ಎಲ್ಲೆಡೆಯ ಅರ್ಪಣೆದಾರರಿಗೆ ಅನ್ನದಾನದ ಸುವರ್ಣಾವಕಾಶ !

ಅನ್ನದಾನದ ಮಹತ್ವ : ಹಿಂದೂ ಧರ್ಮಶಾಸ್ತ್ರದಲ್ಲಿ ವರ್ಣಿಸಿರುವ ಮಹಾದಾನಗಳಲ್ಲಿ ‘ಅನ್ನದಾನ’ ಮಹತ್ವದ ದಾನವಾಗಿದೆ. ‘ಅನ್ನದಾನದಂತಹ ದಾನ ಹಿಂದೆಂದೂ ಆಗಿಲ್ಲ ಮುಂದೆಂದೂ ಆಗಲಾರದು. ಹಾಗಾಗಿ ಯಾವಾಗಲೂ ಅನ್ನದಾನ ಮಾಡಬೇಕು’ ಎಂದು ಮಹಾಭಾರತದಲ್ಲಿ ಹೇಳಲಾಗಿದೆ.

ಅನ್ನದಾನದ ಲಾಭ : ನಾವು ಇತರರಿಗೆ ಅನ್ನದಾನ ಮಾಡಿದರೆ ಶ್ರೀ ಅನ್ನಪೂರ್ಣಾಮಾತೆಯು ಪ್ರಸನ್ನಳಾಗಿ ನಮ್ಮ ಮೇಲೆ ಕೃಪೆ ಮಾಡುತ್ತಾಳೆ. ಅನ್ನದಾನ ಮಾಡುವವನಿಗೆ ಅನ್ನ ಸ್ವೀಕರಿಸುವವರಿಂದ ಆಶೀರ್ವಾದಾತ್ಮಕ ಸದಿಚ್ಛೆಗಳ ಲಾಭವೂ ಆಗುತ್ತದೆ.

ಅನ್ನದಾನವನ್ನು ಯಾರು ಮತ್ತು ಎಷ್ಟು ಮಾಡಬೇಕು ? : ಧರ್ಮಶಾಸ್ತ್ರಕ್ಕನುಸಾರ ಯಾರು ಧನಾರ್ಜನೆಯನ್ನು (ಹಣ ಸಂಪಾದನೆ) ಮಾಡುತ್ತಾರೆಯೋ ಮತ್ತು ಯಾರ ಮನೆಯಲ್ಲಿ ಆಹಾರ ಬೇಯಿಸಲಾಗುತ್ತದೆಯೋ, ಅಂತಹ ಗೃಹಸ್ಥನು ‘ಅನ್ನದಾನ’ ಮಾಡುವುದು ಅವನ ಕರ್ತವ್ಯವೇ ಆಗಿರುತ್ತದೆ. ಅವನಿಗೆ ಎಷ್ಟು ಸಾಧ್ಯವಿದೆಯೋ ಅಷ್ಟು ಅನ್ನದಾನ ಮಾಡಬೇಕು.

ಪರ್ವಕಾಲದಲ್ಲಿ ಅನ್ನದಾನ ಮಾಡುವುದು ಹೆಚ್ಚು ಲಾಭದಾಯಕ ! : ಮಕರ ಸಂಕ್ರಾಂತಿಯಿಂದ ರಥಸಪ್ತಮಿ, ಚಾತುರ್ಮಾಸ, ಉತ್ಸವ, ಹಬ್ಬ, ವ್ರತ ಮುಂತಾದ ಪರ್ವಕಾಲದಲ್ಲಿ ಅನ್ನದಾನ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಲಾಭವಾಗುತ್ತದೆ. ಅದರಲ್ಲಿಯೂ ಧಾರ್ಮಿಕ ಸ್ಥಳಗಳಲ್ಲಿ ದಾನ ಮಾಡಿದರೆ ಇನ್ನೂ ಹೆಚ್ಚು ಲಾಭವಾಗುತ್ತದೆ.

ಅನ್ನದಾನವು ಧರ್ಮಕರ್ತವ್ಯವಾಗಿದೆ ಎಂದು ತಿಳಿದು ದಾನ ಮಾಡಿ ! : ಅಹಂಭಾವದಿಂದ ಅನ್ನದಾನ ಮಾಡಿದರೆ ಫಲ ಅರ್ಧವಾಗುತ್ತದೆ. ಹಾಗಾಗಿ ‘ಅನ್ನದಾನ ಮಾಡುವುದು ನಮ್ಮ ಧರ್ಮಕರ್ತವ್ಯವೇ ಆಗಿದೆ’ ಎಂಬ ಭಾವದಿಂದ ಅನ್ನದಾನ ಮಾಡಬೇಕು.

