ಎಲ್ಲೆಡೆಯ ಅರ್ಪಣೆದಾರರಿಗೆ ಅನ್ನದಾನದ ಸುವರ್ಣಾವಕಾಶ !

ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.

ಸನಾತನದ ಆಶ್ರಮದಲ್ಲಿ ಧರ್ಮಧ್ವಜದ ಸ್ಥಾಪನೆ ಮತ್ತು ಧ್ವಜಾರೋಹಣ !

ಸಪ್ತರ್ಷಿಗಳ ಆಜ್ಞೆಯಂತೆ ಸನಾತನದ ರಾಮನಾಥಿ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಂದ ಶ್ರೀರಾಮ ಮತ್ತು ಶ್ರೀಗುರುವಿನ ಚಿತ್ರವಿರುವ ಧರ್ಮಧ್ವಜದ ಸ್ಥಾಪನೆ.

ಸನಾತನದ ಆಶ್ರಮಕ್ಕೆ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕ ಮೂರ್ತಿಯ ಶುಭಾಗಮನ

ಸಪ್ತರ್ಷಿಗಳ ಆಜ್ಞೆಯಂತೆ ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿ ಪ್ರತಿಷ್ಠಾಪಿಸಲಾದ ರಿದ್ಧಿ-ಸಿದ್ಧಿ ಸಹಿತ ಶ್ರೀ ಸಿದ್ಧಿವಿನಾಯಕನ ಮೂರ್ತಿಯ ಸಂದರ್ಭದಲ್ಲಿ ಬಂದ ಅನುಭೂತಿ

ಜೀವನದ ಪ್ರತಿಯೊಂದು ಕೃತಿಯಲ್ಲಿಯೂ ಸಾಧನೆಯ ಉದ್ದೇಶ !

ಪ್ರತಿಯೊಂದು ಕೃತಿಯಿಂದ ಸಾಧನೆಯಾಗಲು ಆ ಕೃತಿಯನ್ನು ಪರಿಪೂರ್ಣ, ಭಾವಪೂರ್ಣ ಮತ್ತು ಸಾತ್ವಿಕಕತೆಯ ವಿಚಾರವನ್ನಿಟ್ಟುಕೊಂಡು ಹೇಗೆ ಮಾಡಬೇಕೆಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಲಿಸಿದ್ದಾರೆ.

ಆಶ್ರಮದಲ್ಲಿ ಹೆಚ್ಚುತ್ತಿರುವ ಸಾತ್ವಿಕತೆಗೆ ಸಾಕ್ಷಿಯಾಗಿರುವ ದೈವೀ ಬದಲಾವಣೆಗಳು !

ಆಶ್ರಮದಲ್ಲಿನ ಸಾತ್ವಿಕತೆಗೆ ಸಾಕ್ಷಿಯೆಂಬಂತೆ ಇಲ್ಲಿ ಕಾಣಸಿಗುವ ದೈವೀ ಬದಲಾವಣೆಗಳ ಕೆಲವು ಉದಾಹರಣೆಗಳನ್ನು ನೋಡಿದರೆ, ‘ಈಶ್ವರನು ಸನಾತನದ ಮೇಲೆ ಕೃಪಾವೃಷ್ಟಿಯನ್ನೇ ಮಾಡುತ್ತಿದ್ದಾನೆ’, ಎಂಬುದರ ಅನುಭವ ಬರುತ್ತದೆ.

ಅಭೂತಪೂರ್ವ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯ !

ದೈವೀ ಶಕ್ತಿ ಮತ್ತು ಕೆಟ್ಟ ಶಕ್ತಿಗಳ ದೃಶ್ಯ ಪರಿಣಾಮ ತೋರಿಸುವ 15,000 ಕ್ಕೂ ಹೆಚ್ಚು ಚಿತ್ರ ಮತ್ತು ವಸ್ತುಗಳು ಹಾಗೂ 27,000 ಕ್ಕೂ ಹೆಚ್ಚು ಸಿ.ಡಿ.ಗಳಾಗುವಷ್ಟು ಧ್ವನಿಚಿತ್ರೀಕರಣವನ್ನು ಸಂಶೋಧನೆಗಾಗಿ ಜತನ ಮಾಡಲಾಗಿದೆ.

ಆಧ್ಯಾತ್ಮಿಕ ಪ್ರಗತಿಗಾಗಿ ಪೂರಕ ವಾತಾವರಣ !

ರಾಮನಾಥಿ ಆಶ್ರಮದಲ್ಲಿ ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನದಲ್ಲಿ ‘ಗುರುಕೃಪಾ ಯೋಗಾನುಸಾರ ಸಾಧನೆ’ ಮಾಡಿ 19 ಸಾಧಕರು ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ.

ಸಾಮಾಜಿಕ ಐಕ್ಯತೆಯ ಪ್ರತೀಕವಾಗಿರುವ ಆಶ್ರಮ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯದ ಶಕ್ತಿಸ್ರೋತ !

ಆಶ್ರಮದಲ್ಲಿ ಸಾಧಕರಿಗೆ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಕಲಿಸಲಾಗುತ್ತದೆ. ಇದರಿಂದ ಅವರಲ್ಲಿ ರಾಷ್ಟ್ರಬಂಧುತ್ವ ಮತ್ತು ಧರ್ಮಬಂಧುತ್ವ ನಿರ್ಮಾಣವಾಗಿ ಸಂಘಟಿತ ಭಾವವು ತಾನಾಗಿಯೇ ನಿರ್ಮಾಣವಾಗುತ್ತದೆ

ಸಾಧಕರಲ್ಲಿ ಸದ್ಗುಣಗಳು ಸಂವರ್ಧನೆಯಾಗುವಂತಹ ಆಶ್ರಮಜೀವನ !

ಸಾಧಕರ ಸಾಧನೆಗೆ ಅನುಕೂಲಕರ ವಾತಾವರಣ ಯಾವಾಗಲೂ ಸಿಗಬೇಕೆಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಗೋವಾದ ರಾಮನಾಥಿಯಲ್ಲಿ ಸನಾತನ ಆಶ್ರಮವನ್ನು ನಿರ್ಮಿಸಿದ್ದಾರೆ.