ಸಾಧಕರಲ್ಲಿ ಸದ್ಗುಣಗಳು ಸಂವರ್ಧನೆಯಾಗುವಂತಹ ಆಶ್ರಮಜೀವನ !

ಸಾಧಕರ ಸಾಧನೆಗೆ ಅನುಕೂಲಕರ ವಾತಾವರಣ ಯಾವಾಗಲೂ ಸಿಗಬೇಕೆಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಗೋವಾದ ರಾಮನಾಥಿಯಲ್ಲಿ ಸನಾತನ ಆಶ್ರಮವನ್ನು ನಿರ್ಮಿಸಿದ್ದಾರೆ. ಇಲ್ಲಿ ಸಾಧಕರು ಆನಂದದ ಆಶ್ರಮಜೀವನದ ಲಾಭ ಪಡೆಯುತ್ತಿದ್ದಾರೆ.

ಸ್ವಯಂಶಿಸ್ತು ಮತ್ತು ಆಯೋಜನಾಬದ್ಧತೆ

1. ಆಶ್ರಮದೊಳಗೆ ಪ್ರವೇಶಿಸುವ ಮೊದಲು ತಮ್ಮ ಚಪ್ಪಲಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವುದು, ಧ್ಯಾನಮಂದಿರದಲ್ಲಿ ನಾಮಜಪಕ್ಕೆ ಕುಳಿತುಕೊಳ್ಳುವುದು, ಊಟದ ನಂತರ ತಟ್ಟೆಯಲ್ಲಿ ಅನ್ನ ಬಿಡದಿರುವುದು, ಮುಂತಾದ ಎಲ್ಲ ಕೃತಿಗಳು ಶಿಸ್ತುಬದ್ಧವಾಗಿ ನಡೆಯುತ್ತವೆ.

2. ಆಶ್ರಮದಲ್ಲಿನ ಸಾಧಕರು ದಿನನಿತ್ಯದ ಸೇವೆ, ವ್ಯಷ್ಟಿ ಸಾಧನೆ, ಪ್ರಾಸಂಗಿಕ ಕಾರ್ಯಕ್ರಮ ಇತ್ಯಾದಿಗಳನ್ನು ನಿಗದಿತ ಆಯೋಜನೆಯಂತೆ ಮಾಡುತ್ತಾರೆ.

ಸ್ವಚ್ಛತೆ ಮತ್ತು ವ್ಯವಸ್ಥಿತತೆ

1. ಆಶ್ರಮದಲ್ಲಿರುವ ಯುವ ಸಾಧಕರು ಪ್ರತಿದಿನ ಕಡಿಮೆಪಕ್ಷ 1 ಗಂಟೆ ಮನಸ್ಸಿಟ್ಟು ಆಶ್ರಮದ ಸ್ವಚ್ಛತೆಯನ್ನು (ಸ್ನಾನಗೃಹ-ಶೌಚಾಲಯದ ಸ್ವಚ್ಛತೆ, ಪರಿಸರ ಸ್ವಚ್ಛತೆ, ನೆಲ ಗುಡಿಸಿ ಒರೆಸುವುದು) ಮಾಡುತ್ತಾರೆ.

2. ಪ್ರತಿಯೊಂದು ವಸ್ತುಗಳನ್ನು (ಉದಾ. ಕಪಾಟಿನಲ್ಲಿರುವ ಗ್ರಂಥಗಳು, ತೊಳೆದಿಟ್ಟ ತಟ್ಟೆ-ಲೋಟಗಳು) ಆಯಾ ಜಾಗದಲ್ಲಿ ವ್ಯವಸ್ಥಿತವಾಗಿ ಜೋಡಿಸಲಾಗುತ್ತದೆ.

ಪ್ರತಿಯೊಂದು ಕೃತಿ ‘ಸತ್ಯಂ ಶಿವಂ ಸುಂದರಮ್’ (ಸಾತ್ವಿಕ) ಮಾಡುವುದು

1. ಪ್ರತಿಯೊಂದು ಕೃತಿಯಿಂದ ಒಳ್ಳೆಯ ಸ್ಪಂದನಗಳು ಬರಬೇಕೆಂದು ಸಾಧಕರು, ಪ್ರತೀ ಕೃತಿಯನ್ನು ಸಾತ್ವಿಕವಾಗಿ ಮಾಡಲು ಪ್ರಯತ್ನಿಸುತ್ತಾರೆ.

2. ಸಾತ್ವಿಕ ಉಡುಪು ಧರಿಸುವುದು, ತಮ್ಮ-ತಮ್ಮ ಕಪಾಟುಗಳಲ್ಲಿನ ವಸ್ತುಗಳನ್ನು ಒಳ್ಳೆಯ ರೀತಿಯಲ್ಲಿ ಕಾಣಿಸುವಂತೆ ಜೋಡಿಸುವುದು, ಧಾನ್ಯಗಳನ್ನು ಸರಿಯಾದ ರೀತಿಯಲ್ಲಿ ಒಣಗಿಸಿ ಇಡುವುದು, ಇವು ಅದರ ಕೆಲವು ಉದಾಹರಣೆಗಳಾಗಿವೆ.

