ಯೋ ನಮಃ | ಆವಾಹಯಾಮಿ | (ಸದ್ಗುರುಗಳನ್ನು ಮನಸ್ಸಿನಿಂದ ಆಹ್ವಾನಿಸಬೇಕು)
2. ಶ್ರೀ  ಸದ್ಗುರುಭ್ಯೋ ನಮಃ | ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ | (ಅಕ್ಷತೆಯನ್ನು ಪ್ರತಿಮೆಯ/ಭಾವಚಿತ್ರದ ಮೇಲೆ ಅರ್ಪಿಸಬೇಕು)
3. ಶ್ರೀ  ಸದ್ಗುರುಭ್ಯೋ ನಮಃ | ಪಾಧ್ಯಂ ಸಮರ್ಪಯಾಮಿ | (ಹರಿವಾಣದಲ್ಲಿ ನೀರನ್ನು ಬಿಡಬೇಕು)
4. ಶ್ರೀ  ಸದ್ಗುರುಭ್ಯೋ ನಮಃ | ಅರ್ಘ್ಯಂ ಸಮರ್ಪಯಾಮಿ | (ಹರಿವಾಣದಲ್ಲಿ ನೀರನ್ನು ಬಿಡಬೇಕು)
5. ಶ್ರೀ  ಸದ್ಗುರುಭ್ಯೋ ನಮಃ | ಆಚಮನೀಯಮ್ ಸಮರ್ಪಯಾಮಿ | (ಹರಿವಾಣದಲ್ಲಿ ನೀರನ್ನು ಬಿಡಬೇಕು)
6. ಶ್ರೀ  ಸದ್ಗುರುಭ್ಯೋ ನಮಃ | ಸ್ನಾನಂ ಸಮರ್ಪಯಾಮಿ | (ಹರಿವಾಣದಲ್ಲಿ ನೀರನ್ನು ಬಿಡಬೇಕು)
7. ಶ್ರೀ  ಸದ್ಗುರುಭ್ಯೋ ನಮಃ | ವಸ್ತ್ರಂ ಸಮರ್ಪಯಾಮಿ | (ವಸ್ತ್ರವನ್ನು ಅರ್ಪಿಸಬೇಕು)
8. ಶ್ರೀ  ಸದ್ಗುರುಭ್ಯೋ ನಮಃ | ಉಪವೀತಂ ಸಮರ್ಪಯಾಮಿ | (ಜನಿವಾರ ಅಥವಾ ಅಕ್ಷತೆಯನ್ನು ಅರ್ಪಿಸಿ ನಮಸ್ಕರಿಸಬೇಕು)
9. ಶ್ರೀ  ಸದ್ಗುರುಭ್ಯೋ ನಮಃ | ಚಂದನಂ ಸಮರ್ಪಯಾಮಿ | (ಗುರುಗಳಿಗೆ ಗಂಧವನ್ನು ಹಚ್ಚಬೇಕು)
10. ಶ್ರೀ ಸದ್ಗುರುಭ್ಯೋ ನಮಃ | ಮಂಗಲಾರ್ಥೇ ಕುಂಕುಮಂ ಸಮರ್ಪಯಾಮಿ | (ಕುಂಕುಮವನ್ನು ಹಚ್ಚಬೇಕು)
11. ಶ್ರೀ ಸದ್ಗುರುಭ್ಯೋ ನಮಃ| ಅಲಂಕಾರಾರ್ಥ ಅಕ್ಷತಾನ್ ಸಮರ್ಪಯಾಮಿ | (ಸದ್ಗುರುಗಳ ಚರಣಗಳಿಗೆ ಅಕ್ಷತೆಯನ್ನು ಅರ್ಪಿಸಬೇಕು)
12. ಶ್ರೀ ಸದ್ಗುರುಭ್ಯೋ ನಮಃ | ಪೂಜಾರ್ಥೇ ಋತುಕಾಲೋದ್ಭವಪುಷ್ಪಾಣಿ ಸಮರ್ಪಯಾಮಿ (ಹೂವನ್ನು ಅಥವಾ ಹಾರವನ್ನು ಹಾಕಬೇಕು.)
13. ಶ್ರೀ  ಸದ್ಗುರುಭ್ಯೋ ನಮಃ | ಧೂಪಂ ಆಘ್ರಾಪಯಾಮಿ | (ಗುರುಗಳಿಗೆ ಊದುಬತ್ತಿಯಿಂದ ಬೆಳಗಬೇಕು)
14. ಶ್ರೀ  ಸದ್ಗುರುಭ್ಯೋ ನಮಃ | ದೀಪಂ ಸಮರ್ಪಯಾಮಿ | (ಗುರುಗಳಿಗೆ ನೀಲಾಂಜನದಿಂದ ಬೆಳಗಬೇಕು)
15. ಶ್ರೀ ಸದ್ಗುರುಭ್ಯೋ ನಮಃ | ನೈವೇದ್ಯಾರ್ಥೇ ಪುರತಸ್ಥಾಪಿತ ನೈವೇದ್ಯಂ ನಿವೇದಯಾಮಿ | (ಕೈಯಲ್ಲಿ ತುಳಸಿಯ ಎಲೆಯನ್ನು ತೆಗೆದುಕೊಂಡು ನೀರಿನಲ್ಲಿ ಮುಳುಗಿಸಿ, ನೀರನ್ನು ನೈವೇದ್ಯದ ಮೇಲೆ ಪ್ರೋಕ್ಷಿಸಿಕೊಳ್ಳಬೇಕು ಹಾಗೂ ಎಡಗೈಯಿಂದ ಕಣ್ಣುಗಳನ್ನು ಮುಚ್ಚಿ ನೈವೇದ್ಯ ಮಾಡಬೇಕು)

