ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

ಶ್ರೀ ಗುರುಗಳ ಧರ್ಮಸಂಸ್ಥಾಪನೆಯ ಐತಿಹಾಸಿಕ ಕಾರ್ಯದಲ್ಲಿ ಜವಾಬ್ದಾರಿ ವಹಿಸಿ ಸೇವೆ ಮಾಡಿ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

ಶ್ರೀ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜ್ಞಾನಶಕ್ತಿಯ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆಯ ದೃಷ್ಟಿಯನ್ನು ನೀಡಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆ ಎಂದರೆ ಅಧ್ಯಾತ್ಮವನ್ನು ಆಧರಿಸಿದ ರಾಷ್ಟ್ರರಚನೆ (ಧರ್ಮಸಂಸ್ಥಾಪನೆ)ಯಾಗಿದೆ. ಕೇವಲ ಅವತಾರಗಳೇ ಇಂತಹ ಕಾರ್ಯವನ್ನು ಮಾಡಬಹುದು ! ಇಂದು ಎಲ್ಲೆಡೆ ಹಿಂದೂ ರಾಷ್ಟ್ರದ ಚರ್ಚೆ ಆಗುತ್ತಿರುವುದು, ಕೇವಲ ಶ್ರೀ ಗುರುಗಳ ಜ್ಞಾನಶಕ್ತಿಯ ಫಲವಾಗಿದೆ. ಈಗ ಹಿಂದೂ ರಾಷ್ಟ್ರ ಸ್ಥಾಪನೆಯ ಕಾಲವು ಸಮೀಪಿಸಿದೆ; ಆದರೆ ಭವಿಷ್ಯದಲ್ಲಿ ಸಂಪೂರ್ಣ ರಾಷ್ಟ್ರರಚನೆಯು ಅಧ್ಯಾತ್ಮದ ಮೇಲೆ ಆಧಾರಿತವಾಗಲು ಇಂದಿನಿಂದಲೇ ಕೃತಿ ಮಾಡುವುದು, ಇದು ಧರ್ಮಸಂಸ್ಥಾಪನೆಯ ಕಾರ್ಯವಾಗಿದೆ. ಶ್ರೀ ಗುರುಗಳ ಧರ್ಮಸಂಸ್ಥಾಪನೆಯ ಈ ಐತಿಹಾಸಿಕ ಕಾರ್ಯದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡು ಸೇವೆಯನ್ನು ಮಾಡಿ !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ, ಸನಾತನ ಸಂಸ್ಥೆ (೨೦೨೩)

ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ಸಮಷ್ಟಿ ಶಿಷ್ಯರಾಗಿ ಸಹಭಾಗಿಯಾಗಿ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘೮೪ ಲಕ್ಷ ಜೀವಯೋನಿಗಳಲ್ಲಿ ಮೋಕ್ಷಪ್ರಾಪ್ತಿಯನ್ನು ಮಾಡಿಕೊಡುವ ಮನುಷ್ಯಜನ್ಮವು ದುರ್ಲಭವಾಗಿದೆ’, ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ದುರ್ಲಭ ಮನುಷ್ಯಜನ್ಮವು ಇಂದು ಪೃಥ್ವಿಯ ಮೇಲೆ ೭೦೦ ಕೋಟಿ ಜನರಿಗೆ ಪ್ರಾಪ್ತವಾಗಿದೆ; ಆದರೆ ನಿಜವಾಗಿ ಎಷ್ಟು ಜನರು ಮೋಕ್ಷದ ಮಾರ್ಗದಲ್ಲಿದ್ದಾರೆ ? ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಿಂದ ಇಂದು ಪೃಥ್ವಿಯ ಮೇಲೆ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ಸುಲಭವಾಗಿದೆ. ‘ಗುರುಗಳ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಂಡಾಗಲೇ ಗುರುಋಣವು ತೀರುತ್ತದೆ, ಇಲ್ಲದಿದ್ದರೆ ಅದನ್ನು ತೀರಿಸಲು ಸಾಧ್ಯವಿಲ್ಲ’, ಎಂದು ಗುರುಗೀತೆಯಲ್ಲಿ ಹೇಳಲಾಗಿದೆ. ಆದ್ದರಿಂದಲೇ ಆಧ್ಯಾತ್ಮಿಕ ಉನ್ನತಿಗಾಗಿ ಶ್ರೀ ಗುರುಗಳ ಅವತಾರಿ ಕಾರ್ಯದಲ್ಲಿ ಉತ್ತಮ ‘ಸಮಷ್ಟಿ ಶಿಷ್ಯ’ರಾಗಿ ಪಾಲ್ಗೊಳ್ಳಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಶೀಘ್ರವಾಗಿ ಮಾಡಿಕೊಳ್ಳಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿ, ಸನಾತನ ಸಂಸ್ಥೆ (೨೦೨೩)

Leave a Comment