ಹಿಂದೂಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾರ್ಗದರ್ಶಕ ಕೇಂದ್ರ !

ಹಿಂದುತ್ವನಿಷ್ಠರಿಗಾಗಿ ಕಾರ್ಯಾಗಾರ, ಹಿಂದೂ ಅಧಿವೇಶನ ಇತ್ಯಾದಿಗಳ ಆಯೋಜನೆ !

‘ಕೇವಲ ಹಿಂದೂಗಳನ್ನು ಸಂಘಟಿಸುವ ವಿಚಾರಧಾರೆಯೇ ದೇಶ ಮತ್ತು ಧರ್ಮದ ರಕ್ಷಣೆ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡ ಬಲ್ಲದು’ ಎಂಬುದನ್ನು ಅರಿತು ವಿವಿಧ ಹಿಂದೂ ಸಂಘಟನೆಗಳು, ಸಂಪ್ರದಾಯಗಳು, ವಕೀಲರು, ಚಿಂತಕರು ಮುಂತಾದವರಿಗೆ ಮಾರ್ಗದರ್ಶನ ಮಾಡಲು ಆಶ್ರಮದಲ್ಲಿ ಕಾರ್ಯಾಗಾರ, ಅಧಿವೇಶನ ಇತ್ಯಾದಿಗಳ ಆಯೋಜನೆಯನ್ನು ಮಾಡಲಾಗುತ್ತದೆ.

ಹಿಂದೂ ರಾಷ್ಟçದ ವಿಚಾರಗಳಿರುವ ವಕ್ತಾರರನ್ನು ನಿರ್ಮಿಸುವ ‘ಸನಾತನ ಅಧ್ಯಯನ ಕೇಂದ್ರ’ !

ಆಶ್ರಮದ ಈ ಕೇಂದ್ರದ ಮೂಲಕ ಪ್ರಸಾರಮಾಧ್ಯಮಗಳಲ್ಲಿ ಹಿಂದೂ ಧರ್ಮದ ಪರ ವಹಿಸಿ ಮಾತನಾಡಲು ಹಿಂದುತ್ವನಿಷ್ಠರಿಗೆ ವೈಚಾರಿಕ ಸಹಾಯ ಮಾಡಲಾಗುತ್ತದೆ. ಈ ಕೇಂದ್ರದ ‘ವಕ್ತಾರ ತರಬೇತಿ ಕಾರ್ಯಾಗಾರ’ದ ಮೂಲಕ ತರಬೇತುಗೊಂಡ 40 ಕ್ಕೂ ಹೆಚ್ಚಿನ ವಕ್ತಾರರು ದೂರದರ್ಶನ ವಾಹಿನಿಗಳಲ್ಲಿ 100 ಕ್ಕೂ ಹೆಚ್ಚು ಚರ್ಚಾ ಕೂಟಗಳಲ್ಲಿ ಪ್ರಭಾವಿಯಾಗಿ ಹಿಂದೂ ಧರ್ಮದ ಪರ ವಹಿಸಿದ್ದಾರೆ.

Leave a Comment