ಜೀವನದ ಪ್ರತಿಯೊಂದು ಕೃತಿಯಲ್ಲಿಯೂ ಸಾಧನೆಯ ಉದ್ದೇಶ !

ಪೂಜೆಗಾಗಿ ತಂದ ಹೂವುಗಳನ್ನು ಹೂವಿನ ಬುಟ್ಟಿಯಲ್ಲಿ ಸಾತ್ವಿಕವಾಗಿ ರಚನೆ ಮಾಡುವುದರಿಂದ ಭಾವದ ಸ್ಪಂದನಗಳು ನಿರ್ಮಾಣವಾಗಿ ಪ್ರಜೆಯು ಭಾವಪೂರ್ಣವಾಗಿ ಆಗುತ್ತದೆ. ಹಣೆಗೆ ಕುಂಕುಮ ಹಚ್ಚುವುದರಿಂದ ಆಚಾರಧರ್ಮದ ಪಾಲನೆಯಾಗುತ್ತದೆ. ತರಕಾರಿ ಹೆಚ್ಚುವಂತಹ ಪ್ರತಿಯೊಂದು ಕೃತಿಯ ಹಿಂದೆ ಏನಾದರೊಂದು ಶಾಸ್ತçವಿರುತ್ತದೆ. ಅದನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಕೃತಿ ಮಾಡಿದರೆ ಅದರಿಂದ ಸಾಧನೆಯಾಗುತ್ತದೆ. ಯಾವುದೇ ಕಲಾಕೃತಿಯನ್ನು ಸಾತ್ವಿಕವಾಗಿ ಮಾಡಿದರೆ ಅದರಿಂದ ತಮಗೆ ಮತ್ತು ಇತರರಿಗೂ ಸಾತ್ವಿಕಕತೆ ಸಿಗುತ್ತದೆ. ಹೀಗೆ ಪ್ರತಿಯೊಂದು ಕೃತಿಯಿಂದ ಸಾಧನೆಯಾಗಲು ಆ ಕೃತಿಯನ್ನು ಪರಿಪೂರ್ಣ, ಭಾವಪೂರ್ಣ ಮತ್ತು ಸಾತ್ವಿಕಕತೆಯ ವಿಚಾರವನ್ನಿಟ್ಟುಕೊಂಡು ಹೇಗೆ ಮಾಡಬೇಕೆಂಬುದನ್ನು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಲಿಸಿದ್ದಾರೆ.

Leave a Comment