ಸಣ್ಣ ಸಣ್ಣ ವಿಷಯಗಳಲ್ಲಿಯೂ ಮಿತವ್ಯಯ

1. ‘ಆಶ್ರಮದ ಪ್ರತಿಯೊಂದು ವಸ್ತುವೂ ಗುರುದೇವರದ್ದು, ಹಾಗೆಯೇ ವಿದ್ಯುತ್, ನೀರು ಇತ್ಯಾದಿಗಳು ರಾಷ್ಟೀಯ ಸಂಪತ್ತು’, ಎಂಬ ಭಾವದಿಂದ ಇವೆಲ್ಲವನ್ನೂ ಮಿತವಾಗಿ ಉಪಯೋಗಿಸಲಾಗುತ್ತದೆ.

2. ಪ್ರಿಂಟ್ ತೆಗೆಯಲು ಒಂದು ಬದಿ ಖಾಲಿಯಿರುವ ಕಾಗದಗಳ ಬಳಕೆ, ಬರೆಯಲು ಕಾಗದದ ತುಂಡುಗಳನ್ನು ಉಪಯೋಗಿಸುವುದು, ಇವು ಅದರ ಕೆಲವು ಉದಾಹರಣೆಗಳಾಗಿವೆ.

ಕುಟುಂಬಭಾವದಿಂದ ಪರಸ್ಪರರ ಸುಖ-ದುಃಖಗಳಲ್ಲಿ ಭಾಗಿ

1. ಆಶ್ರಮದಲ್ಲಿ ಸಾಧಕರ ಹುಟ್ಟುಹಬ್ಬ, ವಿವಾಹ, ಅಮೃತಮಹೋತ್ಸವ (75ನೇ ವರ್ಷ) ಮುಂತಾದ ಕಾರ್ಯಕ್ರಮಗಳನ್ನು ಧರ್ಮಶಾಸ್ತ್ರಕ್ಕನುಸಾರ ಆನಂದದಿಂದ ಆಚರಿಸಲಾಗುತ್ತದೆ.

2. ಕೌಟುಂಬಿಕ ಅಡಚಣೆ, ದುಃಖದ ಪ್ರಸಂಗ ಮುಂತಾದ ಪರಿಸ್ಥಿತಿಗಳಲ್ಲೂ ಸಾಧಕರು ತತ್ಪರತೆಯಿಂದ ಪರಸ್ಪರರಿಗೆ ಸಹಾಯ ಮಾಡುತ್ತಾರೆ.

ಅನಾರೋಗ್ಯವಿರುವ ಸಾಧಕರ ಮನಃಪೂರ್ವಕ ಶುಶ್ರೂಷೆ

1. ಪಥ್ಯದ ಊಟದ ಆವಶ್ಯಕತೆಯಿರುವ ಸಾಧಕರಿಗಾಗಿ ಅವರ ಆವಶ್ಯಕತೆಗೆ ತಕ್ಕಂತೆ ಅಡುಗೆಯನ್ನು ತಯಾರಿಸಲಾಗುತ್ತದೆ.

2. ಸಾಧಕರಿಗೆ ಅನಾರೋಗ್ಯವಿದ್ದರೆ ಆಶ್ರಮದಲ್ಲಿರುವ ಸಾಧಕ-ವೈದ್ಯರು ಮತ್ತು ಇತರ ಸಾಧಕರು ಅವರ ಸೇವೆ ಮಾಡುತ್ತಾರೆ. ರೋಗಿಗೆ ಮನೆಗೆ ಹೋಗಬೇಕಾಗುವುದಿಲ್ಲ.

ಸಾಧನೆಯ ತಳಮಳ ಮತ್ತು ಸರ್ವಸ್ವದ ತ್ಯಾಗ

1. ಸಾಧನೆಯ ತಳಮಳ, ಸೇವೆಯ ಧ್ಯಾಸದಿಂದ ಭಾರತದ ವಿವಿಧ ರಾಜ್ಯಗಳ ವಿಭಿನ್ನ ವಯಸ್ಸಿನ ನೂರಾರು ಸಾಧಕರು ಆಶ್ರಮಜೀವನ ಸ್ವೀಕರಿಸಿದ್ದಾರೆ.

2. ವ್ಯವಹಾರ-ಉದ್ಯೋಗ, ಕೌಟುಂಬಿಕ ಸುಖ ಇತ್ಯಾದಿಗಳನ್ನು ತ್ಯಾಗ ಮಾಡಿ ಬಂದಿರುವ ಈ ಎಲ್ಲಾ ಸಾಧಕರು ಆಶ್ರಮದ ಎಲ್ಲಾ ಸೇವೆಗಳನ್ನು ವೇತನ ಪಡೆಯದೆ ಮಾಡುತ್ತಾರೆ.

Leave a Comment