ನಂತರ ಮುಂದಿನ ಮಂತ್ರವನ್ನು ಹೇಳಬೇಕು.
(ಸಮರ್ಪಯಾಮಿ ಎಂದು ಹೇಳುವಾಗ ಉದ್ಧರಣೆಯಿಂದ ನೀರನ್ನು ಬಲಕೈಯಿಂದ ತೆಗೆದುಕೊಂಡು ತಟ್ಟೆಯಲ್ಲಿ ಬಿಡಬೇಕು)
ಪ್ರಾಣಾಯ ಸ್ವಾಹಾ | ಅಪಾನಾಯ ಸ್ವಾಹಾ |  ವ್ಯಾನಾಯ ಸ್ವಾಹಾ | ಉದಾನಾಯ ಸ್ವಾಹಾ|  ಸಮಾನಾಯ ಸ್ವಾಹಾ | ಬ್ರಹ್ಮಣೇ ಸ್ವಾಹಾ |
ಶ್ರೀ  ಸದ್ಗುರುಭ್ಯೋ ನಮಃ | ನೈವೇದ್ಯಂ ಸಮರ್ಪಯಾಮಿ | ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಷಣಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ | ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ | ಮುಖವಾಸಾರ್ಥೇ ಪೂಗಿಫಲಂ, ತಾಂಬೂಲಂ ಸಮರ್ಪಯಾಮಿ |

ಆರತಿ

ಈಗ ನಾವು ಗುರುಗಳಿಗೆ ಮಂಗಲಾರತಿಯನ್ನು ಮಾಡಿ ಆರತಿ ಹಾಡನ್ನು ಹಾಡೋಣ.
ಶ್ರೀ  ಸದ್ಗುರುಭ್ಯೋ ನಮಃ | ಮಂಗಲಾರ್ತಿಕ್ಯದೀಪಂ ಸಮರ್ಪಯಾಮಿ |
ಆರತಿ : ‘ಜ್ಯೋತ ಸೆ ಜ್ಯೋತಜಗಾವೋ |’ (ಮಂಗಳಾರತಿಯನ್ನು ಮಾಡಬೇಕು)
ಜ್ಯೋತ ಸೆ ಜ್ಯೋತ ಜಗಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ |
ಮೇರಾ ಅಂತರ ತಿಮಿರ ಮಿಟಾವೋ | ಸದ್ಗುರು ಜ್ಯೋತ ಸೆ ಜ್ಯೋತ ಜಗಾವೋ ||
ಹೇ ಯೋಗೇಶ್ವರ, ಹೇ ಜ್ಞಾನೇಶ್ವರ, ಹೇ ಸರ್ವೇಶ್ವರ, ಹೇ ಪರಮೇಶ್ವರ |
ನಿಜ ಕೃಪಾ ಬರಸಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ || 1 ||
ಹಮ ಬಾಲಕ ತೇರೆ ದ್ವಾರ ಪೇ ಆಯೇ |
ಮಂಗಲ ದರಸ ದಿಖಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ || 2 ||
ಶೀಶ ಝುಕಾಯ ಕರೇ ತೇರಿ ಆರತಿ |
ಪ್ರೇಮ ಸುಧಾ ಬರಸಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ || 3 ||
ಅಂತರ ಮೇ ಯುಗಯುಗಸೇ ಸೋಯಿ |
ಚಿತ್‌ಶಕ್ತಿ ಕೊ ಜಗಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ || 4 ||
ಸಾಚೀ ಜ್ಯೋತ ಜಗೇ ಹೃದಯ ಮೇ |
ಸೋಹಂ ನಾದ ಜಗಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ ||| 5 ||
ಜೀವನ ಮುಕ್ತಾನಂದ ಅವಿನಾಶಿ |
ಚರಣನ ಶರಣ ಲಗಾವೋ | ಸದ್ಗುರು ಜ್ಯೋತಸೇ ಜ್ಯೋತ ಜಗಾವೋ || 6 ||

1. ಅಂತರ : ಹೃದಯ ; ಗುರು ಮತ್ತು ಶಿಷ್ಯರ ನಡುವಿನ ದೂರ 2. ತಿಮಿರ : ಅಜ್ಞಾನರೂಪಿ ಅಂಧಕಾರ
– ಸ್ವಾಮಿ ಮುಕ್ತಾನಂದ.

