ಹಿಂದೂಗಳೇ, ಪ್ರತಿಯೊಂದು ಕ್ಷೇತ್ರದಲ್ಲಿ ಧರ್ಮಸಂಸ್ಥಾಪನೆ ಆಗಲು ಗುರುಸೇವೆ ಎಂದು ಕ್ಷಮತೆಗನುಸಾರ ಕಾರ್ಯ ಮಾಡಿ !

ಗುರುಪೂರ್ಣಿಮೆಯು ದೇಹಧಾರಿ ಗುರು ಅಥವಾ ಗುರುತತ್ತ್ವಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಗುರುಪೂರ್ಣಿಮೆಯ ದಿನ ಗುರುಗಳ ದರ್ಶನ ಪಡೆಯುವುದು, ಗುರುದಕ್ಷಿಣೆ ನೀಡುವುದು, ಗುರುಸೇವೆ ಮಾಡುವುದು, ಹಾಗೆಯೇ ಗುರುಕಾರ್ಯವನ್ನು ಮಾಡುವ ಸಂಕಲ್ಪ ಮಾಡುವುದು, ಇವುಗಳಿಗೆ ಹಿಂದೂಗಳ ಧರ್ಮಪರಂಪರೆಯಲ್ಲಿ ವಿಶೇಷ ಮಹತ್ವವಿರುತ್ತದೆ. ‘ಸಮಾಜದಲ್ಲಿ ಧರ್ಮ ಮತ್ತು ಸಾಧನೆಯ ಪ್ರಚಾರ ಮಾಡುವುದು ಮತ್ತು ಅಧರ್ಮ ಹೆಚ್ಚಾದಾಗ ಧರ್ಮಸಂಸ್ಥಾಪನೆಯ ಕಾರ್ಯವನ್ನು ಮಾಡುವುದು’, ಇದು ಸಹ ಗುರುತತ್ತ್ವದ ಕಾರ್ಯವೇ ಆಗಿದೆ. ಅಧರ್ಮ ಹೆಚ್ಚಾದಾಗ ಆಧುನಿಕ ಕಾಲದಲ್ಲಿಯೂ ಆರ್ಯ ಚಾಣಕ್ಯ, ಶ್ರೀ ವಿದ್ಯಾರಣ್ಯಸ್ವಾಮಿಗಳು, ಸಮರ್ಥ ರಾಮದಾಸಸ್ವಾಮಿಗಳು ಮುಂತಾದವರು ಈ ಕಾರ್ಯವನ್ನು ಮಾಡಿರುವ ಅನೇಕ ಉದಾಹರಣೆಗಳಿವೆ. ಈಗಲೂ ಸಮಾಜ ಮತ್ತು ರಾಷ್ಟ್ರದಲ್ಲಿ ಎಲ್ಲೆಡೆ ಅಧರ್ಮ ಹೆಚ್ಚಾಗುತ್ತಿದೆ. ಸದ್ಯದ ಧರ್ಮನಿರಪೇಕ್ಷ (ಜಾತ್ಯತೀತ) ರಾಷ್ಟ್ರದಲ್ಲಿ ಸಮಾಜಕ್ಕೆ ‘ಧರ್ಮ ಎಂದರೇನು’ ಎಂಬುದನ್ನು ಕಲಿಸದೇ ಇರುವುದರಿಂದ ಪ್ರತಿಯೊಬ್ಬರು ಅಧರ್ಮದಿಂದ ವರ್ತಿಸುತ್ತಿದ್ದಾರೆ. ಹಾಲು ಮಾರುವವನು ಕಲಬೆರಕೆಯ ಹಾಲನ್ನು ಮಾರುವುದರಿಂದ ಹಿಡಿದು ಡಾಕ್ಟರರು ರೋಗಿಗಳನ್ನು ದೋಚುವುದರ ವರೆಗೆ ಮತ್ತು ನ್ಯಾಯಾಧೀಶರು ‘ಸರಕಾರಿ’ ಸಿಬ್ಬಂದಿಗಳಂತೆ ಭ್ರಷ್ಟಾಚಾರ ಮಾಡುವ ಪ್ರಸಂಗಗಳು ಪ್ರತಿದಿನ ಘಟಿಸುತ್ತಿವೆ. ಈ ಅಧರ್ಮದ ವಿರುದ್ಧ ಜಾಗೃತಿ ಮೂಡಿಸುವುದು, ಅಧರ್ಮವನ್ನು ತಡೆಯಲು ಪ್ರತ್ಯಕ್ಷ ಕೃತಿ ಮಾಡುವುದು ಮತ್ತು ಅಧರ್ಮವನ್ನು ತಡೆಗಟ್ಟಿದ ನಂತರ ಆ ವ್ಯವಸ್ಥೆಯನ್ನು ಪುನಃ ಧರ್ಮಕ್ಕೆ ಅನುಕೂಲವಾಗಿಸಲು ಪ್ರಯತ್ನಿಸುವುದು, ಈ ರೀತಿ ಕಾರ್ಯ ಮಾಡುವುದು ಆವಶ್ಯಕವಾಗಿದೆ. ಇಂದಿನ ಆಧುನಿಕ ಕಾಲದಲ್ಲಿ ಈ ಧರ್ಮಸಂಸ್ಥಾಪನೆಯೇ ಗುರುತತ್ತ್ವಕ್ಕೆ ಅಪೇಕ್ಷಿತವಿದೆ. ಧರ್ಮಸಂಸ್ಥಾಪನೆ ಎಂದರೆ ಕೇವಲ ಧರ್ಮನಿರಪೇಕ್ಷ (ಜಾತ್ಯತೀತ) ರಾಷ್ಟ್ರವನ್ನು ‘ಹಿಂದು ರಾಷ್ಟ್ರ’ವೆಂದು ಘೋಷಿಸುವುದಲ್ಲ, ಅಧರ್ಮ ವ್ಯಾಪಿಸಿರುವ ರಾಷ್ಟ್ರ ಮತ್ತು ಸಮಾಜದ ಪ್ರತಿಯೊಂದು ಘಟಕವನ್ನು ಧರ್ಮಮಯ ಮಾಡುವುದಾಗಿದೆ. ಆದುದರಿಂದ ಹಿಂದೂಗಳೇ, ಈ ಗುರುಪೂರ್ಣಿಮೆಯಿಂದ ಗುರುಸೇವೆಯೆಂದು ಪ್ರತಿಯೊಂದು ಕ್ಷೇತ್ರದಲ್ಲಿ ಧರ್ಮಸಂಸ್ಥಾಪನೆಯಾಗಲು ಕ್ಷಮತೆಗನುಸಾರ ಕಾರ್ಯವನ್ನು ಮಾಡುವ ಸಂಕಲ್ಪವನ್ನು ಮಾಡಿ !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ
Inspirational article for All to take oath on Hindurashtra sankalpa