ಅನ್ನದಾನಿಯು ಮಾಡಬೇಕಾದ ಪ್ರಾರ್ಥನೆ ! : ‘ಹೇ ಭಗವಂತಾ, ನೀನೇ ಎಲ್ಲರ ಅನ್ನದಾತಾ ಮತ್ತು ಪೋಷಕನಾಗಿರುವೆ. ನಿನ್ನ ಕೃಪೆಯಿಂದಲೇ ಅನ್ನದಾನದ ಅವಕಾಶವು ನನಗೆ ಲಭಿಸಿದೆ. ಆದುದರಿಂದ ನಾನು ಕೃತಜ್ಞನಾಗಿದ್ದೇನೆ. ಈ ಅನ್ನವನ್ನು ಸೇವಿಸುವ ಜೀವಗಳಿಗೆ ರಾಷ್ಟ್ರ ಮತ್ತು ಧರ್ಮಕಾರ್ಯ ಮಾಡುವ ಪ್ರೇರಣೆ ಮತ್ತು ಶಕ್ತಿ ಸಿಗಲಿ,’ ಎಂದು ಪ್ರಾರ್ಥಿಸುತ್ತೇನೆ !

ಸನಾತನದ ಆಶ್ರಮಗಳಲ್ಲಿ ಅನ್ನದಾನ ಮಾಡಲು ಅರ್ಪಣೆಯನ್ನು ನೀಡಿರಿ !

ಸತ್ಪಾತ್ರರಿಗೆ ದಾನ ಮಾಡುವುದರ ಮಹತ್ವ !

‘ಬಡವ, ಭಿಕ್ಷುಕ ಮುಂತಾದವರಿಗೆ ಅನ್ನದಾನ ಮಾಡಿದರೆ ಸುಖ ಸಿಗುತ್ತದೆ; ಆದರೆ ಸತ್ಪಾತ್ರರಿಗೆ ಅನ್ನದಾನ ಮಾಡಿದರೆ ಅನ್ನದಾನಿಯು ಎಲ್ಲ ಪಾತಕಗಳಿಂದ ಮುಕ್ತನಾಗಿ ಈಶ್ವರನ ಸಮೀಪ ಹೋಗುತ್ತಾನೆ’ ಎಂದು ಧರ್ಮಶಾಸ್ತ್ರವು ಹೇಳುತ್ತದೆ.

ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡುವುದರ ಮಹತ್ವ !

ಸಾಧಕರಿಗೆ ಪೂರ್ಣವೇಳೆ ಸಾಧನೆ ಮಾಡಲು ಪೂರಕ ವಾತಾವರಣ ಸಿಗಬೇಕೆಂದು, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಗೋವಾದ ರಾಮನಾಥಿಯಲ್ಲಿ ಸನಾತನದ ಆಶ್ರಮವನ್ನು ನಿರ್ಮಿಸಿದ್ದಾರೆ. ಸನಾತನದ ಈ ಆಶ್ರಮದಲ್ಲಿನ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ಇತರ ಕಡೆಗಳಲ್ಲಿರುವ ಆಶ್ರಮಗಳಲ್ಲಿನ ಎಲ್ಲ ಜನರು ರಾಷ್ಟ್ರ ಮತ್ತು ಧರ್ಮಕ್ಕಾಗಿ ಜೀವನವನ್ನು ಸಮರ್ಪಿಸಿರುವ ಸಾಧಕರಾಗಿದ್ದಾರೆ. ಇವರಲ್ಲಿ ಕೆಲವು ಸಂತರೂ ಇದ್ದಾರೆ. ಈ ಎಲ್ಲ ಆಶ್ರಮಗಳೆಂದರೆ ಸಮಾಜ, ರಾಷ್ಟ್ರ ಮತ್ತು ಧರ್ಮದ ಹಿತಕ್ಕಾಗಿ ನಡೆಸಲಾಗುತ್ತಿರುವ ಕಾರ್ಯದ ಕೇಂದ್ರಗಳೇ ಆಗಿವೆ. ಇಂತಹ ಆಶ್ರಮಗಳಿಗೆ ಅರ್ಪಣೆ ಮಾಡುವುದು, ನಿಜವಾದ ಅರ್ಥದಲ್ಲಿ ‘ಸತ್ಪಾತ್ರೇ ದಾನ’ವಾಗಿದೆ, ಹಾಗೆಯೇ ಅದು ಧರ್ಮಕಾರ್ಯದಲ್ಲಿ ಪಾಲ್ಗೊಂಡಂತೆಯೂ ಆಗುತ್ತದೆ.