ಶ್ರೀ  ಸದ್ಗುರುಭ್ಯೋ ನಮಃ | ಕರ್ಪೂರದೀಪಂ ಸಮರ್ಪಯಾಮಿ | (ಕರ್ಪೂರದ ಆರತಿಯನ್ನು ತೋರಿಸಬೇಕು)
ಶ್ರೀ ಸದ್ಗುರುಭ್ಯೋ ನಮಃ | ನಮಸ್ಕಾರಾನ್ ಸಮರ್ಪಯಾಮಿ |  (ಸದ್ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು)
ಶ್ರೀ ಸದ್ಗುರುಭ್ಯೋ ನಮಃ | ಪ್ರದಕ್ಷಿಣಾಂ ಸಮರ್ಪಯಾಮಿ | (ಬಲಗಡೆಗೆ ತಿರುಗಿ ತಮ್ಮ ಸುತ್ತಲೂ ಮೂರು ಸಲ ಪ್ರದಕ್ಷಿಣೆಯನ್ನು ಹಾಕಬೇಕು)
ಶ್ರೀ  ಸದ್ಗುರುಭ್ಯೋ ನಮಃ | ಪ್ರಾರ್ಥನಾಂ ಸಮರ್ಪಯಾಮಿ | (ನಮಸ್ಕಾರ ಮಾಡಿ ಪ್ರಾರ್ಥನೆ ಮಾಡಬೇಕು.)
ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ | ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ |
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ | ಯತ್‌ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ |
ಕಾಯೇನ ವಾಚಾ ಮನಸೇಂದ್ರಿಯೇರ್ವಾ | ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ |
ಕರೋಮಿ ಯದ್ಯತ್ ಸಕಲಂ ಪರಸ್ಮೈ ಸದ್ಗುರವೇ ಇತಿ ಸಮರ್ಪಯೇ ತತ್ |
ಅನೇನ ಕೃತ ಪೂಜನೇನ ಶ್ರೀ  ಸದ್ಗುರುಃ ಪ್ರೀಯತಾಂ |
(ಹೀಗೆ ಹೇಳಿ ಬಲಗೈಯಲ್ಲಿ ನೀರನ್ನು ತೆಗೆದುಕೊಂಡು ಹರಿವಾಣದಲ್ಲಿ ಬಿಡಬೇಕು ಮತ್ತು ಎರಡು ಸಲ ಅಚಮನ ಮಾಡಿ ನೀರನ್ನು ಕಣ್ಣುಗಳಿಗೆ ಹಚ್ಚಬೇಕು)

ಕೃತಜ್ಞತೆ

ಶ್ರೀ ಗುರುಗಳ ಕೃಪೆಯಿಂದ ಇಂದು ಈ ಕಾರ್ಯಕ್ರಮವು ನೆರವೇರಿತು. ಅದರ ಬಗ್ಗೆ ನಾವೆಲ್ಲರೂ ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ.

ಗುರುಪೂರ್ಣಿಮಾ ಮಹೋತ್ಸವದ ಕಾರ್ಯಕ್ರಮವು ಸಂಪೂರ್ಣವಾಗಿ ಮುಗಿದ ನಂತರ ಕೊನೆಗೆ ಕೆಳಗಿನ ಶ್ಲೋಕವನ್ನು ಹೇಳಬೇಕು.

ಯಾಂತು ದೇವಗಣಾಃ ಸರ್ವೇ ಪೂಜಾಮಾದಾಯ ಪಾರ್ಥಿವಾತ್ |
ಇಷ್ಟಕಾಮಪ್ರಸಿದ್ಧ್ಯರ್ಥಂ ಪುನರಾಗಮನಾಯ ಚ ||

ಶ್ರೀ ಗಣಪತಿಯ ಪೂಜೆ ಮಾಡಿದ ತೆಂಗಿನಕಾಯಿಗೆ ಅಕ್ಷತೆಗಳನ್ನು ಅರ್ಪಿಸಿ ಪೂಜಾವಿಧಿಯನ್ನು ವಿಸರ್ಜಿಸಬೇಕು.

Leave a Comment