ಪ್ರತಿ ದಿನ ವಿವಿಧ ಆಶ್ರಮಗಳಲ್ಲಿ ಅನ್ನದಾನದ ಲಾಭ ಪಡೆದುಕೊಳ್ಳುವವರ ಸಂಖ್ಯೆ

ಆಶ್ರಮಗಳಿಗೆ ಈ ರೀತಿಯಾಗಿಯೂ ಅನ್ನದಾನವನ್ನು ಮಾಡಬಹುದು

ಆಹಾರ ಪದಾರ್ಥ ಹಾಗೆಯೇ ಖರ್ಚಿನ ವಿವರ

ಅನ್ನದಾನಿಗಳಿಗೆ ವಿನಂತಿ !

ಸನಾತನ ಸಂಸ್ಥೆಯ ಹಾಗೂ ಸನಾತನದ ಪ್ರೇರಣೆಯಿಂದ ರಾಷ್ಟ್ರ ಮತ್ತು ಧರ್ಮಕಾರ್ಯಕ್ಕಾಗಿ ಕಾರ್ಯನಿರತವಾಗಿರುವ ಆಶ್ರಮಗಳಿಗೆ ಉದಾರವಾಗಿ ಅನ್ನದಾನ ಮಾಡಿ!

ಚೆಕ್ / ಡಿ.ಡಿ. ಗಳು SANATAN SANSTHA ಈ ಹೆಸರಿನಲ್ಲಿರಬೇಕು.

ಎಲ್ಲೆಡೆಯ ಅರ್ಪಣೆದಾರರಿಗೆ ದಾನದ ಸುವರ್ಣಾವಕಾಶ !

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಧಾನ್ಯವನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿರಿ !

ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧವಾಗಿದೆ. ಸಂಸ್ಥೆಯ ಆಶ್ರಮ ಮತ್ತು ಸೇವಾಕೇಂದ್ರಗಳಿಂದ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ. ಸದ್ಯ ಧರ್ಮಗ್ಲಾನಿಯ ಕಾಲವಿರುವುದರಿಂದ ‘ಧರ್ಮಪ್ರಸಾರದ ಕಾರ್ಯವನ್ನು ಮಾಡುವುದು’ ಕಾಲಾನುಸಾರ ಆವಶ್ಯಕವಾಗಿದೆ. ‘ಧರ್ಮಪ್ರಸಾರದ ಕಾರ್ಯವನ್ನು ಮಾಡುವ ಸಂತರು, ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಆಹಾರ-ಧಾನ್ಯಗಳ ದಾನ ಮಾಡುವುದು ಸರ್ವಶ್ರೇಷ್ಠ ದಾನವಾಗಿದೆ’.

ಪ್ರಸ್ತುತ ಕಾಲದಲ್ಲಿ ರಾಷ್ಟ್ರ ಮತ್ತು ಧರ್ಮಸೇವೆಯ ಮಹತ್ವವನ್ನು ಅರಿತುಕೊಂಡು ಅನೇಕ ಸಾಧಕರು ಆಶ್ರಮದಲ್ಲಿದ್ದು ಪೂರ್ಣವೇಳೆ ಸೇವೆಯನ್ನು ಮಾಡುತ್ತಿದ್ದಾರೆ. ಆದುದರಿಂದ ಸನಾತನದ ರಾಮನಾಥಿ ಆಶ್ರಮದಲ್ಲಿನ ಸಾಧಕರಿಗೆ ಧಾನ್ಯಗಳ ಆವಶ್ಯಕತೆಯಿದೆ. ಆರು ತಿಂಗಳಿಗಾಗಿ ಆಶ್ರಮದಲ್ಲಿನ ಸಾಧಕರಿಗೆ ಬೇಕಾಗುವ ಧಾನ್ಯ, ದ್ವಿದಳಧಾನ್ಯ, ಬೇಳೆ, ಮಸಾಲೆ ಪದಾರ್ಥ ಇತ್ಯಾದಿಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ದಾನಿಗಳು ಕೆಳಗೆ ಕ್ಲಿಕ್ ಮಾಡಬೇಕಾಗಿ ವಿನಂತಿ

Donate to Sanatan Sanstha | ಸನಾತನ ಸಂಸ್ಥೆಗೆ ದಾನ ನೀಡಿ

 

Leave a Comment